ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ, ಮುಲ್ಕಿ-ಮಾನಂಪಾಡಿ

Share with your family and friends

Loading

ಶ್ರೀ ವೀರಭದ್ರ ಮಹಾಮಾಯಿ ದೇವಾಲಯ ಮುಲ್ಕಿ ಮಾನಂಪಾಡಿಯು ಸುಮಾರು 500 ವರ್ಷಗಳ ಇತಿಹಾಸ ಹೊಂದಿದೆ ಎನ್ನುತ್ತಾರೆ ಹಿರಿಯರು. ದೇವಾಲಯವು ನಾಲ್ಕು ಮಾಗಣೆಗಳಲ್ಲಿ ವ್ಯಾಪ್ತವಾಗಿದ್ದು ಐದುಜನ ಮೊಕ್ತೇಸರರ ಆಡಳಿತ ಮಂಡಳಿಯನ್ನು ಹೊಂದಿದೆ. ಮಾನಂಪಾಡಿಯಲ್ಲಿ ಪದ್ಮಶಾಲಿ ಸಮುದಾಯದವರು ಆರಾಧಿಸಿಕೊಂಡು ಬರುತ್ತಿರುವ ಶ್ರೀ ವೀರಭದ್ರ ಮಹಾಮಾಯಿ ಸನ್ನಿದಾನ ವಿಶೇಷ ಶಕ್ತಿಯನ್ನು ಒಳಗೊಂಡಿರುವ ದೇವಾಲಯ. ಇಲ್ಲಿ ವಿಶೇಷವಾಗಿ ವೀರಭsದ್ರ ದೇವರು, ಮಹಾಮಾಯಿ ದೇವಿ, ಗಣಪತಿ ಮತ್ತು ಜುಮಾದಿ ಬಂಟ ಪರಿವಾರ ದೈವಗಳ ಆರಾಧನೆಯನ್ನು ನಡೆಸಲಾಗುತ್ತಿದೆ. ಮಠದ ಬೆನ್ನಿ ಪಲ್ಲಿದ ಪಡ್ಪು ಎನ್ನುವ ಹೆಸರಿನಿಂದ ಹಿಂದೆ ಕರೆಯಲ್ಪಡುತ್ತಿತ್ತು. ಇಲ್ಲಿ ಸುಮಾರು 1971ರಿಂದ ದೇವರ ಬಿಂಬವನ್ನು (ಬೊಂಬೆ) ಕಾರ್ನಾಡಿನ ಮಸೀದಿಯ ಎದುರುಗಡೆಯಲ್ಲಿರುವ ಕಟ್ಟೆಯಲ್ಲಿ ಕುಳ್ಳಿರಿಸಿ ಪ್ರತಿμÁ್ಠಪಿಸಲಾಗುತ್ತದೆ. ಅನಂತರ ಸಂಜೆ 06.00 ಗಂಟೆಗೆ ದೇವರ ಬಿಂಬವನ್ನು (ಮಹಾಮಾಯಿ ದೇವರು) ಪೇಟೆಯ ಸವಾರಿಯ ಮೂಲಕ ಅಲ್ಲಲ್ಲಿ ಭಕ್ತರ ಪೂಜೆಗಳನ್ನು ಪಡೆಯುತ್ತ ಬಪ್ಪನಾಡು ದೇವರ ಹಾಗು ಉಗ್ರನರಸಿಂಹ ವೆಂಕಟೇಶ್ವರ ದೇವರ ಭೇಟಿಯನ್ನು ಮಾಡುತ್ತ ವೀರಭದ್ರ ದೇವಸ್ಥಾನಕ್ಕೆ ಮೆರವಣಿಗೆಯ ಮೂಲಕ ಬಂದು ವಿಜೃಂಭಣೆಯ ಉತ್ಸವ ನಡೆಯುತ್ತದೆ. ದೇವರಬಿಂಬಕ್ಕೆ ಈ ಬಾರಿ 52 ವರ್ಷ (ಬೊಂಬೆ) ಪೂರ್ಣಗೊಳ್ಳುತ್ತದೆ. ಹತ್ತಿರದಲ್ಲಿರುವ ನಡಿಬೊಟ್ಟು ದೈವಸ್ಥಾನಕ್ಕೆ ಹಾಗು ಇಲ್ಲಿಯ ಜುಮಾದಿ ದೈವಕ್ಕೂ ನಿಕಟ ಸಂಬಂಧ ಇದೆ.

ಹಿಂದೆ ಹುಲ್ಲಿನ ವೀರಭದ್ರ ದೇವಾಲಯವು ತದನಂತರ ಹಂಚಿನ ದೇವಾಲಯವಾಗಿ ನಿರ್ಮಾಣವಾಯಿತು. 1999ರಲ್ಲಿ ಮಾಧವ ಶೆಟ್ಟಿಗಾರರವರ ನೇತೃತ್ವದಲ್ಲಿ ಮೊದಲ ಬಾರಿಗೆ ಮಹಾಮಾಯಿ ದೇವರ ಜೀರ್ಣೋದ್ಧಾರ ಹಾಗು ಬ್ರಹ್ಮಕಲಶಾಭಿμÉೀಕವನ್ನು ರೂ.25 ಲಕ್ಷ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ಮಾಡಲಾಯಿತು. ನಂತರ 2010ರಲ್ಲಿ ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದ ಬ್ರಹ್ಮಕಲಶಾಭಿμÉೀಕ ನಡೆಯಿತು. 2020ರಲ್ಲಿ ನಾಗಮಂಡಲೋತ್ಸವ ಮತ್ತು ಬ್ರಹ್ಮಕಲಶಾಭಿμÉೀಕ ಜರಗಿತು. ಹೀಗೆ ಹಂತಹಂತವಾಗಿ ಮಾನಂಪಾಡಿ ವೀರಭದ್ರ ದೇವಸ್ಥಾನ ಬೆಳಗುತ್ತಾ ಬಂದಿದೆ.

ಇಲ್ಲಿನ ದೈವೀ ಶಕ್ತಿ ಅಪಾರವಾದದ್ದು ಇದಕ್ಕೆ ಹಲವಾರು ನಿದರ್ಶನಗಳು ಇವೆ. ದೇಶಕ್ಕೆ ದೇಶವೇ ಕರೋನ ಲಾಕ್ ಡೌನ್ ಆಗಿದೆ. ಕೊರೋನ ಎಂಬ ಮಾಹಾಮಾರಿ ಅಟ್ಟಹಾಸಕ್ಕೆ ಎμÉ್ಟೂೀ ದೇವಾಲಯದ ಬ್ರಹ್ಮ ಕಲಶ, ಜಾತ್ರೆಗಳು ನಡೆಯದಂತೆ ಆಗಿದೆ. ಆದರೆ ಶ್ರೀ ವೀರಭದ್ರ ಮಹಾಮ್ಮಾಯಿ ದೇವಾಲಯದ ಬಹ್ಮಕಲಶಾಭಿμÉೀಕ, ನಾಗಮಂಡಲ ಸೇವೆಯು ಸಾವಿರಾರು ಭಕ್ತರು ಸೇರಿದಂತೆ ಸಡಗರದಿಂದ ನಡೆದಿದೆ. ಬಳಿಕ ಕೆಲವು ದಿನದಲ್ಲಿ ದೇಶಕ್ಕೆ ದೇಶವೇ ಸಂಪೂರ್ಣ ಲಾಕ್ ಡೌನ್ ಆಯಿತು. ಮುಂದೆ ಕೆಲವೆ ತಿಂಗಳಲ್ಲಿ ಮತ್ತೆ ವμರ್Áವಧಿ ಉತ್ಸವವು ಸಾವಿರಾರು ಜನರು ಸೇರಿದ ಶೋಭಾಯಾತ್ರೆಯು ನಡೆಯಿತು. ಈ ಬಾರಿಯೂ ಹಿಜಾಬ್ ಸಂಬಂಧಿಸಿದ ತೀರ್ಪು ಬರುವ ಸಲುವಾಗಿ 144 ಸೆಕ್ಷನ್ ಜಾರಿಯಾದುದರಿಂದ ದೇವರ ಶೋಭಾಯಾತ್ರೆ ನಡೆಯುವುದಿಲ್ಲ ಎನ್ನುವ ಭಯವು ಕಾಡಿತ್ತು. ಅದಲ್ಲದೆ ಜಿಲ್ಲಾಧಿಕಾರಿಯವರ ಆದೇಶದಂತೆ ಜಾರಿಯಾದುದರಿಂದ ದೇವರ ಶೋಭಾಯಾತ್ರೆ ನಡೆಯುವುದಿಲ್ಲ ಎನ್ನುವ ಭಯವು ಕಾಡಿತ್ತು. ಅದಲ್ಲದೆ ಜಿಲ್ಲಾಧಿಕಾರಿಯವರ ಆದೇಶದಂತೆ ಯಾವುದೇ ಕಾರ್ಯಕ್ರಮವನ್ನು ನಡೆಸಲು ಅವಕಾಶ ಇರಲಿಲ್ಲ. ಇದೇ ದಿನ ದೇವರ ಬಿಂಬದ ಶೋಭಾಯಾತ್ರೆಯು ನಡೆಯಬೇಕಿತ್ತು. ಕಾರ್ನಾಡ್ದರ್ಗದ ಕಟ್ಟೆಯಿಂದ ಮೆರವಣಿಗೆ ನಡೆಯುವುದು ಸಂದೇಹಾಸ್ಪದ ಆಗಿತ್ತು. ಎಲ್ಲ ಧರ್ಮದ ಜನರು ಒಂದುಗೂಡಿ ಸಹಕರಿಸಿದ್ದರಿಂದ ಶೋಭಾಯಾತ್ರೆಯು ಅದ್ದೂರಿಯಾಗಿ ನಡೆಯಿತು. ಇದಕ್ಕೆ ಕೂಡ ದೇವರ ಮಹಿಮೆಯೇ ಕಾರಣ. ಕೊರೋನದ ಮಧ್ಯೆ ಉತ್ಸವವು ಸಾಂಗವಾಗಿ ಜರಗಿರುತ್ತದೆ. ದೇವರ ಮಹಿಮೆಯು ಇದಕ್ಕೆಲ್ಲ ಕಾರಣವೆಂದು ಭಕ್ತರು ನುಡಿಯುತ್ತಾರೆ.

ಹೌದು.. ಸುಮಾರು ಐನೂರು ವರ್ಷಗಳಷ್ಟು ಹಳೆಯದಾದ ಈ ದೇವಾಲಯ ಹಂತ ಹಂತವಾಗಿ ಬೆಳೆದು ನಿಂತಿದೆ. ಈ ಸ್ಥಳ ಪಳ್ಳಿದ ಪಡ್ಪು ಎನ್ನುವ ಹೆಸರಿನಿಂದ ಹೆಸರುವಾಸಿಯಾಗಿತ್ತು. ಇದು ವೀರಭದ್ರ ಮತ್ತು ಮಹಾಮ್ಮಾಯಿ ಶಕ್ತಿಗಳು ನೆಲೆನಿಂತ ಪವಿತ್ರ ಪ್ರದೇಶ. ಈ ದೇವಾಲಯದಲ್ಲಿ ಹಿಂದೆ ಮಾರಿಯಮ್ಮನಿಗೆ ಪ್ರಾಣಿ ಬಲಿ ನೀಡುತ್ತಿದ್ದರು. ತದನಂತರದ ದಿನಗಳಲ್ಲಿ ಸರ್ಕಾರ ಪ್ರಾಣಿ ಬಲಿ ನಿμÉೀಧಿಸಿತು. ಆ ಬಳಿಕ ಯಾವುದೇ ಬಲಿ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ಇದು ಹಿಂದು ಮತ್ತು ಮುಸ್ಲಿಮ್ ಸಮುದಾಯದ ದೇವಾಲಯ ಹಾಗೂ ದರ್ಗ ಎದುರುಬದುರಾಗಿ ಇರುವ ವಿಶೇಷ ಸ್ಥಳ. ಎμÉ್ಟೂೀ ಬಾರಿ ಒಂದೆರಡು ದಿನಗಳ ಅಂತರದಲ್ಲಿ ಇಲ್ಲಿನ ಮಾರಿ ಪೂಜೆ ನಡೆದ ಅನಂತರ ಉರೂಸ್ ನಡೆಯುತ್ತದೆ. ಮಹಾಮ್ಮಾಯಿ ದೇವರ ಬಿಂಬ ಪ್ರತಿμÁ್ಟಪಿಸುವ ಕಟ್ಟೆ ಇರುವುದು ಕೂಡ ಕಾರ್ನಾಡ್ ದರ್ಗದ ಎದುರು. ಇಲ್ಲಿ ದೇವರ ಬಿಂಬವು ಶೋಭಾಯಾತ್ರೆಯ ಮೂಲಕ (ಪಳ್ಳಿದ ಪಡ್ಪು) ಮಾನಂಪಾಡಿ ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನಕ್ಕೆ ಬರುತ್ತದೆ. ಈ ಶೋಭಾಯಾತ್ರೆಯನ್ನು ನೋಡಲು ಸಾವಿರಾರು ಜನರು ಸೇರುತ್ತಾರೆ. ಜಾತಿ ಭೇದವಿಲ್ಲದೆ ಎಲ್ಲರೂ ಶೋಬಾಯಾತ್ರೆಯ ಉದ್ದಕ್ಕೂ ಪೂಜೆಗಳನ್ನು ಸಲ್ಲಿಸುತ್ತಾರೆ.

ಮಾನಂಪಾಡಿ ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನವು ಒಂದು ಹಂತಕ್ಕೆ ಬೆಳೆದು ನಿಂತಿದೆ ಎಂದರೆ ಅದಕ್ಕೆ ಕಾರಣ ನಾಯಕತ್ವ ಗುಣಗಳನ್ನು ಹೊಂದಿದ ಪುರಂದರ್ ಡಿ. ಶೆಟ್ಟಿಗಾರ್‍ರವರು ಹಿರಿಯರು ಹಾಕಿದ ದಾರಿಯಲ್ಲಿ ತನ್ನ ಛಲದಿಂದ ಈ ಸಮುದಾಯದ ಪ್ರಗತಿಗೆ ದುಡಿಯುತ್ತಿರುವುದು. ದೇವಾಲಯ ದೊಡ್ಡ ಮಟ್ಟದಲ್ಲಿ ಬೆಳೆಯ ಬೇಕಾದರೆ ಇವರ ಮುಂದಾಳತ್ವ ಅಗತ್ಯ. ಮೊಕ್ತೇಸರರು, ನಾಲ್ಕು ಮಾಗಣೆಯ ಗುರಿಕಾರರು, ಊರಿನ ಹತ್ತು ಸಮಸ್ತರ ಸಹಕಾರ ಅμÉ್ಟೀ ಅಗತ್ಯ ಹಾಗಾಗಿ ಈ ದೇವಾಲಯವು ಪುನರ್ ನಿರ್ಮಾಣಗೊಂಡು ಎರಡು ಬಾರಿ ಬ್ರಹ್ಮಕಲಶಾಭಿμÉೀಕಗೊಂಡಿತು.

ಪದ್ಮಶಾಲಿ ಸಮಾಜ ಸಣ್ಣ ಸಮುದಾಯವಾದರೂ ಎಲ್ಲರೂ ತಮ್ಮ ಶಕ್ತಿ ಮೀರಿ ಈ ಕ್ಷೇತ್ರದ ಉದ್ದಾರಕ್ಕೆ ಬೆವರು ಸುರಿಸಿದ್ದಾರೆ. ಇದರ ಫಲವಾಗಿ ಈ ಮಾನಂಪಾಡಿ ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ ಸುಂದರ ದೇವಾಲಯವಾಗಿ ಈ ಕ್ಷೇತ್ರದಲ್ಲಿ ತಲೆ ಎತ್ತಿದೆ. ಎಲ್ಲರು ಒಂದೇ ಎಂಬ ಮನೋಭಾವದಿಂದ ಜಾತಿ ಭೇದವಿಲ್ಲದೆ ದೊಡ್ಡ ದೊಡ್ಡ ದಾನಿಗಳು ಜೊತೆಗೂಡಿ ಈ ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡಿರುತ್ತಾರೆ. ತನ್ನ ಸಮುದಾಯದ ಮಾತ್ರವಲ್ಲದೆ ಕೊರೋನ ಕಷ್ಟ ಕಾಲದಲ್ಲಿ ಎಲ್ಲ ಸಮುದಾಯದ ಬಡವರಿಗೆ 25 ಕೆ.ಜಿ ಅಕ್ಕಿಯ ಜೊತೆಗೆ ಒಟ್ಟು 2500 ರೂಪಾಯಿಗಳ ದಿನಬಳಕೆಯ ವಸ್ತುಗಳ ಕಿಟ್‍ನ್ನು ದೇವಸ್ಥಾನದ ಆಡಳಿತ ಮಂಡಳಿಯು ನೀಡಿ ಮಹತ್ಕಾರ್ಯವನ್ನು ಮಾಡಿದೆ. ಇದರಿಂದ ಸಮುದಾಯದ ಜನರು ಮಾತ್ರವಲ್ಲದೆ ಎಲ್ಲರು ಕಷ್ಟ ಕಾಲದಲ್ಲಿ ಈ ಶಕ್ತಿ ದೇವತೆಯನ್ನು ಮತಷ್ಟು ಪೂಜಿಸಲು ಆರಂಭಿಸಿದರು. ಹೀಗೆ ವರ್ಷದಿಂದ ವರ್ಷಕ್ಕೆ ಶ್ರೀ ವೀರಭದ್ರ ಮಹಾಮ್ಮಾಯೀ ದೇವಸ್ಥಾನ ಬೆಳಗುತ್ತಿದೆ.