![]()
ಕಿನ್ನಿಗೋಳಿ ತಾಳಿಪಾಡಿ ನೇಕಾರ ಸೊಸೈಟಿಯಲ್ಲಿ ನೇಯಲ್ಪಟ್ಟ ಉಡುಪಿ ಸೀರೆ ಧರಿಸಿ ಸುರತ್ಕಲ್ ನ ಭವಾನಿಶಂಕರ್- ವಾಣಿಶ್ರೀ ಅವರ ಪುತ್ರಿ, ಸುರತ್ಕಲ್ NITK ಯ ತೃತೀಯ ವರ್ಷದ ಇನ್ಫಾರ್ಮಶನ್ ಟೆಕ್ನಾಲಜಿ ವಿದ್ಯಾರ್ಥಿನಿ ಪ್ರಜ್ಞಾ ಬಿ ಶೆಟ್ಟಿಗಾರ್ ದಿನಾಂಕ 26-01-2025 ರಂದು NITK surathkal ನಲ್ಲಿ, ಗಣರಾಜ್ಯೋತ್ಸವ ಸಮಾರಂಭದ ಪ್ರಯುಕ್ತ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಪಡೆದರು 🙏
Thanks to our community people who designed and weaved the saree in our weaving society at Kinnigoli Talipady weavers society🙏
💐 Udupi Saree Our pride🙏

ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಈಕೆ 2020 ರ SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೇ ಸ್ಥಾನ ಹಾಗೂ 2022ರ II-PUC ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದು ಕೀರ್ತಿ ತಂದಿರುತ್ತಾರೆ. ಪಠ್ಯೇತರ ಚಟುವಟಿಕೆಯಲ್ಲೂ ಮುಂದಿರುವ ಈಕೆ ಸಂಗೀತದ ಜೂನಿಯರ್ ಗ್ರೇಡ್, ಹಾಗೂ ಭರತನಾಟ್ಯದಲ್ಲಿ ಪೂರ್ವ ವಿದ್ವತ್ ಪರೀಕ್ಷೆಗಳನ್ನು ಅತ್ಯುನ್ನತ ಶ್ರೇಣಿಯಲ್ಲಿ ಪೂರೈಸಿರುತ್ತಾರೆ. ಯಕ್ಷಗಾನ, ವೆಸ್ಟೆರ್ನ್ ಡ್ಯಾನ್ಸ್ ನಲ್ಲೂ ತನ್ನ ಪ್ರತಿಭೆ ಮೆರೆದಿರುವ ಈಕೆ ರಾಜ್ಯದ ಅನೇಕ ಕಡೆ ತನ್ನ ಪ್ರದರ್ಶನ ನೀಡಿರುತ್ತಾರೆ.
ತಮ್ಮೆಲ್ಲರ ಶುಭ ಹಾರೈಕೆ ಹಾಗೂ ಆಶೀರ್ವಾದ ಸದಾ ಈಕೆಯ ಮೇಲಿರಲಿ 🙏
ಅವರ ಅಜ್ಜ ಪಿ ರುಕ್ಮಯ ಶೆಟ್ಟಿಗಾರ್, ಹಿಂದಿ ಪಂಡಿತರು ಸರಕಾರಿ ಪ್ರೌಢ ಶಾಲೆ ಹಳೆಯಂಗಡಿ ಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಆಗ ಬಿಡುವಿನ ಸಮಯದಲ್ಲಿ ಕುಲ ಕಸುಬಿನ ಮೇಲಿನ ಪ್ರೀತಿಯಿಂದ ನೇಯುವ ಕಾಯಕ ಮಾಡ್ತಾ ಇದ್ದರು
