ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ನಿಯೋಗದಿಂದ ಇಂದು ದಿನಾಂಕ 08 -01 -2025ರಂದು ಗುರುಪೀಠ ಶೃಂಗೇರಿಗೆ ಭೇಟಿ ನೀಡಿ ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರನ್ನು ಸಂದರ್ಶಿಸಿ ಪಾದ ಪೂಜೆ ನೆರವೇರಿಸಿ ಗುರುವಂದನೆ ಸಲ್ಲಿಸಲಾಯಿತು.
ಶ್ರೀಗಳವರು ಫಲಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿ ಪ್ರತಿ ವರ್ಷ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಕೃತಾರ್ಥರಾಗಬೇಕೆಂದು ಹರಸಿದರು.
ಈ ಸಂದರ್ಭದಲ್ಲಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಬಾರಕೂರಿನ ಅಷ್ಟ ಬಂಧ ಬ್ರಹ್ಮ ಕಲಶಾಭೀಷೇಕದ ಆಮಂತ್ರಣ ಪತ್ರವನ್ನು ಮೊಕ್ತೆಸರರಾದ ಡಾ. ಜಯರಾಮ್ ರವರು ಶ್ರೀಗಳಿಗೆ ಸಮರ್ಪಿಸಿ ಅನುಗ್ರಹ ಯಾಚಿಸಿದರು. ಬ್ರಹ್ಮ ಕಲಶಾಭಿಷೇಕದ ಎಲ್ಲ ಕಾರ್ಯಕ್ರಮಗಳು ವಿದ್ಯುಕ್ತವಾಗಿಯೂ ನಿರ್ವಿಘ್ನವಾಗಿಯೂ ಸಂಪನ್ನವಾಗಲೆಂಬ ಹರಕೆಯೊಂದಿಗೆ ಶ್ರೀಗಳವರು ಆಶೀರ್ವದಿಸಿದರು.
ಮಹಾಸಭಾ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ, ಪ್ರಧಾನ ಕಾರ್ಯದರ್ಶಿಯಾದ ಡಾಕ್ಟರ್ ವೆಂಕಟರಾಯ ಶೆಟ್ಟಿಗಾರ್, ಧಾರ್ಮಿಕ ವೇದಿಕೆಯ ಸಂಚಾಲಕರಾದ ಪುರುಷೋತ್ತಮ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.