ಮಹಾಸಭಾದಲ್ಲಿ ಕಾರ್ಯದರ್ಶಿಯಾಗಿ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಹಳೆಯಂಗಡಿಯ ಕೀರ್ತಿಶೇಷ ಕೇಶವ ಶೆಟ್ಟಿಗಾರ್ ಹಾಗೂ ಉಪಾಧ್ಯಕ್ಷರಾಗಿದ್ದ ಶ್ರೀಮತಿ ಲಲಿತಾವತಿ ಶೆಟ್ಟಿಗಾರ್ ದಂಪತಿಗಳ ಸುಪುತ್ರರಾದ ಉಮಾನಾಥ ಶೆಟ್ಟಿಗಾರ್ ಮಂಗಳೂರುರವರು ಜನವರಿ 17ನೆಯ ದಿನಾಂಕದಂದು ನಿಧನರಾಗಿರುತ್ತಾರೆ. ಮೃತ ಉಮಾನಾಥ ಶೆಟ್ಟಿಗಾರರು ಭಾರತೀಯ ಜನತಾ ಪಾರ್ಟಿಯ ಮಂಗಳೂರು ದಕ್ಷಿಣ ಮಂಡಲ ಕಚೇರಿ ಕಾರ್ಯದರ್ಶಿಯಾಗಿಯೂ ವಿವಿಧ ಹುದ್ದೆಗಳಲ್ಲಿಯೂ ನಿಸ್ಪ್ರಹ ಸೇವೆ ಸಲ್ಲಿಸಿದ ಕರ್ಮಯೋಗಿಗಳು. ಸ್ನೇಹಶೀಲರಾದ ಸಾಧು ಸ್ವಭಾವದ ಮತ್ತು ಸಮಾಜಮುಖಿ ವ್ಯಕ್ತಿತ್ವದ ಉಮಾನಾಥರ ಅಗಲುವಿಕೆಯು ಸಮಾಜವಲಯವನ್ನು ದುಃಖ ತಪ್ತವಾಗಿಸಿದೆ. ದಿವ್ಯಾತ್ಮಕ್ಕೆ ಕುಲದೇವರಾದ ವೀರಭದ್ರನು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಮತ್ತು ವಿದ್ಯಾವರ್ಧಕ ಸಂಘ.
ಅಂತ್ಯಸಂಸ್ಕಾರ ವಿಧಿಗಳು ನಾಳೆ ದಿನಾಂಕ19-01-2025 ಪೂರ್ವಾಹ್ನ 9:00 ಗಂಟೆಯಿಂದ 10 ಗಂಟೆಯ ಅವಧಿಯಲ್ಲಿ ಮೃತರ ಸ್ವಗೃಹದಲ್ಲಿ ನಡೆಯುವುದಾಗಿ ಕುಟುಂಬದ ಮೂಲಗಳು ತಿಳಿಸುವೆ.