ನೂರಾರು ವರ್ಷಗಳ ಇತಿಹಾಸವಿರುವ ಈ ದೇವಸ್ಥಾನವು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪ್ರತಿಷ್ಠಿತ ಎರ್ಮಾಳು ಬೀಡುವಿನ ಸಮೀಪದಲ್ಲಿ ಸ್ಥಾಪನೆಗೊಂಡಿದೆ. ಆದಿಶಕ್ತಿ ವೀರಭದ್ರ ದೇವಸ್ಥಾನವು ಯಾವ ಕಾಲದಲ್ಲಿ ಈ ಕ್ಷೇತ್ರದಲ್ಲಿ ಪ್ರತಿμÁ್ಠಪನೆಯಾಗಿದೆ ಎಂದು ಹೇಳಲು ಕಷ್ಟ ಸಾಧ್ಯ. ಈ ಕ್ಷೇತ್ರದಲ್ಲಿ ಪರಿವಾರ ದೈವಗಳಾಗಿ ಧೂಮಾವತಿ ಬಂಟ ದೈವಗಳು, ಮೂಲ ಮೈಸಂದಾಯ, ಪಂಚ ದೈವಗಳು, ಪಂಜುರ್ಲಿ, ಕಲ್ಕುಡ ವರ್ತೆ, ತೂ ಕತ್ತೇರಿ, ಬಬ್ಬರ್ಯ ದೈವ, ಸ್ಥಳ ಪಂಜುರ್ಲಿ, ಕಲ ಪಂಜುರ್ಲಿ, ಚಾಮುಂಡಿ, ಗುಳಿಗ ಹಾಗೂ ನೀಚದೈವಗಳು ನೆಲೆನಿಂತಿವೆ.
ಈ ಕ್ಷೇತ್ರಕ್ಕೆ ತಂತ್ರಿಗಳಾಗಿ ಶ್ರೀ ಕಂಬ್ಲಕಟ್ಟ ರಾಧಕೃಷ್ಣ ಉಪಾಧ್ಯಾಯರು ಹಾಗೂ ಪ್ರಧಾನ ಅರ್ಚಕರಾಗಿ ಶ್ರೀ ಗಣಪತಿ ಭಟ್ ಹಾಗೂ ಅವರ ಅರ್ಚಕ ವೃಂದ ಪೂಜಾ ಸೇವೆಗಳನ್ನು ನಡೆಸಿಕೊಂಡು ಬರುತ್ತಿದೆ. ಸ್ಥಳ ದಾನಿಗಳಾದ ಮೋಹನ್ ದಾಸ್ ಶೆಟ್ಟಿಯವರು ಸದಾ ಈ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿವಹಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ಐದು ಮಾಗಣೆಗಳನ್ನು ಒಳಗೊಂಡ ಈ ಕ್ಷೇತ್ರದಲ್ಲಿ ಐದು ಮಾಗಣೆಗೆ ಐದು ಗುರಿಕಾರರನ್ನು ನೇಮಕ ಮಾಡಿದೆ. ಅಲ್ಲದೆ ದೇವಸ್ಥಾನ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ಆಡಳಿತಮಂಡಳಿ ಹಾಗೂ ತಂಡವನ್ನು ರಚಿಸಿ ಕಾರ್ಯನಿರ್ವಹಿಸುತ್ತಿದೆ.
ಸುಮಾರು 70 (ಎಪ್ಪತ್ತು) ಕುಟುಂಬಗಳು ಈ ದೇವಳದ ವ್ಯಾಪ್ತಿಗೆ ಒಳಪಟ್ಟಿದೆ. ಕ್ಷೇತ್ರಕ್ಕೆ ಸಲ್ಲಬೇಕಾದ ಎಲ್ಲ ವಂತಿಗೆಗಳನ್ನು ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಪಾವತಿಸಿ ಕ್ಷೇತ್ರದ ಸರ್ವತೋಮುಖವಾದ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಈ ದೇವಸ್ಥಾನವು 10 ವರ್ಷಗಳ ಹಿಂದೆಯμÉ್ಟ ಜೀರ್ಣೋದ್ಧಾರಗೊಂಡಿದೆ. ದೇವಳದ ಜೀರ್ಣೋದ್ಧಾರದ ಮಹತ್ತರವಾದ ಕಾರ್ಯದ ನೇತೃತ್ವನ್ನು ವಹಿಸಿಕೊಂಡವರು ದಿ. ವೆಂಕ ಶೆಟ್ಟಿಗಾರರು. ಅವರೊಂದಿಗೆ ದುಡಿದ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ. ನಮ್ಮ ದೇವಸ್ಥಾನದ ಜೀರ್ಣೋದ್ಧಾರವು ಊರ ಹಾಗೂ ಪರವೂರ ದಾನಿಗಳ ಸಹಕಾರದಿಂದ ಸಂಪೂರ್ಣವಾಗಿ ಯಶಸ್ವಿಯಾಗಿದೆ ಹಾಗೂ ಮುಂಬೈ ಸಮಿತಿಯ ಸಿಂಹ ಪಾಲು ಕೂಡ ಇದೆ. ಮುಂಬೈ ಸಮಿತಿ ಸದಾ ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತಿದೆ.
ಪ್ರತಿ ತಿಂಗಳು ಸಂಕ್ರಮಣಪೂಜೆ, ವಾರ್ಷಿಕ ಜಾತ್ರಾ ಮಹೋತ್ಸವ, ನವರಾತ್ರಿ ಪೂಜೆ, ದೀಪೆÇೀತ್ಸವ, ಚೌತಿ ಪೂಜೆ ಮತ್ತು ವರಾಮಹಾಲಕ್ಷ್ಮಿ ಪೂಜೆ ಬಹಳ ವಿಜೃಂಭಣೆಯಿಂದ ಅನ್ನ ಸಂತರ್ಪಣೆಯೊಂದಿಗೆ ನಡೆಯುತ್ತಿದೆ.
ಜೀರ್ಣೋದ್ಧಾರಗೊಂಡ ಬಳಿಕ ಈ ದೇವಳದಲ್ಲಿ ನಿರಂತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಬರುತ್ತಿದೆ. ಒಳ ಸುತ್ತು ಪೌಳಿಯ ಮೇಲ್ಚಾವಣಿ ಹಾಗೂ ಪೌಳಿಯ ಮೇಲ್ಚಾವಣಿಗಳ ಕಾರ್ಯಗಳು ಅಡುಗೆ ಶಾಲೆ ಈಗಾಗಲೇ ನಿರ್ಮಾಣಗೊಂಡಿದೆ.ಕ್ಷೇತ್ರದ ಶಾಸಕರಾದ ಶ್ರೀ ಲಾಲಾಜಿ ಆರ್. ಮೆಂಡನ್ ಹಾಗೂ ಸಚಿವರಾದ ಶ್ರೀನಿವಾಸ ಪೂಜಾರಿಯವರು ಕೂಡ ಈ ಕ್ಷೇತ್ರ ಅಭಿವೃದ್ಧಿಗೆ ಈಗಾಗಲೇ ಅನುದಾನವನ್ನು ಬಿಡುಗಡೆ ಮಾಡಿದ್ದು ಇನ್ನೂ ಕೆಲವು ದಾನಿಗಳು ಈ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಲು ಸಿದ್ಧರಾಗುತ್ತಿದ್ದಾರೆ.
ಒಟ್ಟಿನಲ್ಲಿ ಈ ಕ್ಷೇತ್ರದಲ್ಲಿ ನಡೆದ ಸರ್ವ ಕಾರ್ಯಗಳಿಗೆ ಸಹಕರಿಸಿದ, ಸಹಕರಿಸುತ್ತಿರುವ ಸರ್ವರಿಗೂ ಕ್ಷೇತ್ರದ ಆಡಳಿತ ಮಂಡಳಿಯು ಸದಾ ಋಣಿಯಾಗಿದೆ.