![]()
ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇವರು 2025 ನೇ ಸಾಲಿನ “ಜಾನಪದ ಲೋಕ“ ಪ್ರಶಸ್ತಿಗೆ “ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ” ಇದರ ಗುರುಗಳಾದ ಶ್ರೀಯುತ ಶೇಖರ್ ಡಿ ಶೆಟ್ಟಿಗಾರ್ ರವರನ್ನು ಆಯ್ಕೆ ಮಾಡಿದೆ. ಸುಮಾರು 500ಕ್ಕಿಂತ ಹೆಚ್ಚಿನ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ, ಯಕ್ಷಗಾನ ಕಲೆಯ ಉಳಿವಿಗಾಗಿ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಜಾನಪದ ಪರಿಷತ್ತು ಈ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಿದೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಫೆಬ್ರವರಿ 9, 2025 ರಂದು ಬೆಂಗಳೂರಿನಲ್ಲಿ ನಡೆಯಲಿದೆ .
ಅಭಿನಂದನೆಗಳು ಶ್ರೀಯುತ ಶೇಖರ್ ಡಿ ಶೆಟ್ಟಿಗಾರರಿಗೆ. ಯಕ್ಷಗಾನ ಕ್ಷೇತ್ರಕ್ಕೆ ನೀವು ನೀಡಿರುವ ನಿಸ್ವಾರ್ಥ, ನಿರಂತರ ಸೇವೆಗೆ ಸಂದ ಗೌರವ. ತಾಯಿ ದುರ್ಗಾಪರಮೇಶ್ವರಿ ಹಾಗೂ ಶ್ರೀ ವೀರಭದ್ರ ದೇವರು ನಿಮಗೆ ಸಕಲೇಶ್ವರ್ಯ ಹಾಗೂ ಒಳ್ಳೆಯ ಆರೋಗ್ಯವನ್ನು ಕೊಟ್ಟು ಕಾಪಾಡಲಿ
