![]()
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.

ಐದು ವರ್ಷಗಳ ಕಾಲ ಉತ್ತಮವಾಗಿ ಆಡಳಿತ ಮೊಕ್ತೇಸರರಾಗಿ ಕಾರ್ಯ ನಿರ್ವಹಿಸಿರುವ, ತನ್ನ ಅವಧಿಯಲ್ಲಿ ಬ್ರಹ್ಮಕಲಶೋತ್ಸವವನ್ನು ನ ಭೂತೋ ಎಂಬಂತೆ ನಡೆಸಿರುವ ಡಾ. ಜಯರಾಮ್ ಶೆಟ್ಟಿಗಾರ್ ರವರು ನೂತನ ಆಡಳಿತ ಮೊಕ್ತೇಸರರಾಗಿ ಆಯ್ಕೆಯಾಗಿರುವ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಅವರಿಗೆ ಎ.7ರಂದು ಸೋಮವಾರ ಅಧಿಕಾರ ಹಸ್ತಾಂತರಿಸಿದರು.

ಉದ್ಯಮಿಯಾಗಿರುವ ಶ್ರೀನಿವಾಸ ಶೆಟ್ಟಿಗಾರರು, ಶೆಟ್ಟಿಗಾರ್ ಇಂಡಸ್ಟ್ರೀಸ್ ಸಮೂಹ ಸಂಸ್ಥೆಯ ಮಾಲಕರು ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು ಉತ್ತಮ ಸಮಾಜ ಸೇವಕರಾಗಿದ್ದಾರೆ. ಇವರು 2010 ರಿಂದ 2015 ರ ವರೆಗೆ ಆಡಳಿತ ಮೊಕ್ತೇಸರರಾಗಿದ್ದು, ಇದೀಗ ಎರಡನೇ ಬಾರಿಗೆ ಆಡಳಿತ ಮೊಕ್ತೇಸರರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಆಡಳಿತ ಮಂಡಳಿ ಸದಸ್ಯರಾಗಿ ಡಾ.ಶಿವಪ್ರಸಾದ್ ಶೆಟ್ಟಿಗಾರ್, ಉಡುಪಿ; ಭಾಸ್ಕರ್ ಶೆಟ್ಟಿಗಾರ, ಸಂತೆಕಟ್ಟೆ; ವಿನಯ್ ಕುಮಾರ್ ಸಿ ಕೆ, ಸಾಸ್ತಾನ; ಸುರೇಶ್ ಶೆಟ್ಟಿಗಾರ್, ಹೆಂಗವಳ್ಳಿ; ಶಶಿಧರ್ ಶೆಟ್ಟಿಗಾರ್, ಬಾರ್ಕೂರು; ಮಹಾಬಲ ಶೆಟ್ಟಿಗಾರ, ಯಡಾಡಿ; ಸುರೇಂದ್ರ ಶೆಟ್ಟಿಗಾರ, ಚೇರ್ಕಾಡಿ; ಶ್ರೀಮತಿ ಆಶಾಲತಾ ವಿಠಲ ಶೆಟ್ಟಿಗಾರ, ಕೆಳಾರ್ಕಳಬೆಟ್ಟು; ಡಾ. ಚಂದ್ರಶೇಖರ್ ವಿ.ಎಸ್, ಕೆಳಾರ್ಕಳಬೆಟ್ಟು; ರಾಮಚಂದ್ರ ಶೆಟ್ಟಿಗಾರ್, ಕೆಳಾರ್ಕಳಬೆಟ್ಟು; ಶ್ರೀನಿವಾಸ್ ಶೆಟ್ಟಿಗಾರ್, ಜಪ್ತಿ; ಜನಾರ್ಧನ್ ಶೆಟ್ಟಿಗಾರ್, ವಕ್ವಾಡಿ; ಸಂತೋಷ್ ಶೆಟ್ಟಿಗಾರ್, ಹಂದಾಡಿ; ವಿವೇಕಾನಂದ ಶೆಟ್ಟಿಗಾರ, ಬಸ್ರೂರು ಆಯ್ಕೆಯಾಗಿದ್ದಾರೆ.
ವಿವಿಧ ಸಮಿತಿಗಳಿಗೆ ಮುಖ್ಯಸ್ಥರ ಆಯ್ಕೆಯೂ ನಡೆದಿದ್ದು, ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಡಾ. ಜಯರಾಮ ಶೆಟ್ಟಿಗಾರ್ , ಸಂತೆಕಟ್ಟೆ; ವೀರೇಶ್ವರ ಸೇವಾ ಸಮಿತಿ ಅಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿಗಾರ್ , ಮಣಿಪಾಲ; ಮಹಿಳಾ ವೇದಿಕೆ ಅಧ್ಯಕ್ಷರಾಗಿ ಶ್ರೀಮತಿ ಚಂದ್ರಾವತಿ ಸದಾಶಿವ ಶೆಟ್ಟಿಗಾರ್ ಬ್ರಹ್ಮಾವರ; ಯುವ ವೇದಿಕೆ ಅಧ್ಯಕ್ಷರಾಗಿ ಸಂಜೀವ ಶೆಟ್ಟಿಗಾರ್, ಸಾಸ್ತಾನ; ಪದ್ಮಶಾಲಿ/ಶೆಟ್ಟಿಗಾರ್ ಸಮಾಜ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾಗಿ ಸುಧಾಕರ ಶೆಟ್ಟಿಗಾರ್, ವಕ್ವಾಡಿ; ಸಂಘಟನಾ ಸಮಿತಿ ಅಧ್ಯಕ್ಷರಾಗಿ ರಘುರಾಮ ಶೆಟ್ಟಿಗಾರ್, ಚೇರ್ಕಾಡಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
