ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ, ಹೊಸದುರ್ಗ, ಕಾಙಂಗಾಡ್

Share with your family and friends

Loading

ಪದ್ಮಶಾಲಿ ಸಮಾಜವು ದಕ್ಷಿಣಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಹೊಸದುರ್ಗ ಸೇರಿ ಹದಿನಾರು ದೇವಸ್ಥಾನಗಳನ್ನು ಹೊಂದಿರುತ್ತದೆ. ಪ್ರಸ್ತುತ ಹೊಸದುರ್ಗದ ಈ ದೇವಸ್ಥಾನವು ಹದಿನಾರನೆಯದಾಗಿರುತ್ತದೆ.

ಈ ಹಿಂದೆ ಹೊಸದುರ್ಗದ ಕೊಟ್ಟಚೇರಿಯ ಬಸ್ಸು ನಿಲ್ದಾಣದ ಸಮೀಪದಲ್ಲಿರುವ ದಿವಂಗತ ಶ್ರೀ ಕೃಷ್ಣರಾಮಯ್ಯ ಶೆಟ್ಟಿಗಾರರ ಮನೆಯಲ್ಲಿ ಶ್ರೀ ದೇವರಿಗೆ ನವರಾತ್ರಿಯ ದಿನಗಳಲ್ಲಿ ಮೊದಲನೆಯ ಸೋಮವಾರದಂದು ಬ್ರಾಹ್ಮಣರಿಂದ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತಿತ್ತು. ಜೋತಿಷ್ಯ ಪ್ರಶ್ನೆಯಲ್ಲಿ ಕಂಡುಬಂದಂತೆ ಶ್ರೀ ದೇವರಿಗೆ ಪ್ರತ್ಯೇಕವಾಗಿ ಭೂಮಿಯನ್ನು ಖರೀದಿಸಿ ಹೊಸದುರ್ಗದ ಕುಶಾಲನಗರದ ರೈಲ್ವೇಗೇಟಿನ ಸಮೀಪ ಬಡಗು ದಿಕ್ಕಿಗೆ ನೂತನ ದೇವಸ್ಥಾನವನ್ನು ನಿರ್ಮಿಸಿ ಪ್ರಧಾನಗುಡಿಯಲ್ಲಿ ಶ್ರೀ ವೀರಭದ್ರ ಮತ್ತು ಶ್ರೀ ದುರ್ಗಾಪರಮೇಶ್ವರಿ ಹಾಗೂ ಉಪದೇವತೆಗಳಾಗಿ ಶ್ರೀ ಗಣಪತಿ ಮತ್ತು ಶ್ರೀ
ಮಹಮ್ಮಾಯಿ ವಿಗ್ರಹಗಳನ್ನು ಪ್ರತಿμÁ್ಠಪಿಸಲಾಗಿದೆ. ದೇವಸ್ಥಾನದ ಹೊರಭಾಗದಲ್ಲಿ ಗುಳಿಗನ ಪ್ರತಿμÉ್ಠ ಮಾಡಲಾಗಿದೆ.

ಈ ಕ್ಷೇತ್ರವು ಹದಿನಾರು ಕಂಬಗಳನ್ನು ಒಳಗೊಂಡಿದ್ದು, ಸಮಾಜ ಬಾಂಧವರು ದ.ಕ. ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸೇರಿ ಒಟ್ಟು ಹದಿನಾರು ವೀರಭದ್ರ ದೇವಸ್ಥಾನಗಳನ್ನು ಹೊಂದಿರುತ್ತಾರೆ ಎಂಬುದನ್ನು ಸಾರುತ್ತದೆ. ಮಾತ್ರವಲ್ಲ ಈ ಸೂಚಕ ಕಂಬವು ಶ್ರೀ ದೇವರಿಗೆ μÉೂೀಡಶೋಪಚಾರದೊಂದಿಗೆ ಅರ್ಚಿಸುವ ಸಂಕೇತವೂ ಆಗಿರುತ್ತದೆ.

ಹೊಸದುರ್ಗದಲ್ಲಿ ಸಮಾಜಬಾಂಧವರ 35 ರಿಂದ 40 ಮನೆಗಳಿವೆ. ದೇವಸ್ಥಾನದ ಈಗಿನ ಕಾರ್ಯಕ್ರಮವೆಂದರೆ ದಿನನಿತ್ಯ ಸಂಜೆ ಒಂದು ಪೂಜೆ ನೆರವೇರುತ್ತಿದೆ. ನವರಾತ್ರಿಯ ಸಮಯದಲ್ಲಿ ಎಲ್ಲ ಒಂಭತ್ತು ಪೂಜೆಯನ್ನು ಮಾಡುತ್ತ ಬಂದಿದ್ದೇವೆ. ಪ್ರತಿμÁ್ಠ ದಿನವನ್ನು ಪ್ರತಿ ವರ್ಷದ ಮೇ 6 ಕ್ಕೆ ತಂತ್ರಿಯವರ ನೇತೃತ್ವದಲ್ಲಿ ನಡೆಸಲ್ಪಡುತ್ತಿದೆ.