ಶ್ರೀ ವೀರಭದ್ರ ದೇವಸ್ಥಾನ ಕಿನ್ನಿಮುಲ್ಕಿ

Share with your family and friends

Loading

ಉಡುಪಿ ಪಟ್ಟಣದ ಹೃದಯ ಭಾಗದ ಕಿನ್ನಿಮುಲ್ಕಿಯಲ್ಲಿರುವ ಪದ್ಮಶಾಲಿ ಸಮಾಜ ಬಂಧುಗಳು ದಿವಂಗತ ಬನ್ನಂಜೆ ಅಪ್ಪಯ್ಯ ಶೆಟ್ಟಿಗಾರರ ನೇತೃತ್ವದಲ್ಲಿ ಸುಮಾರು 118 ವರ್ಷಗಳ ಹಿಂದೆ ಅಂದರೆ ಕ್ರಿ.ಶ. 1904 ರಲ್ಲಿ ಶ್ರೀ ವೀರಭದ್ರ ಸ್ವಾಮಿಯನ್ನುಇಲ್ಲಿ ಪ್ರತಿμÁ್ಠಪನೆ ಮಾಡಿದರು. ಅಲ್ಲದೆ ದೇವಸ್ಥಾನದ ಪಕ್ಕದಲ್ಲಿ ನಾಗದೇವರಕಟ್ಟೆ ನಿರ್ಮಿಸುವುದರೊಂದಿಗೆ ಧೂಮಾವತಿ, ಸರಳ ಧೂಮಾವತಿ, ಬಂಟ ಮತ್ತು ಪಂಜುರ್ಲಿ ಇತ್ಯಾದಿ ಪರಿವಾರದೈವಗಳಿಗೂ ಸ್ಥಾನವನ್ನು ಕಟ್ಟಿಸಿ ಆರಾಧಿಸತೊಡಗಿದರು.

ಮೊಕ್ತೇಸರರಾದ ಶ್ರೀ ಅಪ್ಪಯ್ಯ ಶೆಟ್ಟಿಗಾರರು ಅಲ್ಪಕಾಲದಲ್ಲಿಯೇ ದೈವಾಧೀನರಾದ ಅನಂತರ ಮೊಕ್ತೇಸರರಾಗಿ ಶ್ರೀ ನೀಲಯ ಶೆಟ್ಟಿಗಾರರೊಂದಿಗೆ ದಿ| ಜಾಣ ಶೆಟ್ಟಿಗಾರ, ದಿ| ರುಕ್ಮಯ್ಯ ಶೆಟ್ಟಿಗಾರ, ದಿ| ಕುಯಿಂತ್ರ ಶೆಟ್ಟಿಗಾರ್, ದಿ| ರಾಮಣ್ಣ ಶೆಟ್ಟಿಗಾರ್, ದಿ| ಹೂವಯ್ಯ ಶೆಟ್ಟಿಗಾರ್, ದಿ| ಬನ್ನಂಜೆ ಶೇಷ ಶೆಟ್ಟಿಗಾರ್, ಮತ್ತು ದಿ| ಗಣಪಯ್ಯ ಶೆಟ್ಟಿಗಾರರು ಸಹಮೊಕ್ತೇಸರರಾಗಿ ದೇವಳದ ಆಡಳಿತ ಮಾಡಿಕೊಂಡಿದ್ದರು. ಶ್ರೀ ನೀಲಯ ಶೆಟ್ಟಿಗಾರರು ದೈವಾಧೀನರಾದಾಗ ಶ್ರೀ ಗಣಪಯ್ಯ ಶೆಟ್ಟಿಗಾರರು ಆಡಳಿತ ನಡೆಸಿಕೊಂಡು ಬಂದರು. ಅವರು ನಿಧನರಾದ ನಂತರ 1945 ರಿಂದ ದಿ| ನೀಲಯ ಶೆಟ್ಟಿಗಾರರ ಪುತ್ರ ದಿ| ಕೆ. ಶೇಷಪ್ಪ ಶೆಟ್ಟಿಗಾರರು ಮೊಕ್ತೇಸರರಾಗಿ ದೇವಸ್ಥಾನದ ಆಡಳಿತ ನಡೆಸಿದರು. ಅವರು ವೃದ್ಧಾಪ್ಯದ ದೆಸೆಯಿಂದ ನಿವೃತ್ತಿಯಾದ ಬಳಿಕ ದಿ| ಗಣಪಯ್ಯ ಶೆಟ್ಟಿಗಾರರ ಪುತ್ರ ದಿ| ಕೆ ಮಹಾಬಲ ಪದ್ಮಶಾಲಿಯವರು ಆಡಳಿತ ಮೊಕ್ತೇಸರರಾಗಿ 16-11-1969 ರಿಂದ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಆಡಳಿತ ಸಮಯದಲ್ಲಿ ಸಮಾಜದ ಹತ್ತು ಸಮಸ್ತರು ಸೇರಿ ದೇವಸ್ಥಾನದ ವಠಾರದಲ್ಲಿ ಒಂದು ಕಲಾಭವನವನ್ನು ನಿರ್ಮಿಸಲು ನಿರ್ಧರಿಸಿ ದಿ| ವ್ಯಾಸರಾಯ ಶೆಟ್ಟಿಗಾರ್ ಮುಡ್ಕೂರುರವರು ಅಧ್ಯಕ್ಷರಾಗಿ, ದಿ| ಬಾಬರಾವ್ ಪದ್ಮಶಾಲಿ ಕೋಶಾಧಿಕಾರಿಯಾಗಿ, ದಿ| ಮಹಾಬಲ ಪದ್ಮಶಾಲಿ ಕಾರ್ಯದರ್ಶಿಯಾಗಿ ಕಲಾಭವನದ ನಿರ್ಮಾಣವನ್ನು ಯಶಸ್ವಿಯಾಗಿ ಪೂರೈಸಿ ದಿನಾಂಕ 30-11-1980 ರಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದಿವ್ಯ ಹಸ್ತದಿಂದ ಶಿಲನ್ಯಾಸ ಮಾಡಿಸಿದರು. 1987ರಲ್ಲಿ ಸುಮಾರು 5 ಲಕ್ಷ ವೆಚ್ಚದಲ್ಲಿ ಸಭಾಭವನದ ನಿರ್ಮಾಣವನ್ನು ಪೂರ್ತಿಗೊಳಿಸಿ 08-02-1987 ರಂದು ಪೇಜಾವರ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಶ್ರೀ ವೀರಭದ್ರ ಕಲಾಭವನ ಎಂಬ ನಾಮಾಂಕಿತದೊಂದಿಗೆ ಉದ್ಘಾಟಿಸಲ್ಪಟ್ಟಿತು.

ತಾರೀಕು 13-11-1990 ರಂದು ಕೆ. ಮಹಾಬಲ ಪದ್ಮಶಾಲಿಯವರು ನಿಧನರಾದ ಅನಂತರ ದೇವಸ್ಥಾನದ 10 ಸಮಸ್ತರು ಸೇರಿ ಅವರ ಪುತ್ರ ಕೆ. ಪ್ರಭಾಶಂಕರ ಪದ್ಮಶಾಲಿಯವರನ್ನು ಮೊಕ್ತೇಸರರನ್ನಾಗಿ ನೇಮಿಸಿದರು ಮತ್ತು 16 ಸದಸ್ಯರ ಆಡಳಿತ ಸಮಿತಿಯನ್ನು ರಚಿಸಿದರು. ಈ ಸಮಿತಿಯು 1992 ರಲ್ಲಿ ದೇವಸ್ಥಾನದ ಮುಂಭಾಗದಲ್ಲಿ ರೂಪಾಯಿ 1.25 ಲಕ್ಷ ವೆಚ್ಚದಲ್ಲಿ ಶಾಶ್ವತ ಚಪ್ಪರವನ್ನು ನಿರ್ಮಿಸಿತು.

ತಾರೀಕು 13-03-1995 ರಿಂದ 15-03-1995 ರವರೆಗೆ ಅಷ್ಟಮಂಗಲ ಪ್ರಶ್ನೆಯನ್ನು ಜರಗಿಸಲಾಯಿತು. ಅಷ್ಟಮಂಗಳ ಪ್ರಶ್ನೆಯಲ್ಲಿ ಸೂಚಿಸಿದಂತೆ ಪರಿಹಾರ ಕಾರ್ಯಗಳನ್ನು 14-03-1996 ರಿಂದ 21-03-1996 ರವರೆಗೆ ನಡೆಸಲಾಯಿತು. ದೇವಸ್ಥಾನಗಳ ವಾಸ್ತುತಜ್ಞರನ್ನು ಸಂಪರ್ಕಿಸಿ ಗರ್ಭಗೃಹ, ತೀರ್ಥ ಮಂಟಪ ಮತ್ತು ಪೌಳಿಯು ಪುನಃರಚನೆಯ ನೀಲಿ ನಕಾಶೆ ಮಾಡಿ ಸುಮಾರು 15 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯವನ್ನು ಮಾಡುವುದೆಂದು ಸಮಿತಿಯು ನಿರ್ಣಯಿಸಿತು. ಇಲ್ಲಿ ಪ್ರತಿವರ್ಷ ಚೈತ್ರಶುದ್ಧ 15ನೆಯ ಪೂರ್ಣಿಮೆಯಂದು ಶ್ರೀ ವೀರಭದ್ರ ಸ್ವಾಮಿಯ ಮಹೋತ್ಸವವೂ ದೈವಗಳ ಆರಾಧನೆಯೂ ಬಹು ವಿಜೃಂಭಣೆಯಿಂದ ನಡೆಯುತ್ತಿದೆ. ತದಂಗವಾಗಿ ಕಲಶಾಭಿμÉೀಕ, ಮಹಾಪೂಜೆ, ಮಹಾ ಅನ್ನಸಂತರ್ಪಣೆ, ರಂಗಪೂಜೆ, ಬಲಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ಊರಿನ ಮತ್ತು ಪರವೂರಿನ ಭಕ್ತರೆಲ್ಲ ಶ್ರದ್ಧೆಯಿಂದ ಭಾಗವಹಿಸುವರು. ಅಲ್ಲದೆ ಶ್ರೀ ನಾಗರಪಂಚಮಿ ಪೂಜೆ, ಗಣೇಶಚತುರ್ಥಿ ಪೂಜೆ, ವರಮಹಾಲಕ್ಷ್ಮಿ ಪೂಜೆ, ದೀಪಾವಳಿಯ ಬಲಿಂದ್ರ ಪೂಜೆ, ನವರಾತ್ರಿಕಾಲದಲ್ಲಿ ನವದುರ್ಗಾ ಪೂಜೆ, ಕಾರ್ತಿಕ ಮಾಸದಲ್ಲಿ ದೀಪಾರಾಧನೆ, ಶ್ರಾವಣ ಮಾಸದಲ್ಲಿ ಹೂವಿನ ಪೂಜೆಇತ್ಯಾದಿ ವಿಶೇಷ ಪೂಜೆಗಳು ಶ್ರೀದೇವರ ಸನ್ನಿಧಾನದಲ್ಲಿ ನಡೆಯುತ್ತವೆ. ಮಹಾಶಿವರಾತ್ರಿಯಂದು ಶ್ರೀ ರುದ್ರಾಭಿμÉೀಕ ಮಂತ್ರದ ಪಾರಾಯಣದೊಂದಿಗೆ ಶ್ರೀ ವೀರಭದ್ರದೇವರಿಗೆ ಶತಕುಂಭಾಭಿμÉೀಕ ಪೂಜೆಯು ನಡೆಯುವುದು.

ಶ್ರೀ ವೀರಭದ್ರದೇವರ ನಿತ್ಯ ಪೂಜೆಯನ್ನು ಮತ್ತು ವಿಶೇಷ ಪೂಜೆಗಳನ್ನು ದೇವಸ್ಥಾನ ಸ್ಥಾಪನೆಗೊಂಡಂದಿನಿಂದ ದಿ| ಕಿನ್ನಿಮುಲ್ಕಿ ಗುರುರಾಜ ಭಟ್ರ ಮನೆತನದವರು ಶಾಸ್ತ್ರೋಕ್ತವಾಗಿ ಮಾಡಿಕೊಂಡು ಬರುತ್ತಿದ್ದು ಸದ್ಯ ಅವರ ಮೊಮ್ಮಗನಾದ ಶ್ರೀಕಾಂತ ಭಟ್ರ ನೇತೃತ್ವದಲ್ಲಿ ಅವರ ಮನೆತನದವರು ನೆರವೇರಿಸಿಕೊಂಡು ಬರುತ್ತಿದ್ದಾರೆ. ಸದ್ಯ ವಾದಿರಾಜ ಭಟ್ರ ನೇತೃತ್ವದಲ್ಲಿ ಪೂಜಾವಿಧಿಗಳನ್ನು ನೆರವೇರಿಸಿಕೊಂಡು ಬರುತ್ತಿರುವರು. ನೂತನವಾಗಿ ರಚಿಸಲಾದ ಆಡಳಿತ ಮಂಡಳಿಯ 15 ಜನರ ತಂಡವು 01-04-2019ರಿಂದ ಕಾರ್ಯಭಾರವನ್ನೂ ವಹಿಸಿಕೊಂಡಿದೆ. ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪ್ರಭಾಶಂಕರ ಪದ್ಮಶಾಲಿ, ಉಪಾಧ್ಯಕ್ಷರಾಗಿ ನಿರಂಜನ್ ಕೆ. ಶೆಟ್ಟಿಗಾರ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ ಶೆಟ್ಟಿಗಾರ್ ಆತ್ರಾಡಿ, ಜೊತೆ ಕಾರ್ಯದರ್ಶಿಯಾಗಿ ವಿಠ್ಠಲ್ ಶೆಟ್ಟಿಗಾರ್ ಬನ್ನಂಜೆ, ಪ್ರಧಾನ ಕೋಶಾಧಿಕಾರಿಯಾಗಿ ರವೀಂದ್ರ ಕೆ. ಆತ್ರಾಡಿ, ಜೊತೆ ಕೋಶಾಧಿಕಾರಿಯಾಗಿ ಗಂಗಾಧರ ಶೆಟ್ಟಿಗಾರ್ ಆತ್ರಾಡಿ ಹಾಗೂ ಸದಸ್ಯರಾಗಿ ಶ್ರೀಧರ ಶೆಟ್ಟಿಗಾರ ಕರಂದಾಡಿ, ಮೋಹನ್‍ಕುಮಾರ್ ಪದ್ಮಶಾಲಿ, ಪ್ರಕಾಶ್ ಶೆಟ್ಟಿಗಾರ್, ರಾಮಕೃಷ್ಣ ಶೆಟ್ಟಿಗಾರ್ ಬನ್ನಂಜೆ, ಶಂಕರ್ ಶೆಟ್ಟಿಗಾರ್ ಮಟ್ಟು, ಶಿವಪ್ರಸಾದ್ ಶೆಟ್ಟಿಗಾರ್ ಬನ್ನಂಜೆ, ಡಾ| ಶ್ರೀಪತಿ ಶೆಟ್ಟಿಗಾರ್ ಹಾಗೂ ಮಮತಾ ರೂಪೇಶ್ ಮತ್ತು ಸಂಧ್ಯಾವಂದನ ಇವರುಗಳನ್ನು ಒಳಗೊಂಡ ಸಮಿತಿಯು ದೇವಸ್ಥಾನದ ಹತ್ತಿರ ಇರುವ ಎಂಟು ಸೆಂಟ್ಸ್ ಜಾಗವನ್ನು ಖರೀದಿಸಿ ನೂತನ ಪಾಕ ಶಾಲೆಯನ್ನು ನಿರ್ಮಿಸಿದೆ. ಆಡಳಿತಮಂಡಳಿಯು ಕಲಾಭವನದ ಆದಾಯ ಹಾಗೂ ಭಕ್ತಜನರ ಕಾಣಿಕೆಗಳಿಂದ ದೇವಳದ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗುತ್ತಿದೆ. ಅಲ್ಲದೆ ಸಮಾಜಬಾಂಧವರ ಹಾಗೂ ಸರ್ವ ಭಕ್ತಜನರ ಸಹಕಾರದೊಂದಿಗೆ ಶಾಸ್ತ್ರೋಕ್ತವಾಗಿ ದೈನಂದಿನ ಪೂಜಾ ವಿಧಿಗಳನ್ನು ಮತ್ತು ವಿಶೇಷ ಪೂಜೆಗಳನ್ನು ನಿಯಮಿತವಾಗಿ ನಡೆಸಿಕೊಂಡು ಬರುತ್ತಿದೆ.