ಪರಶುರಾಮನ ಸೃಷ್ಟಿಯಾದ ಈ ತುಳುನಾಡು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪಡುಕಡಲ ಕಿನಾರೆಗೆ ಹೊಂದಿಕೊಂಡು ಅನತಿ ದೂರದಲ್ಲಿ ಪೂರ್ವಾಭಿಮುಖವಾಗಿ ಕಂಗೊಳಿಸುವ ಈ ಭವ್ಯ ದೇಗುಲವೇ ಶ್ರೀ ವೀರಭದ್ರ ದೇವಸ್ಥಾನ ಪಡುಬಿದ್ರಿಯ ನಡ್ಸಾಲುಗ್ರಾಮದಲ್ಲಿ ಈ ದೇವಸ್ಥಾನವು ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿದೆ.
ಸುಮಾರು 250 ವರ್ಷಗಳ ಇತಿಹಾಸ ಹೊಂದಿರುವ ಈ ಭವ್ಯದೇಗುಲವು ಅದ್ಭುತ ಪೌರಾಣಿಕ ಹಾಗೂ ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಅತಿ ಸುಂದರವಾಗಿ ಕಂಗೊಳಿಸುವ ಬಾಲಕ ಸ್ವರೂಪದ ಶ್ರೀ ವೀರಭದ್ರ ದೇವರ ಶಿಲಾ ಮೂರ್ತಿ ಎಂಥವರನ್ನೂ ಕೂಡ ಮೂಕವಿಸ್ಮಿತರನ್ನಾಗಿಸುತ್ತದೆ. ಇದರೊಂದಿಗೆ ದುರ್ಗಾದೇವಿಯ ಸಾನಿಧ್ಯದಿಂದ ಮಹತ್ವವನ್ನು ಹೊಂದಿದೆ. ಒಂದೇ ಗರ್ಭಗುಡಿಯಲ್ಲಿ ಬೇರೆ ಬೇರೆ ದೇವರ ಪೀಠಗಳಿಂದ ಕಂಗೊಳಿಸುವ ಈ ಭವ್ಯ ದೇಗುಲವು ನಿತ್ಯ ಪೂಜೆ, ವಾರ್ಷಿಕ ಪೂಜೆ ಹಾಗೂ ನವರಾತ್ರಿ ಪೂಜೆಗಳಿಂದ ಭಕ್ತರನ್ನು ಸೆಳೆಯುತ್ತಿದೆ. ಇದೇ ಸ್ಥಳದಲ್ಲಿ ಧರ್ಮದೈವಗಳಾದ ಧೂಮಾವತಿ, ಬಂಟ ಮತ್ತು ಪಂಜುರ್ಲಿ ನೆಲೆನಿಂತು ಕ್ಷೇತ್ರವನ್ನು ರಕ್ಷಣೆ ಮಾಡುತ್ತ ಬಂದಿವೆ.
ಸುಮಾರು ಐದು ಶತಮಾನಗಳ ಹಿಂದೆ ಪರಕೀಯರು ಶ್ರೀ ವೀರಭದ್ರ ದೇವರ ವಿಗ್ರಹವನ್ನು ಅಪಹರಿಸಲು ಯತ್ನಿಸಿದಾಗ ವಿಗ್ರಹವು ಅಲ್ಲಿಂದ ಕದಲದೆ ಇದ್ದಾಗ ಅವರು ಅಲ್ಲಿಯೇ ಬೊಬ್ಬಿಡಲಾರಂಭಿಸಿದರು. ರಾತ್ರಿ ವೇಳೆಯಲ್ಲಿ ಅವರ ಬೊಬ್ಬೆಯನ್ನು ಕೇಳಿದ ಸ್ಥಳೀಯ ಜನರು ನೋಡಿ ಅಲ್ಲಿಯ ಆಗಿನ ರಾಜ ಮನೆತನದ ಪಡುಬಿದ್ರಿ ಬೀಡಿನ ಅರಸರಲ್ಲಿ ವಿಷಯವನ್ನು ತಿಳಿಸಿದರು. ಅರಸರು ಅಲ್ಲಿಗೆ ಬಂದು ನೋಡಿದಾಗ ಅಪಹರಣಕಾರರು ಮಾತನಾಡಲು ಸಾಧ್ಯವಾಗದೆ ನರಳಾಡುತ್ತಿರುವುದನ್ನು ಕಂಡು ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿದಾಗ ಅವರು ಸಹಜಸ್ಥಿತಿಗೆ ಬಂದು ಅರಸರಲ್ಲಿ ಹಾಗೂ ದೇವರಲ್ಲಿ ಕ್ಷಮೆಯಾಚಿಸಿದರು ಅನಂತರ ಕ್ಷೇತ್ರದ ಪ್ರಾಯಶ್ಚಿತಗಳನ್ನು ನೆರವೇರಿಸಿ ಅಲ್ಲಿಂದ ಕಾಲ್ಕಿತ್ತರು.
ಶ್ರೀ ವೀರಭದ್ರ ದೇವಸ್ಥಾನವು ಸುಮಾರು ವರ್ಷಗಳಿಂದ ಜೀರ್ಣೋದ್ಧಾರವಾಗದೆ ಇದ್ದುದರಿಂದ ಅಂದಿನ ರಾಜರ ಹಿರಿತನದಲ್ಲಿ ದೇವಾಲಯವನ್ನು ನಿರ್ಮಿಸಿದರು. ಅಂದಿನಿಂದ ಮಾಸಿಕ ಪೂಜೆಗೊಳ್ಳುತ್ತಿದ್ದ ದೇವರಿಗೆ ಕಾರಣಾಂತರಗಳಿಂದ ಪೂಜಾಕಾರ್ಯ 1985 ಜನವರಿ 14ರಂದು ಶಂಕುಸ್ಥಾಪನೆಮಾಡಿ ಮೇ ತಿಂಗಳ ತಾ. 14, 15, 16ರಂದು ಶ್ರೀ ವೀರಭದ್ರ ದೇವರ ಪುನರ್ ಪ್ರತಿμÉ್ಠ ಬ್ರಹ್ಮಕಲಶಾಭಿμÉೀಕಗಳು ಜರುಗಿದವು. ಇದರೊಂದಿಗೆ ಧೂಮಾವತಿ ಬಂಟ ಪಂಜುರ್ಲಿ ದೈವಸ್ಥಾನಗಳ ಜೀರ್ಣೋದ್ಧಾರ ಪ್ರತಿμÉ್ಠ ಕಾರ್ಯಗಳು ನಡೆದವು. ಹನಿ ಗೂಡಿದರೆ ಹಳ್ಳವವೆಂಬಂತೆ ಊರ ಪರವೂರ ಭಕ್ತಾಭಿಮಾನಿಗಳ ಸಹಾಯದಿಂದ 50 ಸಾವಿರ ರೂ. ವೆಚ್ಚದಲ್ಲಿ ಈ ಕಾರ್ಯವು ಕೇವಲ 5 ತಿಂಗಳಲ್ಲಿ ಪೂರ್ಣಗೊಂಡಿರುವುದು ಶ್ರೀ ದೇವರ ಕೃಪೆಯಿಂದ ಸಾಧ್ಯವಾಯಿತೆಂಬುದು ಎಲ್ಲರ ಗಮನಕ್ಕೆ ಬಂದಿರುವುದು. ಯಾವುದೇ ಆಡಂಬರಗಳಿಲ್ಲದೆ ಪೂಜಾಕಾರ್ಯಗಳು ಶಿಬರೂರು ತಂತ್ರಿಗಳ ನಿರ್ದೇಶನದಂತೆ ದೇವಳದ ಅರ್ಚಕರಾದ ರಂಗಣ್ಣ ಭಟ್ಟರ ಮುಖಾಂತರ ನೆರವೇರಿಸಲಾಯಿತು.
ಸದ್ರಿ ದೇವಾಲಯವು ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿರುವುದರಿಂದ ದೇವಾಲಯಕ್ಕೆ ಸಂಬಂಧಪಟ್ಟ ಜಾಗವು ರಸ್ತೆಗೆ ಮೀಸಲಾಗಿರುವುದರಿಂದ ದೇವಾಲಯದ ಸ್ಥಳಾಂತರ ಅನಿವಾರ್ಯವಾಗಿದೆ. ಅತಿ ಕನಿಷ್ಠ ಸಂಖ್ಯೆಯ ಪದ್ಮಶಾಲಿ ಕುಟುಂಬ ವರ್ಗವು ಆರಾಧನೆ ಮಾಡಿಕೊಂಡು ಬರುತ್ತಿರುವ ಶ್ರೀ ಕ್ಷೇತ್ರದ ಆರ್ಥಿಕಸ್ಥಿತಿಯು ಉತ್ತಮವಾಗಿರದಿರುವುದರಿಂದ ನೂತನ ದೇಗುಲದ ನಿರ್ಮಾಣ ಕಾರ್ಯಕ್ಕೆ ಸ್ಥಳೀಯರ ಹಾಗೂ ಊರ ಪರವೂರ ಸಮಾಜಸ್ಥರೊಂದಿಗೆ ಕೂಡಿಕೊಂಡು ಒಂದು ಸಾಹಸದ ಕೆಲಸವನ್ನು ಕೈಗೆತ್ತಿಕೊಳ್ಳಬೇಕಾಗಿದೆ. ನೂತನ ದೇಗುಲಕ್ಕೆ ಸಂಬಂಧಪಟ್ಟಂತೆ ದಿನಾಂಕ 15-10-2014 ರಂದು ತಾಂಬೂಲ ಪ್ರಶ್ನೆಯನ್ನು ವಿದ್ವಾನ್ ಶ್ರೀ ಮುರಲೀಧರ ತಂತ್ರಿಗಳ ಮುಖೇನ ತಿಳಿದು ಪ್ರಾರಂಭದಲ್ಲಿ ಮೃತ್ಯುಂಜಯ ಹೋಮ, ಅಘೋರ ಹೋಮ, ಪ್ರೇತ ಉಚ್ಚಾಟನೆ, ಪ್ರಾಯಶ್ಚಿತಾದಿಗಳನ್ನು ಈ ತನಕ ಪೂರೈಸಲಾಗಿದ್ದು ನವೀಕರಣ ಕಾರ್ಯ ಮತ್ತು ಬ್ರಹ್ಮಕಲಶಾಭಿμÉೀಕ ನಡೆಯಬೇಕಾಗಿದ್ದು ಸದ್ರಿ ಕಾರ್ಯಕ್ರಮ ನಿರ್ವಹಣೆಗಾಗಿ ಭಕ್ತಾದಿಗಳಿಂದ ಧನ ಸಂಗ್ರಹ ಕಾರ್ಯಕ್ಕೆ ಪ್ರವೃತ್ತರಾಗಿದ್ದೇವೆ. ಈ ಸಂಬಂಧ ಈಗಾಗಲೇ ಜೀರ್ಣೋದ್ಧಾರ ಮಹಾನ್ ಕಾರ್ಯಕ್ಕೆ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚ ತಗಲುವ ಅಂದಾಜು ಮಾಡಲಾಗಿದೆ. ಭಕ್ತಾಭಿಮಾನಿಗಳ ಸಹಕಾರ ಮತ್ತು ಶ್ರೀ ದೇವರ ಅನುಗ್ರಹದಿಂದ ಈ ಸತ್ಕಾರ್ಯವು ಶೀರ್ಘವಾಗಿ ಪೂರ್ಣಗೊಳ್ಳಲೆಂದು ಹಾರೈಕೆಗಳು.