ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ, ಅಂಚೆ ಸಂತೆಕಟ್ಟೆ, ಕಲ್ಯಾಣಪುರ – 576 105, ಉಡುಪಿ ಜಿಲ್ಲೆ.

Share with your family and friends

Loading

ಶ್ರೀ ಕ್ಷೇತ್ರದ ಕಿರು ಪರಿಚಯ

ಪುನರ್ ನಿರ್ಮಾಣಗೊಂಡು 2018 ರಲ್ಲಿ ಪುನರ್ ಪ್ರತಿμÉ್ಠಗೊಂಡ ಕಲ್ಯಾಣಪುರ ಸಂತೆಕಟ್ಟೆಯಲ್ಲಿರುವ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನವು ಆದಿಮ ಮತ್ತು ಶಿಷ್ಟ, ಶ್ರದ್ಧೆ, ನಂಬಿಕೆ, ಆಚಾರ, ವಿಚಾರ, ಉಪಾಸನಾ ವಿಧಾನ ಸಂಲಗ್ನಗೊಂಡ ಸಂಕುಲ ಆರಾಧನಾ ಸ್ಥಾನವಾಗಿ ಪುನರುತ್ತಾನಗೊಂಡಿದೆ. ಈ ಕ್ಷೇತ್ರದ ಪೂರ್ವಚರಿತ್ರೆಯ ಬಗ್ಗೆ ಲಿಖಿತ ದಾಖಲೆಗಳು ಸಂರಕ್ಷಿತವಾಗದ ಕಾರಣ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಮಾಹಿತಿಗಳು ಹಾಗೂ ಸಂಶೋಧಕರ ಅಭಿಪ್ರಾಯಗಳನ್ನೇ ಚರಿತ್ರೆಯಾಗಿ ಅನುಸಂಧಾನ ಮಾಡಬೇಕಾಗಿದೆ. ಪದ್ಮಶಾಲಿ ಸಮಾಜ ಅಮರಾವತಿಯಿಂದ ಕಾಂಚಿಗೆ, ಕಾಂಚಿಯಿಂದ ಮಧುರೆಗೆ ಬಂದು, ಮಧುರೆಯಲ್ಲಿ ಶತಶತಮಾನಗಳ ಕಾಲ ಸ್ವಜಾತಿ ನೀತಿ- ಆಚಾರಗಳನ್ನು ಶ್ರದ್ಧಾಭಕ್ತಿಯಿಂದ ಪಾಲಿಸಿಕೊಂಡು ಜೀವನ ನಡೆಸುತ್ತಿತ್ತು. ಇಂತಿರಲು ಮಧುರೆಯಿಂದ ರಾಜನು ತನ್ನ ಅನುಚರರಾಗಿ ವಿವಿಧ ಕುಲಕಸುಬುಗಳನ್ನು ಮಾಡುವ ರಜಕ, ವಾದ್ಯವಿಭಾಗ, ಕ್ಷೌರಿಕ ಹಾಗೂ ನೇಕಾರರನ್ನು ಬಾರಕೂರಿಗೆ ಸಮುದ್ರ ಮುಖೇನ ಕರೆತಂದನು. ಬಾರಕೂರಿನಲ್ಲಿ ವೀರಭದ್ರ ದೇವರನ್ನು ಹಾಗೂ ದೇವಿಯನ್ನು ಆರಾಧಿಸುತ್ತ ರಾಜಾಶ್ರಯದಲ್ಲಿ ಅತ್ಯಂತ ನಿμÉ್ಠಯಿಂದಲೂ ಗೌರವದಿಂದಲೂ ಜೀವನ ನಡೆಸುತ್ತಿರಲು, ಅದರಲ್ಲಿ ಉತ್ತಮ ಕರ್ಮಗುಣ ಇರುವ ಒಂದು ಕುಟುಂಬಕ್ಕೆ (ಗುಂಪಿಗೆ) ಉಡುಪಿ ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಭೂಷಣ ವಸ್ತುಗಳನ್ನು ಪೂರೈಸಲು ರಾಜನ ಕೃಪೆ ಬಂದೊದಗಿತು. ಅವರ ಸೇವೆ, ನಿಯಮ-ನಿμÉ್ಠಗಳಿಂದ ಸಂಪ್ರೀತವಾದ ರಾಜಪರಿವಾರದಿಂದ ಪಾರಿತೋಷಕವಾಗಿ ಕಲ್ಯಾಣಪುರದ ಈ ಭೂಮಿಯು ಲಭಿಸಿತು.

ಈ ಕ್ಷೇತ್ರದಲ್ಲಿ ಆದಿಯಲ್ಲಿ ದೈವೀಶಕ್ತಿಯಿದ್ದ ಒಂದು ಬ್ರಾಹ್ಮಣ ಕುಟುಂಬವು ನರಸಿಂಹ ದೇವರನ್ನು ಮನೆದೇವರಾಗಿ ಆರಾಧಿಸುತ್ತಿತ್ತು. ಆನಂತರದಲ್ಲಿ ಜೈನ ಸಂಪ್ರದಾಯದ ಬ್ರಹ್ಮಲಿಂಗ ಅಬ್ಬಗ-ದಾರಗ ಸಪರಿವಾರ ಸಾನಿಧ್ಯಗಳು ಪೂಜೆಗೊಳ್ಳತೊಡಗಿದವು. ಜೈನರ ನಂತರ ಪದ್ಮಶಾಲಿಗರ ಸಂಬಂಧದ ಕಾಲದಲ್ಲಿ ಈ ಕ್ಷೇತ್ರವು ಇನ್ನಷ್ಟು ವಿಸೃತಗೊಂಡು ಬ್ರಾಹ್ಮಣಕರ್ಮ ಸಂಪ್ರದಾಯದಲ್ಲಿ ವೀರಭದ್ರ ಮತ್ತು ಆದಿಶಕ್ತಿ ದೇವರ ಪ್ರಧಾನ ಆರಾಧನೆ ಪ್ರಾರಂಭವಾಯಿತು. ಅದರೊಂದಿಗೆ ಅನೇಕ ಉಪಸಾನಿಧ್ಯಗಳು ಸೇರ್ಪಡೆಗೊಂಡು ಪೂಜೆಗೊಳ್ಳತೊಡಗಿತು. ಈ ಕ್ಷೇತ್ರವು ಮೊದಲು 6 ಆರು ಮಾಗಣೆಗಳ ಭಜಕರಿಂದ ಆರಾಧಿಸಲ್ಪಡುತ್ತಿತ್ತು. ಕಲ್ಯಾಣಪುರ, ಕಾಪು, ಎರ್ಮಾಳು. ಪಡುಬಿದ್ರಿ, ಇನ್ನ ಮುಂಡ್ಕೂರು ಮತ್ತು ಬೈಲೂರು. ಈಗ ಇದರಲ್ಲಿ 4 ಕ್ಷೇತ್ರಗಳಲ್ಲಿ ದೇವಸ್ಥಾನಗಳಾಗಿವೆ. ಅಂತೆಯೇ ಈ ದೇವಸ್ಥಾನದ ಭಜಕರಾದ ದಿ. ಅಪ್ಪಯ್ಯ ಶೆಟ್ಟಿಗಾರರು ಒಂದು ಶತಮಾನದ ಹಿಂದೆ ಕಿನ್ನಿಮುಲ್ಕಿಯಲ್ಲಿ ಶ್ರೀ ವೀರಭದ್ರದೇವರ ದೇವಸ್ಥಾನವನ್ನು ಸ್ಥಾಪಿಸಿದರು. ಈಗಿನ ವ್ಯವಸ್ಥೆಯಲ್ಲಿ 8 ಗ್ರಾಮ 6 ಮಾಗಣೆಗಳಿದ್ದು ಎಲ್ಲ ಗ್ರಾಮ ಮಾಗಣೆಗಳು ಗುರಿಕಾರರ ನೇತೃತ್ವವನ್ನು ಹೊಂದಿವೆ.

8 ಗ್ರಾಮಗಳು
1) ಕಲ್ಯಾಣಪುರ-ತೋನ್ಸೆ 2) ಪಡಮುನ್ನೂರು 3) ಕುಂಜಿಬೆಟ್ಟು 4) ಪರ್ಕಳ
5) ಮಂಚಿ 6) ಮೂಡನಿಡಂಬೂರು 7) ಅಂಬಲಪಾಡಿ 8) ಕಿನ್ನಿಮುಲ್ಕಿ
6 ಮಾಗಣೆಗಳು
1) ನೀರೆಬೈಲೂರು 2) ಕರ್ವಾಲು 3) ಸಾಣೆಕಲ್ಲು
4) ಬೊಮ್ಮರಬೆಟ್ಟು 5) ಹಿರಿಯಡ್ಕ 6) ಅಂಜಾರು
ಕ್ಷೇತ್ರದಲ್ಲಿ ನಡೆಯುವ ಉತ್ಸವ, ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು

  • ಎಪ್ರಿಲ್/ಮೇ ತಿಂಗಳಿನಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ
  • ಪ್ರತಿ ಸಂಕಷ್ಟಿಯಂದು ಗಣಹೋಮ
  • ಸಂಕ್ರಮಣ ಪೂಜೆ
  • ನವರಾತ್ರಿಯ ಚೌತಿ ದಿನದಂದು ಚಂಡಿಕಾಹೋಮ
  • ನವರಾತ್ರಿಯ ಪ್ರತಿದಿನ ಕಲ್ಪೋಕ್ತ ಪೂಜೆ
  • ಸೋಣ ತಿಂಗಳಲ್ಲಿ ಪ್ರತಿ ಸಂಜೆ ಸೋಣಾರತಿ
  • ಕಾರ್ತಿಕ ಮಾಸದಲ್ಲಿ ದೀಪೋತ್ಸವ
  • ಮಹಾಶಿವರಾತ್ರಿಯಂದು ಏಕಾದಶ ರುದ್ರಾಭಿμÉೀಕ
  • ಶಿವಪಂಚಾಕ್ಷರೀ ಜಪ.
  • ಸಾಮೂಹಿಕ ಸತ್ಯನಾರಾಯಣ ಪೂಜೆ
  • ವರಮಹಾಲಕ್ಷ್ಮೀ ಪೂಜೆ
  • ಶ್ರೀ ರಾಮನವಮಿ
  • ಉಪಾಕರ್ಮ
  • ನಾಗರ ಪಂಚಮಿ
  • ಕದಿರುಕಟ್ಟುವ ಹಬ್ಬ
  • ಶಂಕರಜಯಂತಿ

ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ :

ಉಡುಪಿಯಿಂದ 190 ಕಿಲೋ ಮೀಟರ್‍ದೂರದ ಕೇರಳದ ತಳಿಪರಂಬದಿಂದ ಬರಮಾಡಿಸಿಕೊಂಡ ದೈವಜÐರಾದ ಜ್ಯೋತಿಷ್ಯ ಪಾರಂಗತನ್ ತಲೋರ ದಿವಾಕರನ್ ಅವರ 25 ದಿವಸಗಳ ವಿಸ್ತಾರವಾದ ಮತ್ತು ನಿಖರವಾದ ಪ್ರಶ್ನಾಚಿಂತನೆಯು ಆಗಮ ಶಾಸ್ತ್ರಕ್ಕನುಗುಣವಾಗಿ ದೇವಸ್ಥಾನ ನಿರ್ಮಾಣ ಮಾಡುವಲ್ಲಿ ಹಾಗೂ ಕ್ಷೇತ್ರದಲ್ಲಿ ರಕ್ತಾಹಾರವನ್ನು ಸಂಪೂರ್ಣವಾಗಿ ನಿμÉೀಧಿಸುವಲ್ಲಿ ಮಹತ್ತರವಾದ ಪಾತ್ರವಹಿಸಿದೆ. ನಾಡಿನ ಖ್ಯಾತ ಸ್ಥಪತಿ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟರ ಸಮರ್ಥ ನಿರ್ದೇಶನದಲ್ಲಿ ಸಾಂಸ್ಕøತಿಕ ಭವ್ಯತೆಯ, ಧಾರ್ಮಿಕ ದಿವ್ಯತೆಯ ಆದಿಮ ಆರಾಧನಾ ಕೇಂದ್ರವೊಂದು ಪುನರ್ ನಿರ್ಮಾಣಗೊಂಡಿತು. ಪುನರ್ ನಿರ್ಮಾಣದ ಸಂಕಲ್ಪ ಸಿದ್ಧಿಗಾಗಿ ಬಾಲಾಲಯ ಪ್ರತಿμÉ್ಠಯಿಂದ ಪುನರ್ ಪ್ರತಿμÉ್ಠಯವರೆಗಿನ 356 ದಿವಸಗಳಲ್ಲಿ ಸಾಯಂ ಸಂಧ್ಯಾ ಕಾಲದಲ್ಲಿ ಆಮಂತ್ರಿತ ತಂಡಗಳ ನಿರಂತರ ಭಜನೆ, ಏಳು ಹಂತದ ಶಿವ ಪಂಚಾಕ್ಷರಿ ಜಪ, ಸಪ್ತಶತಿ ಪಾರಾಯಣ, ಶಂಕರಾಚಾರ್ಯ ಅμÉೂ್ಟೀತ್ತರ ನಾಮಾವಳಿ ಪಾರಾಯಣ, ಮೂಲಕ್ಷೇತ್ರ ಬಾರಕೂರಿಗೆ ಪಾದಯಾತ್ರೆ, ಭಜಕರ ಶ್ರದ್ಧಾಭಕ್ತಿಯ ವ್ರತ-ನಿಯಮಗಳ ಪರಿಪಾಲನೆಯೊಂದಿಗೆ ಭಗವದರ್ಪಣೆಯ ವಿನೀತಭಾವ, ಸನ್ನಿಧಾನದ ಮೇಲಿನ ಭರವಸೆ ಮತ್ತು ವಿಶ್ವಾಸ, ದಣಿವರಿಯದ ಶ್ರದ್ಧೆಯ ಕರಸೇವೆ, ಸಂಘಟನಾ ಸಾಮಥ್ರ್ಯ ಇವು ಯಶಸ್ವೀ ಜೀರ್ಣೋದ್ಧಾರದ ಒಳನೋಟ. ಶಿಲಾನ್ಯಾಸದ ಪೂರ್ವಭಾವಿಯಾಗಿ ಗರ್ಭಗುಡಿ ನಿರ್ಮಾಣದ ನ್ಯಾಸ ಶಿಲೆಗಳು ಉಡುಪಿ ಶ್ರೀ ಕೃಷ್ಣಮಠದ ಮಧ್ವಸರೋವರದಲ್ಲಿ ಆಗಿನ ಪರ್ಯಾಯ ಪೀಠಾಧಿಪತಿಗಳಾಗಿದ್ದ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಪೂಜನಗೊಂಡುದು, ವಾಹನಗಳ ಮೆರವಣಿಗೆಯಲ್ಲಿ ಕಲ್ಯಾಣಪುರ ದೇವಸ್ಥಾನಕ್ಕೆ ತಂದುದು ವಿಭಿನ್ನರೀತಿಯಲ್ಲಿ ಶಿಲಾನ್ಯಾಸಕ್ಕೆ ನೀಡಿದ ಧಾರ್ಮಿಕ- ಸಾಂಸ್ಕøತಿಕ ಸ್ಪರ್ಶವಾಗಿದೆ.

ದೇವಾಲಯ ಪ್ರವೇಶಿಸುವ ಎರಡು ಪ್ರವೇಶದ್ವಾರಗಳು ಕೀರ್ತಿಮುಖ, ಅಲಂಕರಣಗಳಿಂದ ಕಂಗೊಳಿಸುತ್ತಿವೆ. ಸುತ್ತುಪೌಳಿಯ ಹೊರಗೋಡೆಯಲ್ಲಿ ಭಿತ್ತಿಸ್ತಂಭಗಳು ಮತ್ತು ಕೋಷ್ಟ ಪಂಜರಗಳಿವೆ. ಅಗ್ರಸಭೆಯಲ್ಲಿ ಪುಷ್ಪಬೋಧಿಗೆಯಿಂದ ಶೋಭಿಸುತ್ತಿರುವ ಕಂಬಗಳು, ಆಸನ, ಪೀಠ, ಪಾದ, ದಂಡ, ದಂಡಾಗ್ರ ಮುಂತಾದ ಅಂಗಗಳನ್ನೊಳಗೊಂಡಿದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ನೀಡಿದ ಸೂಚನೆಯಂತೆ ಒಂದೇ ಸುತ್ತುಪೌಳಿಯ ಒಳಗೆ ಆದಿಶಕ್ತಿ ದೇವರು ಹಾಗೂ ವೀರಭದ್ರ ದೇವರಿಗೆ ಸಮಾನ ಪ್ರಾಶಸ್ತ್ಯವಿರುವಂತೆ ನಿರ್ಮಿಸಲಾದ ಎರಡು ಪ್ರತ್ಯೇಕ ಗರ್ಭಗುಡಿಗಳು ಹಾಗೂ ಎರಡು ಪ್ರತ್ಯೇಕ ತೀರ್ಥಮಂಟಪಗಳು ಇವೆ. ಇದು ಜಿಲ್ಲೆಯಲ್ಲಿ ಅಪೂರ್ವವಾದುದು ಮತ್ತು 16 ವೀರಭದ್ರ ದೇವಸ್ಥಾನಗಳಲ್ಲಿಯೇ ಪ್ರಥಮವಾಗಿದೆ. ತೀರ್ಥ ಮಂಟಪಗಳ ಶಿಲಾಸ್ತಂಭಗಳು ಮತ್ತು ಕಲ್ಲಿನ ಕರ್ಣಮುಚ್ಚಿಗೆಗಳಿರುವ ರಚನೆಗಳು ಸರಳ ಸುಂದರವಾಗಿವೆ. ವೀರಭದ್ರ ಮತ್ತು ಆದಿಶಕ್ತಿ ದೇವರ ಗುಡಿಗಳ ಜಗತಿಯಲ್ಲಿ ಅನುಕ್ರಮವಾಗಿ ನಂದಿಯ ಹಾಗೂ ಸಿಂಹದ ಚಿತ್ತಾರಗಳಿವೆ. ಗ್ರೀವದಲ್ಲಿ ಗಜಕೇಸರಿ ಹಾಗೂ ಚಾರೆಗುಂಟಗಳನ್ನು ಅಳವಡಿಸಲಾಗಿದೆ. ನೈರುತ್ಯದಲ್ಲಿ ಗಣಪತಿ ದೇವರ ಸಂಕಲ್ಪವಿದೆ. ವೀರಭದ್ರ ದೇವರನ್ನು ಪ್ರಧಾನವಾಗಿರಿಸಿಕೊಂಡು ಧ್ಜಜಸ್ತಂಭ ಹಾಗೂ ಬಲಿಶಿಲೆಗಳನ್ನು ಸ್ಥಾಪಿಸಲಾಗಿದೆ.

ಹೊರಸುತ್ತಿನ ನೈಋತ್ಯದಲ್ಲಿ ಪ್ರಧಾನವಾಗಿ ಮರದ ದೀಪದಳಿಯ ಭಿತ್ತಿಯ ರಚನೆಯೊಂದಿಗೆ ದ್ವಿತಲದ ಗರ್ಭಗುಡಿಯಲ್ಲಿ ಆದಿಮ ಉಪಾಸನಾ ಸಾನಿಧ್ಯಗಳಾದ ಬ್ರಹ್ಮ(ಬೆರ್ಮೆರ್) ಹಾಗೂ ಅಬ್ಬಗ-ದಾರಗ ಸಿರಿಗಳು ನೆಲೆಯಾಗಿವೆ. ದೇವಸ್ಥಾನದ ದಕ್ಷಿಣ ಭಾಗದಲ್ಲಿ ಪ್ರಾಸಾದಮಂಟಪ, ಮುಖಾಮಯ ಸಹಿತವಾಗಿ, ಚಾರೆಗುಂಟ ಅಳವಡಿಸಿರುವ ಪರಿವಾರ ದೈವಗಳ ಅಕರ್ಷಕವಾದ ಮೂರು ಗುಡಿಗಳ ನಿರ್ಮಾಣವಾಗಿದೆ. ಬಲತುದಿಯ ಗುಡಿಯಲ್ಲಿ ಕಾಳಿ-ಮಹಾಕಾಳಿ-ಭದ್ರಕಾಳಿ, ಮೂರು ಪಂಜುರ್ಲಿ ಸಂಕಲ್ಪಗಳು ಹಾಗೂ ಬೈಕಾಡ್ತಿ ಶಕ್ತಿಗಳು ಇವೆ. ನಡುವಿನ ಗುಡಿಯಲ್ಲಿ ಪಂಚ ಧೂಮಾವತಿ, ಮರುಳು ಧೂಮಾವತಿ ಹಾಗೂ ಅವರ ಬಂಟ ದೈವಗಳು ವಿರಾಜಮಾನವಾಗಿವೆ. ಎಡಬದಿಯ ಗುಡಿಯಲ್ಲಿ ನಂದಿಕೇಶ್ವರ, ಈಶ್ವರಕುಮಾರ, ಕೋಟಿಪೂಂಜಾ ಹಾಗೂ ಕಲ್ಕುಡ ಸಾನಿಧ್ಯಗಳನ್ನು ಪೂಜಿಸಲಾಗುತ್ತಿದೆ. ಹಾಗೆಯೆ ಕ್ಷೇತ್ರಪಾಲ, ಭೂತರಾಜರು, ಬೈರವ, ಬೊಬ್ಬರ್ಯ, ರಕ್ತೇಶ್ವರಿ, ಅಡಕತ್ತಾಯ, ಬ್ರಹ್ಮಲಿಂಗ ಗುಡಿಯಲ್ಲಿ ಕಮಲ ಕುಮಾರ (ಸಂಕಲ್ಪದಲ್ಲಿ), ದೇವಸ್ಥಾನದ ಸುತ್ತುಪೌಳಿಯಲ್ಲಿ ರಾಮದೇವರ ಸಾನಿಧ್ಯಗಳಿವೆ. ಗಣಪತಿ, ಆದಿಶಕ್ತಿ ದೇವರನ್ನು ನೂತನ ಶಿಲಾಪ್ರತಿಮೆಯಲ್ಲಿ ಮತ್ತು ದೈವಗಳನ್ನು ನೂತನದಾರು ಪೀಠಗಳಲ್ಲಿ ಆರಾಧಿಸಲಾಗುತ್ತಿದೆ ಕ್ಷೇತ್ರದಲ್ಲಿ ಪ್ರಧಾನ ಹಾಗೂ ಉಪದೇವತೆಗಳನ್ನು ಸೇರಿಸಿ ಒಟ್ಟು 31 ಸಾನಿಧ್ಯಗಳ ಸಂದೋಹವಿದೆ. ತಂತ್ರಿಗಳ, ಸ್ಥಪತಿಗಳ ನಿರ್ದೇಶನದಲ್ಲಿ ಜೀರ್ಣೋದ್ಧಾರದ ಶಾಸ್ತ್ರ ಆಧಾರಿತ ಮತ್ತು ಇನ್ನಿತರ ಪ್ರಕ್ರಿಯೆಗಳಾದ ಪ್ರಾಯಶ್ವಿತ್ತ, ಮನವಿ ಬಿಡುಗಡೆ, ಮುಷ್ಟಿಕಾಣಿಕೆ, ಶಿಲಾಮುಹೂರ್ತ, ಜೀರ್ಣೋದ್ಧಾರದ ಹುಂಡಿ ಸ್ಥಾಪನೆ, ಸಾನಿಧ್ಯ ಸಂಕೋಚ-ಬಾಲಾಲಯ ಪ್ರತಿμÉ್ಠ, ಶಿಲಾನ್ಯಾಸ, ಷಡಾಧಾರ ಸ್ಥಾಪನೆ, ಗರ್ಭನ್ಯಾಸ, ಪಾದುಕಾನ್ಯಾಸ, ದ್ವಾರಮುಹೂರ್ತ, ಕುತ್ತಿಪೂಜೆ, ನೂತನ ಧ್ವಜಸ್ತಂಭ ಸ್ಥಾಪನೆ ಇತ್ಯಾದಿಗಳನ್ನು ನಡೆಸಿ ಬ್ರಹ್ಮಕುಂಭಾಬಿμÉೀಕಕ್ಕೆ ತಂತ್ರಿಗಳ ನೇತೃತ್ವದಲ್ಲಿ ದಿನ ನಿಗದಿಗೊಳಿಸಿ, ಒಂದು ಸಾವಿರ ಜನರನ್ನೊಳಗೊಂಡ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಿಕೊಂಡು, ಸಾಕಷ್ಟು ಪೂರ್ವತಯಾರಿ ನಡೆಸಿಕೊಂಡು 10 ದಿವಸಗಳ ಬ್ರಹ್ಮಕಲಶೋತ್ಸವವನ್ನು ಫಲಪ್ರದವಾಗಿ ನಡೆಸಲಾಯಿತು. ಧಾರ್ಮಿಕ ನಾಯಕರ, ವಿದ್ವಾಂಸರ, ಗಣ್ಯರ ಉಪಸ್ಥಿತಿಯಲ್ಲಿ ನಡೆದ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು, ಹೊರೆಕಾಣಿಕೆ, ಮಹಾಅನ್ನಸಂತರ್ಪಣೆ ಸಮಸ್ತ ಭಕ್ತರ ಆಶಯದಂತೆ
ಸಂಪನ್ನಗೊಂಡಿತು. ದೃಢಕಲಶವೂ ವಿಧಿವತ್ತಾಗಿ ನೆರವೇರಿತು.

ಶ್ರೀ ಬ್ರಹ್ಮಲಿಂಗೇಶ್ವರ ವೀರಭದ್ರ ಭಜನಾ ಮಂಡಳಿ
1933 ರಲ್ಲಿ ಭಜನಾ ಮಂಡಳಿಯು ಪ್ರಾರಂಭಗೊಂಡಿತು. 1971 ರಲ್ಲಿ ವಿವಿಧ ಪದಾಧಿಕಾರಿಗಳನ್ನೊಳಗೊಂಡ ಆಡಳಿತ ಮಂಡಳಿಯನ್ನು ರಚಿಸಲಾಯಿತು. 1975 ರಿಂದಲೂ ಪ್ರತಿ ಶನಿವಾರ ಭಜನಾಪೂಜೆ ನಡೆದುಕೊಂಡು ಬರುತ್ತಿದೆ. ಪ್ರತಿ ವರ್ಷ ದೇವಸ್ಥಾನದಲ್ಲಿ ಭಜನಾ ಮಂಡಳಿಯ ನೇತೃತ್ವದಲ್ಲಿ ಶ್ರೀ ರಾಮನವಮಿ ಮಹೋತ್ಸವ ಜರಗುತ್ತ ಬಂದಿರುತ್ತದೆ. 2008 ರಲ್ಲಿ ಅಮೃತ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಭಜನಾ ಮಂಡಳಿಯು ಪ್ರಧಾನ ಪಾತ್ರ ವಹಿಸಿದೆ.

ಪದ್ಮಶಾಲಿ ಯುವವೇದಿಕೆ
1997ರಲ್ಲಿ ದೇವಸ್ಥಾನದಲ್ಲಿ ಯುವವೇದಿಕೆಯನ್ನು ಸ್ಥಾಪಿಸಲಾಯಿತು. ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ಸಾಮೂಹಿಕ ಸತ್ಯನಾರಾಯಣ ಪೂಜೆಯು ಯುವವೇದಿಕೆಯ ನೇತೃತ್ವದಲ್ಲಿ ಜರಗುತ್ತದೆ. ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ವಿದ್ಯಾರ್ಥಿವೇತನವನ್ನು ನೀಡುತ್ತಿರುವುದಲ್ಲದೆ ಸಾಂಸ್ಕøತಿಕ, ಕ್ರೀಡಾ ಕ್ಷೇತ್ರಗಳಲ್ಲಿಯೂ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಮಹಾಸಭಾದ ‘ಪದ್ಮಶಾಲಿ ಕ್ರೀಡೋತ್ಸವ’ವನ್ನು ಎರಡು ಬಾರಿ ಯಶಸ್ವಿಯಾಗಿ ನಡೆಸಿಕೊಟ್ಟಿರುವುದು ಮಾತ್ರವಲ್ಲದೆ ಸತತವಾಗಿ ಮೂರು ಬಾರಿ ‘ಪರ್ಯಾಯ ಫಲಕ’ವನ್ನು ಪಡೆದು ಶಾಶ್ವತವಾಗಿ ತನ್ನದಾಗಿಸಿಕೊಂಡ ಪ್ರಥಮ ದೇವಸ್ಥಾನವೆಂಬ ಕೀರ್ತಿ ತಂದಿರುತ್ತದೆ.

ಶ್ರೀ ಆದಿಶಕ್ತಿ ಪದ್ಮಶಾಲಿ ಮಹಿಳಾವೇದಿಕೆ
24-12-2015ರಂದು ಮಹಿಳಾವೇದಿಕೆಯು ಪ್ರಾರಂಭಗೊಂಡಿತು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಮಹಿಳಾವೇದಿಕೆಯು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದೆ. ಒಟ್ಟಿನಲ್ಲಿ ಸಹಸ್ರಮಾನದ ಹಿನ್ನೆಲೆಯಿರುವ ಆದಿಮದ ಆರಾಧನಾ ನೆಲೆಯೊಂದು (ಬ್ರಹ್ಮಸ್ಥಾನ) ತನ್ನ ಮೂಲ ಸೊಗಡನ್ನು ಉಳಿಸಿಕೊಂಡು ಅನೇಕ ಸಾನಿಧ್ಯಗಳನ್ನು ಸ್ವೀಕರಿಸಿ, ಪದ್ಮಶಾಲಿಗರ ಕುಲದೇವಸ್ಥಾನವಾಗಿ, ಪರಿಸರದ ಭಕ್ತರ ಶ್ರದ್ಧಾಕೇಂದ್ರವಾಗಿ ತೆರೆದುಕೊಂಡು ಧಾರ್ಮಿಕ-ಸಾಂಸ್ಕøತಿಕ ಭವ್ಯತೆಗೆ ಸಾಕ್ಷಿಯಾಗಿ ನೆಲೆನಿಂತಿದೆ.