ಪರಶುರಾಮ ಸೃಷ್ಟಿಯಾದ ಈ ಪುಣ್ಯ ಭೂಮಿಯಲ್ಲಿ ಅನೇಕ ದೇವಾಲಯ, ದೈವಾಲಯ, ನಾಗಬ್ರಹ್ಮಸ್ಥಾನ ಇತ್ಯಾದಿ ಗುಡಿ ಗೋಪುರಗಳಲ್ಲಿ ದೈವ ದೇವರುಗಳನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ. ಅವುಗಳಲ್ಲಿ ಒಂದಾದ ಕಾರ್ಕಳ ನಗರ ಮಧ್ಯಭಾಗದಲ್ಲಿ ಗಾಂಧಿಮೈದಾನದ ಬದಿಯಲ್ಲಿರುವ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನವು ಕಾರ್ಕಳದ ಶೆಟ್ಟಿಗಾರ (ಪದ್ಮಶಾಲಿ) ಸಮಾಜ ಬಾಂದವರ ಕುಲ ದೇವರಾದ ಶ್ರೀ ವೀರಭದ್ರ ದೇವರನ್ನು ವಿಶೇಷವಾಗಿ ಆರಾಧನೆ ಮಾಡಿಕೊಂಡು ಬಂದಿರುವ ದೇವಾಲಯ ಆಗಿರುತ್ತದೆ. ಈ ದೇವರು ಕಲ್ಯಾಣಪುರದಿಂದ ಸುಮಾರು ಆರುನೂರು ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆಯಾಗಿರುವುದರಿಂದ ಶ್ರೀ ಆದಿಶಕ್ತಿಯೊಂದಿಗೆ ಶ್ರೀ ವೀರಭದ್ರನ ಸಾನಿಧ್ಯವು ಸೇರಿ ಶೆಟ್ಟಿಗಾರ (ಪದ್ಮಶಾಲಿ) ಸಮಾಜದವರು ಆರಾದನೆ ಮಾಡಿಕೊಂಡು ಇದೇ ಸಮಾಜದ ಆಡಳಿತಕ್ಕೆ ಒಳಪಟ್ಟಿದೆ.
ಪ್ರಥಮವಾಗಿ ದೇವಸ್ಥಾನದಲ್ಲಿ ಮೂರು ಕಲಶದಲ್ಲಿ ದೇವರನ್ನು ಪ್ರತಿμÁ್ಟಪಿಸಿದರು. 1973ನೆಯ ಇಸವಿಯಲ್ಲಿ ಶ್ರೀ ಆದಿಶಕ್ತಿ, ಶ್ರೀ ವೀರಭದ್ರ ಮತ್ತು ಶ್ರೀ ಭದ್ರಕಾಳಿ ದೇವರನ್ನು ಒಂದೇ ಶಿಲೆಯಲ್ಲಿ ಪ್ರತಿμÁ್ಟಪಿಸಿ ಆರಾಧಿಸಿಕೊಂಡು ಬಂದಿರುತ್ತಾರೆ. 2007ನೇ ಇಸವಿಯಲ್ಲಿ ನಡೆದ ಜೀರ್ಣೋದ್ಧಾರದ ಸಮಯದಲ್ಲಿ ಶ್ರೀ ಆದಿಶಕ್ತಿಯನ್ನು ಪ್ರಧಾನ ದೇವರಾಗಿಯೂ ಶ್ರೀ ವೀರಭದ್ರದೇವರನ್ನು ಸುತ್ತುಪೌಳಿಯಲ್ಲಿ ಪಶ್ಚಿಮಾಭಿಮುಖವಾಗಿ ಪ್ರತಿμÁ್ಟಪನೆ ಮಾಡಿದರು. ಶ್ರೀ ಭದ್ರಕಾಳಿಯನ್ನು ವಿಸರ್ಜಿಸಿಬಿಟ್ಟರು.
ತಾ| 05/10/2017ರಂದು ಅಷ್ಟಮಂಗಳ ಪ್ರಶ್ನೆಯಲ್ಲಿ ಶ್ರೀ ವೀರಭದ್ರ ದೇವರನ್ನು ಪ್ರಧಾನ ದೇವರಾಗಿ, ಶ್ರೀ ಆದಿಶಕ್ತಿ ದೇವರನ್ನು ಬಲಭಾಗದಲ್ಲಿ ಹಾಗೂ ಶ್ರೀ ಭದ್ರಕಾಳಿಯನ್ನು ಎಡಭಾಗದಲ್ಲಿ ಬೇರೆ ಬೇರೆ ಮಂದಿರಗಳಲ್ಲಿ ಪ್ರತಿμÉ್ಠ ಮಾಡಬೇಕೆಂದು ತಿಳಿಸಿರುತ್ತಾರೆ. ಇದೇ 2021ರ ಡಿಸೆಂಬರ್ ತಿಂಗಳಲ್ಲಿ ದೇವಸ್ಥಾನದ ವಾರ್ಷಿಕ ಉತ್ಸವದ ಸಮಯದಲ್ಲಿ ನಡೆದ ದೈವಗಳ ನೇಮೋತ್ಸವದ ಸಮಯದಲ್ಲಿ ಪ್ರಧಾನ ದೈವವಾದ ಧೂಮಾವತಿ ದೈವದ ನುಡಿಯಂತೆ, ಶ್ರೀ ವೀರಭದ್ರ ದೇವರನ್ನು ಪೂರ್ವಾಭಿಮುಖವಾಗಿ ಮತ್ತು ಶ್ರೀ ಭದ್ರಕಾಳಿಯನ್ನು ಪುನರ್ ಪ್ರತಿμÉ್ಠ ಮಾಡಿ ತಾತ್ಕಾಲಿಕವಾಗಿ ದೇವಸ್ಥಾನದ ಸುತ್ತುಪೌಳಿಯಲ್ಲಿ ನಾಲ್ಕು ತಿಂಗಳ ಒಳಗೆ ಜೀರ್ಣೋದ್ಧಾರ ಸಹಿತ ಬ್ರಹ್ಮಕಲಶೋತ್ಸವವನ್ನು ಮಾಡಬೇಕೆಂದು ಅಪ್ಪಣೆ ಮಾಡಿದ್ದರಿಂದ ಅದೇ ದಿನ ಸಮಾಜ ಬಾಂದವರೆಲ್ಲ ಸೇರಿಕೊಂಡು ದೇವರ ಎದುರಲ್ಲಿ ಮುಷ್ಟಿ ಕಾಣಿಕೆಯನ್ನು ತೆಗೆದಿಟ್ಟು ಪ್ರಾರ್ಥಿಸಿಕೊಂಡೆವು.
ದೈವದ ನುಡಿಯ ಪ್ರಕಾರ ದೇವಸ್ಥಾನದಲ್ಲಿ ನಾಲ್ಕು ತಿಂಗಳ ಒಳಗೆಯೆ ಜೀರ್ಣೋದ್ಧಾರ ಮಾಡಿ ಪುನರ್ ಪ್ರತಿμÉ್ಠ ಮಾಡಿರುತ್ತೇವೆ. ಹಾಗೆಯೇ ನಾಗದೇವರ ಬ್ರಹ್ಮಸ್ಥಾನವನ್ನು ಶಿಲಾಮಯಗೊಳಿಸಿ ಮನರ್ ಪ್ರತಿμÉ್ಠ ಮಾಡಿದ್ದೇವೆ. ತಾ. 19.04.2022 ರಿಂದ ತಾ. 24.04.2022 ರವರೆಗೆ ಬ್ರಹ್ಮಕಲಶೋತ್ಸವವನ್ನು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಶ್ರೀ ಕೆ. ರಾಜೇಶ್ ನಡ್ಕಂತಿಲ್ಲಾಯರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿಯವರಾದ ಶ್ರೀ ವಿರೇಂದ್ರ ಹೆಗ್ಗಡೆಯವರು ಸಹಾಯ ಹಾಗೂ ಆರ್ಶಿವಾದದಿಂದ ಊರಿನ ಹಾಗೂ ಪರವೂರಿ£ ಸಮಾಜಬಾಂದವರು ಮತ್ತು ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದಿಂದ ಸಹಾಯ ಹಾಗೂ ಕಾರ್ಕಳ ಕೊಂಕಣಿ ಸಮಾಜ ಬಾಂಧವರ ಸಹಕಾರದಿಂದ ಸುಮಾರು 57 ಲಕ್ಷ ರೂಪಾಯಿ ವೆಚ್ಚದಲ್ಲಿ ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವವನ್ನು ನಡೆಸಿರುತ್ತೇವೆ.
ಈ ಬ್ರಹ್ಮಕಲಶೋತ್ಸವದ ಸಮಯದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮಾನ್ಯ ಇಂಧನ ಹಾಗೂ ಕನ್ನಡ ಸಾಂಸ್ಕøತಿಕ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್ ಇವರು ಭಾಗವಹಿಸಿ ಜೀರ್ಣೋದ್ಧಾರಕ್ಕೆ ಸುಮಾರು 20 ಲಕ್ಷರೂಪಾಯಿಯನ್ನು ಸರಕಾರದ ವತಿಯಿಂದ ಭರಿಸುತ್ತೇನೆಂದು ಆಶ್ವಾಸನೆ ನೀಡಿರುತ್ತಾರೆ. ನಮ್ಮ ನಾಗಬ್ರಹ್ಮಸ್ಥಾನದಲ್ಲಿ ಶ್ರೀ ನಾಗದೇವರು ಬ್ರಹ್ಮ ಶ್ರೀ ನಂದಿಕೇಶ್ವರ, ಬ್ರಹ್ಮರಕ್ತೇಶ್ವರಿ, ಕ್ಷೇತ್ರಪಾಲ, ವನದುರ್ಗೆ ಮತ್ತು ಪರಿವಾರ ದೈವಗಳಾದ ಮಹಿಸಂದಾಯ, ದೂಮಾವತಿ, ಬಂಟ ಗುಳಿಗ ದೈವಗಳನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವವನ್ನು ವಷರ್ಂಪ್ರತಿ ಹುಣ್ಣಿಮೆಯ ದಿನ ಹಾಗೂ ಎರಡು ವರುಷಕ್ಕೆ ಒಂದು ಸಲ ದೈವಗಳ ನೇಮೋತ್ಸವವನ್ನು ನಡೆಸಿಕೊಂಡು ಬಂದಿರುತ್ತೇವೆ.