![]()
ಕುಮಾರಿ ಪಲ್ಲವಿ ಜೆ.ಎಸ್ ರವರು ದಿನಾಂಕ: 05/09/2005ರಂದು ಸಿದ್ದಕಟ್ಟೆಯ ಸಂಗಬೆಟ್ಟುವಿನಲ್ಲಿ ಶ್ರೀ ಸುರೇಂದ್ರ ಶೆಟ್ಟಿಗಾರ್ ಹಾಗೂ ಶ್ರೀಮತಿ ಜಯಲಕ್ಷ್ಮೀ ರವರ ಪುತ್ರಿಯಾಗಿ ಜನಿಸಿರುತ್ತಾರೆ. ಇವರ ತಂದೆ ಪ್ರಸ್ತುತ B.C ರೋಡ್ನಲ್ಲಿರುವ KSRTC ಡಿಪೊ ಮೇಲ್ವಿಚಾರಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೂ ತಾಯಿ ಗೃಹಿಣಿಯಾಗಿರುತ್ತಾರೆ.
ಪಲ್ಲವಿಯವರು ತಮ್ಮ ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣವನ್ನು ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆಯಲ್ಲಿ ಮುಗಿಸಿರುತ್ತಾರೆ. 2021ನೇ ಏಪ್ರಿಲ್ ನಲ್ಲಿ ನಡೆದ SSLC ಪರೀಕ್ಷೆಯಲ್ಲಿ ಶೇಕಡಾ 97.44% ಶೇಕಡಾ ಅಂಕವನ್ನು ಗಳಿಸಿರುತ್ತಾರೆ. ಮುಂದೆ ತಮ್ಮ ಶಿಕ್ಷಣವನ್ನು ವಿಜ್ಷಾನ ವಿಭಾಗದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡುಬಿದಿರೆಯಲ್ಲಿ ಪೂರೈಸಿ, ದ್ವಿತೀಯ ಪಿಯುಸಿಯಲ್ಲಿ 95% ಅಂಕವನ್ನು ಪಡೆದಿರುತ್ತಾರೆ. ಅಲ್ಲದೆ CET ಯಲ್ಲಿ 2760ನೇ Rankಗಳಿಸಿ, ಸದ್ಯ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಅಡ್ಯಾರ್ ಮಂಗಳೂರು ಇಲ್ಲಿ AIMLನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ಪದವಿಯನ್ನು ಮಾಡುತ್ತಿದ್ದಾರೆ.

ಪಲ್ಲವಿಯವರು ಬಾಲ್ಯದಿಂದಲೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ. ಅಲ್ಲದೆ ಯಕ್ಷಗಾನ, ಕರಾಟೆ, ಭರತನಾಟ್ಯ, ಯೋಗ, ಪಾಶ್ಚಾತ್ಯ ನೃತ್ಯ ತರಗತಿಗಳನ್ನು ಅಭ್ಯಸಿರುತ್ತಾರೆ. ಆದರೆ ಇವರು ಮುಂದೆ ಪಾಠದ ಜೊತೆ ಜೊತೆಯಲ್ಲಿ ಕ್ರೀಡೆಯನ್ನು ತಮ್ಮ ಪ್ರವ್ರತ್ತಿಯನ್ನಾಗಿ ಆರಿಸಿರುತ್ತಾರೆ. ಶಾಲಾ ಮಟ್ಟದಿಂದಲೇ, ವಲಯಮಟ್ಟ, ತಾಲೂಕು ಮಟ್ಟ, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದ ಹೆಗ್ಗಳಿಕೆ ಇವರದ್ದು ಅಲ್ಲದೆ ನಮ್ಮ ಪದ್ಮಶಾಲಿ ಸಮಾಜದ ಜಿಲ್ಲಾ ಕ್ರೀಡಾಕೂಟದಲ್ಲಿ ಸತತ 6ನೇ ಬಾರಿಗೆ ವೈಯಕ್ತಿಕ ಕ್ರೀಡಾಚಾಂಪಿಯನ್ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
ಅಲ್ಲದೆ ಕಳೆದ ವರ್ಷ ಮೈಸೂರಿನಲ್ಲಿ ನಡೆದ 25ನೇ ರಾಜ್ಯಮಟ್ಟದ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಭಾಗವಹಿಸಿ ಉದ್ದ ಜಿಗಿತದಲ್ಲಿ ಚಿನ್ನದ ಪದಕ, ಎತ್ತರ ಜಿಗಿತದಲ್ಲಿ ಕಂಚಿನ ಪದಕ 4*100 ಮೀಟರ್ ರಿಲೇಯಲ್ಲಿ ಸಹ್ಯಾದ್ರಿ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕವನ್ನು ಗಳಿಸಿರುತ್ತಾರೆ.
ಪ್ರಸ್ತುತ ಕಳೆದ ವಾರ ಶಿವಮೊಗ್ಗದಲ್ಲಿ ಜರುಗಿದ 26ನೇ ವರ್ಷದ ರಾಜ್ಯಮಟ್ಟದ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಭಾಗವಹಿಸಿ ಉದ್ದಜಿಗಿತ ಹಾಗೂ ಟ್ರಿಪಲ್ ಜಂಪ್ (Triple Jump)ದಲ್ಲಿ ಬೆಳ್ಳಿಪದಕವನ್ನು ಗಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.

