Skip to content
ಪದ್ಮಶಾಲಿ ಮಹಾಸಭಾ

ಪದ್ಮಶಾಲಿ ಮಹಾಸಭಾ

Website-HeaderBanner

Connect with Us

  • Facebook
  • Twitter
  • Instagram
  • Youtube
  • Linkedin
  • Whatsapp
Primary Menu
  • ಮುಖಪುಟ
  • ಮಹಾಸಭಾ
  • ವಿದ್ಯಾವರ್ಧಕ
  • ದೇವಸ್ಥಾನಗಳು
    • ಬಾರಕೂರು
    • ಮಂಗಳೂರು
    • ಸಾಲಿಕೇರಿ
    • ಕಲ್ಯಾಣಪುರ
    • ಹಳೆಯಂಗಡಿ
    • ಸುರತ್ಕಲ್ಲು
    • ಸಿದ್ಧಕಟ್ಟೆ
    • ಮುಲ್ಕಿ-ಮಾನಂಪಾಡಿ
    • ಎರ್ಮಾಳ್
    • ಕಿನ್ನಿಮುಲ್ಕಿ
    • ಕಾರ್ಕಳ
    • ಕಾಪು
    • ಪಡುಬಿದ್ರಿ
    • ಉಳ್ಳಾಲ
    • ಕಾಙಂಗಾಡ್
    • ಬಂಗ್ರಮಂಜೇಶ್ವರ
  • ಪದ್ಮಲೇಖ
  • ವೇದಿಕೆಗಳು
    • ಧಾರ್ಮಿಕ ವೇದಿಕೆ
    • ಕ್ರೀಡಾ ವೇದಿಕೆ
    • ನೇಕಾರ ವೇದಿಕೆ
    • ಪರಿಣಯ ವೇದಿಕೆ
    • ಮಹಿಳಾ ವೇದಿಕೆ
    • ಯುವ ವೇದಿಕೆ
    • ತಂತ್ರಜ್ಞಾನ ಸಮಿತಿ
  • ಸಹ ಸಂಘಟನೆಗಳು
    • ಮುಂಬಯಿ
    • ಬೆಂಗಳೂರು
    • ಯುಎಇ
  • ಸದಸ್ಯತ್ವ
  • ಉದ್ಯೋಗ ಮಾಹಿತಿ
  • ವಾರ್ತೆಗಳು
  • Home
  • ವೇದಿಕೆಗಳು
  • ನೇಕಾರ ವೇದಿಕೆ
  • ಕೈ ಮಗ್ಗ ಮತ್ತು ನೇಕಾರ – ಭಾಗ 2
  • News
  • ನೇಕಾರ ವೇದಿಕೆ

ಕೈ ಮಗ್ಗ ಮತ್ತು ನೇಕಾರ – ಭಾಗ 2

padmashali January 25, 2025 1 minute read
Nekara-2
Share with your family and friends

Loading

ಹಿಂದಿನ ಸಂಚಿಕೆಯ ಕೊನೆಯಲ್ಲಿ ಆದ್ಯ ವಚನಕಾರ ಮತ್ತು ನೇಕಾರ ಜೇಡರ ದಾಸಿಮಯ್ಯನವರ ಬಗ್ಗೆ ಹೇಳಿದ್ದೆ. ಯಾದಗಿರಿ ಜಿಲ್ಲೆಯ ಮುದನೂರು ಎಂಬಲ್ಲಿ ರಾಮಯ್ಯ ಮತ್ತು ಶಂಕರೀ ದಂಪತಿಗಳ ಪುತ್ರನಾಗಿ ಜನಿಸಿದ ಜೇಡರ ದಾಸಿಮಯ್ಯನವರ ಬಾಲ್ಯದ ವಿದ್ಯಾಭ್ಯಾಸ ನಡೆದದ್ದು ಶ್ರೀ ಶೈಲದಲ್ಲಿ. ಅವರ ಗುರು ಚಂದ್ರ ಗುಂಡ ಶಿವಾಚಾರ್ಯರು. ಪ್ರತಿಯೊಂದು ವಿಷಯದಲ್ಲೂ ವಿಶೇಷ ಆಸಕ್ತಿ ಹೊಂದಿದ್ದ ಅವರು ಗುರುಗಳಿಗೆ ಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ಹನ್ನೊಂದು ಹನ್ನೆರಡನೆಯ ಶತಮಾನದಲ್ಲಿ ಕಾಣ ಸಿಗುವ ಮೊದಲ ವಚನಕಾರರೆಂದು ಹಲವರ ಉಲ್ಲೇಖ. ವಚನಕಾರ ಇವರಾಗಿದ್ದರೂ ಇವರ ವಚನಗಳು ಬರೆಹ ರೂಪದಲ್ಲಿ ಸಿಗುವುದು ಬಹಳ ಕಡಿಮೆ. ನಾನು ಕೇಳಲ್ಪಟ್ಟಂತೆ ಇನ್ನೂರನ್ನೂ ದಾಟಿಲ್ಲ. ಲಭ್ಯವಿರುವ ವಚನಗಳೆಲ್ಲ ಅತ್ಯಮೂಲ್ಯ. ಅವರಲ್ಲಿದ್ದ ವಿಶೇಷ ಜ್ಞಾನ ,ಆಧ್ಯಾತ್ಮಿಕ ಚಿಂತನೆ ,ವೈಚಾರಿಕತೆ ಅಪಾರ.

ಇವರ ಪತ್ನಿ ದುಗ್ಗಳೆ ಕೂಡಾ ವಚನಕಾರ್ತಿ , ಸರ್ವ ಸದ್ಗುಣ ಸಂಪನ್ನೆ.. ಜೇಡರ ದಾಸಿಮಯ್ಯನವರ ಅಂಕಿತನಾಮ ರಾಮನಾಥ . ಪತ್ನಿಯ ಅಂಕಿತ ನಾಮ ‘ದಾಸಯ್ಯ ಪ್ರಿಯ ರಾಮನಾಥ’..

ಅಗ್ನಿ ಸುಡಲಲ್ಲದೆ ಸುಳಿಯಲರಿಯದು
ವಾಯು ಸುಳಿವುದಲ್ಲದೆ ಸುಡಲರಿಯದು
ಆ ಆಗ್ನಿ ವಾಯುವ ಕೂಡಿದಲ್ಲದೆ ಅಡಿಯಿಡಲರಿಯದು
ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನ ಭೇದವ? ರಾಮನಾಥ

ಇದು ಜೇಡರ ದಾಸಿಮಯ್ಯನವರ ಒಂದು ವಚನ

ಭಕ್ತನಾದಡೆ ಬಸವಣ್ಣನಂತಾಗಬೇಕು
ಜಂಗಮವಾದಡೆ ಪ್ರಭುದೇವರಂತಾಗಬೇಕು
ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು
ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು
ಐಕ್ಯನಾದಡೆ ಅಜಗಣ್ಣನಂತಾಗಬೇಕು
ಇಂತಿವರ ಕಾರುಣ್ಯ ಪ್ರಸಾದವ ಕೊಂಡು ಸತ್ತ ಹಾಗಿರಬೇಕಲ್ಲದೆ
ತತ್ವದ ಮಾತು ಎನಗೇಕಯ್ಯ ದಾಸಯ್ಯಪ್ರಿಯ ರಾಮನಾಥಾ

ಇದು ಪತ್ನಿ ದುಗ್ಗಳೆಯ ವಚನ

ಒಂಬತ್ತು ವರ್ಷದ ದುಗ್ಗಳೆಯನ್ನು ಮದುವೆಯಾದ ಜೇಡರ ಅಥವಾ ಜಾಡರ ದಾಸಿಮಯ್ಯ ತಮ್ಮ ವಚನಗಳಲ್ಲಿ ಹೆಚ್ಚಾಗಿ ಜಾಣೆ ಮಡದಿ ದುಗ್ಗಳೆಯನ್ನು ವರ್ಣಿಸುವುದು ಕಂಡು ಬರುವುದು.‌ ತನ್ನ ಸತಿಗೆ ಅದೆಷ್ಟು ಮರ್ಯಾದೆ ಕೊಡುತ್ತಿದ್ದರು ಅವರು. ಈ ಇಪ್ಪತ್ತೊಂದನೇ ಶತಮಾನದಲ್ಲೇ ಹೆಣ್ಣು ಶೋಷಣೆಗೆ ಒಳಗಾಗುವುದು ನಿಂತಿಲ್ಲ. ಆದರೆ ಬಹಳ ಹಿಂದೆ ಹೆಣ್ಣಿಗದೆಷ್ಟು ಮನ್ನಣೆ ಸಿಗುತ್ತಿತ್ತು ನೋಡಿ. ನಮ್ಮ ನೇಕಾರ ಬಂಧು ದಾಸಿಮಯ್ಯನವರು ತನ್ನ ವಲ್ಲಭೆಯನ್ನು ಅದೆಷ್ಟು ಪ್ರೀತಿಸುತ್ತಿದ್ದರು ಗೌರವಿಸುತ್ತಿದ್ದರು. ಇದು ಸರ್ವರಿಗೂ ಮಾದರಿಯಾಗ ಬೇಕು.

ಇವರಿಬ್ಬರ ಆತ್ಮಜೆ ಸುವರ್ಚಲೆ. ಈಕೆ ಕೂಡಾ ಪರಮ ಜ್ಞಾನಿಯಂತೆ. ಸಂತೃಪ್ತ ಬಾಳುವೆಗೆ ಯಾವುದೇ ಅಡೆ ತಡೆಯಿರದಿದ್ದರೂ ಜೇಡರ ದಾಸಿಮಯ್ಯನವರ ಮನಸ್ಸು ಸನ್ಯಾಸತ್ವದ ಕಡೆಗೆ ವಾಲಿದ್ದು ವಿಶೇಷ. ಬಹುಶಃ ಆಗಿನ ವಾತಾವರಣವೇ ಹಾಗಿತ್ತು.

ಶಿವನ ಕುರಿತಾಗಿ ಹಲವು ಕಾಲ ತಪಸ್ಸನ್ನು ಮಾಡಿ ಸಫಲತೆಯನ್ನು ಪಡೆದವರು ಅವರು. ಶಿವನಲ್ಲೇ ತನ್ನ ಅಸ್ತಿತ್ವ ಎಂದುಕೊಂಡವರಿಗೆ ಶಿವನೇ ತೋರಿಸಿದ ಮಾರ್ಗ ನೇಕಾರಿಕೆ. ” ಸನ್ಯಾಸಿಯಂತೆ ಬಾಳುವುದನ್ನು ಬಿಟ್ಟು ಸುರರ ಮತ್ತು ನರರ ಮಾನ ಮುಚ್ಚುವ ಬಟ್ಟೆ ನೇಯ್ಗೆಯತ್ತ ಗಮನ ಹರಿಸು. ಸನ್ಯಾಸಿಯಾಗಿ ನೀನು ಸಾಧಿಸುವುದು ಏನಿದೆ? ಲೋಕ ಕಲ್ಯಾಣಕ್ಕಾಗಿ ಬಟ್ಟೆ ನೇಯುವುದನ್ನು ಮುಂದುವರಿಸು ” ಎಂದು ಶಿವನೇ ಬಂದೆದುರು ಹೇಳಿದ ಅನುಭವ ಅವರಿಗಾದುದು ಅವರಲ್ಲಿ ಆಧ್ಯಾತ್ಮಿಕ ವಿಚಾರಗಳ ಮತ್ತು ಭಕ್ತಿಯ ತೀವ್ರತೆ ಎಷ್ಟಿತ್ತೆಂಬುದಕ್ಕೆ ಸಾಕ್ಷಿ.

ಪತಿ ಮತ್ತು ಪತ್ನಿ ತಾವು ನೇಯ್ದ ಮೊದಲ ಚಾದರವನ್ನು ಶಿವನೇ ಜಂಗಮನ ರೂಪದಲ್ಲಿ ಬಂದು ಪಡೆದ ಎನ್ನುವ ಉಲ್ಲೇಖವೂ ಇದೆ.

ಮುಂದೆ ನಿಲ್ಲದ ಕಾಯಕ ದಾಸಿಮಯ್ಯ – ಪತ್ನಿ ದುಗ್ಗಳೆಯಿಂದ. ತಮ್ಮ ಬಾಳನ್ನೇ ಶ್ರದ್ಧೆ – ಭಕ್ತಿಯಿಂದ ಮುಖ್ಯವಾಗಿ ಸೀರೆ ನೇಯುವ ಕಾಯಕಕ್ಕೆ ಸಮರ್ಪಿಸಿಕೊಂಡರು.‌ ಆಗಲೇ ಈ ಸೀರೆಯ ಉದ್ಯಮ ಇತ್ತು ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲ.

ಕೈ ಮಗ್ಗದ ಸೀರೆಯುಡುವ ಸುಂದರಿಯರು, ಬೈರಾಸು, ಪಂಚೆ ಬಳಸುವ ಪುರುಷರು ಇದ್ದರೆಂದಾಯಿತು ಇತಿಹಾಸದ ಪುಟ ತಿರುವಿದಾಗ.

ಇನ್ನೂ ಸ್ವಲ್ಪ ಹಿಂದಕ್ಕೆ ಹೋಗಿ ನಿಧಾನವಾಗಿ ವರ್ತಮಾನದತ್ತ ಬರುವ.

ಹಿಂದಕ್ಕೆ ಸರಿದಾಗ ಸಿಂಧೂ ನದಿ ಕಣಿವೆ ನಾಗರೀಕತೆಯತ್ತ ದೃಷ್ಟಿ ಹಾಯಿಸಲೇ ಬೇಕು.‌ ಆಗಲೇ ಕೈಯಿಂದ ಬಟ್ಟೆ ತಯಾರಿಸುವ ಪರಿಣತಿ ಇತ್ತೆಂಬುದು ಸೋಜಿಗ. ಅದೇ ಅಲ್ಲವೇ ನಾಗರೀಕತೆ ಎಂದರೆ ?( ಶೋಹ)

ಮುಂದಿನ ಭಾಗ ನಿರೀಕ್ಷಿಸಿ
( ಕಂಡದ್ದು – ಕೇಳಿದ್ದು – ಓದಿದ್ದು)

ಶೋಭಾ ಹರಿಪ್ರಸಾದ ಶೆಟ್ಟಿಗಾರ ಉಡುಪಿ

Bhavani Caterers
Bhavani Caterers
Ads
Ads
Ads
Ads

About the Author

padmashali

Administrator

View All Posts

Post navigation

Previous: “ಜಾನಪದ ಲೋಕ” ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀಯುತ ಶೇಖರ್ ಡಿ ಶೆಟ್ಟಿಗಾರರಿಗೆ ಅಭಿನಂದನೆಗಳು
Next: ಅಭಿನಂದನೆಗಳು – ಪ್ರಜ್ಞಾ ಬಿ ಶೆಟ್ಟಿಗಾರ್

Related Stories

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025 1
Indian Railway
  • Jobs
  • News

Jobs – Assistant Loco Pilot (ALP) – 9900 posts in Railways

padmashali April 9, 2025

ಪದ್ಮಲೇಖ

ಪದ್ಮಲೇಖ

ಕರಾವಳಿ ಕರ್ನಾಟಕದ ಪದ್ಮಶಾಲಿ (ಶೆಟ್ಟಿಗಾರ) ರ ತ್ರೈಮಾಸಿಕ ಪತ್ರಿಕೆ

Trending News

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ WhatsApp-Image-2025-06-30-at-9.49.05-AM.jpeg?fit=651%2C475&ssl=1 1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

June 30, 2025
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image 2
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway 3
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas 4
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs 5
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Posts Slider

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025 1
Indian Railway
  • Jobs
  • News

Jobs – Assistant Loco Pilot (ALP) – 9900 posts in Railways

padmashali April 9, 2025
srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

padmashali April 9, 2025
IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

padmashali April 5, 2025

Express Posts List

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
Share with your family and friends ಸಾಲಿಕೇರಿಯ ದಿ. ಪದ್ಮನಾಭ ಶೆಟ್ಟಿಗಾರ್ ಮತ್ತು ಶ್ರೀಮತಿ ರೇವತಿ ಶೆಟ್ಟಿಗಾರ್ ಇವರ ದ್ವಿತೀಯ ಸುಪುತ್ರ...
Read More Read more about ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Recent Posts

  • ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
  • ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 
  • Jobs – Assistant Loco Pilot (ALP) – 9900 posts in Railways
  • ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ
  • Jobs – IDBI Bank – Specialist Cadre Officers – 119 Posts
  • ಉಡುಪಿಯಲ್ಲಿ ದೇವರ ದಾಸಿಮಯ್ಯ ಜಯಂತಿ 
  • Jobs – Staff Selection Commission

Tags

Blood Donation Mahasabha Padmashali ಮಹಾಸಭಾ ಮುಲ್ಕಿ ರಕ್ತದಾನ ಶಿಬಿರ

Categories

Advertisements Jobs News ಕಲ್ಯಾಣಪುರ ಕಿನ್ನಿಮುಲ್ಕಿ ಕ್ರೀಡಾ ವೇದಿಕೆ ತಂತ್ರಜ್ಞಾನ ಸಮಿತಿ ತೊಂಬತ್ತು ವಸಂತ ದುಬೈ ದೇವಸ್ಥಾನಗಳು ಧಾರ್ಮಿಕ ವೇದಿಕೆ ನೇಕಾರ ವೇದಿಕೆ ಬಂಗ್ರಮಂಜೇಶ್ವರ ಬಾರಕೂರು ಬೆಂಗಳೂರು ಮಹಿಳಾ ವೇದಿಕೆ ಮುಂಬಯಿ ಮುಲ್ಕಿ-ಮಾನಂಪಾಡಿ ಯುವ ವೇದಿಕೆ ಲೇಖನಗಳು ವೇದಿಕೆಗಳು ಸಹ ಸಂಘಟನೆಗಳು ಸಾಧಕರು ಸಾಲಿಕೇರಿ ಸೃಜನಶೀಲತೆ

Meta

  • Log in
  • Entries feed
  • Comments feed
  • WordPress.org
  • Facebook
  • Twitter
  • Instagram
  • Youtube
  • Linkedin
  • Whatsapp
Copyright © All rights reserved. | MoreNews by AF themes.