ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆಬ್ರವರಿ 14 ರಿಂದ 20ರವರೆಗೆ ಬ್ರಹ್ಮಕಲಶೋತ್ಸವ, ಹಾಲು ಹಬ್ಬ, ವಾರ್ಷಿಕ ಪೂಜೆ, ಗೆಂಡ ಸೇವೆ ನಡೆಯಲಿದೆ. ಈ ಪುಣ್ಯ ಸಂದರ್ಭದಲ್ಲಿ ಕುಲದೇವತಾ ಸ್ತುತಿ ಲೇಖನ ಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿಯೊಬ್ಬರು ಕುಲ ದೇವರನ್ನು ಸ್ಮರಿಸುವಂತಾಗಬೇಕು ಮತ್ತು ಆ ಮೂಲಕ ನಮ್ಮ ಸಮಾಜಕ್ಕೆ ಸಂಪೂರ್ಣ ದೈವಾನುಗೃಹ ಆಗಬೇಕೆನ್ನುವ ಪೂರ್ಣ ಆಶಯದಂತೆ ಪದ್ಮಶಾಲಿ ಸಮಾಜದ ಪ್ರತಿಯೊಂದು ಕುಟುಂಬದ ಮನೆ ಮಂದಿ ಎಲ್ಲರೂ ಸೇರಿ ನಮ್ಮ ಕುಲ ದೇವರ ಸ್ತುತಿಯನ್ನು ಸ್ಮರಿಸಬೇಕು.
ಡಿ.25ರಂದು ಶ್ರೀ ಕ್ಷೇತ್ರದಲ್ಲಿ ಕುಂಭಾಸಿ ಶ್ರೀಮತಿ ಪಾರ್ವತಿ ಮತ್ತು ಶ್ರೀ ರಾಜೇಂದ್ರ ಶೆಟ್ಟಿಗಾರ್ ಇವರು ಸ್ತುತಿ ಯಜ್ಞದ ಪುಸ್ತಕ ಮತ್ತು ಲೇಖನಿಯನ್ನು ಹಸ್ತಾಂತರಿಸಿಸುವ ಮೂಲಕ ಚಾಲನೆ ನೀಡಿದರು.ಮತ್ತು ಸ್ತುತಿ ಯಜ್ಞ ಲೇಖನ ಬರೆಯುವ ಸಮಸ್ತರಿಗೂ ಶುಭ ಹಾರೈಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ಸಿ.ಜಯರಾಮ್ ಶೆಟ್ಟಿಗಾರ ಲೇಖನ ಯಜ್ಞದ ಮಹತ್ವ ವಿಧಿ ವಿಧಾನಗಳ ಬಗ್ಗೆ ಮಾಹಿತಿ ನೀಡುತ್ತಾ ಕುಲದೇವತಾ ಶ್ಲೋಕವನ್ನು ಬರೆಯುವುದರಿಂದ ಮನೆಯವರಿಗೆ ಮಕ್ಕಳಿಗೆ ಹೆಚ್ಚು ಪ್ರಯೋಜನವಾಗುತ್ತದೆ ಇದರಿಂದ ನಮ್ಮಲ್ಲಿ ಸಕರಾತ್ಮಕ ಯೋಚನೆ ವೃದ್ಧಿಯಾಗಿ ಅಂತಃಶಕ್ತಿ ಉದ್ವೀಪನಗೊಂಡು ಆತ್ಮಸ್ಥೈರ್ಯ ಹೆಚ್ಚಿಸಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಏಕತೆ, ಉದ್ಯೋಗ, ವ್ಯವಹಾರ, ಉದ್ಯಮದಲ್ಲಿ ಯಶಸ್ಸು, ಮನೆಯಲ್ಲಿ ನೆಮ್ಮದಿ, ಸಮಾಜದಲ್ಲಿ ಗೌರವ ದೊರೆತು ಅವರ ಇಷ್ಟಾರ್ಥಗಳನ್ನು ದೇವರು ಈಡೇರಿಸಬೇಕು ಎಂಬ ಉದ್ದೇಶ ಇದಾಗಿದೆ ಎಂದರು.
ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ.ಶ್ರೀನಿವಾಸ ಶೆಟ್ಟಿಗಾರ ಮಾತನಾಡಿ, ಈ ಸ್ತುತಿ ಲೇಖನ ಯಜ್ಞದಲ್ಲಿ ಸಮಸ್ತ ಸಮಾಜ ಬಾಂಧವರು ಕೈಜೋಡಿಸುವಂತೆ ಕರೆ ನೀಡಿದರು.
ಶ್ರೀಮತಿ ಕವಿತಾ ಜೆ ಎಸ್ ಮತ್ತು ಡಾ. ಶಿವಪ್ರಸಾದ್ ಕೆ ಲೇಖನ ಯಜ್ಞದ ಸ್ತುತಿಗಳನ್ನು ಪಠಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು