![]()
: 22.02.2025 ದುಬೈಯಲ್ಲಿ ಹೆಸರುವಾಸಿಯಾದ ಶ್ರೀ ರಾಜರಾಜೇಶ್ವರಿ ಭಜನಾ ವೃಂದ ತಮ್ಮ 20ನೇ ವಾರ್ಷಿಕೋತ್ಸವದ ಪ್ರಯುಕ್ತ ವಿಂಶತಿ ಭಜನಾಟ್ಯ ಸಂಭ್ರಮ 2025 ಕಾರ್ಯಕ್ರಮವನ್ನು ಬಹಳ ವಿಜೃಂಬಣೆಯಿಂದ ಅಲ್ ನಾಸರ್ ಸಭಾಂಗಣ ದುಬೈಯಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ದುಬೈಯ ಪ್ರತಿಷ್ಠಿತ ಭಜನಾ ತಂಡಗಳಿಂದ ಕುಣಿತ ವಿಂಶತಿ, ರೂಪಕಿರಣ್ ನೇತ್ರತ್ವದ ನಾಟ್ಯ ತಂಡದಿಂದ ನೃತ್ಯ ವಿಂಶತಿ ಹಾಗು ಹೆಸರಾಂತ ಭಜನಾ ಗಾಯಕಿ ಕುಮಾರಿ ಸೂರ್ಯಗಾಯತ್ರಿ ಇವರಿಂದ ಗಾನ ವಿಂಶತಿ ಕಾರ್ಯಕ್ರಮಗಳು ಜರಗಿತು. ಕುಣಿತ ಭಜನಾ ಕಾರ್ಯಕ್ರಮದಲ್ಲಿ ದುಬೈ ಪದ್ಮಶಾಲಿ ಸಮಾಜದ ಭಜನಾ ತಂಡವು ಬಹಳ ಉತ್ಸಾಹದಿಂದ ಭಾಗವಹಿಸಿತು.

ಪದ್ಮಶಾಲಿ ಭಜನಾ ತಂಡದಲ್ಲಿ ಶ್ರೀಯುತರಾದ ಮನೋಹರ್, ಕೀರ್ತಿಕುಮಾರ್, ಸುಹಾಸ್, ಸತೀಶ್, ಶ್ರೇಯಸ್, ಹೃಷಿಕೇಶ್, ಶ್ರೀಮತಿಯರಾದ ಅರುಂಧತಿ, ಗಾಯತ್ರಿ, ಸ್ವಾತಿ, ಲಲಿತಾ, ಅನುಷಾ, ಮಾಸ್ಟರ್ ರೋಹಿನ್ ಮನೀಶ್, ಕುಮಾರಿ ಯಶಸ್ವಿನಿ ಹಾಗು ನಿಕೇತ ಭಾಗವಹಿಸಿದರು. ಅಚ್ಚುಕಟ್ಟಾದ ಕುಣಿತ ಭಜನೆಯನ್ನು ನಡೆಸಿ ಕೊಟ್ಟ ಪದ್ಮಶಾಲಿ ಭಜನಾ ತಂಡವು ಆಯೋಜಕರ ಹಾಗು ಸಭಿಕರ ಪ್ರಶಂಸೆಗೆ ಪಾತ್ರವಾಯಿತು.

