ಗಲ್ಫ್ ರಾಷ್ಟçದಲ್ಲಿ ಯುಎಇ ಪದ್ಮಶಾಲಿ ಸಮುದಾಯದ ಕ್ರಾಂತಿಕಾರಿ ಹೆಜ್ಜೆಗಳು….
ಯುಎಇ ಪದ್ಮಶಾಲಿ ಸಮುದಾಯದ ಹುಟ್ಟು ಆಕಸ್ಮಿಕ. 2010ರ ಮೇ ತಿಂಗಳಿನಲ್ಲಿ ಪರಸ್ಪರ ಪರಿಚಯವಿರುವ ಕೆಲವೇ ಪದ್ಮಶಾಲಿಗರು
ಶ್ರೀ ರವಿ ಶೆಟ್ಟಿಗಾರ್ ಕಾರ್ಕಳ ಇವರ ನಿವಾಸದಲ್ಲಿ ಒಟ್ಟುಗೂಡಿದಾಗ ತಮ್ಮ ಸಂಭಾಷಣೆಯ ಮಧ್ಯೆ ನಾವು ಕೂಡ ಏಕೆ ಒಂದು ಸಂಘಟನೆಯನ್ನು ಆರAಭಿಸಬಾರದೆAಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿತು. ಸರ್ವರ ಬಯಕೆಯಂತೆ ಚಿಂತನ-ಮAಥನ ಮಾಡಿದ ಮೇಲೆ 2010 ಜೂನ್ ತಿಂಗಳ 18ರAದೇ ಶ್ರೀ ರವಿ ಶೆಟ್ಟಿಗಾರ್ ಕಾರ್ಕಳ ಇವರ ನೇತೃತ್ವದಲ್ಲಿ ಅವರ ಮನೆಯನ್ನೆ ಉದ್ಘಾಟನೆಯ ಸ್ಥಳವಾಗಿರಿಸಿ ಹಲವು ಪದ್ಮಶಾಲಿ ಬಾಂಧವರು ಮತ್ತು ಸಮಾಜದ ನಿಕಟವರ್ತಿ ಗಣ್ಯರ ಸಮಕ್ಷಮದಲ್ಲಿ ಯುಎಇ ಪದ್ಮಶಾಲಿ ಸಮುದಾಯವನ್ನು ಅಧಿಕೃತವಾಗಿ ಆರಂಭಿಸಲಾಯಿತು.
ಆರAಭದ ದಿನಗಳಲ್ಲಿ ಪದ್ಮಶಾಲಿ ಸದಸ್ಯತಾ ಅಭಿಯಾನದ ಮುಖೇನ ಯುಎಇಯ ಉದ್ದಗಲಕ್ಕೂ ವಾಸಿಸುತ್ತಿರುವ ಸ್ವಜಾತಿಬಾಂಧವರನ್ನು ಗುರುತಿಸಿ ಸಂಘಟನೆಗೆ ಸೇರಿಸಲಾಯಿತು. ಸಂಘಟನೆ ಅಧಿಕೃತ ಚಾಲನೆಯ ಅಂಗವಾಗಿ ಶ್ರೀ ಸತ್ಯನಾರಾಯಣ ಪೂಜೆಯನ್ನು ದುಬಾಯಿಯಲ್ಲಿ ಬಹಳ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು. ದ್ವಿತೀಯ ವಾರ್ಷಿಕೋತ್ಸವವನ್ನು ಶ್ರೀ ಸತ್ಯನಾರಾಯಣ ಪೂಜೆ ಮತ್ತು ಹರಿಕಥಾ ಕಾಲಕ್ಷೇಪಗಳ ಮೂಲಕ ಭಕ್ತಿಪ್ರಧಾನವಾಗಿ ಆಯೋಜಿಸಲಾಯಿತು. ಪದ್ಮಶಾಲಿ ಸಮಾಜದ ಹಿರಿಯ ಮುತ್ಸದ್ಧಿ ಕವಿ ಮತ್ತು ಶ್ರೇಷ್ಠ ಹರಿಕೀರ್ತನಕಾರರಾದ ಶ್ರೀ ಅಂಬಾತನಯ ಮುದ್ರಾಡಿಯವರಿಂದ ಹರಿಕೀರ್ತನೆಯನ್ನು ಆಲಿಸಿ ಪುನೀತರಾದ ಪದ್ಮಶಾಲಿಗರು ವಿಶೇಷ ಸಾಧನೆಗಾಗಿ ಅವರನ್ನು ಗೌರವಿಸಿ “ಜ್ಞಾನರ್ಷಿ” ಬಿರುದನ್ನಿತ್ತು ಸನ್ಮಾನಿಸಿ ಕೃತಾರ್ಥರಾದರು.
ಮೂರನೆಯ ವಾರ್ಷಿಕೋತ್ಸವವೂ ದುಬೈಯಲ್ಲಿ ಜರಗಿದ್ದು ಹಿಂದಿನ ವರ್ಷಗಳಲ್ಲಿ ಹಮ್ಮಿಕೊಂಡ ಕಾರ್ಯಚಟುವಟಿಕೆಗಳ ಸಂಪೂರ್ಣ
ಮಾಹಿತಿಯನ್ನು ಬಾಂಧವರೆದುರು ಪ್ರಸ್ತುತಪಡಿಸಿ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಸೌಹಾರ್ದ ಕೂಟ ಮತ್ತು “ಪದ್ಮಸಂಗಮ” ಸ್ಮರಣ ಸಂಚಿಕೆಯ ಬಿಡುಗಡೆಯನ್ನು 5ನೆಯ ವಾರ್ಷಿಕೋತ್ಸವದಂದು ಏರ್ಪಡಿಸಲಾಯಿತು.
2014ರ ಅಕ್ಟೋಬರಿನಲ್ಲಿ ದುಬೈಯ ಇಂಡಿಯಾ ಕ್ಲಬ್ ಸಭಾಂಗಣದಲ್ಲಿ ವೈಭವದಿಂದ ನೆರವೇರಿದ ಕಾರ್ಯಕ್ರಮದಲ್ಲಿ ಊರಿನ ಹಲವು ಗಣ್ಯರು
ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಸಿ ಪ್ರಭಾಕರ್ ಶೆಟ್ಟಿಗಾರ್, ಶ್ರೀ ಪ್ರಭಾಶಂಕರ್ ಪದ್ಮಶಾಲಿ ಕಿನ್ನಿಮುಲ್ಕಿ, ಶ್ರೀ ಎಸ್. ಶ್ರೀನಿವಾಸ ಶೆಟ್ಟಿಗಾರ್ ಮಂಗಳೂರು ಮತ್ತು ಶ್ರೀಮತಿ ಲೀಲಾವತಿ ಕೇಶವ ಶೆಟ್ಟಿಗಾರ್ರವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಕ್ರಿಯವಾಗಿರುವ ಇತರ ಸಂಘಟನೆಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ಗೌರವಿಸಲಾಯಿತು.
2015ರಲ್ಲಿ ಆಯೋಜಿಸಿರುವ ಶ್ರೀ ಸತ್ಯನಾರಾಯಣ ಪೂಜಾ ಕೈಂಕರ್ಯವನ್ನು ಮತ್ತು ಕಥಾ ಪಾರಾಯಣವನ್ನು ಖ್ಯಾತ ಯಕ್ಷಗಾನ
ಕಲಾವಿದ, ಪ್ರಸಂಗಕರ್ತ, ವಾಸ್ತುತಜ್ಞ ಮತ್ತು ಜ್ಯೋತಿಷಿ ಶ್ರೀ ಬಸವರಾಜ್ ಶೆಟ್ಟಿಗಾರ್ ನೆರವೇರಿಸಿಕೊಟ್ಟರು.
2016ರಲ್ಲಿಯ ಶ್ರೀ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಅಂದಿನ ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ
ಅಧ್ಯಕ್ಷರಾಗಿದ್ದ ಶ್ರೀ ಪುರಂದರ ಡಿ. ಶೆಟ್ಟಿಗಾರ್ ಪಾಲ್ಗೊಂಡಿದ್ದರು.ದಶಮಾನೋತ್ಸವದ ಅಂಗವಾಗಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ನಳದಮಯಂತಿ ಯಕ್ಷಗಾನ ತಾಳಮದಲೆಯನ್ನು 2019ರ ಅಕ್ಟೋಬರ್ ತಿಂಗಳಿನಲ್ಲಿ ಬಹಳ ಅದ್ದೂರಿಯಿಂದ ಮತ್ತು ಭಕ್ತಿಶ್ರದ್ಧೆಗಳಿಂದ ಆಯೋಜಿಸಲಾಯಿತು. ದುಬಾಯಿಯ ಬಿಲ್ವ ಸ್ಕೂಲ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಪೂಜೆಯು ಶ್ರೀ ಹರಿಪ್ರಸಾದ್ ತಂತ್ರಿಯವರ ಪೌರೋಹಿತ್ಯದಲ್ಲಿ ಜರಗಿತು. ಪೂಜೆ ಸಂಪನ್ನವಾದ ಬಳಿಕ ಯಕ್ಷಗಾನ ತಾಳಮದ್ದಳೆ “ನಳದಮಯಂತೀ”ಯನ್ನು ಆರಂಭಿಸಲಾಯಿತು. ವಿಶೇಷ ಆಹ್ವಾನಿತರಾಗಿ ಹಿಮ್ಮೇಳದಲ್ಲಿ ಯಕ್ಷದ್ರುವ ಶ್ರೀ ಸತೀಶ ಶೆಟ್ಟಿ ಪಟ್ಲ, ಸುಂಕದಕಟ್ಟೆ ಮೇಳದ ಪ್ರಧಾನ ಭಾಗವತರಾದ ಶ್ರೀ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಟಣ ಇವರುಗಳು ಭಾಗವತಿಕೆಯಲ್ಲಿ ಮತ್ತು ಶ್ರೀ ದಯಾನಂದ ಶೆಟ್ಟಿಗಾರ್ ಚಂಡೆಮದ್ದಳೆಯಲ್ಲಿ ಸಹಕರಿಸಿದರೆ ಪ್ರಮುಖ ಪಾತ್ರದಲ್ಲಿ ಕಲಾವಿದರಾದ ಶ್ರೀ ದಿನೇಶ ಶೆಟ್ಟಿಗಾರ್ ಕೊಡಪದವು, ಶ್ರೀ ಮುರಳೀಧರ ಶೆಟ್ಟಿಗಾರ ಕನ್ನಡಿಕಟ್ಟೆ ಮತ್ತು ಶ್ರೀ ಸದಾಶಿವ ಡಿ ಶೆಟ್ಟಿಗಾರ್ ಕಿನ್ನಿಗೋಳಿ ಭಾಗವಹಿಸಿದ್ದರು. ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಗುರುಗಳಾದ ಶ್ರೀ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಹಾಗೂ ಕಲಾವಿದರಾದ ಬಾಲಕೃಷ್ಣ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ಶ್ರೀ ಸತೀಶ ಶೆಟ್ಟಿಗಾರ್ ವಿಟ್ಲ, ಶ್ರೀ ಗಿರೀಶ್ ನಾರಾಯಣ ಕಾಟಿಪಳ್ಳ ಶ್ರೀ ಸಮಂತ ಗಿರೀಶ್ ವಿಶೇಷ ಪಾತ್ರಗಳಲ್ಲಿ ಮಿಂಚಿದ ಯಕ್ಷಗಾನ ತಾಳಮದ್ದಳೆ ಬಹಳ ಸೊಗಸಾಗಿ ಮೂಡಿಬಂತು.
ಹೀಗೆ ಯುಎಇ ಪದ್ಮಶಾಲಿ ಸಮುದಾಯವು ತನ್ನ ಬಾಳ್ವೆಯ ಹನ್ನೆರಡು ಸಂವತ್ಸರಗಳಲ್ಲಿ ರಕ್ತದಾನ ಶಿಬಿರ, ಪ್ರತಿ ತಿಂಗಳು ತಪ್ಪದೆ ಭಜನೆ, ಎಲ್ಲ ಹಬ್ಬ ಹರಿದಿನಗಳ ಆಚರಣೆ ಮತ್ತು ಯುಎಇಯಲ್ಲಿ ಉದ್ಯೋಗ ಅರಿಸಿ ಬಂದವರಿಗೆ ಸಹಾಯ ಹಸ್ತ, ಪದ್ಮಶಾಲಿ ಬಡವಿದ್ಯಾರ್ಥಿಗಳಿಗೆ ಶಿಷ್ಯವೇತನ, ಅನಾರೋಗ್ಯದಿಂದಿರುವ ಬಡ ಕುಟುಂಬಗಳಿಗೆ ಹಣಕಾಸಿನ ನೆರವು ಇತ್ಯಾದಿ ಜನಪರ ಕಾರ್ಯಕ್ರಮಗಳಿಂದ ಸಹಬಾಳ್ವೆಯ
ಅರಿವನ್ನು ಜಾಗೃತಗೊಳಿಸುವಲ್ಲಿ ಸಫಲವಾಯಿತು.