ಶ್ರೀ ವೀರಭದ್ರ-ದುರ್ಗಾಪರಮೇಶ್ವರೀ ದೇವಸ್ಥಾನ, ಉಳ್ಳಾಲ

Share with your family and friends

Loading

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ (ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ) ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ – ಈ ಮೂರು ಜಿಲ್ಲೆಗಳಲ್ಲಿ ನೆಲೆ ಗೊಂಡಿರುವ ಪದ್ಮಶಾಲಿ (ಶೆಟ್ಟಿಗಾರ್) ಸಮಾಜದ ಕುಲದೇವರ 16 ದೇವಸ್ಥಾನಗಳಲ್ಲಿ ಸುಮಾರು 800 ವರ್ಷಗಳ ಇತಿಹಾಸವಿರುವ ಉಳ್ಳಾಲ ಶ್ರೀ ವೀರಭದ್ರ-ದುರ್ಗಾಪರಮೇಶ್ವರೀ ದೇವಸ್ಥಾನವು 11 ವರ್ಷಗಳ ಮೊದಲು ತಾ. 05-05- 2011 ರಂದು ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಂಡು ಪುನರ್ ಪ್ರತಿμÉ್ಠಯೊಂದಿಗೆ ಬ್ರಹ್ಮಕಲಶಾಭಿಷÉೀಕವಾಗಿ ನಿತ್ಯಪೂಜೆ ಪುನಸ್ಕಾರಗಳು ಜರಗುತ್ತ ಬಂದಿರುತ್ತದೆ.

ಶ್ರೀ ಕ್ಷೇತ್ರದ ಎಲ್ಲ ಸಾನಿಧ್ಯಗಳು ಸುಮಾರು 100 ವರ್ಷಗಳ ಕಾಲ ಯಾವುದೇ ಪೂಜೆ ಪುನಸ್ಕಾರಗಳಿಲ್ಲದೆ ಜೀರ್ಣಾವಸ್ಥೆಯಲ್ಲಿತ್ತು. ಶ್ರೀ ಕ್ಷೇತ್ರದ ಪುನರ್ ನಿರ್ಮಾಣಕ್ಕಾಗಿ ಊರ ಪರವೂರ ದಾನಿಗಳ ಮತ್ತು ಭಗವದ್ಭಕ್ತರ ಸಹಾಯ/ಸಹಕಾರವನ್ನು ಪಡೆದು ಹಿರಿಯ ಮುಖಂಡರ ಮುಂದಾಳತ್ವದಲ್ಲಿ, ಸಮಾಜಬಾಂಧವರ ತನು ಮನ ಧನಗಳ ಸಹಕಾರದೊಂದಿಗೆ ಪ್ರಥಮ ಬಾರಿಗೆ ಅಷ್ಟಮಂಗಳ ಪ್ರಶ್ನೆ ಪ್ರಕಾರ 1974ನೆಯ ಮೇ 18 ರಂದು ಜೀರ್ಣೋದ್ಧಾರಗೊಳಿಸಿ, ಶ್ರೀ ವೀರಭದ್ರ, ಶ್ರೀ ದುರ್ಗಾಪರಮೇಶ್ವರೀ, ನಾಗದೇವರ ಸಾನಿಧ್ಯ ಮತ್ತು ಪರಿವಾರ ದೈವಗಳಾದ ಗುಳಿಗ, ಬಬ್ಬರ್ಯ, ಪಂಜುರ್ಲಿ ದೈವಗಳನ್ನು ಪುನಃ ಪ್ರತಿμÁ್ಠಪನೆಗೊಳಿಸಿ ಬ್ರಹ್ಮಕಲಶಾದಿ ಕಾರ್ಯಕ್ರಮಗಳು ಜರಗಿರುತ್ತದೆ. ಆದರೆ ಕರಾವಳಿಯ ಹವಾಗುಣದ ವೈಪರೀತ್ಯದಿಂದ ಶ್ರೀ ವೀರಭದ್ರ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಗರ್ಭಗುಡಿಗಳ ಕಾಂಕ್ರೀಟ್‍ನ ಮೇಲ್ಛಾವಣಿ ಶಿಥಿಲಗೊಂಡು ನಿತ್ಯ ಪೂಜಾಧಿಗಳನ್ನು ಮಾಡಲು ತೊಂದರೆ ಕಂಡುಬಂದ ಕಾರಣ 2006ರಲ್ಲಿ ಪುನಃ ಅಷ್ಟಮಂಗಳ ಪ್ರಶ್ನೆಯಲ್ಲಿ ಚರ್ಚಿಸಿ ಕಂಡುಬಂದ ಪ್ರಕಾರ ಎರಡನೆಯ ಬಾರಿಗೆ ಶ್ರೀ ಕ್ಷೇತ್ರವನ್ನು ಸಂಪೂರ್ಣ ಶಿಲಾಮಯವಾಗಿ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಪ್ರತಿμÁ್ಠಪನ ದಿನಾಚಾರಣೆಯನ್ನು ಪ್ರತಿವರ್ಷದ ತಾರೀಕು ಮೇ 05 ರಂದು ವಿಜೃಂಭಣೆಯಿಂದ ಜರಗಿಸುತ್ತ ಬಂದಿರುತ್ತೇವೆ. ಶರನ್ನವರಾತ್ರಿ ಮಹೋತ್ಸವವನ್ನು 9 ದಿನಗಳಲ್ಲಿ ವಿಶೇಷವಾಗಿ ವಿಜೃಂಭಣೆಯಿಂದ ಜರಗಿಸಿ ಪ್ರತಿ ದಿನ ರಾತ್ರಿ ಪೂಜೆ ಮತ್ತು ಅನ್ನಪ್ರಸಾದ ವ್ಯವಸ್ಥೆ ಕೂಡ ಸುಮಾರು 30 ವರ್ಷಗಳಿಂದ ಜರಗಿಸುತ್ತ ಬಂದಿರುತ್ತೇವೆ. ವಾರ್ಷಿಕ ಜಾತ್ರಾ ಮಹೋತ್ಸವ ಜರಗಿಸುವ ಬಗ್ಗೆ ದೀರ್ಘ ಚಿಂತನೆಗಳು ಆಡಳಿತ ಮಂಡಳಿಯವರಿಂದ ನಡೆಯುತ್ತಿದೆ.

ಎರಡನೆಯ ಸಲದ ಜೀರ್ಣೋದ್ಧಾರದ ಸದವಸರದಲ್ಲಿ ಕಂಡುಬಂದಂತೆ ಕ್ಷೇತ್ರದ ಪ್ರಧಾನ ದೇವರಾಗಿ ಶ್ರೀ ವೀರಭದ್ರ ಸ್ವಾಮಿ (ಕುಲದೇವರು), ಪರಿವಾರ ಶಕ್ತಿಗಳಾಗಿ ಶ್ರೀ ಮಹಾಗಣಪತಿ ದೇವರು, ಮಹಾಶಕ್ತಿಯಾಗಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು, ಮಹಾಮಾಯಿ ಶಕ್ತಿ ಹಾಗೂ ಪರಿವಾರ ರಾಜನ್ ದೈವಗಳಾದ ದೂಮಾವತಿ-ಬಂಟ ದೈವಗಳು ಮತ್ತು ಗುಳಿಗ, ಬಬ್ಬರ್ಯ, ಪಂಜುರ್ಲಿ ಹಾಗೂ ಅಶ್ವತ್ಥ ಕಟ್ಟೆಯಲ್ಲಿ ನಾಗ ಸಾನಿಧ್ಯ ಮತ್ತು ನವಗ್ರಹವನ್ನು ಪ್ರತಿμÁ್ಠಪಿಸಲಾಗಿದೆ.

ಉಳ್ಳಾಲ ಶ್ರೀ ಕ್ಷೇತ್ರದ ಕೂಡುಕಟ್ಟಿಗೆ 250 ಮನೆಗಳಿದ್ದು ಒಟ್ಟು 5 ಮಾಗಣೆಗಳಲ್ಲಿ ವಿಭಕ್ತವಾಗಿವೆ – ಉಳ್ಳಾಲ, ಸೋಮೇಶ್ವರ, ಕೊಣಾಜೆ, ಬಂಟ್ವಾಳ ಮತ್ತು ಕಲ್ಲಡ್ಕ. ಸದ್ಯಕ್ಕೆ ಉಳ್ಳಾಲ ಕೂಡುಕಟ್ಟಿನ–ಉಳ್ಳಾಲ, ಕೊಣಾಜೆ ಮತ್ತು ಕಲ್ಲಡ್ಕ ಮಾಗಣೆಗೆ 3 ಜನ ಗುರಿಕಾರರು ಇರುತ್ತಾರೆ.

ಮುಂದಿನ ವರ್ಷ 2023ರ ವರ್ಷದ ಮಧ್ಯದಲ್ಲಿ ಶ್ರೀ ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಜರಗುವ ಬ್ರಹ್ಮಲಶಾಭಿμÉೀಕವನ್ನು ವಿಜೃಂಭಣೆಯಿಂದ ಆಚರಿಸಲಿದ್ದೇವೆ.