ಶ್ರೀ ವೀರಭದ್ರ ಯಕ್ಷಗಾನ ಕಲಾಮಂಡಳಿ, ಕಿನ್ನಿಮೂಲ್ಕಿ ಉಡುಪಿ ಇವರ 16 ನೇ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 25-01-2025 ಶನಿವಾರ ಸಂಜೆ 5:3೦ ರಿಂದ ಸಭಾಕಾರ್ಯಕ್ರಮ ಹಾಗು ರಾತ್ರಿ 9:30 ರಿಂದ ಯಕ್ಷಗಾನ ಬಯಲಾಟ – “ಪಂಚವಟಿ” ಜರುಗಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರರಾಗಿರುವ ಶ್ರೀ ಪ್ರಭಾಶಂಕರ ಪದ್ಮಶಾಲಿ ಇವರು ವಹಿಸಲಿದ್ದು, ಮುಖ್ಯ ಅಭ್ಯಾಗತರಾಗಿ ಶ್ರೀ ರವಿ ಶೆಟ್ಟಿಗಾರ್ ಕಾರ್ಕಳ, ಅಧ್ಯಕ್ಷರು, ದ. ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ. ), ಮಂಗಳೂರು ಜೊತೆಗೂಡಲಿದ್ದಾರೆ. ಯಕ್ಷಗಾನದ ಗುರುಗಳಾದ ಶ್ರೀ ನಾರಾಯಣ ಪ್ರಭು, ಗುಳ್ಮೆ ಇವರಿಗೆ ಗುರುವಂದನೆ ಕಾರ್ಯಕ್ರಮವಿದ್ದು, ಶ್ರೀ ನಾಗರಾಜ ಕೆ, ಅಧ್ಯಕ್ಷರು, ಪದ್ಮಶಾಲಿ ತರುಣ ವೃಂದ, ಕಿನ್ನಿಮೂಲ್ಕಿ, ಉಡುಪಿ ಇವರು ಉಪಸ್ಥಿತಿ ಇರಲಿದೆ.