ಸಾಮಾಜಿಕ ಜವಾಬ್ದಾರಿಯ ಅರಿವು, ಕಳಕಳಿ, ಹೊಣೆಗಳನ್ನು ಚರ್ಚಿಸಿ ನಮ್ಮದೇ ಆದ ನೆಲೆಗಟ್ಟು ಪ್ರಾರಂಭಿಸುವ ಚಿಂತನೆಯಲ್ಲಿ ಮಿಂದೆದ್ದು
ಕೊನೆಗೂ ಒಂದು ಚೌಕಟ್ಟು ನಿರ್ಮಿಸುವ ಕುರಿತಾದ ಪರಿಕಲ್ಪನೆಯ ಪ್ರಯತ್ನದ ಫಲಿತಾಂಶವಾಗಿ “ದಕ್ಷಿಣ ಕನ್ನಡ ಪದ್ಮಶಾಲಿ ಸಮಾಜಸೇವಾ ಕೂಟ” 1989ರಲ್ಲಿ ಉದಯವಾಯಿತು.
ದಿನಾಂಕ 19.06.1989ರ ಶುಭದಿನದಂದು ತಾತ್ಕಾಲಿಕ ಸಮಿತಿಯು ಅಸ್ತಿತ್ವಗೊಂಡು, 21.06.1989ರಂದು ಕಾನೂನು ನಿಯಮಗಳ
ವ್ಯಾಪ್ತಿಯಲ್ಲಿ ಸಮಾಜಸ್ಥರ ಉಪಸ್ಥಿತಿಯಲ್ಲಿ ಪ್ರಥಮ ಸಭೆ ಜರಗುವ ಮೂಲಕ ಶುಭಾರಂಭಗೊAಡು ಅಧಿಕೃತವಾಗಿ ಸಮಾಜಸೇವೆಗೆ
ನಾಂದಿಹಾಡಿತು. ನಮ್ಮ ಸಮಾಜದ ನೊಂದ ಬಡಕುಟುಂಬಗಳಿಗೆ ಕೂಟದ ಸದಸ್ಯರು ತಮ್ಮ ಹಾಗೂ ಉದಾರದಾನಿಗಳಿಂದ ಸಂಗ್ರಹಿಸಿದ ಹಣವನ್ನು ವಿತರಿಸಲಾಗಿರುತ್ತದೆ.
1992ರ ವಾರ್ಷಿಕ ಮಹಾಸಭೆಯಲ್ಲಿ ಪ್ರಥಮ ಬಾರಿಗೆ ಎಸ್. ಎಸ್. ಎಲ್.ಸಿ ವರೆಗಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ
ಬಹುಮಾನವನ್ನು ನೀಡುವ ಸಂಪ್ರದಾಯವನ್ನು ಆರಂಭಿಸಲಾಯಿತು. ಜೊತೆಗೆ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ/12ನೇ
ತರಗತಿಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗೆ ಪ್ರತಿ ವರ್ಷವೂ ಹಣದ ರೂಪದಲ್ಲಿ ದತ್ತಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅಲ್ಲದೆ
ಪಿ.ಯು.ಸಿ ಮತ್ತು ಅನಂತರದ ಎಲ್ಲ ಉನ್ನತ ವ್ಯಾಸಂಗಗಳಿಗೆ ಉತ್ತಮ ಮೊತ್ತದ ವಿದ್ಯಾರ್ಥಿವೇತನವನ್ನು ಪ್ರತಿವರ್ಷ ನೀಡುತ್ತ ಬರುತ್ತಿದೆ.
20.01.1992 ರಲ್ಲಿ ಸರಕಾರದ ನೆರವಿನೊಂದಿಗೆ ಗ್ರಂಥಾಲಯವು ಆರಂಭಗೊAಡಿತು. ಅರ್ಹ ಬಡವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಮತ್ತು
ಹಣಕಾಸಿನ ನೆರವನ್ನು ನೀಡಲಾಗುತ್ತಿದೆ.
2004ರಲ್ಲಿ ವೈದ್ಯಕೀಯನೆರವು ನಿಧಿಯು ಅಸ್ತಿತ್ವಕ್ಕೆ ಬಂದಿದ್ದು ಆರ್ಥಿಕ ಸಂಕಷ್ಟದಲ್ಲಿರುವ ಸಮಾಜ ಬಂಧುಗಳ ವೈದ್ಯಕೀಯ
ಖರ್ಚುವೆಚ್ಚಗಳಿಗೆ ಈ ನಿಧಿಯಿಂದ ಹಣವನ್ನು ನೀಡಲಾಗುತ್ತಿದೆ. ಆರ್ಥಿಕಕೋಶದ ಅಭಿವೃದ್ದಿಗಾಗಿ ಯಕ್ಷಗಾನ ನಾಟಕ ಪ್ರದರ್ಶನಗಳನ್ನು
ಏರ್ಪಡಿಸುವ ಮೂಲಕ ಧನ ಸಂಗ್ರಹಣೆಯ ಗುರಿ ಸಾಧನೆಗಾಗಿ ಕ್ರಿಯಾಶೀಲ ಸದಸ್ಯರು ಶ್ರಮಿಸುತ್ತಿದ್ದಾರೆ. ಕೂಟದ ಸದಸ್ಯರ ಮನೆಯಲ್ಲಿ ಜರಗುವ ಶುಭ ಸಮಾರಂಭಗಳಾದ ಗೃಹಪ್ರವೇಶ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತಮ್ಮ ಇಷ್ಟಾನುಸಾರ ಕೂಟಕ್ಕೆ ನೀಡಿದ ವಿಶೇಷ ದೇಣಿಗೆಯನ್ನು ಶುಭನಿಧಿಯಾಗಿ ಸಂಗ್ರಹಿಸಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಅನುವಾಯಿತು.
1994-95ರ ಸಾಲಿನಲ್ಲಿ ಕೂಟಕ್ಕೆ ಸ್ವಂತ ನಿವೇಶನ ಖರೀದಿ ಮಾಡಲಾಯಿತು. ಕಟ್ಟಡ ನಿಧಿಗಾಗಿ ಸ್ಮರಣಸಂಚಿಕೆ ಹೊರತರುವ ಮತ್ತು
ದೇಣಿಗೆಯನ್ನು ಸಂಗ್ರಹಿಸುವ ಮಹತ್ತರ ಕಾರ್ಯವು ನಡೆಯಿತು. ಅದುವರೆಗೆ ಕೂಟದಲ್ಲಿದ್ದ ಕಟ್ಟಡ ನಿಧಿಯೊಂದಿಗೆ ಹೊಸದಾಗಿ ಸಂಗ್ರಹಿಸಿದ
ಉದಾರದೇಣಿಗೆಯನ್ನು ಸೇರಿಸಿ ಒಂದು ಸ್ವಂತಕಛೇರಿ ಕಟ್ಟಡದ ನಿರ್ಮಾಣವನ್ನು ಮಾಡಿ 19.06.2007ರಂದು ಸಮಾಜಸ್ಥರ ಸೇವೆಗಾಗಿ
ಸಮರ್ಪಿಸಲಾಯಿತು. ಕೂಟದ ಕಛೇರಿಯ ಜೊತೆಗೆ ಇದೇ ಕಟ್ಟಡದಲ್ಲಿ ಕರಾವಳಿ ಭಾಗದಿಂದ ಬೆಂಗಳೂರಿಗೆ ಉನ್ನತ ವ್ಯಾಸಂಗಕ್ಕೆ ಮತ್ತು
ಉದ್ಯೋಗವನ್ನರಿಸಿಕೊಂಡು ಬರುವ ಸಮಾಜದ ಬಡ ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ತಂಗುವ ವಸತಿ ವ್ಯವಸ್ಥೆಯನ್ನು ಮಾಡಲಾಯಿತು.
ಬೆಂಗಳೂರು ವ್ಯಾಪ್ತಿಯ ಸದಸ್ಯರುಗಳ ವಿಳಾಸ ವಿವರಗಳನ್ನು ಹೊಂದಿರುವ ವಿಳಾಸ ಕೈಪಿಡಿಯು ಎರಡನೆಯ ವರ್ಷದ ಮಹಾಸಭೆಯಲ್ಲಿ
ಕೊಡುಗೆಯಾಗಿ ಬಂತು. ಹೊಸ ಸದಸ್ಯರ ವಿಳಾಸಗಳನ್ನು ಸೇರ್ಪಡೆಗೊಳಿಸಿ ನವೀಕೃತ ಕೈಪಿಡಿಗಳು ಪ್ರಕಟಗೊಳ್ಳುತ್ತಿವೆ.
2005-2007ರ ಸಾಲಿನಲ್ಲಿ ವಧೂವರರ ವೇದಿಕೆಯನ್ನು ಪ್ರಾರಂಭಿಸಿ ಮಧುರದಾಂಪತ್ಯದ ಅನ್ವೇಷಕರಿಗೆ ಸಹಕರಿಸುವ ಸೇವೆ ಆರಂಭಗೊAಡಿತು. ಅಲ್ಲದೆ ವಿವಿಧ ವಿಚಾರ ಸಂಕಿರಣಗಳು, ವೈದ್ಯಕೀಯ ಅರಿವು ಮೂಡಿಸುವ ಕಾರ್ಯಕ್ರಮಗಳು, ಆರೋಗ್ಯಶಿಬಿರಗಳು
ಸಾಂಸ್ಕ್ರತಿಕ ಮತ್ತು ಕ್ರೀಡಾಸ್ಪರ್ಧೆಗಳು ಮತ್ತು ಪ್ರವಾಸಗಳನ್ನು ಆಯೋಜಿಸಲಾಯ್ತು. ಇವುಗಳ ಜೊತೆಗೆ ಸಾಹಿತ್ಯ, ಕ್ರೀಡೆ, ಕಲೆ, ಮತ್ತಿತರ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ, ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿವಿಜೇತರಾದ ಪ್ರತಿಭೆಗಳನ್ನು ಪುರಸ್ಕರಿಸುವ, ಅಭಿನಂದಿಸುವ ಕಾರ್ಯಕ್ರಮಗಳು ಆಯೋಜಿತವಾಗಿವೆ..
ಸರಕಾರದ ಸೌಲಭ್ಯಗಳನ್ನು ಸಮಾಜಸ್ಥರಿಗೆ ತಿಳಿಸಲು ಸರಕಾರಿ ಸೌಲಭ್ಯಗಳ ಕೈಪಿಡಿಯನ್ನು ಹೊರತಲಾಗಿದೆ. ಕೂಟದ ಸಮಾಜಸ್ಥರ
ಉಪಯೋಗಕ್ಕಾಗಿ ವಿಸ್ತಾರವಾದ ನಿವೇಶನದ ಅಗತ್ಯವನ್ನು ಮನಗೊಂಡು ಅದಕ್ಕಾಗಿ ಎ.ಬಿ.ಸಿ (Asset Building Committee) ಸಮಿತಿಯನ್ನು ರಚಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ವೆಬ್‌ಸೈಟ್‌ನ್ನು ತೆರೆಯಲಾಗಿದ್ದು ಕೂಟದ ಸವಿವರಗಳು, ಅಭಿವೃಧ್ದಿ ಚಟುವಟಿಕೆಗಳು ಮತ್ತಿತ್ತರ ಸಮಗ್ರ ವಿವರಗಳು ಇಲ್ಲಿ ಲಭ್ಯವಿರುತ್ತದೆ.
ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಸಮಾಜಸ್ಥರಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿರುವ ಯುವವೇದಿಕೆ ಹಾಗೂ ಮಹಿಳಾ ವೇದಿಕೆಗಳ ಕಾರ್ಯಚಟುವಟಿಕೆಗಳು ಅಭಿನಂದನೀಯ. ಕೋವಿಡ್ ಸಂಕಷ್ಟದ ಸಮಯದಲ್ಲಿ ಯುವವೇದಿಕೆಯು ಆಧುನಿಕ ತಂತ್ರಜ್ಞಾನದ ಮೂಲಕ ಅನೇಕ ಸಾಂಸ್ಕ್ರತಿಕ ಸ್ಪರ್ಧೆಗಳನ್ನು ಹಾಗೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಾಜಸ್ಥರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಪರಿಸರ ಉಳಿಸಿ ಡಿಜಿಟಲ್ ಅಳವಡಿಸಿ ಅನ್ನುವ ಧ್ಯೇಯವಾಕ್ಯದೊಂದಿಗೆ ಸುತ್ತೋಲೆ, ವೃತ್ತಿಪರ ಸಂಹವನಗಳನ್ನು, ಇ-ಮೇಲ್,
ವಾಟ್ಸಾಪ್‌ಗಳ ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಮಾಡಿರುತ್ತದೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ಮನೆಮನೆಗೆ ತೆರಳಿ ಆಹಾರ ಸಾಮಗ್ರಿ ಹಾಗೂ ಹಣಕಾಸಿನ ನೆರವು ನೀಡಲಾಗಿರುತ್ತದೆ. ತಂತ್ರಜ್ಞಾನಗಳ ನೆರವಿನಿಂದ ವಾರ್ಷಿಕ ಸಭೆಯನ್ನು, ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಜರಗಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 2015 ರಜತಮಹೋತ್ಸವ ವರ್ಷವಾಗಿದ್ದು ಅನೇಕ ಕಾರ್ಯಕ್ರಮಗಳನ್ನು ವರ್ಷವಿಡೀ ಜರಗಿಸಿದುದರಿಂದ ಸಮಾಜಸ್ಥರ ಚೈತನ್ಯವು ಇಮ್ಮಡಿಯಾಗಿರುತ್ತದೆ. ಹೀಗೆ ಅನೇಕ ರಚನಾತ್ಮಕ ಚಟುವಟಿಕೆಗ