ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಹೊಟ್ಟೆಪಾಡಿಗಾಗಿ ಮುಂಬಯಿ ಸೇರಿದ ದಕ್ಷಿಣ ಕನ್ನಡದ ಪದ್ಮಶಾಲಿ ಬಂಧುಗಳು 1935ರ ಸುಮಾರಿಗೆ ಒಗ್ಗಟ್ಟು ಮತ್ತು ಶಿಕ್ಷಣಾಭಿವೃದ್ಧಿಯ ಧ್ಯೇಯದೊಂದಿಗೆ ಎಂಟು ಮಂದಿಯ ಕಾರ್ಯನಿರ್ವಾಹಕ ಸಮಿತಿಯಿಂದ “ಪದ್ಮಶಾಲಿಗರ ಸಾಮಾಜಿಕ ಸಂಘ” ಎಂಬ ನಾಮದಿಂದ ಸಂಸ್ಥೆಯೊAದನ್ನು ಆರಂಭಿಸಿದರು.
ಈ ಸಂಘದಿAದ ಮೊತ್ತಮೊದಲಿಗೆ 1938ರಲ್ಲಿ ವಿದ್ಯಾರ್ಥಿವೇತನ ರೂಪದಲ್ಲಿ ರೂ.50ನ್ನು ದೇರೆಬೈಲು ಸೇಸಪ್ಪ ಶೆಟ್ಟಿಗಾರರಿಗೆ ನೀಡಲಾಯಿತು. 1940 ರಲ್ಲಿ ಸಂಘದ ಸದಸ್ಯರಿಂದ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಸ್ಥಾಪನೆಗೊಂಡಿತು. ತದನಂತರ 1942 ರಲ್ಲಿ ಇಂಜಿನಿಯರ್ ವಿದ್ಯಾರ್ಥಿ
ದಯಾನಂದ ಕೊಂಚಾಡಿಯವರಿಗೆ ವಿದ್ಯಾರ್ಥಿವೇತನ ನೀಡಿ ಉನ್ನತ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಯಿತು.
ದೇಶದ ಸ್ವಾತಂತ್ರ‍್ಯ ಹೋರಾಟ ತೀವ್ರವಾಗುತ್ತಿದ್ದಂತೆ ಸಂಘವು 12-01-1943 ರಂದು ತನ್ನದೇ ಆದ ಧ್ವಜ ಮತ್ತು ಲಾಂಛನವನ್ನು ಸ್ವೀಕರಿಸಿ, ಕೇಸರಿ ಬಣ್ಣದ ಹಿನ್ನೆಲೆಯಲ್ಲಿ ರಾಟೆ ತಾವರೆ ಹಾಗೂ ತಾವರೆಯಿಂದ ಹೊರಡುವ ನೂಲು ಈ ಲಾಂಛನದಲ್ಲಿ ಮೂಡಿಬಂತು. 1944 ರಲ್ಲಿ ಸಂಘದ
ಹೆಸರನ್ನು `ಪದ್ಮಶಾಲಿ ಸಮಾಜ ಸೇವಾ ಸಂಘ’ ಎಂಬುದಾಗಿ ಬದಲಾಯಿಸಲಾಯಿತು. 27-03-1953 ರಂದು ಸಂಘಕ್ಕೆ ನೋಂದಣಿ ಪ್ರಮಾಣಪತ್ರ ದೊರಕಿತು.
09-07-1950 ರಂದು ಸಂಘದ ಬಂಡವಾಳ ವೃದ್ಧಿಸುವ ಸಲುವಾಗಿ ಸೆಂಟ್ರಲ್ ಥಿಯೇಟರ್‌ನಲ್ಲಿ `ಚಂದ್ರಲೇಖಾ’ ಚಿತ್ರ ಪ್ರದರ್ಶನ ಜರಗಿಸಲಾಯಿತು 1955ರಲ್ಲಿ ಮುಂಬಯಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ನಿರ್ಣಯ ಕೈಗೊಳ್ಳಲಾಯಿತು. 1961ರಲ್ಲಿ ಎ.ಬಿ. ಶೆಟ್ಟಿಗಾರರ ಅಧ್ಯಕ್ಷತೆಯಲ್ಲಿ ರಜತ ಮಹೋತ್ಸವ ಸಮಿತಿ ರಚನೆಯಾಯ್ತು ಮತ್ತು ಪದ್ಮಶಾಲಿ ಗಾರ್ಡ್ಸ್ ಅಸ್ತಿತ್ವಕ್ಕೆ ಬಂತು. 31-01-1962ರಲ್ಲಿ ಕವಾಸಜೆ ಜಹಂಗೀರ್ ಹಾಲ್‌ನಲ್ಲಿ ರಜತಜಯಂತಿಯನ್ನು ಆಚರಿಸಲಾಯಿತು
1973 ವರ್ಷದಿಂದ ಶೃಂಗೇರಿ ಗುರುಪೀಠಕ್ಕೆ ಗುರುಕಾಣಿಕೆ ಕಳುಹಿಸುವ ನಿರ್ಧಾರ ಮಾಡಲಾಯಿತು. 1974ರಿಂದ ಸದಸ್ಯರ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯ ಗುಣಗಳ ಆಧಾರದ ಮೇಲೆ ಬಹುಮಾನ ನೀಡುವ ನಿರ್ಣಯವನ್ನು ಕೈಗೊಳ್ಳಲಾಯಿತು. 22-12-1974ರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ 12 ಸದಸ್ಯರನ್ನೊಳಗೊಂಡ ಪದ್ಮಶಾಲಿ ಎಜುಕೇಶನ್ ಫಂಡ್ ಸಂಸ್ಥೆಯು ಸ್ಥಾಪನೆಗೊಂಡಿತು. 02-03-1975ರಂದು ಈ ಫಂಡಿನ ಬAಡವಾಳಕ್ಕಾಗಿ ಶಣ್ಮುಖಾನಂದ ಹಾಲಿನಲ್ಲಿ ಪ್ರದರ್ಶನಗೊಂಡ ಯೋಗೇಂದ್ರ ದೇಸಾಯಿಯವರ “ಸಂತಸಖೂ” ನೃತ್ಯ ನಾಟಕದಿಂದ ರೂ.75,000/- ದ ಧನಸಂಗ್ರಹ ಮಾಡಲಾಯಿತು. ತದನಂತರದಲ್ಲಿ ಪದ್ಮಶಾಲಿ ಎಜುಕೇಶನ್ ಫಂಡ್ ‘ಪದ್ಮಶಾಲಿ ಎಜುಕೇಷನ್ ಸೊಸೈಟಿ’ ಯಾಗಿ ಬದಲಾಯಿಸಲ್ಪಟ್ಟಿತು.
15-08-1975ರಂದು ಅಂಧೇರಿಯ ಕೋಲ್‌ಡೊಂಗ್ರಿಯಲ್ಲಿ ಜಂಭೂದರ್ಶನ ಸೊಸೈಟಿಯಲ್ಲಿ ಸಂಘದ ನೂತನ ಕಛೇರಿ ಸತ್ಯನಾರಾಯಣ ಪೂಜೆಯೊಂದಿಗೆ ಉದ್ಘಾಟನೆಗೊಂಡಿತು. ಒಟ್ಟು 12 ಮಂದಿ ವಿದ್ಯಾರ್ಥಿಗಳಿಗೆ ಉಳಕೊಳ್ಳುವ ಅನುಕೂಲತೆಯನ್ನು ಈ ಕಛೇರಿಯಲ್ಲಿ ಮಾಡಲಾಯಿತು. 16-02-1976ರಂದು ಪದ್ಮಶಾಲಿ ಎಜುಕೇಶನ್ ಸೊಸೈಟಿ ನೋಂದಣಿಗೊAಡಿತು. 23-08-1987ರಂದು ಸಂಘದ ಸುವರ್ಣಮಹೋತ್ಸವವನ್ನು ಷಣ್ಮುಗಾನಂದ ಸಭಾಗೃಹದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂಧರ್ಭದಲ್ಲಿ “ಸುವರ್ಣಪದ್ಮ” ಸಂಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಬಳಿಕ 26-01-1988 ರಂದು ಪದ್ಮಶಾಲಿ ಮಹಿಳಾ ಬಳಗ ಮುಂಬಯಿ ಇದರ ಸ್ಥಾಪನೆಯಾಯಿತು.
28-12-1997ರಂದು ಸಂಘದ ವಜ್ರಮಹೋತ್ಸವ “ಗಾಲ ಆಡಿಟೋರಿಯಂ” ಸಾಂತಕ್ರೂಝ್, ಇಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು.
ಈ ಸಂಧರ್ಭದಲ್ಲಿ “ವಜ್ರಜ್ಯೋತಿ” ಎಂಬ ಸಂಸ್ಮರಣಸAಚಿಕೆಯನ್ನು ಬಿಡುಗಡೆ ಮಾಡಲಾಯಿತು. 22-08-1997ರಿಂದ ಶ್ರೀವೀರಭದ್ರ ಮಹಮ್ಮಾಯಿ ವಾರ್ಷಿಕ ಮಹಾಪೂಜೆಯನ್ನು ಪ್ರಾರಂಭಿಸಲಾಯಿತು.
30-12-2001ರAದು ಸೊಸೈಟಿಯ ರಜತಮಹೋತ್ಸವವನ್ನು “ಗಾಲ ಆಡಿಟೋರಿಯಂ” ಸಾಂತಕ್ರೂಝ್, ಇಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು. ಈ ಸಂಧರ್ಭದಲ್ಲಿ ನಮ್ಮ ಸಮಾಜದ ಪ್ರಖ್ಯಾತ ಸಾಹಿತಿ ಅಂಬಾತನಯ ಮುದ್ರಾಡಿಯವರಿಂದ “ರಜತರಶ್ಮಿ” ಸಂಸ್ಮರಣಾ ಸಂಚಿಕೆ ಬಿಡುಗಡೆಗೊAಡಿತು.
25ನೇ ಡಿಸಂಬರ್ 2011 ರಂದು ಸಂಘದ ಅಮೃತಮಹೋತ್ಸವವನ್ನು “ಗಾಲ ಆಡಿಟೋರಿಯಂ” ಸಾಂತಕೂಝ್, ಇಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು. ಈ ಸಂಧರ್ಭದಲ್ಲಿ “ಪದ್ಮಾಮೃತ” ಸಂಸ್ಮರಣ ಸಂಚಿಕೆಯು ಬಿಡುಗಡೆಗೊಂಡಿತು. 29ನೇ ಡಿಸಂಬರ್ 2013 ರಂದು ಮಹಿಳಾ ಬಳಗದ “ರಜತಮಹೋತ್ಸವ”ವನ್ನು ಮಾಟುಂಗದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಆಚರಿಸಲಾಯಿತು. ಈ ಸಂಧರ್ಭದಲ್ಲಿ “ರಜತಕಮಲ” ಎಂಬ ಸAಸ್ಮರಣಸAಚಿಕೆಯ ಜೊತೆಗೆ ಬೋಳೂರು ಗಂಗಾಧರ ಶೆಟ್ಟಿ ರಚಿತ “ಶಾಲಿಭಾಷೆ” ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ತದನಂತರ ಡಿಸಂಬರ್ 2015ರಲ್ಲಿ ಸಂಘವು ಮುಂಬಯಿಯ ದೊಂಬಿವಿಲಿಯಲ್ಲಿ ಪದ್ಮಶಾಲಿ ಕಲಾಭವನಕ್ಕಾಗಿ ನಿವೇಶನವನ್ನು ಖರೀದಿಸಿತು.
14-08-2016ರಂದು ಸಂಘದ ಎಂಬತ್ತನೆಯ ವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿAದ ಬಂಟರ ಭವನ, ಕುರ್ಲಾದಲ್ಲಿ ಆಚರಿಸಲಾಯಿತು. ಈ ಅದ್ದೂರಿ ವಾರ್ಷಿಕೋತ್ಸವವನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ.ಸಿ. ಕೊಂಡಯ್ಯನವರು ಉದ್ಘಾಟಿಸಿದರು. ಕಲಾಭವನದ ನಿರ್ಮಾಣ ಕಾರ್ಯಕ್ರಮವನ್ನು ಇನ್ನೊಬ್ಬ ಮುಖ್ಯ ಅತಿಥಿಗಳಾದ ಕರ್ನಾಟಕ ಸರಕಾರದ ಸಚಿವೆಯರಾದ ಶ್ರೀಮತಿ ಉಮಾಶ್ರೀಯವರು ಉದ್ಘಾಟಿಸಿದರು. ಹೊರನಾಡು ಕನ್ನಡಿಗರ ಬಗ್ಗೆ ಮತ್ತೊಬ್ಬ ಅತಿಥಿಗಳಾದ ಶ್ರೀ ಎಂ.ಡಿ. ಲಕ್ಷ್ಮೀನಾರಾಯಣರವರು ಚಿಂತನೆ ನಡೆಸಿದರು.
ಎಂಬತ್ತೊAದು ವರ್ಷದ ಕಾಲಾವಧಿಯಲ್ಲಿ ಸಾವಿರಾರು ಸಮಾಜಬಾಂಧವರಿಗೆ ಆರ್ಥಿಕ, ಶೈಕ್ಷಣಿಕ ಮತ್ತು ಆರೋಗ್ಯ ನೆರವು ನೀಡಲಾಗಿದೆ.
ಸಮಾಜದ ಯುವಪೀಳಿಗೆಗೆ ಸಮಾಜದ ಸಂಸ್ಕೃತಿ, ಆಚಾರ-ವಿಚಾರಗಳ ಅರಿವು ಮೂಡಿಸುವ ಸಲುವಾಗಿ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮಾರಂಭಗಳನ್ನು ಹಮ್ಮಿಕೊಳ್ಳುವ ಗುರಿಯನ್ನುಹೊಂದಿದೆ.