ರಂಗೋಲಿ , ಚಿತ್ರಕಲೆ , ಶುಭಾಶಯ ಪತ್ರ ತಯಾರಿಕೆ, ಕಸೂತಿ , ಕರ ಕುಶಲ ವಸ್ತುಗಳ ತಯಾರಿಕೆ ,ಮದರಂಗಿ ಹಾಕುವುದು….ಇತ್ಯಾದಿ ಹವ್ಯಾಸಗಳನ್ನು ಬೆಳೆಸಿಕೊಂಡಿರುವ ಬಿ. ಇ. ಪದವೀಧರೆ ಶ್ರೀಮತಿ ವಿದ್ಯುಲ್ಲತಾ ಬಸ್ರೂರಿನ ಶ್ರೀ ನವೀನ ಚಂದ್ರ ಇವರ ಪತ್ನಿ. ಪ್ರಸ್ತುತ ಬೆಂಗಳೂರಿನಲ್ಲಿ ಇರುವ ಇವರಿಗೆ ಧೃತಿ ಎನ್ನುವ ಆರು ವರ್ಷದ ಮಗಳಿದ್ದಾಳೆ. ಶ್ರೀಮತಿ ವಿದ್ಯುಲ್ಲತಾ ಸಾಲಿಕೇರಿಯ ಶ್ರೀ ರಾಘವ ಶೆಟ್ಟಿಗಾರ ಮತ್ತು ಶ್ರೀಮತಿ ಶೋಭಾವತಿಯವರ ಸುಪುತ್ರಿ.
ಎಳವೆಯಿಂದಲೇ ಬಿಡುವಿನ ಸಮಯದಲ್ಲಿ ಏನಾದರೊಂದು ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ವಿದ್ಯುಲ್ಲತಾ ಅವರ ಕಲಾಕೃತಿಗಳು ಅಮೋಘ. ತಾಯಿ ಶ್ರೀಮತಿ ಶೋಭಾ ರಾಘವ ಅವರೂ ಇಂತಹ ಹವ್ಯಾಸಗಳನ್ನು ಇರಿಸಿಕೊಂಡಿದ್ದವರು. ವಿದ್ಯುಲ್ಲತಾ ಈ ವಿಚಾರದಲ್ಲಿ ಅಮ್ಮನಿಗಿಂತಲೂ ಚಾಣಾಕ್ಷೆ. ವಿದ್ಯುಲ್ಲತಾರ ಪ್ರತಿಯೊಂದು ಹವ್ಯಾಸದಲ್ಲೂ ವಿಶೇಷವಾದ ಶ್ರದ್ಧೆ ಎದ್ದು ಕಾಣುವುದು.
ಮದುವೆಯ ಆನಂತರವು ಆಕೆ ತನ್ನೀ ಹವ್ಯಾಸಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾಳೆ. ಪತಿ ಮತ್ತು ಮನೆಯವರ ಪ್ರೋತ್ಸಾಹ ಆಕೆಯ ಉತ್ಸಾಹ ಇಮ್ಮಡಿಗೊಳಿಸಿರುವುದರಲ್ಲಿ ಎರಡು ಮಾತಿಲ್ಲ. ಇನ್ನಷ್ಟು ಹೊಸ ಹೊಸ ಆವಿಷ್ಕಾರ ಈಕೆಯ ಹವ್ಯಾಸಗಳ ಮೂಲಕ ಮೂಡಿ ಬರಲಿ.
ಶುಭ ಹಾರೈಕೆಗಳು ವಿದ್ಯುಲ್ಲತಾ.
ಶೋಭಾ ಹರಿಪ್ರಸಾದ ಶೆಟ್ಟಿಗಾರ
( ಮಹಿಳಾ ವೇದಿಕೆಯಿಂದ)