ಶ್ರೀ ವೀರಭದ್ರ ಮಹಾಮಾಯೀ ದೇವಸ್ಥಾನ ಬಂಗ್ರಮಂಜೇಶ್ವರ

Share with your family and friends

Loading

ಶ್ರೀ ವೀರಭದ್ರ ಮಹಾಮಾಯೀ ದೇವಸ್ಥಾನ ಬಂಗ್ರಮಂಜೇಶ್ವರವು ಪಯಸ್ವಿನೀ ನದಿಯ ಪುಣ್ಯ ಜಲದಿಂದ ಪುನೀತವಾದ ಕಾಸರಗೋಡು ತಾಲೂಕಿನ ತುಳುನಾಡಿಗೆ ಸೇರಿದ ಪ್ರಕೃತಿರಮಣೀಯ ಸ್ಥಳವಾಗಿರುವುದು. ಈ ಪ್ರದೇಶವು ಹಿಂದೆ ಜೈನ ಅರಸರ ಆಳ್ವಿಕೆಯಲ್ಲಿತ್ತೆಂದೂ ಬಂಗರ ಎಂಬ ವಂಶಕ್ಕೆ ಸೇರಿದ ಅರಸರು ಈ ದೇವಸ್ಥಾನವನ್ನು ನಿರ್ಮಿಸಿರುವರೆಂದು ಐತಿಹ್ಯ. ಕಾಲಾಂತರದಲ್ಲಿ ಸ್ಥಳೀಯ ನಿವಾಸಿಗಳಾದ ಸೆಟ್ಟಿ/ಸೆಟ್ಟಿಗಾರ ಸಮುದಾಯದವರಿಗೆ ಈ ದೇವಸ್ಥಾನವನ್ನು ಹಾಗೂ ಇದಕ್ಕೆ ಸಂಬಂಧಪಟ್ಟ ಭೂ ಹಿಡುವಳಿಯ ಸ್ವಾಧೀನತೆಯನ್ನು ಕೊಟ್ಟಿರುವುದಾಗಿ ತಿಳಿದು ಬರುವುದು.

ಶ್ರೀ ವೀರಭದ್ರ ದೇವರು ಇಲ್ಲಿಯ ಆರಾಧ್ಯದೇವರು. ಶ್ರೀ ದುರ್ಗಾಪರಮೇಶ್ವರೀ, ಶ್ರೀ ಅನ್ನಪೂರ್ಣೇಶ್ವರೀ ಮತ್ತು ಮಹಾಮ್ಮಾಯೀ ದೇವಿಯವರನ್ನು ಪೂಜಿಸಲಾಗುತ್ತಿದೆ. ಪರಿವಾರ ದೈವಗಳಾದ ಶ್ರೀ ಮಲರಾಯ, ಶ್ರೀ ಧೂಮಾವತಿ, ಶ್ರೀ ಬಂಟ ಹಾಗೂ ಶ್ರೀ ಚಾಮುಂಡೇಶ್ವರಿಗಳೊಂದಿಗೆ ಶ್ರೀ ಕೊರತಿ, ಶ್ರೀ ಗುಳಿಗ ಮತ್ತು ಶ್ರೀ ಬೊಬ್ಬರ್ಯ ದೈವಗಳಿಗೆ ಪ್ರತ್ಯೇಕಗುಡಿ ಇರುವುದು. ದಿನಾಂಕ 02-02-2004ರಂದು ಶ್ರೀ ವೀರ ಮಹಾಗಣಪತಿ ದೇವರು ಪ್ರತಿμÁ್ಠಪನೆಗೊಂಡು ಭಕ್ತರಿಂದ ಆರಾಧಿಸಲ್ಪಡುತ್ತಿದ್ದಾರೆ. ದೇವಸ್ಥಾನದ ದ್ವಾರದ ಮುಂದೆ ಬೃಹದಾಕಾರದಲ್ಲಿ ಬೆಳೆದು ನಿಂತಿರುವ ಅಶ್ವತ್ಥ ವೃಕ್ಷವು ದೇವರ ವಿಶೇಷ ಸನ್ನಿಧಾನವನ್ನು ಸಂಕೇತಿಸುತ್ತದೆ.

ಜೀರ್ಣಾವಸ್ಥೆಯಲ್ಲಿದ್ದ ಈ ದೇವಾಲಯವನ್ನು 2004ನೇ ವರ್ಷದಲ್ಲಿ ಶಿಲಾಮಯವಾಗಿ ಪುನರ್ ನಿರ್ಮಾಣ ಮಾಡಲಾಯಿತು. ಈ ನಿರ್ಮಾಣಕಾರ್ಯದಲ್ಲಿ ಕೂಡುಕಟ್ಟಿಗೆ ಸೇರಿದ ಸಮಾಜ ಬಂಧುಗಳಲ್ಲದೆ ಊರ, ಪರವೂರ ಭಕ್ತಾಭಿಮಾನಿಗಳು ಸ್ವಯಂಸೇವಕರಾಗಿ ಬಹುಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ರೀತಿ ಭವ್ಯವೂ, ಸುಂದರವೂ ಆಗಿ ನಿರ್ಮಾಣಗೊಂಡ ದೇವಸ್ಥಾನದಲ್ಲಿ ದಿನಾಂಕ 29-01-2004 ರಿಂದ 04-02-2004ರ ವರೆಗೆ ವೈದಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶಿಸ್ತುಬದ್ಧವಾಗಿಯೂ, ವೈಭವೋಪೇತವಾಗಿಯೂ ಬ್ರಹ್ಮಕಲಶಾಭಿμÉೀಕ ನಡೆದಿರುತ್ತದೆ.

2008ನೇ ಇಸವಿಯಲ್ಲಿ ಎರಡನೆಯ ಹಂತದ ಜೀರ್ಣೋದ್ಧಾರಕೈಗೆತ್ತಿಕೊಂಡು ಶ್ರೀ ಮಹಾಮ್ಮಾಯೀ ಅಮ್ಮನವರಿಗೆ, ಶ್ರೀ ಧೂಮಾವತಿ ಮತ್ತು ಶ್ರೀ ಬಂಟ ದೈವಗಳಿಗೆ ಮತ್ತು ಶ್ರೀ ಚಾಮುಂಡೇಶ್ವರೀ ದೇವಿಗೆ ನೂತನ ಗುಡಿಗಳನ್ನು ನಿರ್ಮಿಸಿರುವುದಲ್ಲದೆ ಕೊರತಿ, ಗುಳಿಗ ಮತ್ತು ಬೊಬ್ಬರ್ಯ ದೈವಗಳ ಕಟ್ಟೆಗಳನ್ನು ನಿರ್ಮಾಣ ಮಾಡಲಾಯಿತು. ಜೊತೆಗೆ ನಾಗನ ಕಟ್ಟೆ ಮತ್ತು ಭಂಡಾರಚಾವಡಿಯನ್ನು ನಿರ್ಮಾಣ ಮಾಡಲಾಯಿತು.

ತದನಂತರ 2016ನೆಯ ಫೆಬ್ರವರಿ ತಿಂಗಳ 11, 12, 13 ಮತ್ತು 14ರ ದಿನಾಂಕಗಳಲ್ಲಿ ಪುನರ್ ಪ್ರತಿμÁ್ಠ ಬ್ರಹ್ಮಕಲಶಾಭಿμÉೀಕವನ್ನು ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಅದೇ ಸಮಯದಲ್ಲಿ ನಡೆದ ಅಷ್ಟಮಂಗಲ ಚಿಂತನೆಯಲ್ಲಿ ಕಂಡುಬಂದಂತೆ, ಇದುವರೆಗೆ ಶ್ರೀ ವೀರಭದ್ರ ದೇವರ ಗರ್ಭಗುಡಿಯಲ್ಲಿ ಒಂದೇ ಪಾಣಿಪೀಠದಲ್ಲಿ ಆರಾಧಿಸಿ ಕೊಂಡುಬಂದಿರುವ ಶ್ರೀ ದುರ್ಗಾಪರಮೇಶ್ವರಿಗೆ ಕ್ಷೇತ್ರದ ಒಳಾಂಗಣದಲ್ಲೆ ಪ್ರತ್ಯೇಕಗುಡಿ ಹಾಗೂ ಆದಿಯಿಂದಲೂ ಶ್ರೀ ಕ್ಷೇತ್ರದಲ್ಲಿ ನೆಲೆನಿಂತಿರುವುದೆನ್ನಲಾದ ಶ್ರೀ ಅನ್ನಪೂರ್ಣೇಶ್ವರಿಗೆ ಗುಡಿ ನಿರ್ಮಾಣ ಮಾಡಿಕೊಂಡು, ಶ್ರೀ ಶಕ್ತಿಗಳ ಪ್ರತಿμÉ್ಠಯ ಕಾರ್ಯಗಳು ನೆರವೇರಿದವು. ಇದರೊಂದಿಗೆ ಶ್ರೀ ವೀರಭದ್ರ ದೇವರಿಗೆ ಬಲಿ ಉತ್ಸವ, ಪರಿವಾರ ದೈವಗಳಿಗೆ ನೇಮ ಕೋಲಾದಿ ಸೇವೆಗಳನ್ನು ಯಥಾಪ್ರಕಾರ ನಡೆಸಲಾಗುತ್ತದೆ. ಜೊತೆಗೆ ನಾಗನ ಕಟ್ಟೆ ಮತ್ತು ಭಂಡಾರಚಾವಡಿಯನ್ನು ನಿರ್ಮಾಣ ಮಾಡಲಾಯಿತು. ಶ್ರೀ ಕ್ಷೇತ್ರದಲ್ಲಿ ಜರಗುವ ಸಭೆ ಸಮಾರಂಭ ಮತ್ತು ಧಾರ್ಮಿಕ ಗೋಷ್ಠಿಗಳನ್ನು ವ್ಯವಸ್ಥೆಗೊಳಿಸಲು ಅನುಕೂಲವಾಗುವಂತೆ ಸಭಾಭವನದ ಯೋಜನೆಗೆ 2009ನೇ ಇಸವಿಯಲ್ಲಿ ಪ್ರಾರಂಭಿಸಿ 2013-14ರ ಸಾಲಿನಲ್ಲಿ ಪೂರ್ಣಗೊಳಿಸಲಾಗಿದೆ.

ಪ್ರಸ್ತುತ ಶ್ರೀ ಕ್ಷೇತ್ರದಲ್ಲಿ ದಿನನಿತ್ಯ ತ್ರಿಕಾಲ ಪೂಜೆ, ಪ್ರತಿ ತಿಂಗಳ ಹುಣ್ಣಿಮೆಯಂದು ಸಾಮೂಹಿಕ ಸತ್ಯನಾರಾಯಣ ಪೂಜೆ, ಸಂಕಷ್ಟಚತುರ್ಥಿಯ ದಿನದಂದು ಅಪ್ಪದ ಪೂಜೆ, ಚೌತಿಯತಿಥಿಯಂದು ಗಣಹೋಮ ಇತ್ಯಾದಿ ಸೇವೆಗಳು ನಡೆಯುತ್ತವೆ. ಪ್ರತಿ ಬುಧವಾರದಂದು ಸಾಯಂಸಂಧ್ಯಾಕಾಲದಲ್ಲಿ ಭಜನೆಯು ಸಮಾಜಬಂಧುಗಳ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಯುತ್ತದೆ. ನವರಾತ್ರಿಯ 9 ದಿನಗಳಲ್ಲಿ ಶಕ್ತಿಸ್ವರೂಪಿಣಿಯಾದ ಶ್ರೀ ದೇವಿಯ ವಿಶೇಷ ಆರಾಧನೆ ನಡೆಯುತ್ತದೆ. ಅಲ್ಲದೆ ಹತ್ತನಾಜೆ, ದೀಪಾವಳಿ ನಾಗರಪಂಚಮಿ ತೆನೆಹಬ್ಬ ಇತ್ಯಾದಿಗಳನ್ನು ವಿಧಿವತ್ತಾಗಿ ಆಚರಿಸಲಾಗುತ್ತಿದೆ. ಎಲ್ಲ ಉತ್ಸವಗಳ ಕಾಲದಲ್ಲೂ ದಿನನಿತ್ಯವೂ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯುತ್ತಿರುವುದು.

ಕರ್ನಾಟಕ ಮತ್ತು ಕೇರಳದ ಗಡಿನಾಡ ವ್ಯಾಪ್ತಿಯುಳ್ಳ ದೇವಸ್ಥಾನದ ಕೂಡುಕಟ್ಟಿನ ಪ್ರದೇಶವು ಏಳು ಗ್ರಾಮಗಳಾಗಿ ವಿಭಾಗಿಸಲ್ಪಟ್ಟಿದ್ದು ಗ್ರಾಮಗುರಿಕಾರರ ಉಸ್ತುವಾರಿಯಲ್ಲಿರುತ್ತದೆ. ಅಲ್ಲದೆ ಭಂಡಾರ ಮನೆಯ ಪ್ರತಿನಿಧಿಗಳಿಗೂ ಗುರಿಕಾರರಿಗೂ ಮಾನ್ಯತೆಯಿದ್ದು ಒಟ್ಟು ಎಂಟು ಜನ ಗುರಿಕಾರರು ದೇವಸ್ಥಾನದ ಕಾರ್ಯಗಳಲ್ಲಿ ಮಾರ್ಗದರ್ಶನ ಮಾಡುತ್ತಾರೆ. ಇವರೊಂದಿಗೆ 5 ಜನ ದೈವಗಳ ಪೂಜಾರಿಗಳು ಮತ್ತು ಇಬ್ಬರು ಮುಕ್ಕಾಲ್ದಿಯವರು ಕ್ಷೇತ್ರದ ಸೇವೆಯಲ್ಲಿ ನಿರತರಾಗಿರುತ್ತಾರೆ. ಜೊತೆಗೆ ಪ್ರಜಾಪ್ರಭುತ್ವತತ್ವದಂತೆ ಚುನಾಯಿತವಾದ ಗ್ರಾಮ ಸಮಿತಿಗಳಿದ್ದು ದೇವಸ್ಥಾನದ ಯೋಜನೆಗಳನ್ನು ಅನುμÁ್ಠನ ಮಾಡಲು ನೆರವಾಗುತ್ತವೆ.

ಶ್ರೀ ಕ್ಷೇತ್ರದ ಆಡಳಿತ ನಿರ್ವಹಿಸಲು ಪ್ರತಿವರ್ಷ ಸದಸ್ಯಬಾಂಧವರಿಂದ ಆರಿಸಲ್ಪಟ್ಟ ಆಡಳಿತ ಮಂಡಳಿ ಇರುತ್ತದೆ. ಗುರಿಕಾರರು, ಪೂಜಾರಿಗಳು ಮತ್ತು ಮುಕ್ಕಾಲ್ದಿಯವರು ಈ ಸಮಿತಿಯ ಖಾಯಂ ಸದಸ್ಯರಾಗಿರುತ್ತಾರೆ. ಅಲ್ಲದೆ ಎಲ್ಲ ಗ್ರಾಮಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರಾಗಿರುತ್ತಾರೆ. ಇದರೊಂದಿಗೆ ಯುವಕರ ಶಕ್ತಿಯನ್ನು ಕ್ರೋಢೀಕರಿಸಿ ದೇವಸ್ಥಾನದ ಕಾರ್ಯದಲ್ಲಿ ತೊಡಗಿಸಲು ಅನುಕೂಲವಾಗುವಂತೆ ಯುವವೇದಿಕೆ ಇರುತ್ತದೆ. ಪ್ರತಿವರ್ಷ ಜರಗುವ ಕ್ರೀಡಾಕೂಟವನ್ನು ಯುವವೇದಿಕೆ ಸಂಘಟಿಸುತ್ತಿದ್ದು ಮಹಾಸಭಾದ ಕ್ರೀಡಾಕೂಟದಲ್ಲಿ ದೇವಸ್ಥಾನದ ಸದಸ್ಯರ ಭಾಗವಹಿಸುವಿಕೆಯ ಹೊಣೆಯನ್ನು ನಿರ್ವಹಿಸುತ್ತಿದೆ. ಮಹಿಳೆಯರ ಸಂಘಟನೆಯಾದ ಮಹಿಳಾವೇದಿಕೆಯು ಸಕ್ರಿಯವಾಗಿದ್ದು ಪ್ರತಿವರ್ಷವೂ ವರಮಹಾಲಕ್ಷ್ಮೀ ವ್ರತಾಚರಣೆಯೇ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ.