ಉಡುಪಿ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರ ಸಾಲಿಕೇರಿಯು ಧಾರ್ಮಿಕ ಶಕ್ತಿಕೇಂದ್ರವಾಗಿ ಪರಿಗಣಿಸಲ್ಪಡುತ್ತದೆ. ಧಾರ್ಮಿಕ ಪರಂಪರೆಯುಳ್ಳ ಈ ಸುಕ್ಷೇತ್ರವು ಸುಮಾರು 700 ವರ್ಷಗಳಷ್ಟು ಸುಧೀರ್ಘ ಇತಿಹಾಸವನ್ನು ಹೊಂದಿರುತ್ತದೆ. ಉಡುಪಿ ಜಿಲ್ಲೆಯ ಆರು ಮಾಗಣೆ ಏಳು ಗ್ರಾಮಗಳು ಹಾಗೂ ಸಾಲಿಕೇರಿಯ ಪಾರಂಪರಿಕ ಕುಟುಂಬಗಳು ಮತ್ತು ಕೂಡುಕಟ್ಟಿನ ಸಮುದಾಯ ಸಹಿತವಾಗಿ ಎಲ್ಲ ಸಮುದಾಯಗಳ ಸಮಸ್ತ ಭಕ್ತಜನರಿಗೂ ಅಭಯಾಭಿವೃದ್ಧಿಗಳನ್ನು ಅನುಗ್ರಹಿಸಿಕೊಂಡು ಬಂದ ಶಕ್ತಿಸ್ಥಳವೆಂದು ಪ್ರಖ್ಯಾತಿ ಪಡೆದಿದೆ.
ಶ್ರೀ ಕ್ಷೇತ್ರಕ್ಕೆ ಶ್ರೀ ಶ್ರೀಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ, ಶೃಂಗೇರಿಯ ಶ್ರೀ ಶಾರದಾ ಪೀಠವು ಗುರುಪೀಠವಾಗಿದೆ. ಶ್ರೀ ಕ್ಷೇತ್ರದಲ್ಲಿ ಪ್ರತಿವರ್ಷ ಫೆಬ್ರವರಿ ತಿಂಗಳ ಮೂರನೆಯ ವಾರದಲ್ಲಿ ದೇವಸ್ಥಾನದ ಕೂಡುಕಟ್ಟಿನವರ ಹಾಗೂ ಗ್ರಾಮಸ್ಥರ ಸಹಕಾರದಿಂದ ಜಾತ್ರೆಯು ವಿಜೃಂಭಣೆಯಿಂದ ಜರಗುತ್ತದೆ. ಜಾತ್ರೆಯ ಪೂರ್ವಭಾವಿಯಾಗಿ ಗಣಪತಿ ದೇವರಿಗೆ ರಂಗಪೂಜೆ ಗಣಹೋಮ, ಚಂಡಿಕಾಯಾಗ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಕುಮಾರಚಾವಡಿಯಿಂದ ಬಾಳು ಭಂಡಾರ ಪೂಜೆ ಹಾಗೂ ಹಸಿರುವಾಣಿ ಮೆರವಣಿಗೆ ದೇವಸ್ಥಾನಕ್ಕೆ ಬಂದು ವಿಜೃಂಭಣೆಯಿಂದ ಬಡಾಸಾಲಿಕೇರಿ (ಆದಿ ದೇವಸ್ಥಾನದ ಮೂಲನಾಗಬನ)ಯ ವರೆಗೆ ಹೋಗಿ ಹಿಂದಿರುಗಿ ಬರುವ ದೇವರ ಉತ್ಸವ ಹಾಗೂ ರಾತ್ರಿ ಗೆಂಡಸೇವೆ ಜರುಗುತ್ತದೆ. ಮರುದಿನ ಢಕ್ಕೆಬಲಿ ದಿನವಿಡಿ ಅತ್ಯಂತ ವಿಜೃಂಭಣೆಯಿಂದ ಉತ್ಸವ ಹಾಗೂ ರಥೋತ್ಸವ ಜರಗುತ್ತದೆ. ಮರುದಿನ ಸಂಜೆ ಓಕುಳಿ, ದೇವರಕೆರೆಯಲ್ಲಿ ಅವಭೃತಸ್ನಾನ, ಧ್ವಜಅವರೋಹಣ ರಾತ್ರಿ ಕಲ್ಲುಕುಟ್ಟಿಗನ ಕೋಲಸೇವೆ ನೆರವೇರುತ್ತದೆ. ಕೊನೆಯ ದಿವಸ ಕುಮಾರಚಾವಡಿಯಲ್ಲಿ ಪೂಜೆ ಪುನಸ್ಕಾರದೊಂದಿಗೆ ಮಹಾಪ್ರಸಾದ ವಿತರಣೆಯಾಗುತ್ತದೆ. ಶ್ರಾವಣ ಮಾಸ ಪೂರ್ತಿ ಸೋಣೆಯಾರತಿ ಮಹಾಪೂಜೆ, ನವರಾತ್ರಿ ಮಹೋತ್ಸವ ಸಮಯದಲ್ಲಿ ಶ್ರೀ ದುರ್ಗಾ ಸಪ್ತಶತಿ ಪಾರಾಯಣ ಹಾಗೂ ನವರಾತ್ರಿ ಪೂಜೆಗಳು ನಡೆಯುತ್ತಿದ್ದು, ಲಲಿತಪಂಚಮಿಯಂದು ಚಂಡಿಕಾಯಾಗ ಹಾಗೂ ಪ್ರಸಾದ ವಿತರಣೆ ನಡೆಯುತ್ತದೆ. ವರ್ಷಕ್ಕೆ ಎರಡು ಮಾರಿಪೂಜೆ ಮತ್ತು ಕಾರ್ತಿಕ ಮಾಸದ ಡಿಸೆಂಬರ್ ತಿಂಗಳಲ್ಲಿ ಕಾರ್ತಿಕಪೂಜೆ ಮತ್ತು ಸಾರ್ವಜನಿಕ ಸತ್ಯನಾರಾಯಣ ಪೂಜೆಗಳು ಉಜ್ವಲ ಸಂಪ್ರದಾಯದ ಹಿನ್ನೆಲೆಯಲ್ಲಿ ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಈ ಪ್ರಸಿದ್ಧ ದೇವಾಲಯವು 2007ನೇ ಏಪ್ರಿಲ್-ಮೇ ತಿಂಗಳಲ್ಲಿ ಆಗಮಶಾಸ್ತ್ರದನ್ವಯ ಶ್ರೀ ಕ್ಷೇತ್ರವಾಗಿ ರೂಪಗೊಂಡಿತು. ನೂತನ ಶಿಲಾದೇಗುಲ ಸಮರ್ಪಣೆ, ನವನಿರ್ಮಿತ ಶ್ರೀದೇವಿ, ಶ್ರೀ ಗಣಪತಿ ಮತ್ತು ಶ್ರೀ ವೀರಭದ್ರದೇವರ ಅಷ್ಟಬಂಧ ಪ್ರತಿμÉ್ಠ ಏಕೋತ್ತರ ಸಹಸ್ರ ಬ್ರಹ್ಮಕಲಶಾಭಿμÉೀಕ, ಪ್ರಪ್ರಥಮವಾಗಿ ಶ್ರೀ ಮನ್ಮಥಾರಥೋತ್ಸವವು ವೇದಮೂರ್ತಿ ಶ್ರೀ ಚಂದ್ರಶೇಖರ ಸೋಮಯಾಜಿ, ಕೋಟ ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಿರುತ್ತದೆ. ಇದೇ ಸಂದರ್ಭದಲ್ಲಿ ಶ್ರೀ ಗಣಪತಿ, ಶ್ರೀ ಅಮ್ಮನವರು ಹಾಗೂ ಶ್ರೀ ವೀರಭದ್ರ ದೇವರುಗಳ ಶಿಲಾಮಯ ಗರ್ಭಗೃಹಗಳು, ತೀರ್ಥ ಮಂಟಪ, ತೀರ್ಥಭಾವಿ, ಸುತ್ತುಪೌಳಿ ಹಾಗೂ ಹೊರಾಂಗಣದಲ್ಲಿ ಧ್ವಜಸ್ತಂಭ (ಕೊಡಿಮರ), ಕಲ್ಲುಕುಟ್ಟಿಗ, ಕ್ಷೇತ್ರಪಾಲ, ಅಬ್ಬಗದಾರಗ, ಮುಂಡಂತಾಯ ಪರಿವಾರ ದೈವಗಳ ಗುಡಿಗಳು ಹಾಗೂ ನವದುರ್ಗೆಕಟ್ಟೆ, ಮುಖಮಂಟಪಗಳನ್ನು ರಚಿಸಿ ಅಷ್ಟಮಂಗಲ ಪ್ರಶ್ನೆಯಿಂದ ತಿಳಿಸಿದಂತೆ ಗ್ರಾಮದೇವತೆಯಾದ ಶ್ರೀದುರ್ಗಾಪರಮೇಶ್ವರಿ ಅಮ್ಮನವರನ್ನು ಪ್ರಧಾನವಾಗಿಟ್ಟುಕೊಂಡು ಷಢಾಧಾರ ಪ್ರತಿμÁ್ಠಪನೆ ಮಾಡಲಾಗಿರುತ್ತದೆ. ಶ್ರೀ ಕ್ಷೇತ್ರದ ಭಕ್ತಾದಿಗಳು ಒಮ್ಮನಸಿನಿಂದ ತನು ಮನ ಧನ ಸಹಾಯ ನೀಡಿ ಕ್ಷೇತ್ರವನ್ನು ನವನಿರ್ಮಾಣ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಚಿರಸ್ಮರಣೀಯ.
ಶ್ರೀ ದುರ್ಗೆ ಸಾಲಿಕೇರಿಯ ಅಮ್ಮ :
ಭಾರತದ ಉದ್ದಗಲಕ್ಕೂ ಶಕ್ತಿಸ್ವರೂಪಿಣಿಯಾಗಿ, ಮಹಾಮಾಯೆಯಾಗಿ, ಮಹಿμÁಸುರಮರ್ದಿನಿಯಾಗಿ, ಜಗನ್ಮಾತೆಯಾಗಿ, ಜಗತ್ರಕ್ಷಕಿಯಾಗಿ ಶ್ರೀ ಪುಣ್ಯಭೂಮಿಯ ಜನಮಾನಸದಲ್ಲಿ ದುರ್ಗೆ ಅಚ್ಚಳಿಯದಂತೆ ನೆಲೆ ನಿಂತಿದ್ದಾಳೆ. ದೇವಿಪುರಾಣದಲ್ಲಿ ಮಹಾಲಕ್ಷ್ಮಿ ಎಂದು ಆರಾಧಿಸಲ್ಪಡುವ ಈ ಮಹಾಶಕ್ತಿಯು ಸೃಷ್ಟಿ-ಸ್ಥಿತಿ ಲಯಗಳಿಗೆ ಕಾರಣೀಭೂತಳಾಗಿರುತ್ತಾಳೆ. ಇವಳನ್ನು ಅಭಯಂಕರಿ, ಕ್ಷೇಮಕರಿ, ಶುಭಕರಿ ಮುಂತಾದ ನಾಮಗಳಿಂದ ಪೂಜಿಸಿಕೊಂಡು ಬರಲಾಗುತ್ತದೆ. ಅಲ್ಲದೆ ದುಗಾರ್ಂಬಿಕೆ ಪದ್ಮಾಸೀನಾಳಾಗಿ, ಅಭಯಹಸ್ತಗಳೊಂದಿಗೆ ಅಮೃತರೂಪಿಣಿಯಾಗಿ, ಪ್ರತಿಮಾಲಕ್ಷಣಗಳೊಂದಿಗೆ ಕಂಗೊಳಿಸಿ, ಭಕ್ತರ ವೃಂದಕ್ಕೆ ತನ್ನ ದಿವ್ಯ ಸಾನಿಧ್ಯದ ಕರುಣೆತೋರಿ, ಕೃಪಾಕಟಾಕ್ಷ ಬೀರುತ್ತ ಭಕ್ತಜನರನ್ನು ಅನುಗ್ರಹಿಸಿ ಪಾಲಿಸಿಕೊಂಡು ಬಂದಿರುತ್ತಾಳೆ. ಶ್ರೀ ಕ್ಷೇತ್ರದಲ್ಲಿ ನೆಲೆ ನಿಂತು ಕ್ಷೇತ್ರಪಾಲಕಿಯಾಗಿ ದಿವ್ಯಪ್ರಭೆ ಬೀರಿ ಸಕಲೈಶ್ವರ್ಯಗಳನ್ನಿತ್ತು ಭಕ್ತಜನರಿಂದ “ಸಾಲಿಕೇರಿಅಮ್ಮ” ಎಂಬ ಅನುಗ್ರಹ ಸ್ಥಾನದಲ್ಲಿದ್ದು ಸರ್ವ ಭಕ್ತಜನವಂದಿತಳಾಗಿದ್ದಾಳೆ.
ಕುಲದೇವತೆ ಶ್ರೀ ಬ್ರಹ್ಮಲಿಂಗ ವೀರಭದ್ರ ಸ್ವಾಮಿ :
ಶಾಕ್ತ ಪುರಾಣದ ಪ್ರಕಾರ ಶಿವನ ಜಟೆಯಿಂದ ಅವತರಿಸಿದ ವೀರಭದ್ರ ಪರಶಿವನ ಉಗ್ರ ಸ್ವರೂಪಿ. ಪಿತೃವಾಕ್ಯಪರಿಪಾಲನೆ, ನಿμÉ್ಠ, ವೀರತ್ವ, ಕ್ಷಮಾಭಾವ ಮುಂತಾದ ವಿಶಿಷ್ಟತೆಗಳನ್ನು ಹೊಂದಿರುವ ಶ್ರೀ ವೀರಭದ್ರದೇವರು ಶೆಟ್ಟಿಗಾರ ಕುಲಸಂಜಾತರ ಕುಲದೇವತೆಯೂ ಆಗಿದ್ದಾರೆ. ನೇಕಾರಿಕೆಯನ್ನು ಕುಲವೃತ್ತಿಯನ್ನಾಗಿರಿಸಿಕೊಂಡು ಬಂದ ಶೆಟ್ಟಿಗಾರರ ಸಮುದಾಯವು ತಮ್ಮ ಕಷ್ಟ ಸಂಕಷ್ಟಗಳನ್ನು ದೂರ ಮಾಡಿ, ಕೌಟುಂಬಿಕ ಬದುಕಿನಲ್ಲಿ ಸುಖಸಮೃದ್ಧಿಯನ್ನು ಕರುಣಿಸಿ ಕಾಪಾಡಿಕೊಂಡು ಬಂದಿರುವ ನಂಬಿಕೆಗೆ ಹಾಗೂ ಶ್ರದ್ದೆಗೆ, ನೆಲೆಯಾಗಿ ಅನುಗ್ರಹಸ್ಥಾನದಲ್ಲಿದ್ದು ಭಕ್ತರನ್ನು ಹರಸಿ ಕಾಪಾಡುತ್ತಿದ್ದಾರೆ.
ಶ್ರೀ ಭದ್ರಕಾಳಿ ಅಮ್ಮ :
ಅಷ್ಟಮಂಗಳ ಪ್ರಶ್ನೆಯಂತೆ ನಡೆದ ಬ್ರಹ್ಮಕಲಶಾಭಿμÉೀಕದ ಸಂದರ್ಭದಲ್ಲಿ ಕುಮಾರಚಾವಡಿಯ ಬಳಿಯಿರುವ ಮಾರಿಯಮ್ಮ ಸಾನಿಧ್ಯವು ಸ್ಥಳಾಂತರಗೊಂಡು ದೇವಸ್ಥಾನದ ಈಶಾನ್ಯ ದಿಕ್ಕಿನಲ್ಲಿ ಪುನರ್ ಪ್ರತಿμÉ್ಠಯಿಂದ ಭದ್ರಕಾಳಿ ಅಮ್ಮನಾಗಿ ನೆಲೆಯಾಗಿ ಭಕ್ತಜನರಿಗೆ ಅನುಗ್ರಹ ನೀಡುತ್ತಿದ್ದಾಳೆ.
ಸಿರಿ ಕುಮಾರಚಾವಡಿ :
ಶ್ರೀ ಕ್ಷೇತ್ರ ಸಾಲಿಕೇರಿಯ ಧಾರ್ಮಿಕ ಪೂಜಾರಾಧನೆಯ ಸಂಪ್ರದಾಯದಲ್ಲಿ ಸಿರಿ ದೈವಾರಾಧನೆಯ ಪರಂಪರೆಯನ್ನು ಅನುಸರಿಸಿಕೊಂಡು ಬಂದಿರುವುದು ಪ್ರಮುಖ ವಿಚಾರವಾಗಿದೆ. ದೈವಗಳು ನಂಬಿದ ಭಕ್ತಜನರ ನಂಬಿಕೆಯ ನೆಲೆಗಟ್ಟಿನಲ್ಲಿ ಆರಾಧಿಸಲ್ಪಡುತ್ತಿವೆ. ಸಿರಿಕುಮಾರ ಚಾವಡಿಯ ದೈವಾರಾಧನೆಯು ಸಮುದಾಯದ ಸಾಂಘಿಕ ಬದುಕಿನ ರೂಪದಲ್ಲಿದೆ. ಇಲ್ಲಿ ಸಿರಿಕುಮಾರ, ಸಿರಿಸಪ್ತಮಾತೆಯರು, ಪಂಜುರ್ಲಿ, ಹಾಯ್ಗುಳಿ, ಬೊಬ್ಬರ್ಯ ಮುಂತಾಗಿ ಸ್ಥಾಪಿಸಲ್ಪಟ್ಟಿರುವ ದೈವಗಳ ಆರಾಧನೆಯು ಅನೂಚಾನವಾದ ರೀತಿನೀತಿಗಳಡಿಯಲ್ಲಿದೆ. ಹಬ್ಬಹರಿದಿನಗಳಲ್ಲಿ ಇಲ್ಲಿನ ದೈವಗಳಿಗೆ ಮೊದಲ ಪೂಜೆ ಪುನಸ್ಕಾರಗಳು ಸಲ್ಲುತ್ತದೆ. ಶ್ರೀ ಕ್ಷೇತ್ರದ ಜಾತ್ರೆಯು ಧಾರ್ಮಿಕ ಸಂಪ್ರದಾಯದಂತೆ ದೈವಸ್ಥಾನದಿಂದಲೇ ಆರಂಭಗೊಳ್ಳುತ್ತವೆ.
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಭಕ್ತಾದಿಗಳ ನೆರವಿನಿಂದ ಸಂಪೂರ್ಣಗೊಂಡು ದಿನಾಂಕ 10-02-2022 ಗುರುವಾರದಿಂದ 15-02-2022 ಮಂಗಳವಾರದವರೆಗೆ ಬ್ರಹ್ಮಕಲಶಾಭಿμÉೀಕ ಸಮಾರಂಭಗಳು ಹಾಗೂ 19-02-2022 ರವರೆಗೆ ವಾರ್ಷಿಕಜಾತ್ರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ಜರಗಿರುತ್ತದೆ.