ದ.ಕ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.) ಉಡುಪಿ

Share with your family and friends

Loading

ದ.ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘವು 1990ರಲ್ಲಿ ಸ್ಥಾಪನೆಯಾಗಿ 2015ರಲ್ಲಿ ಬೆಳ್ಳಿಹಬ್ಬವನ್ನು ಆಚರಿಸಿತು. ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾದ ಸಹೋದರ ಸಂಸ್ಥೆಯಾಗಿ ಜನಿಸಿದ ಈ ಸಂಸ್ಥೆಯು ಅವಿಭಜಿತ ದ.ಕ. ಜಿಲ್ಲೆಯ ಅರ್ಹ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನಸಹಾಯ ನೀಡಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಘನಉದ್ದೇಶವನ್ನು ಹೊಂದಿರುವುದು. ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾವು ಬಹಳ ವರ್ಷಗಳಿಂದ ಸಾಲರೂಪದಲ್ಲಿ ವಿದ್ಯಾರ್ಥಿವೇತನ ನೀಡುತ್ತಿದ್ದು ಅರ್ಹ ಸ್ವಸಮಾಜದ ವಿದ್ಯಾರ್ಥಿಗಳಿಗೆ 1989 ರಿಂದ ಉಚಿತವಾಗಿ ವಿದ್ಯಾರ್ಥಿವೇತನ ನೀಡಲು ಪ್ರಾರಂಭಿಸಿದಾಗ ವಿಶ್ವಸ್ಥ ನಿಧಿಯನ್ನು ಸ್ಥಾಪಿಸುವುದು ಮಹಾಸಭೆಗೆ ಅನಿವಾರ್ಯವಾಯಿತು. ವಿಶ್ವಸ್ಥನಿಧಿಗೆ ದೇಣಿಗೆ ನೀಡುವವರು 80ಜಿ ಆದಾಯ ತೆರಿಗೆ ವಿನಾಯಿತಿ. ಬಯಸಿದ್ದರಿಂದ 1989ರಲ್ಲಿ ಕಾರ್ಯಕಾರಿ ಸಮಿತಿಯವರ ಅಪೇಕ್ಷೆಯಂತೆ ದಿ| ಎಸ್. ಶ್ರೀನಿವಾಸ ಶೆಟ್ಟಿಗಾರರು ಅಧ್ಯಕ್ಷರಾಗಿದ್ದಾಗ ಶ್ರೀ ಸಿ.
ಪ್ರಭಾಕರ್‍ರವರ ಸಂಚಾಲಕತ್ವದಲ್ಲಿ ತಾ. 04-03-1970ರಂದು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಕಲ್ಲಾಪು ಹಳೆಯಂಗಡಿಯಲ್ಲಿ ವಿದ್ಯಾವರ್ಧಕ ಸಂಘ ಸ್ಥಾಪನೆಗೆ ಸಮಾನ ಮನಸ್ಕರ ಸಭೆಯಲ್ಲಿ ದಿ| ಕೆ. ಬ್ರಹ್ಮಾನಂದರ ಅಧ್ಯಕ್ಷತೆಯಲ್ಲಿ 15 ಮಂದಿ ಮಹಾಸಭಾದ ಮುಖಂಡರ ಸಮ್ಮುಖದಲ್ಲಿ ಸಂಘವೊಂದನ್ನು ರಚಿಸಿ ಅದನ್ನು ನೋಂದಣಿ ಮಾಡಬೇಕೆಂದು ನಿರ್ಣಯಿಸಲಾಯಿತು. ಹಾಗೂ ಮಂಗಳೂರಿನ ನೊಂದಾವಣೆ ಕಚೇರಿಯಲ್ಲಿ ದಿನಾಂಕ 10-05-1990ರಂದು ನೊಂದಣಿ ಮಾಡಲಾಯಿತು. ದಿನಾಂಕ 10-06-1991ರಲ್ಲಿ ಕಿನ್ನಿಮುಲ್ಕಿ ಶ್ರೀ ವೀರಭದ್ರ ಕಲಾಭವನದಲ್ಲಿ ನಡೆದ ಉದ್ಘಾಟನ ಸಮಾರಂಭದಲ್ಲಿ ದಿ| ಕೆ. ಬ್ರಹ್ಮಾನಂದರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಂಬಯಿ ಪದ್ಮಶಾಲಿ ಎಜುಕೇಶನ್ ಸೊಸೈಟಿಯ ಆಗಿನ ಅಧ್ಯಕ್ಷರಾದ ದಿ| ಶ್ರೀ ಜೀವಿ ಶೆಟ್ಟಿಗಾರರಿಂದ ಉದ್ಘಾಟಿಸಲ್ಪಟ್ಟಿತು.

ರಾಮಕೃಷ್ಣ ವಿದ್ಯಾರ್ಥಿನಿಲಯ ನಿಟ್ಟೆ
ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಅರುವತ್ತನೆಯ ವರ್ಷದ ಸಮಾರಂಭದ ಸಂದರ್ಭದಲ್ಲಿ ನಿಟ್ಟೆಯಲ್ಲಿ ವಿದ್ಯಾವರ್ಧಕ ಸಂಘದ ಹೆಸರಿನಲ್ಲಿ ಒಂದು ವಿದ್ಯಾರ್ಥಿನಿಲಯ ಸ್ಥಾಪಿಸಿ 07-06-2009 ರಂದು ಉದ್ಘಾಟನೆಗೊಂಡಿರುವುದು. ವಿದ್ಯಾವರ್ಧಕ ಸಂಘವು ನಿಟ್ಟೆಯಲ್ಲಿ 80 ಸೆಂಟ್ಸ್ ಸ್ವಂತ ಜಾಗ ಹೊಂದಿದ್ದು ಸದ್ಯಕ್ಕೆ ಯಾವುದೇ ಆದಾಯವು ಅದರಿಂದ ಬರುತ್ತಿಲ್ಲ. 80 ಸೆಂಟ್ಸ್ ಜಾಗವು ದಿ| ಶ್ರೀ ರಾಮಕೃಷ್ಣ ಶೆಟ್ಟಿಗಾರ್ ನಿಟ್ಟೆ ಇವರಿಂದ ಬಂದಿರುತ್ತದೆ.

ದಿ| ಶ್ರೀ ರಾಮಕೃಷ್ಣ ಶೆಟ್ಟಿಗಾರರಿಂದ ಬಂದ 80 ಸೆಂಟ್ಸ್ ಜಾಗವು ಕೃಷಿ ಭೂಮಿ ಆಗಿದ್ದ ಕಾರಣ ಅದನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆಗೊಳಿಸಬೇಕಾಗಿತ್ತು. ಅದಕ್ಕಾಗಿ ಶ್ರೀ ನೋಣಯ್ಯ ಶೆಟ್ಟಿಗಾರ್ ಸಂಗಬೆಟ್ಟು ಸಿದ್ದಕಟ್ಟೆ ಇವರು ಮುಂದೆ ಬಂದಾಗ ತಾ 13-11-2006 ರಲ್ಲಿ ರಾಮಕೃಷ್ಣ ಶೆಟ್ಟಿಗಾರರು ಜಾಗವನ್ನು ನೋಣಯ್ಯ ಶೆಟ್ಟಿಗಾರರಿಗೆ ಮಾರಾಟ ಮಾಡಿದರು. 08-01-2007ರಲ್ಲಿ ಕೃಷಿಯೇತರ ಭೂಮಿಗೆ ಬದಲಾಯಿಸಲು ಅರ್ಜಿ ಸಲ್ಲಿಸಲಾಯಿತು. ರೂ 32,000/- ಫೀಸ್ ಕಟ್ಟಲಾಯಿತು. ತಾ. 14-05-2007ರಲ್ಲಿ ಕೃಷಿಯೇತರ ಭೂಮಿ ಆಗಿ ಮಂಜೂರಾಯಿತು. ಜಾಗವನ್ನು 2 ಬಾರಿ ಮಾರಾಟ ಮಾಡಿದ ಹಾಗೆ ಮಾಡಲಾದರೂ ಸರಕಾರದ ನಿಯಮದಂತೆ ಮಾರಾಟ ಮೌಲ್ಯವನ್ನು ತೋರಿಸಲಾಯಿತೇ ವಿನಹ ಯಾವುದೇ ನಗದು ವ್ಯವಹಾರ ಆಗಿರಲಿಲ್ಲ. ತಾ. 06-06-2007ರಲ್ಲಿ ಶ್ರೀ ನೋಣಯ್ಯ ಶೆಟ್ಟಿಗಾರರಿಂದ ಜಾಗವನ್ನು ದ.ಕ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.) ಇದರ ಹೆಸರಿಗೆ ನೊಂದಾಯಿಸಲಾಯಿತು. 15-10-2007ರಲ್ಲಿ ಕಾರ್ಕಳ ದೇವಸ್ಥಾನದ ಅರ್ಚಕರಿಂದ ಶಿಲಾನ್ಯಾಸ ಹಾಗೂ ಪೂಜಾ ವಿಧಿಗಳನ್ನು ಸಂಸ್ಥೆಯ ಪ್ರಮುಖರ ಉಪಸ್ಥಿತಿಯೊಂದಿಗೆ ನೆರವೇರಿಸಲಾಯಿತು. 07-06-2009ರಲ್ಲಿ ವಿದ್ಯಾರ್ಥಿನಿಲಯದ ಉದ್ಘಾಟನೆಯನ್ನು ಅಂದಿನ ಗೃಹ ಸಚಿವರಾದ ಡಾ| ವಿ. ಎಸ್ ಆಚಾರ್ಯರಿಂದ ಅದ್ದೂರಿಯಾಗಿ ನೆರವೇರಿಸಲಾಯಿತು.

ವಿದ್ಯಾರ್ಥಿವೇತನ ವಿತರಣೆ :
ವರ್ಷಂಪ್ರತಿ ವಿಶ್ವಸ್ಥ ನಿಧಿಯಿಂದ ಸುಮಾರು 7 ಲಕ್ಷದಷ್ಟು ವಿದ್ಯಾರ್ಥಿವೇತನವನ್ನು ವಿತರಿಸಲಾಗುತ್ತಿದೆ. ಇದಕ್ಕೆ ಕೈಜೋಡಿಸಿದ ಯು.ಎ.ಇ ಪದ್ಮಶಾಲಿ ಸಮುದಾಯ ಸಂಘ ದುಬೈ ಹಾಗೂ ವಿಶ್ವಸ್ಥ ನಿಧಿಗೆ ಶಾಶ್ವತ ದೇಣಿಗೆ ನೀಡುತ್ತಿರುವ ಎಲ್ಲ ದಾನಿಗಳಿಗೆ ಸಂಘವು ಚಿರಋಣಿಯಾಗಿರುತ್ತದೆ ಕಳೆದ 10 ವರ್ಷಗಳಿಂದ ಅರ್ಹ ವಿದ್ಯಾರ್ಥಿಳಿಗೆ ಸಾಲರೂಪದಲ್ಲಿ ವಿಶೇಷ ವಿದ್ಯಾರ್ಥಿವೇತನವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ರೂಪಾಯಿ 10,000/- ಹಾಗೂ ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾಥಿಗಳಿಗೆ ತಲಾ ರೂಪಾಯಿ 25,000/- ದಂತೆ ನೀಡುತ್ತಿದೆ. ವಿದ್ಯಾವರ್ಧಕ ಸಂಘವು ಸ್ಥಾಪನೆಯಾದಂದಿನಿಂದ ಇಂದಿನವರೆಗೆ ಮಹಾಸಭಾದ ಸಹಕಾರದೊಂದಿಗೆ ಸ್ಥಳೀಯ ದಾನಿಗಳ ನೆರವಿನಿಂದ ಬೆಂಗಳೂರು, ಮುಂಬೈ, ದುಬೈ ಸಂಘದ ಮಹನೀಯರ ಸಹಾಯದೊಂದಿಗೆ ಬೃಹತ್ ಮೊತ್ತದ ವಿದ್ಯಾರ್ಥಿವೇತನವನ್ನು ವಿತರಿಸಿದ ಕೀರ್ತಿಗೆ ವಿದ್ಯಾವರ್ಧಕ ಸಂಘವು ಪಾತ್ರವಾಗಿದೆ. ಇಂತಹ ಸಂಘವನ್ನು ಮುನ್ನಡೆಸುವ ಭಾಗ್ಯವು 2018ರಿಂದ ನನ್ನ ಪಾಲಿಗೆ ಒದಗಿ ಬಂದಿದೆ. ಅಂದಿನ ಕಾರ್ಯದರ್ಶಿ ಶ್ರೀಯುತ ನಾಗರಾಜ ಕಿನ್ನಿಮುಲ್ಕಿ, ಕೋಶಾಧಿಕಾರಿ ಶ್ರೀಯುತ ರಾಘವ ಶೆಟ್ಟಿಗಾರ್ ಸಾಲಿಕೇರಿ, ಮಾಜಿ ಕಾರ್ಯದರ್ಶಿ ಶ್ರೀಯುತ ಭವಾನಿಶಂಕರ್, ಹಾಲಿ ಕಾರ್ಯದರ್ಶಿ ಶ್ರೀಯುತ ಉಮೇಶ್ ಕುಮಾರ್ ಇವರೆಲ್ಲರ ಸಹಕಾರದಿಂದ ಎಲ್ಲ ಕಾರ್ಯಗಳು ಸುಸೂತ್ರವಾಗಿ ಸಾಗುತ್ತಿದೆ ಎಂದು ತಿಳಿಸಲು ಹೆಮ್ಮೆ ಪಡುತ್ತೇವೆ ಹಾಗೂ ಪ್ರತಿಯೊಬ್ಬರಿಗೂ ನನ್ನ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

ಕಳೆದ ಏಳು ವರ್ಷಗಳಿಂದ ಶ್ರೀಯುತ ಹೊನ್ನಯ್ಯ ಶೆಟ್ಟಿಗಾರ್ ಹಳೆಯಂಗಡಿ ಇವರು ರೂ. 2,00,000/- ದಂತೆ ವಿಶ್ವಸ್ಥ ನಿಧಿಯನ್ನು ನೀಡುತ್ತ ಬಂದಿರುತ್ತಾರೆ. ಈ ಹಿಂದೆ ಇದ್ದ ನಿರಖು ದೇಣಿಗೆ ಒಟ್ಟು ಮೊತ್ತ ರೂ 10,12,000/- ಈಗ ಅದು ಒಟ್ಟು 27,00,000/- ಕ್ಕೆ ಏರಿಸುವಲ್ಲಿ ಸಹಕರಿಸಿದ ಎಲ್ಲ ದಾನಿಗಳಿಗೆ ಅಧ್ಯಕ್ಷನ ನೆಲೆಯಲ್ಲಿ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.

2016 ರಿಂದ 2022 ಸೆಪ್ಟೆಂಬರ್‍ನ ವರೆಗೆ ವಿತರಿಸಿದ ಒಟ್ಟು ವಿದ್ಯಾರ್ಥಿವೇತನ ವಿತರಿಸಿದ್ದು ಈ ಕೆಳಗಿನಂತಿವೆ.
ಸಾಮಾನ್ಯ ವಿದ್ಯಾರ್ಥಿವೇತನ
ನೀಡಲ್ಪಟ್ಟ ವಿದ್ಯಾರ್ಥಿಗಳ ಸಂಖ್ಯೆ 1685- ವಿತರಿಸಿದ ಮೊತ್ತ ರೂ. 20,55,000.00
ವಿಶೇಷ ವಿದ್ಯಾರ್ಥಿವೇತನ
ನೀಡಲ್ಪಟ್ಟ ವಿದ್ಯಾರ್ಥಿಗಳ ಸಂಖ್ಯೆ 127- ವಿತರಿಸಿದ ಮೊತ್ತ ರೂ. 25,13,000.00
ದಾನಿಗಳಿಂದ ದತ್ತು ಸ್ವೀಕಾರ ಮಾಡಲ್ಪಟ್ಟ ವಿದ್ಯಾರ್ಥಿಗಳು 4 – ವಿತರಿಸಿದ ಮೊತ್ತ ರೂ. 8,85,460.00
ಒಟ್ಟು ವಿದ್ಯಾರ್ಥಿವೇತನ ನೀಡಿದ್ದು: ರೂ. 54,53,460.00

ನಾವು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನಿಟ್ಟೆಯ ರಾಮಕೃಷ್ಣ ವಿದ್ಯಾರ್ಥಿನಿಲಯಕ್ಕೆ ಪ್ರತಿ ವರ್ಷರೂ. 15,000/- ದಂತೆ ತೆರಿಗೆ ಪಾವತಿಸುತ್ತಿದ್ದೆವು ಆ ತಪ್ಪನ್ನು ಸರಿಪಡಿಸಿ ಈಗ ಪ್ರತಿ ವರ್ಷರೂ 5,000/- ತೆರಿಗೆ ಪಾವತಿ ಮಾಡುತ್ತಿದ್ದೇವೆ. ನಿಟ್ಟೆಯಲ್ಲಿರುವ ರಾಮಕೃಷ್ಣ ವಿದ್ಯಾರ್ಥಿ ನಿಲಯದ ಬಗ್ಗೆ ಎಲ್ಲ ಸದಸ್ಯರು ಮುತುವರ್ಜಿ/ಕಾಳಜಿ ವಹಿಸಿ ಅದರಲ್ಲಿ ಆದಷ್ಟು ಹೆಚ್ಚು ಆದಾಯ ಬರುವಂತೆ ಸಹಕರಿಸಬೇಕೆಂದು ಈ ಮೂಲಕ ವಿನಂತಿ ಮಾಡುತ್ತೇವೆ.