2010ರಲ್ಲಿ ಮಹಾಸಭಾ ಹೊರತಂದ ‘ಏಕರೂಪ ವಿವಾಹವಿಧಿ’ ಕೈಪಿಡಿಯ ಬರೆಹದ ಯಥಾರೂಪ (ಚಿತ್ರಗಳನ್ನು ಹೊರತು ಪಡಿಸಿ)
ಪೀಠಿಕೆ:
ಮಾನವನ ಬದುಕು ಆನಂದಮಯವೂ ಅರ್ಥಪೂರ್ಣವೂ ಆಗಿರಬೇಕೆಂಬ ಉದ್ದೇಶದಿಂದ ಸನಾತನ ಹಿಂದೂ ಧರ್ಮದಲ್ಲಿ ಹದಿನಾರು
ಸಂಸ್ಕಾರಗಳು ಉಪದಿಷ್ಟವಾಗಿವೆ. ಗರ್ಭಾವಸ್ಥೆಯಿಂದ ಆರಂಭಿಸಿ ಮುಂದಿನ ಸುಖಮಯ ಜೀವನಕ್ಕೆ ಸಿದ್ಧಿಗೊಳಿಸುವುದೇ ಸಂಸ್ಕಾರಗಳ ಲಕ್ಷö್ಯ. ಮನುಷ್ಯನಲ್ಲಿ ಸ್ವಾಭಾವಿಕವಾಗಿ ಕಾಣಬರುವ ದೋಷಗಳನ್ನು ನಿವಾರಿಸುವುದು (ದೋಷಾಪನಯನ) ಮತ್ತು ಉಜ್ಜೀವನಕ್ಕೆ ಅವಶ್ಯವಾದ ಗುಣಗಳನ್ನುಒಡಮೂಡಿಸುವುದೇ(ಗುಣಾಂತರೋಪಜನನ)ಸAಸ್ಕಾರಕರ್ಮಗಳಹಿAದಿನಆಶಯ. ಷೋಡಶ ಸಂಸ್ಕಾರಗಳಲ್ಲಿ ವಿವಾಹವು ಅತಿ ಮುಖ್ಯವಾದುದು. ಗಂಡುಹೆಣ್ಣುಗಳಿಬ್ಬರನ್ನು ಸತಿಪತಿಗಳಾಗಿಸಿ ಅನ್ಯೋನ್ಯತೆಯ ಸಂಸಾರನಿರ್ವಹಣೆಗೆ ತೊಡಗಿಸುವ ಸಂಸ್ಕಾರ ವಿಶೇಷವೇ ವಿವಾಹ. ಐಹಿಕವಾದ ಸುಖೋಪಭೋಗಗಳನ್ನು ಧರ್ಮದ ತಳಹದಿಯಲ್ಲಿ ಸಾಧಿಸುವುದರೊಂದಿಗೆ ಪಾರಮಾರ್ಥಿಕವಾದ ಜೀವನಕ್ಕೆ ಸತಿಪತಿಗಳನ್ನು ಪ್ರವೇಶಿಸಲು ಪ್ರೇರೇಪಿಸುವುದರಿಂದ ವಿವಾಹ ಸಂಸ್ಕಾರವು ಮಹತ್ವವನ್ನು ಪಡೆಯುತ್ತದೆ. ಇಂತಹ ಮೌಲ್ಯಯುತವಾದ ಸಂಸ್ಕಾರವು ಮುನಿಪ್ರಣೀತವಾದ ನಿಯಮಗಳ ರೀತ್ಯಾ ನಡೆಯುತ್ತದೆ. ಇಲ್ಲಿ ಜರಗುವ ಎಲ್ಲ ಮಂತ್ರ, ತಂತ್ರ ಮತ್ತು
ಯಂತ್ರಗಳಿಗೆ ವಿಶೇಷವಾದ ಅರ್ಥಾನುಸಂಧಾನವಿದೆ. ಈ ವಿಧಿಗಳು ವೇದ ಉಪನಿಷತ್ತು ಭಗವದ್ಗೀತೆ ಮುಂತಾದ ಧಾರ್ಮಿಕ ಗ್ರಂಥಗಳ
ಆಧಾರದಲ್ಲಿ ರೂಪಿತವಾಗಿದ್ದು ಕ್ರಮವರಿತು ಅನುಸರಿಸಿದರೆ ಉತ್ತಮ ಫಲಪ್ರಾಪ್ತಿಯಾಗುವುದರಲ್ಲಿ ಸಂದೇಹವಿಲ್ಲ. ಸಮಾಜದಲ್ಲಿ ಈ ವೈದಿಕ
ವಿಧಿಗಳು ಆಚರಣೆಯಲ್ಲಿರುವುದಾದರೂ, ಎಲ್ಲ ಹದಿನಾರು ದೇವಸ್ಥಾನಗಳಲ್ಲಿ ಏಕರೂಪತೆ ಕಂಡುಬAದಿರುವುದಿಲ್ಲ. ಪ್ರಾದೇಶಿಕ ವ್ಯತ್ಯಾಸಗಳು
ಮಾನ್ಯವಾದರೂ ಅಶಾಸ್ತಿçÃಯ ವಿಧಿಗಳಿಂದ ಪ್ರಯೋಜನವಿಲ್ಲ. ವಿಧಿಗಳ ಅರ್ಥವರಿತು ಆಚರಿಸುವುದರಿಂದ ಪರಿಪೂರ್ಣ ಪ್ರಯೋಜನ.
ಅರ್ಥವಿಲ್ಲದ ಆಚರಣೆಗಳು ನಿಷ್ಪçಯೋಜಕ ಅಲ್ಲದೆ ಕೆಲವೊಮ್ಮೆ ದುಷ್ಪರಿಣಾಮಕ್ಕೂ ನಾಂದಿಯಾದೀತು. ಆದ್ದರಿಂದ ಶಾಸ್ತçವಿಹಿತವಾದ ಏಕರೂಪ ವಿಧಾನವನ್ನು ರೂಪಿಸುವ ಪ್ರಯತ್ನವೇ ಈ ಉಪಕ್ರಮ. ದೇವಸ್ಥಾನಗಳು ಧಾರ್ಮಿಕ ವಿಧಿಗಳ ನೇತೃತ್ವನ್ನು ವಹಿಸುತ್ತಿರುವುದರಿಂದ ಸ್ವಸಮಾಜದ ಕೂಡುಕಟ್ಟಿನ ಎಲ್ಲ ಹದಿನಾರು ದೇವಸ್ಥಾನಗಳ ಮುಖ್ಯಸ್ಥರ ಸಭೆಯನ್ನು ದಿನಾಂಕ 18-04-2010 ರಂದು ಕರೆದು ಶಾಸ್ತçವಿದರ ಉಪಸ್ಥಿಯಲ್ಲಿ ವಿಧಿವಿಧಾನಗಳನ್ನು ಚರ್ಚಿಸಿ ಈ ಕೆಳಗಿನ ಒಮ್ಮತಾಭಿಪ್ರಾಯಕ್ಕೆ ಬರಲಾಯಿತು.
ಕೂಟ/ಅಂಬಲ ವೀಳ್ಯ:
ಎರಡು ಕುಟುಂಬಗಳೊಳಗೆ ಸಂಬAಧ ಜೋಡಿಸುವ ಧಾರ್ಮಿಕ ವಿಧಿಯಾದ ಮದುವೆಗೆ ಕೂಡುಕಟ್ಟಿನ ದೇವಸ್ಥಾನದ ಮಾನ್ಯತೆ ಕಲ್ಪಿಸುವ
ಸಂಪ್ರದಾಯ ವಿಶೇಷವೇ ಕೂಟ. ಗಂಡುಹೆಣ್ಣುಗಳಿಬ್ಬರು ಸತಿಪತಿಗಳಾಗಿ ನಡೆಸುವ ಬಾಳ್ವೆ ಸುಮಧುರವೂ ಶುಭಪ್ರದವೂ ಆಗುವುದಕ್ಕೆ ದೇವಸ್ಥಾನದ ವರಿಷ್ಠರ ಮೂಲಕ ದೇವರ ಅನುಗ್ರಹವನ್ನು ಯಾಚಿಸುವ ಮಹತ್ವಪೂರ್ಣ ಸಂಪ್ರದಾಯವಿದಾಗಿರುತ್ತದೆ. ವಧುವರರ ಕುಟುಂಬಗಳು ಪರಸ್ಪರ ಒಪ್ಪಿಕೊಂಡು ಮಾಡಿದ ವಿವಾಹ ಒಪ್ಪಂದಕ್ಕೆ ದೇವಸ್ಥಾನದ ಔಪಚಾರಿಕ ಸಮ್ಮತಿ ಕೂಟದಲ್ಲಿ ದೊರಕುತ್ತದೆ. ಕೆಲವು ದೇವಸ್ಥಾನಗಳಲ್ಲಿ ವಿವಾಹದ ಆಮಂತ್ರಣಪತ್ರವನ್ನು ಪೌಳಿಯಲ್ಲಿಟ್ಟು ಗುರಿಕಾರರ ಮುಂದಾಳ್ತನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಂಧುಮಿತ್ರರಿಗೆ ನೀಡುವ ಸಂಪ್ರದಾಯವಿದೆ. ಇದಕ್ಕೆ ಅಂಬಲವೀಳ್ಯ ಎಂಬ ಹೆಸರಿದೆ. ಈ ಪದ್ಧತಿಯನ್ನು ಅನುಸರಿಸಬಹುದು. ದೇವಸ್ಥಾನದಿಂದ ವಧೂ ಮತ್ತು ವರನ ಪಕ್ಷದವರಿಗೆ ಮದುವೆಗೆ ದೃಢೀಕರಣ ಪತ್ರ ನೀಡುವ ಪದ್ಧತಿ ಅಳವಡಿಸುವುದು. ಈ ಪತ್ರಕ್ಕೆ ದೇವಸ್ಥಾನದ ಮೊಕ್ತೇಸರರು/ಅಧ್ಯಕ್ಷರೊಂದಿಗೆ ವಧೂವರರ ಮಾತಾಪಿತೃಗಳಲ್ಲೊಬ್ಬರು ಸಹಿ ಮಾಡುವ ಕ್ರಮ ಅನುಸರಿಸಬೇಕು. ಕೆಲವು ದೇವಸ್ಥಾನಗಳಲ್ಲಿ ಈ ಸಂಪ್ರದಾಯವು ಆಚರಣೆಯಲ್ಲಿದೆ.
ನಿಶ್ಚಿತಾರ್ಥ:
ಕುಟುಂಬದ ಸದಸ್ಯರಿಂದ ಪೂರ್ವನಿರ್ಧರಿತವಾದ ವಿವಾಹ ನಿರ್ಣಯವು ಬಂಧುಮಿತ್ರರ ಸಮ್ಮುಖದಲ್ಲಿ ಸ್ಥಿರೀಕರಣಗೊಳಿಸುವದೇ ನಿಶ್ಚಿತಾರ್ಥ. ವಧುವಿನ ಮನೆಗೆ ಬಂದ ವರ ಮತ್ತು ಬಂಧುಗಳನ್ನು ಯಥೋಚಿತವಾಗಿ ಸತ್ಕರಿಸಿ ವಧು ಮತ್ತು ವರನ ಹಿರಿಯರು ಪೂರ್ವ ಪಶ್ಚಿಮಾಭಿಮುಖವಾಗಿ ಕುಳಿತು ಪರಸ್ಪರ ಅಕ್ಷತೆ ಹಾಕಿಕೊಳ್ಳುತ್ತಾ ಪ್ರೀತಿಯನ್ನು ವಿನಿಮಯ ಮಾಡಿಕೊಳ್ಳಬೇಕು. ಶಕ್ತಿಯು ಪೂರ್ವದಿಂದ ಪಶ್ಚಿಮಕ್ಕೆ ಹರಿಯುವುದರಿಂದ ವಧುಪಕ್ಷೀಯರು ಪೂರ್ವಾಭಿಮುಖವಾಗಿ ಹಾಗೂ ವರಪಕ್ಷೀಯರು ಪಶ್ಚಿಮಾಭಿಮುಖವಾಗಿ ಕುಳಿತುಕೂಳ್ಳುವುದು ರೂಢಿ ವರನ ಪಕ್ಷದವರು ಕನ್ಯೆಯನ್ನು ಸ್ವೀಕರಿಸಲಿಚ್ಚೀಸುತ್ತೇವೆ ಎಂದೂ ವಧು ಪಕ್ಷದವರು ಪ್ರತಿಯಾಗಿ ನೀಡುತ್ತೇವೆ ಎಂದೂ ಮೂರು ಬಾರಿ ವಾಗ್ದಾನ ಮಾಡಬೇಕು. ವಾಗ್ದಾನವು ಪರಸ್ಪರರಿಗೆ ಭರವಸೆಯ ಮತ್ತು ಅತಿಕ್ರಮಿಸಬಾರದ ಒಪ್ಪಂದವೆನ್ನುವುದರ ಸಂಕೇತ.
ವಿಘ್ನವಿನಾಶಕ ಗಣಪತಿ, ಕುಲದೇವರು, ಗ್ರಾಮದೇವರು ಹಾಗೂ ಇಷ್ಟದೇವರ ಹೆಸರಿನಲ್ಲಿ ಈ ಒಪ್ಪಂದ ಮಾಡುವುದು ಸಂಪ್ರದಾಯ. ಉಭಯ
ಪಕ್ಷಗಳ ಗುರುಹಿರಿಯರು ಮತ್ತು ಸಮೀಪದ ಬಂಧುಗಳೊAದಿಗೆ ಫಲತಾಂಬೂಲವನ್ನಿರಿಸಿದ ಹರಿವಾಣದಲ್ಲಿ ಕೈಜೋಡಿಸಿ ಪವಿತ್ರವಾದ ಒಪ್ಪಂದಕ್ಕೆ ಬದ್ಧರಾಗಿರುತ್ತೇವೆAದು ಪ್ರಮಾಣ ಕೈಗೊಳ್ಳಬೇಕು.
ಮಾದರಿ ವಾಗ್ದಾನ ಈ ರೀತಿ ಇದೆ.-
ವರನ ತಂದೆ: ______________ ದೇವಸ್ಥಾನದ ಕೂಡುಕಟ್ಟಿಗೆ ಸೇರಿದ _______ ಗೋತ್ರದರವರ ಮರಿಮಗ _______ರವರ ಮೊಮ್ಮಗ ಹಾಗೂ ನನ್ನ ಮಗ ಚಿ|________ನಿಗೆ __________ದೇವಸ್ಥಾನದ ಕೂಡುಕಟ್ಟಿಗೆ ಸೇರಿದ ಗೋತ್ರದ ಶ್ರೀ ರವರ ಮಗಳಾದ ಸೌ|ಳನ್ನು ಧರ್ಮಪತ್ನಿಯನ್ನಾಗಿಸುವುದಕ್ಕಾಗಿ ಕನ್ಯಾದಾನ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ.
ವಧುವಿನ ತಂದೆ: ದೇವಸ್ಥಾನದ ಕೂಡುಕಟ್ಟಿಗೆ ಸೇರಿದ ಗೋತ್ರದ ರವರ ಮರಿಮಗಳು ರವರ ಮೊಮ್ಮಗಳು
ಹಾಗೂ ನನ್ನ ಮಗಳಾದ ಸೌ| ಳನ್ನು ರ ಮಗನಾದ ಚಿ|_ನಿಗೆ ಧರ್ಮಪತ್ನಿಯನ್ನಾಗಿಸುವುದಕ್ಕಾಗಿ ವರನ ತಂದೆ ಕೇಳಿಕೊಂಡAತೆ
ಕನ್ಯಾದಾನ ಮಾಡಲು ಒಪ್ಪಿರುತ್ತೇನೆ.
ಈ ಮೇಲಿನ ವಾಗ್ದಾನವನ್ನು ಮೂರುಬಾರಿ ಮಾಡಬೇಕು.
ವಾಗ್ದಾನದ ಬಳಿಕ ವರನ ತಾಯಿ ವಧುವಿಗೆ ಸೀರೆ, ಹೂ ಮತ್ತು ಮಂಗಲದ್ರವ್ಯಗಳನ್ನು ನೀಡಿ ಹರಸಬೇಕು. ಹೀಗೆ ನೀಡಲಾದ ಸೀರೆ ಹಾಗೂ
ಪುಷ್ಪಾದಿಗಳನ್ನು ಧರಿಸಿ ಬಂದ ಕನ್ಯೆಗೆ ಸುಮಂಗಲೆಯರು ಆರತಿ ಎತ್ತಬೇಕು. ಈ ಸಮಾರಂಭದAದು ವಧೂವರರು ಪರಸ್ಪರ ಹಾರ
ಹಾಕಿಕೊಳ್ಳಬಾರದು. ಹಾರಾರ್ಪಣೆಯು ವರನು ವಧೂವನ್ನು ತನ್ನ ಮನೆ ಮತ್ತು ಮನದ ಒಡತಿಯನ್ನಾಗಿ ಸ್ವೀಕರಿಸುವ ಹಾಗೆಯೇ ವಧು ವರನನ್ನು ತನ್ನ ಪತಿಯನ್ನಾಗಿ ಒಪ್ಪಿಕೊಳ್ಳುವ ದ್ಯೋತಕವಾದ್ದರಿಂದ ಸುಲಗ್ನದ ಸುಮೂಹೂರ್ತದಲ್ಲಿ ನಡೆಯಬೇಕಾಗಿದ್ದು ಮೊದಲಾಗಿ ಸರ್ವಥಾ ಸಲ್ಲದು.ಹಾಗೆಯೇ ವಧೂವರರನ್ನು ಜೊತೆಯಲ್ಲಿ ಕುಳ್ಳಿರಿಸಿ ಆರತಿಯನ್ನೂ ಮಾಡಬಾರದು. ನಿಶ್ಚಿತಾರ್ಥದಂದು ವಧೂವರರು ಪರಸ್ಪರ ಉಂಗುರ
ವಿನಿಮಯ ಮಾಡಿಕೊಳ್ಳುವುದು ಜಾರಿಯಲ್ಲಿದೆ. ಆದರೆ ಇದು ಶಾಸ್ತಿçÃಯ ಸಂಪ್ರದಾಯವಲ್ಲ. ವಿವಾಹ ಪೂರ್ವದಲ್ಲಿ ನಿಶ್ಚಿತಾರ್ಥವಾಗಿದ್ದರೆ
ಮದುವೆ ದಿನದಂದು ನೆರವೇರಿಸುವ ಅಗತ್ಯವಿಲ್ಲ. ನಿಶ್ಚಿತಾರ್ಥದಂದು ಕಡ್ಡಾಯವಾಗಿ ಸಸ್ಯಾಹಾರವನ್ನೇ ಸೇವಿಸಬೆಕು.
ನಾಂದಿ:
ದೇವತೆಗಳನ್ನೂ, ಪಿತೃಗಳನ್ನೂ ತೃಪ್ತಿಪಡಿಸುವ ವಿಧಿಯೇ ನಾಂದಿ. ಪಿತೃ ಮತ್ತು ದೇವತೆಗಳು ಸಂತುಷ್ಟರಾದರೆ ಸೂತಕಾದಿ ದೋಷಗಳು ಬಂದರೂ ವಿವಾಹಕ್ಕೆ ಬಾಧಕವಾಗುವುದಿಲ್ಲ. ಅದಕ್ಕಾಗಿ ಮದುವೆಗೆ ಹತ್ತು ದಿನಗಳ ಪೂರ್ವದಲ್ಲಿ ನಾಂದಿ ಕರ್ಮವನ್ನು ಮಾಡಬೇಕು. ವಧೂವರರ ಮತ್ತು ಹೆತ್ತವರ ಮುಂಗೈಗೆ ಅರಶಿನ ಕಡ್ಡಿಯನ್ನು ಮಂತ್ರಪೂತವಾಗಿ ಪುರೋಹಿತರು ಕಟ್ಟುವುದರೊಂದಿಗೆ ವರನ ಕೈಯಲ್ಲಿ ವೇಣುದಂಡ (ಎರಡು ಅಡಿಕೆ ಮತ್ತು ಹೂವನ್ನು ಕಟ್ಟಿದ ಒಂದು ಬಿದಿರಿನ ಕೋಲು) ನೀಡುವರು. ವಧೂ ಮತ್ತು ವರನ ಪಕ್ಷದಲ್ಲಿ ಒಂದೇ ದಿನ ನಾಂದಿಯನ್ನು ಮಾಡುವುದು ಉತ್ತಮ. ವರನಿಗೆ ಉಪನಯನ ಸಂಸ್ಕಾರ ಆಗದಿದ್ದಲ್ಲಿ ನಾಂದಿಯೊAದಿಗೆ ಈ ಸಂಸ್ಕಾರವನ್ನು ನೆರವೇರಿಸಬೇಕು.
ಉಪನಯನದಿಂದ ವೇದವ್ರತದೀಕ್ಷೆಯೂ ಸಾವಿತ್ರೀವ್ರತದೀಕ್ಷೆಯೂ ಆಗುವುದರಿಂದ ಧಾರ್ಮಿಕ ಕ್ರಿಯೆಗಳ ಅಧಿಕಾರ ಪ್ರಾಪ್ತಿಯಾಗಲು ಉಪನಯನ ಅಗತ್ಯ.
ನಾಂದಿಯ ಬಳಿಕ ಸ್ವಸ್ಥಾನ ಬಿಟ್ಟು ಹೊರಗೆ ಹೋಗಬಾರದು ಎಂಬುದು ನಿಯಮ. ವ್ರತಧಾರಿಗಳಿಗೆ ಬಾಹ್ಯ ಸಂಚಾರ ಕಾರಣವಾದ ಆಪತ್ತು
ಬರಬಾರದೆಂಬುದು ಹಾಗೂ ಅಶುದ್ದ ವಸ್ತು ವಿಚಾರಗಳ ಸಾಂಗತ್ಯ ಆಗಬಾರದೆನ್ನುವ ತತ್ವವೇ ಇಲ್ಲಿ ಪ್ರಧಾನ ಅಂಶ. ನಾಂದಿ ಕರ್ಮದಿಂದ ವಿವಾಹ ಸಮಾಪ್ತಿಯವರೆಗೂ ಸಾತ್ವಿಕವಾದ ಸಸ್ಯಾಹಾರವನ್ನೇ ಸೇವಿಸಬೇಕು. ಈ ನಾಂದಿಯು ವಿವಾಹಕ್ಕೆ ಮಾತ್ರ ಅನ್ವಯಿಸುವುದಲ್ಲದೆ ಇತರ
ಶುಭಕಾರ್ಯಗಳಿಗೆ ಅಬಾಧಿತವಾಗುವುದಿಲ್ಲ.
ಸಮಾವರ್ತನ:
ನಾಂದಿಯೊAದಿಗೆ ಸಮಾವರ್ತನ ವಿಧಿಯನ್ನು ನೆರವೇರಿಸಬೇಕು. ಸಮಾವರ್ತನವೆಂದರೆ ಚೆನ್ನಾಗಿ ಹಿಂದಿರುಗುವುದು ಎಂದರ್ಥ. ವಿದ್ಯಾರ್ಥಿ
ಜೇವನದ ಕಠಿಣತರ ನಿಯಮಗಳಿಂದಾಗಿ ಸೌಂದರ್ಯಪ್ರಜ್ಞೆಯಿAದ ವಿಮುಖನಾದ ಬ್ರಹ್ಮಚಾರಿಯ ಕೇಶಕರ್ತನ ದಂತಧಾವನಾದಿಗಳನ್ನು ಮಾಡಿ ಸುಗಂಧದ್ರವ್ಯಗಳನ್ನು ಲೇಪಿನಿಕೊಂಡು ಗೃಹಸ್ಥ ಜೀವನ ಶೈಲಿಗೆ ಸಿದ್ಧನಾಗಿ ಗುರುಕುಲದಿಂದ ಹಿಂದಿರುಗುತ್ತಾನೆ. ಸಮಾವರ್ತನೆಯಲ್ಲಿ ಸ್ನಾನವು ಪ್ರಧಾನವಾದ್ದರಿಂದ ಇದನ್ನು ಸ್ನಾನಕರ್ಮವೆಂದೂ ಕರೆಯುತ್ತಾರೆ. ಸ್ನಾನ ಮಾಡಿದ ಬ್ರಹ್ಮಚಾರಿ ಸ್ನಾತಕನಾಗುತ್ತಾನೆ. ಈ ವಿಧಿಯನ್ನು
ಪುರೋಹಿತರು ಮಂತ್ರಪುರಸ್ಸರವಾಗಿ ಮಾಡುತ್ತಾರೆ.
ದಿಬ್ಬಣ ಸ್ವಾಗತಿಸುವುದು:
ದಿಬ್ಬಣವೆಂದರೆ ದಿವ್ಯವಾದ ಬಣ ಅಥವಾ ಗುಂಪು ಎಂದರ್ಥ. ಈ ದಿವ್ಯತೆ ಒಡಮೂಡಲು ದಿಬ್ಬಣಿಗರೆಲ್ಲ ವಸ್ತç, ದೇಹ ಮತ್ತು ವಾಕ್
ಶುದ್ದಿಯನ್ನು ಹೊಂದಿರಬೇಕು. ಶಾಸ್ತಿçÃಯವಾಗಿ ವಧೂಗೃಹದಲ್ಲಿ ಮದುವೆ ನಡೆಯಬೇಕಾಗಿದ್ದು ಬದಲಾದ ಕಾಲಧರ್ಮಕ್ಕನುಸಾರವಾಗಿ ಕಲ್ಯಾಣ ಮಂಟಪವೇ ವಧೂಗೃಹ. ಬಹುತೇಕ ವಧೂಪಕ್ಷೀಯರು ವಿವಾಹ ವ್ಯವಸ್ಥೆ ಮತ್ತು ಹೊಣೆ (ವೆಚ್ಚ)ಯನ್ನು ವಹಿಸುವುದರಿಂದ ಶಾಸ್ತçವಿಧಿಯಂತೆ ವರಪಕ್ಷವನ್ನು ಸ್ವಾಗತಿಸಬೇಕು ಅಥವಾ ದಿಬ್ಬಣ ತೆಗೆದುಕೊಳ್ಳಬೇಕು.
ಇದಕ್ಕೆ ಪೂರ್ವಸಿದ್ದತಾ ರೂಪವಾಗಿ ಮನೆಯಲ್ಲಿ ದೇವತಾ ಪ್ರಾರ್ಥನೆಯನ್ನು ಪೂರೈಸಿ ಮೂಹರ್ತಕ್ಕಿಂತ ಕನಿಷ್ಠ ಎರಡು ಗಂಟೆಗಳ
ಪೂರ್ವದಲ್ಲಿ ವೇಣುದಂಡ ಸಹಿತ ಬಾಸಿಂಗ ಕಟ್ಟಿಕೊಂಡ ವರನು ದಿಬ್ಬಣಿಗರೊಂದಿಗೆ ಕಲ್ಯಾಣಮಂಟಪಕ್ಕೆ ಆಗಮಿಸಬೇಕು. ಪರ್ಯಾಯವಾಗಿ
ವರನ ಪಕ್ಷದ ವತಿಯಿಂದಲೇ ವಿವಾಹ ಕಾರ್ಯಕ್ರಮ ವ್ಯವಸ್ಥೆಯಾಗುವುದಿದ್ದಲ್ಲಿ ಹೊಂದಾಣಿಕೆಯ ಮನೋಧರ್ಮವನ್ನನುಸರಿಸಿ ವಧೂಪಕ್ಷವನ್ನು
ಸ್ವಾಗತಿಸಬಹುದು. ನಮ್ಮ ಸಮಾಜದಲ್ಲಿ ಹದಿನಾರು ದೇವಸ್ಥಾನಗಳ ಕೂಡುಕಟ್ಟಿನ ವ್ಯವಸ್ಥೆ ಇರುವುದರಿಂದ ವಧುಪಕ್ಷದವರಾದರೂ ತಮ್ಮ
ದೇವಸ್ಥಾನದ ಗುರಿಕಾರ ಪ್ರಮುಖರೊಂದಿಗೆ ಇನ್ನೊಂದು ದೇವಸ್ಥಾನ ಅಥವಾ ವಿವಾಹ ಸ್ಥಳಕ್ಕೆ ಆಗಮಿಸಿದಾಗ ಯಥಾಯೋಗ್ಯ ಸತ್ಕರಿಸುವುದು
ಅಂಗೀಕೃತ ಪೂರ್ವಪದ್ದತಿ. ಸ್ವಾಗತದ ಅಂಗವಾಗಿ ವಧೂ ಮತ್ತು ವರನ ಪಕ್ಷದ ಸುಮಂಗಲೆಯರು ಪನ್ನೀರು, ಅರಶಿನ, ಕುಂಕುಮ, ಗಂಧ, ಹೂ,
ಎಲೆ, ಅಡಿಕೆ, ಚಂದ್ರಕಸ್ತೂರಿ ಮತ್ತು ಅಕ್ಷತೆಯನ್ನೊಳಗೊಂಡ ಮಂಗಳದ್ರವ್ಯಗಳನ್ನು ವಿನಿಮಯ ಮಾಡಿಕೊಳ್ಳಬೇಕು. ವರನ ಸಹೋದರಿ ಕಲಶ
ಮತ್ತು ಕನ್ನಡಿ ಹಿಡಿಯಬೇಕು. ಈ ಶುಭಾವಸರದಲ್ಲಿ ಯಾರೂ ಪಾದರಕ್ಷೆಗಳನ್ನು ಧರಿಸಬಾರದು. ಮಂಗಳದ್ರವ್ಯಗಳ ವಿನಿಮಯದ ಬಳಿಕ ವಧುವಿನ ತಂದೆ ತನ್ನ ಪತ್ನಿ ಸುರಿದ ಶುದ್ಧಜಲದಿಂದ ವರನ ಪಾದವನ್ನು ತೊಳೆಯಬೇಕು.
ವರನು ಶ್ರೀಮನ್ನಾರಾಯಣನೆನ್ನುವ ಅನುಸಂಧಾನವಾದ್ದರಿAದ ಪಾದಪ್ರಕ್ಷಾಲನದ ಸ್ವಾಗತ ನೀಡಬೇಕು. ಅಥವಾ ಈಗಾಗಲೇ ಕೆಲವು
ದೇವಸ್ಥಾನಗಳಲ್ಲಿ ಬಳಕೆಯಲ್ಲಿರುವಂತೆ ವಧುವಿನ ಸಹೋದರನು ಪಾದ ಪ್ರಕ್ಷಾಲನದೊಂದಿಗೆ ಸ್ವಾಗತಿಸಬಹುದು. ಅಲ್ಲದೆ ಪ್ರತಿಯೊಂದರಲ್ಲೂ
ನಾಲ್ಕು ಬತ್ತಿಗಳುಳ್ಳ ಎರಡು ಹಣತೆ(ನೀಲಾಂಜನ)ಗಳನ್ನಿರಿಸಿದ ದೀಪಗಳ ಹರಿವಾಣದಿಂದ ವಧುವಿನ ತಾಯಿ/ ಸಹೋದರಿ
ಸುಮಂಗಲೆಯರೊAದಿಗೆ ಆರತಿ ಬೆಳಗಬೇಕು. ದೈಹಿಕ, ಮಾನಸಿಕ, ವಾಚಿಕ ಮತ್ತು ಮೈಥುನ ಜನ್ಯವಾದ ದೋಷನಿವಾರಣೆಗೆ ನಾಲ್ಕು ಬತ್ತಿಗಳ
ದೀಪ ಬೆಳಗಬೇಕೆಂದು ಶಾಸ್ತçವಿಧಿ. ಬಳಿಕ ವಧುವಿನ ತಂದೆ/ ಸಹೋದರ ವರನನ್ನು ವಿವಾಹ ಮಂಟಪಕ್ಕೆ ಕರೆದುಕೊಂಡು ಬರಬೇಕು.
ಪುಣ್ಯಾಹ ಮತ್ತು ಯಜ್ಞೋಪವೀತ ಧಾರಣೆ: ಪುಣ್ಯಾಹವೆಂದರೆ ಮಂಗಳಕರವಾದ ದಿನವೆಂದರ್ಥ. ಬಾಹ್ಯ ಮತ್ತು ಅಂತಃ ಶುದ್ದಿಯು ಎಲ್ಲ
ಮಂಗಳ ಕರ‍್ಯಾಚರಣೆಗೆ ಬಹುಮುಖ್ಯ. ಆದ್ದರಿಂದಲೇ ಮಂತ್ರಪೂತವಾದ ಶುದ್ದಜಲವನ್ನು ಪುರೋಹಿತರು ವಧುವರರಿಗೂ ಮಾತಾಪಿತೃಗಳಿಗೂ ಪ್ರೋಕ್ಷಿಸುವ ಮೂಲಕ ಧಾರ್ಮಿಕಕಾರ್ಯಕ್ಕೆ ಅವರನ್ನು ಸಜ್ಜುಗೊಳಿಸುವುದೇ ಈ ವಿಧಿ. ಹರಿನಾಮ ಸ್ಮರಣೆಯಿಂದ ಎಲ್ಲ ಅಪವಿತ್ರವು ನಾಶ
ಹೊಂದಿ ಬಾಹ್ಯಾಭ್ಯಂತರಗಳ ಶುದ್ಧಿಯಾಗುವುದರಿಂದ ಈ ಸಂದರ್ಭದಲ್ಲಿ ನಾರಾಯಣ ಸ್ಮರಣೆ ಮಾಡಬೇಕು. ತದನಂತರದಲ್ಲಿ
ಗೃಹಸ್ಥಧರ್ಮಸೂಚಕವಾದ ಎರಡನೆಯ ಯಜ್ಞೋಪವೀತ ಧಾರಣೆ ಮಾಡಬೇಕು.
ವಾಗ್ದಾನ:
ನಿಶ್ಚಿತಾರ್ಥದಂದು ನಡೆದ ವಾಗ್ದಾನದ ಪ್ರಕ್ರಿಯೆಯನ್ನು ಪುರೋಹಿತರು ಪುನರಪಿ ಮಾಡಿಸುತ್ತಾರೆ. ಮದುವೆಯ ಪವಿತ್ರ ಒಪ್ಪಂದವನ್ನು
ನೆರೆದ ಬಂಧುಮಿತ್ರರ ಸಮ್ಮುಖದಲ್ಲಿ ದೃಢಪಡಿಸುವುದೇ ವಾಗ್ದಾನ.
ಶಚಿ ಪೂಜೆ:
ವಿವಾಹಕ್ಕೆ ಅಧಿಕೃತವಾದ ವಾಗ್ದಾನಾನಂತರ ಸಂಪತ್ಸಮೃದ್ಧಿಯನ್ನು ಪ್ರಾರ್ಥಿಸಿ ವಧುವು ಶಚಿಪೂಜೆ ಮಾಡುವುದು ಕ್ರಮ.
ಶಚಿದೇವಿಯು ವಿವಾಹಭಾಗ್ಯದ ದೇವತೆ. ವಿವಾಹ ಭಾಗ್ಯವನ್ನೂ ವಿವಾಹನಂತರದ ಮಾಂಗಲ್ಯದ ಮುತ್ತೆöÊದೆಭಾಗ್ಯವನ್ನು ಪುತ್ರಾದಿ ಪ್ರಾಪ್ತಿಯನ್ನು ಪ್ರಾರ್ಥಿಸಿ ಕನ್ಯಾದಾನ ಮಾಡುವುದು ವಿಧಿ. ಶಚಿದೇವಿಯನ್ನು ವಸ್ತç (ಸೀರೆ) ಸಮರ್ಪಣೆಯಿಂದ ಪ್ರಸನ್ನೀಕರಿಸುವುದು ಶಾಸ್ತç. ವಧುವಿನ ಪಕ್ಷದಿಂದಲೇ ಈ ಸೀರೆಯನ್ನು ವ್ಯವಸ್ಥೆಗೊಳಿಸಬೇಕಾಗಿದ್ದು ಪುರೋಹಿತರು ಈ ಸೀರೆಯನ್ನು ಮಂತ್ರಪುರಸ್ಸರವಾಗಿ ಶಚಿದೇವಿಗೆ ಸಮರ್ಪಿಸಿದ ಬಳಿಕ ವಧುವಿಗೆ ತೊಡಿಸಬೇಕು. ಇದೇ ಅಧಿಕೃತವಾದ ಧಾರೆಸೀರೆ. ಕನ್ಯಾಪಿತೃಗಳು ಕನ್ಯಾದಾನ ಮಾಡುವಾಗ ತಮ್ಮ ಹಾಗೂ ತಮಗಿಷ್ಟವಾದ ವಸ್ತುಗಳಿಂದ ವಧುವನ್ನು ಅಲಂಕರಿಸಿ ಧಾರೆಯೆರೆಯುವುದು ಶಾಸ್ತçವಾದ್ದರಿಂದ ಧಾರಾಮೂಹರ್ತದಲ್ಲಿ ವಧು ಪಕ್ಷದ ಸೀರೆಯನ್ನೇ ಧರಿಸಬೇಕು. ಕೆಲವುಭಾಗದಲ್ಲಿ ವರನಕಡೆಯ ಸೀರೆಯನ್ನೇ ಧಾರೆ ಸೀರೆಯಾಗಿ ಪರಿಗಣಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ.
ಮಧುಪರ್ಕ (ವರಪೂಜೆ):
ವಧುಗೃಹಕ್ಕೆ ಕನ್ಯಾರ್ಥಿಯಾಗಿ ಬಂದ ವರನನ್ನು ಪೂಜಿಸಿ ಸತ್ಕರಿಸುವುದು ಬ್ರಾಹ್ಮ ವಿವಾಹ ಪದ್ದತಿಯ ಪ್ರಧಾನ ಆಶಯ. ಈ ಸಂದರ್ಭದಲ್ಲಿ
ನೀಡುವ ಮೊಸರು, ಜೇನು ಮತ್ತು ತುಪ್ಪಗಳ ಮಿಶ್ರಣವಾಗಿರುವ ಮಧುಪರ್ಕವೇ ವರಪೂಜೆಯ ರ‍್ಯಾಯ ಪದವಾಗಿ ರೂಢಿಯಲ್ಲಿದೆ.
ಪುರೋಹಿತರು ಮಂತ್ರೋಕ್ತವಾಗಿ ಮಧುಪರ್ಕ ಸತ್ಕಾರದ ಸಂಕಲ್ಪವನ್ನು ಕನ್ಯಾಪಿತೃಗಳಿಂದ ಮಾಡಿಸುತ್ತಾರೆ. ಮಧುಪರ್ಕವನ್ನು ಸ್ವೀಕರಿಸಿದ ವರನು ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶಾದಿತ್ಯರು ಹಾಗೂ ದಶವಿಶ್ವದೇವತೆಗಳಿಗೆ ಸಮರ್ಪಣೆಯ ಮಾಡುವ ವಿಧಿಯನ್ನು ಪುರೋಹಿತರು ಮಾಡಿಸುತ್ತಾರೆ. ದೇವತೆಗಳನ್ನು ಪ್ರಸನ್ನೀಕರಿಸುವ ಮೂಲಕ ದುಷ್ಟಶಕ್ತಿಗಳಿಂದ ವಿವಾಹಕ್ಕೆ ಒದಗಬಹುದಾದ ಅಂತರಾಯ(ಅಡ್ಡಿ)ವನ್ನು ತಡೆಯುವುದು ಈ ವಿಧಿಯ ಅಂತಃಸ್ಪೂರ್ತಿ. ಇದರೊಂದಿಗೆ ಸಾಂಕೇತಿಕ ಅಥವಾ ಯಥಾಸಾಧ್ಯ ವಸ್ತು ಒಡವೆಗಳ ಉಡುಗೊರೆ (ಪೂಜಾ ಸಾಮಾಗ್ರಿಗಳಾದ ಪಂಚಪಾತ್ರೆ, ಉದ್ಧರಣೆ, ಗಂಟಾಮಣಿ, ಆರತಿ, ಹರಿವಾಣ, ಜನಿವಾರ, ಪಂಚೆ, ಶಾಲು ಇತ್ಯಾದಿ) ನೀಡಬೇಕು.
ಉತ್ತರೀಯ ತಯಾರಿ:
ವರಪೂಜೆ ಮುಕ್ತಾಯವಾಗುತ್ತಿದ್ದಂತೆ ವರನ ತಂದೆ ವಿವಾಹಮಹೋತ್ಸವದಲ್ಲಿ ಧರಿಸುವ ಅರಶಿನ, ಅಕ್ಷತೆ ಮತ್ತು ಹಿರಣ್ಯ(ಚಿನ್ನ)ವನ್ನಿರಿಸಿ
ಸುತ್ತಿದ ಉತ್ತರೀಯವನ್ನು ತಯಾರಿಸಿ ವಧುವಿನ ಸೋದರಮಾವನಿಗೆ ನೀಡುತ್ತಾ ಸೊಸೆಯನ್ನು ಮೂಹೂರ್ತಕ್ಕೆ ಸರಿಯಾಗಿ ಮಂಟಪಕ್ಕೆ
ಕರೆತರುವAತೆ ನಿವೇದಿಸುತ್ತಾರೆ. ಉತ್ತರೀಯವು ನವವಧುವಿಗೆ ಅನಿಷ್ಟಕಾರಕವಾದ ದೃಷ್ಟಿದೋಷವನ್ನು ನಿವಾರಿಸುವ ಉದ್ದೇಶವುಳ್ಳದ್ದಾಗಿರುತ್ತದೆ. ಉತ್ತರೀಯದೊಂದಿಗೆ ಬಾಸಿಂಗ ಹೂಹಾರ ಮತ್ತು ಬೀಸಣಿಗೆ ಇತ್ಯಾದಿಗಳನ್ನೂ ನೀಡಬೇಕು.
ವರನ ಸಿದ್ಧತೆ:
ವರಪೂಜೆಯಲ್ಲಿ ನೀಡಿದ ವಸ್ತಾçಭರಣಗಳಿಂದ (ಬನಿಯನ್ ಶರ್ಟ್ಗಳಿಲ್ಲದೆ) ಅಲಂಕೃತವಾದ ವರನನ್ನು ಮಾವ ವಿವಾಹಮಂಟಪಕ್ಕೆ
ಕರೆದುಕೊAಡು ಬಂದು ಪುರೋಹಿತರು ಸಿದ್ದಪಡಿಸಿದ ಪದ್ಮಮಂಡಲದಲ್ಲಿ ಪಶ್ಚಿಮಾಭಿಮುಖವಾಗಿ ನಿಲ್ಲಿಸಬೇಕು.
ವಧುವಿನ ಸಿದ್ಧತೆ:
ಸಾಲಂಕೃತ (ಉತ್ತರೀಯ ಮತ್ತು ಬಾಸಿಂಗ ಧರಿಸಿ ಕೈಯಲ್ಲಿ ಹಾರ ಹಿಡಿದ) ವಧುವನ್ನು ವಧುವಿನ ಸೋದರಮಾವ ಮಂಟಪಕ್ಕೆ
ಕರೆದಕೊAಡು ಬಂದು ಪೂರ್ವಾಭಿಮುಖವಾಗಿ ಪದ್ಮಮಂಡಲದಲಿ ನಿಲ್ಲಿಸುವುದು.
ನಿರೀಕ್ಷಣೆ ಮತ್ತು ಮಾಲಾರ್ಪಣೆ:
ವಧೂವರರ ಮಧ್ಯೆ ಈಗ ಅಂತಃಪಟವಿದ್ದು ಇಬ್ಬರೂ ಶುಭಮುಹೂರ್ತದ ನಿರೀಕ್ಷೆಯಲ್ಲಿರುತ್ತಾರೆ. ಆದ್ದರಿಂದ ಈ ಕಾಲ ನಿರೀಕ್ಷಣಾ ಕಾಲ.
ವಧೂವರರು ಪೂರ್ವದಲ್ಲಿ ಪರಸ್ಪರರನ್ನು ನೋಡಿ ಮಾತಾಡಿದ್ದರೂ ಇದೇ ಪ್ರಥಮ ಬಾರಿಗೆ ಮಂತ್ರಘೋಷಗಳ ಮಧ್ಯೆ ಪತಿಪತ್ನಿ ಭಾವದ
ಉತ್ಕರ್ಷದ ಹೊಳಪು ಉಭಯರ ದೃಷ್ಟಿಗಳಲ್ಲಿರುತ್ತದೆ. ಮುಹೂರ್ತ ಸನ್ನಿಹಿತವಾದಾಗ ಪರಸ್ಪರರ ದೃಷ್ಟಿಗಳು ಅಪೂರ್ವವಾಗಿ ಸಂಗಮಿಸುತ್ತವೆ.
ವರನ ದೃಷ್ಟಿಯಲ್ಲಿ ವಧುವು ಸ್ಚಗೃಹವನ್ನು ಭಕಿ,್ತ ಪ್ರೀತಿ, ಮತ್ತು ವಾತ್ಸಲ್ಯಾದಿಗಳಿಂದ ಬೆಳಗುವ ಮಹಾಲಕ್ಷಿö್ಮÃಯೆನ್ನುವ ಕಲ್ಪನೆಯಿರುತ್ತದೆ. ಅಂತೆಯೇ ವಧೂವು ಧರ್ಮಾರ್ಥಕಾಮಗಳಲ್ಲಿ ತನ್ನ ಸಹಚರನಾಗುವ ವರನಲ್ಲಿ ಗೌರವದ ದೃಷ್ಟಿಯನ್ನಿರಿಸುತ್ತಾಳೆ. ಈ ಕಾಲದಲ್ಲಿ ಶುಭಯೋಗವಿದ್ದಾಗ ಮುಂದಿನ ಪತಿಪತ್ನೀ ಭಾವ ದೃಢವಾಗಿ ಸಮೃದ್ಧ ವೈವಾಹಿಕ ಜೀವನಕ್ಕೆ ನಾಂದಿಯಾಗುತ್ತದೆ. ಆಗಲೇ ವಧುವು ತನ್ನೆರಡು ಕೈಗಳಿಂದ ಮೊದಲಾಗಿ ವರನ ಕಂಠದಲ್ಲಿ ಮಾಲಾಧಾರಣೆ ಮಾಡುತ್ತಾಳೆ. ಬಳಿಕ ವರನು ವಧುವಿಗೆ ಬಲಗೈಯಿಂದ ಮಾಲೆ ಹಾಕಬೇಕು. ತದನಂತರ ವಧುವನ್ನು ಪಾಶ್ಚಿಮಾಭಿಮುಖವಾಗಿಯೂ ವರನನ್ನು ಪೂರ್ವಾಭಿಮುಖವಾಗಿಯೂ ನಿಲ್ಲಿಸಬೇಕು. ಮುಂದಿನ ಎಲ್ಲ ವಿಧಿಗಳಲ್ಲೂ ಇದೇ ಕ್ರಮ ಮುಂದುವರಿಯುತ್ತದೆ.
ಕAಕಣಧಾರಣೆ ಮತ್ತು ಧಾರೆ ಎರೆಯುವುದು:
ವಧೂವರರು ಮುಂದೆ ಜೀವನದಲ್ಲಿ ಒಂದಾಗಿ ಬಾಳಬೇಕಾದವರು. ದೇಹವೆರಡಾದರೂ, ಒಂದೇ ಮನಸ್ಸಿನಿಂದ ಜೀವನ ರಥವನ್ನು
ಎಳೆಯುವವರು. ಹಾಗಾಗಿ ಅವರೀರ್ವರನ್ನು ಒಂದಾಗಿಸುವ ಪ್ರಕ್ರಿಯೆಯ ಸಂಕೇತವಾಗಿ ಮಂತ್ರಪೂರ್ವಕವಾದ ಸೂತ್ರ (ಕಂಕಣ) ಬಂಧ
ನಡೆಯತ್ತದೆ. ಕಂಠಪ್ರದೇಶದಿAದ ತುಸು ಕೆಳಗೆ ನಾಲ್ಕು ಸುತ್ತು ಬಳಸಿದ ಸೂತ್ರದಿಂದ ಹಾಗೆಯೇ ಕಟಿ(ಸೊಂಟ) ಪ್ರದೇಶದಲ್ಲಿ ಐದು ಸುತ್ತು ಬಳಸಿದ ಸೂತ್ರದಿಂದ ಬಂಧಿಸುವುದು ಪದ್ದತಿ. ಕಟಿಪ್ರದೇಶದಿಂದ ಬಂಧವನ್ನು ಮೇಲ್ಮುಖವಾಗಿ ಹೊರತೆಗೆದು ಹುಡುಗಿ ಹುಡುಗನ ಕೈಗೆ ಕಟ್ಟುವಳು. ಹಾಗೆಯೇ ಕಂಠಕ್ಕೆ ಸಮೀಪದ ಬಂಧವನ್ನು ಕೆಳಗಿನಿಂದ ಅಂದರೆ ಕಾಲತುದಿಯಿಂದ ಹೊರತೆಗೆದು ವರನು ವಧುವಿಗೆ ಕಟ್ಟುವನು. ವಧುವನ್ನು ವರನ ಕುಟುಂಬಕ್ಕೆ ಅಧಿಕೃತವಾಗಿ ಸೇರ್ಪಡೆಗೊಳಿಸುವ ಈ ಸೂತ್ರಬಂಧವು ವಧುವು ವರನ ಗೋತ್ರದವಳೆಂದು ಮಾನಿಸಲ್ಪಡುವ ಸಂಕೇತವೂ ಆಗಿರುತ್ತದೆ.
ಸೂತ್ರಬAಧನದ ಬಳಿಕ ಕನ್ಯಾದಾನ ನಡೆಯುತ್ತದೆ. ಕನ್ಯಾದಾನವು ಮಹಾದಾನವಾಗಿದ್ದರಿಂದ ಪುರೋಹಿತರು ವಿಧಿವತ್ತಾಗಿ
ಮಂತ್ರಘೋಷದೊAದಿಗೆ ಸಂಕಲ್ಪಮಾಡಿಸುತ್ತಾರೆ. ತನ್ನ ಕುಲದ ಹಿಂದುಮುAದಿನ ಹತ್ತು ತಲೆಮಾರಿನ ಉದ್ಧಾರಕ್ಕಾಗಿ ಸಾಲಂಕೃತ ಕನ್ಯೆಯನ್ನು ಶ್ರೀ ಲಕ್ಷಿö್ಮÃನಾರಾಯಣ ಪ್ರೀತ್ಯರ್ಥವಾಗಿ ದಾನ ಮಾಡುವ ಸಂಕಲ್ಪ ನಡೆಯತ್ತದೆ. ವಧುವಿನ ತಂದೆ ಸಪತ್ನೀಕನಾಗಿ ಪುತ್ರಿಯ ಅಂಜಲಿ(ಬೊಗಸೆ)ಯನ್ನು ವರನ ಅಂಜಲಿಯ ಮೇಲಿಟ್ಟು ಕಲಶಜಲದಿಂದ ಧಾರೆ ಎರೆಯಬೆಕು. ಶಚಿದೇವಿಗೆ ಹೊದಿಸಿ ನಿವೇದಿಸಿದ ವಧುವಿನ ಪಕ್ಷದ ಸೀರೆಯಲ್ಲೇ ಕನ್ಯಾದಾನ ಅಂದರೆ ಧಾರೆ ಎರೆಯಬೇಕು. ಧಾರೆ ಎರೆದು ಕನ್ಯಾದಾನವಾಗುವ ವರೆಗೆ ಕನ್ಯೆಯು ಪಿತೃವಿನ ಮನೆಯ ಸದಸ್ಯೆಯಾದ್ದರಿಂದ ತಾಯಿ ಮನೆಯ ಸೀರೆಯಲ್ಲೇ ಧಾರೆ ಎರೆಯಬೇಕಾದುದು ಶಾಸ್ತç ಸಮ್ಮತ. ಧಾರೆ ಎರೆದ ಬಳಿಕ ವಿವಾಹಹೋಮಕ್ಕೆ ಪುರೋಹಿತರು ಸಿದ್ಧತೆ ನಡೆಸುತ್ತಾರೆ. ಈ ಸಮಯದಲ್ಲಿ ವಧುವು ವರನ ಪಕ್ಷದ ತಾಳಿಸೀರೆ (ವರನ ಕಡೆಯ ಧಾರೆಸೀರೆ)ಯನ್ನು ಧರಿಸಿ ವಿವಾಹ ಹೋಮಕ್ಕೆ ಸಿದ್ಧಳಾಗಿ ಬರಬೇಕು.
ಲಾಜಾಹೋಮ (ವಿವಾಹಹೋಮ):
ವಿವಾಹಹೋಮಕ್ಕೆ ಲಾಜಾಹೋಮ ಎಂಬ ಹೆಸರೂ ಇದೆ. ಈ ಹೋಮದಲ್ಲಿ ಅರಳು ಸಮರ್ಪಣೆ ಮಾಡಲಾಗುವುದರಿಂದ ಈ ಹೆಸರು
ಬಂದಿದೆ. ಎರಡು ಮನಸ್ಸುಗಳನ್ನು ಒಂದಾಗಿಸುವ ‘ಯೋಜಕ’ ಎಂಬ ಅಗ್ನಿಯನ್ನು ಈ ಹೋಮಕ್ಕಾಗಿ ಪ್ರತಿಷ್ಠಾಪಿಸಲಾಗುತ್ತದೆ. ವಧುವಿನ ತಾಯಿಯು ಪ್ರತಿಷ್ಠೆಗಾಗಿ ಅಗ್ನಿಯನ್ನು ತಂದುಕೊಡುವುದು ಪದ್ಧತಿ. ಅಗ್ನಿಪ್ರಧಾನ ಮರ್ಯಾದೆಗಾಗಿ ಕನ್ಯಾಮಾತೆಯನ್ನು ಪೂರ್ವಾಭಿಮುಖವಾಗಿ
ಕುಳ್ಳಿರಿಸಿ ವರನ ತಾಯಿಯು ಮಂಗಳ ದ್ರವ್ಯಪೂರ್ವಕವಾಗಿ ವಸ್ತç (ಸೀರೆ) ಸಂಭಾವನೆಯೊAದಿಗೆ ಸನ್ಮಾನಿಸಬೇಕು. ಬ್ರಾಹ್ಮವಿವಾಹದ
ಅಧಿದೇವನಾದ ಪ್ರಜಾಪತಿಗೆ ತುಪ್ಪದಿಂದಲೂ ಲಾಜಾ(ಅರಳು)ದಿಂದಲೂ ವಧುವಿನ ಮೂಲಕ ಪುರೋಹಿತರು ಆಹುತಿ ಮಾಡಿಸುತ್ತಾರೆ.
ಹೋಮದಿಂದ ಸುಪ್ರೀತನಾದ ಪ್ರಜಾಪತಿಯು ವಾಂಛಿತಾರ್ಥವನ್ನು ನೀಡುತ್ತಾನೆಂಬ ಅನುಸಂಧಾನ ಇಲ್ಲಿ ಮುಖ್ಯವಾದುದು.
ಪಾಣಿಗ್ರಹಣ:
ಪೂರ್ವಾಭಿಮುಖಿಯಾದ ವಧುವಿನ ಮುಂಭಾಗದಲ್ಲಿ ನಿಂತುಕೊAಡ ವರನು ಊರ್ಧ್ವಮುಖ(ಮೇಲ್ಮುಖ)ವಾಗಿ ನೆಲದ ಮೇಲಿರುವ
ಆಕೆಯ ಬಲಗೈ ಹೆಬ್ಬೆರಳನ್ನು ತನ್ನ ಬಲಗೈಯಿಂದ ಹಿಡಿದು ಮೇಲಕ್ಕೆಬ್ಬಿಸಿ ವಧುವಿನ ಹೆಗಲನ್ನು ಬಳಸಿ ಹೋಮಕ್ಕೆ ಅರಳು ಸಮರ್ಪಿಸುವ
ಸಲುವಾಗಿ ಅಂಜಲಿ (ಬೊಗಸೆ) ಬದ್ಧಳಾದ ವಧುವಿಗೆ ತನ್ನ ಎಡ ಕೈ ಜೋಡಿಸಬೇಕು. ಈ ಸಂದರ್ಭದಲ್ಲಿ ವಧುವಿನ ಸಹೋದರ ಅರಳಿ
ತುಂಬಿಕೊಡಬೇಕು. ಪಾಣಿಗ್ರಹಣವೆಂದರೆ ಕೈ ಹಿಡಿಯುವುದು ಎಂದರ್ಥ. ಕೈ ಹಿಡಿಯುವಿಕೆಯು ಗುರುತರವಾದ ಹೊಣೆಯನ್ನು ಸಂಕೇತಿಸುತ್ತದೆ.
ಅಲ್ಲದೆ ಜೀವನದುದ್ದಕ್ಕೂ ಹೆಂಡತಿಯ ಮಾನ, ಪ್ರಾಣ ರಕ್ಷಿಸುತ್ತ ಸ್ವಾಭಿಮಾನದ ಬದುಕನ್ನು ಒದಗಿಸುವ ಭರವಸೆಯಾಗಿದೆ. ಜೀವನದುದ್ದಕ್ಕೂ
ದಂಪತಿಗಳು ಜೊತೆಗಿರುವಂತೆ ಸವಿತೃ ದೇವತೆಗಳು ಅನುಗ್ರಹಿಸಲೆಂಬ ಅರ್ಥಾನುಸಂಧಾನವು ಈ ಸಂದರ್ಭದ ಮಂತ್ರಗಳಲ್ಲಿರುತ್ತದೆ.
ಹೀಗೆ ಹಿಡಿದ ಕೈಯನ್ನು ಬಿಡದೆ ಹೋಮಾಗ್ನಿಯ ಸುತ್ತಲೂ ವಧುವನ್ನು ಕರೆದೊಯ್ಯಬೇಕು. ಇದಕ್ಕೆ ‘ಪರಿಣಯನ’ ಎಂಬ ಹೆಸರು. ಜೊತೆಯಾದ
ಸಂಪ್ರೀತಿಯ ಬಾಳನ್ನು ಅಗ್ನಿನಾರಾಯಣನು ಕರಣಿಸಲೆಂಬ ಪ್ರಾರ್ಥನೆ ಈ ವಿಧಿಯಲ್ಲೊಳಗೊಂಡಿರುತ್ತದೆ. ಈ ಸಂದರ್ಭಸಲ್ಲಿ ವಧೂವರರ
ವಸ್ತçಗಳಿಗೆ ಪರಸ್ಪರ ಗಂಟು ಹಾಕುವ ಪದ್ಧತಿಯಿದೆ. ಪಾಣಿಗ್ರಹಣದ ಅರ್ಥಾನುಸಂಧಾನವನ್ನು ದೃಢಗೊಳಿಸುವುದೇ ಈ ಉಪಕ್ರಮದ ಲಕ್ಷö್ಯ.
ಸಪ್ತಪದಿ:
ಸಪ್ತ ಅಂದರೆ ಏಳು; ಪದ ಅಂದರೆ ಹೆಜ್ಜೆ. ಏಳು ಹೆಜ್ಜೆ ಜೊತೆಯಾಗಿ ನಡೆಯುವುದರಿಂದ ಸ್ನೇಹ ಭದ್ರವಾಗುತ್ತದೆಂಬುದು ಶಾಸ್ತçವಚನ. ವರನು
ವಧುವಿನ ಕೈಹಿಡಿದು ಅಕ್ಕಿರಾಶಿಯ ಮೇಲೆ ಈಶಾನ್ಯಾಭಿಮುಖವಾಗಿ ಏಳು ಬಲಹೆಜ್ಜೆಗಳನ್ನಿಡುತ್ತಾ ಮುನ್ನಡೆಸುವುದೇ ಈ ವಿಧಿ. ಪ್ರತಿಯೊಂದು
ಹೆಜ್ಜೆಯನ್ನಿಡುವಾಗಲೂ ಗೃಹಸ್ಥಾಶ್ರಮದ ಪರಿಶುದ್ಧ ಕಾಮನೆಗಳ ಅಭಿವ್ಯಕ್ತಿ ಪುರೋಹಿತರ ಮಂತ್ರಘೋಷದೊAದಿಗೆ ನಡೆಯುತ್ತದೆ.
- ಒಂದನೆಯ ಹೆಜ್ಜೆಯಿಂದ ಅನ್ನ ಸಂಮೃದ್ಧಿಯ ಪ್ರಾರ್ಥನೆ ‘ಇಷ ಏಕಪದೀ ಭವ’ ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯ:”
ಅಂದರೆ ಅನ್ನ ಸಮೃದ್ಧಿಗಾಗಿ ಒಂದನೆಯ ಹೆಜ್ಜೆ ಇಡು ದೀರ್ಘಾಯುಷಿಗಳಾದ ಪುತ್ರರನ್ನು ಪಡೆಯೋಣ. - ಎರಡನೆಯ ಹೆಜ್ಜೆಯನ್ನಿಡುತ್ತಾ “ಊರ್ಜೇ ದ್ವಿಪದೀ ಭವ ! ಸಮಾಮನುವ್ರತಾ ಭವ ! ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು
ಜರದಷ್ಟಯ:” ಎಂಬ ಮಂತ್ರ ಪಠಣ ನಡೆಯುತ್ತದೆ. ಅಂದರೆ ಬಲಕ್ಕಾಗಿ ಎರಡನೆಯ ಹೆಜ್ಜೆಯಿಡು. - ಮೂರನೆಯ ಹೆಜ್ಜೆಯು ಧನಾಕಾಂಕ್ಷೆಯನ್ನೊಳಗೊAಡಿರುತ್ತದೆ. ‘ರಾಯಸ್ಪೋಷಾಯ ತ್ರಿಪದೀಭವ ಸಾಮಾಮನುವ್ರತಾ ಭವ | ಪುತ್ರಾನ್
ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯ:’.! ಧನವನ್ನು ಪೋಷಿಸುವುದಕ್ಕಾಗಿ ಮೂರನೆಯ ಹೆಜ್ಜೆಯಿಡು. - ಸುಖಸಮೃದ್ಧಿಯನ್ನು ಬಯಸುತ್ತಾ ನಾಲ್ಕನೆಯ ಹೆಜ್ಜೆ ಹಾಕಲಾಗುತ್ತದೆ. ‘ಮಾಯೋಭವ್ಯಾಯ ಚತುಷ್ಪದೀ ಭವ ಸಾಮಾಮನುವ್ರತಾ ಭವ |ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯ:’.! ಸುಖದ ಭಾವನೆಯನ್ನು ತುಂಬಿಕೊಳ್ಳುವುದಕ್ಕಾಗಿ ನಾಲ್ಕನೆಯ ಹೆಜ್ಜೆಯಿಡು.
- ಸತ್ಸಂತಾನಾಪೇಕ್ಷೆ ಐದನೆಯ ಹೆಜ್ಜೆಯಲ್ಲಿರುತ್ತದೆ. “ಪ್ರಜಾಭ್ಯ: ಪಂಚಪದೀ ಭವ ಸಾಮಾಮನುವ್ರತಾ ಭವ | ಪುತ್ರಾನ್ ವಿಂದಾವಹೈ
ಬಹೂAಸ್ತೇ ಸಂತು ಜರದಷ್ಟಯ:’.! ಉತ್ತಮ ಸಂತಾನಕ್ಕಾಗಿ ಐದನೆಯ ಹೆಜ್ಜೆಯಿಡು. - ನಿಯಮಿತ ಭೋಗಾಕಾಂಕ್ಷೆ ಆರನೆಯ ಹೆಜ್ಜೆಯಲ್ಲಿರುತ್ತದೆ. “ಋತುಭ್ಯ ಪಟ್ಟದೀ ಭವ ಸಾಮಾಮನುವ್ರತಾ ಭವ | ಪುತ್ರಾನ್ ವಿಂದಾವಹೈ
ಬಹೂAಸ್ತೇ ಸಂತು ಜರದಷ್ಟಯ:’.! ಋತುಭೋಗಕ್ಕಾಗಿ ಆರನೆಯ ಹೆಜ್ಜೆಯಿಡು. - ಶಾಶ್ವತವಾದ ಮತ್ತು ಗಾಢವಾದ ಮಿತ್ರತ್ವದ ಪ್ರಾರ್ಥನೆ ಮಾಡುತ್ತಾ ಏಳನೆಯ ಹೆಜ್ಜೆಯನ್ನಿಡುವುದು. ‘ ಸಖಾ ಸಪ್ತಪದೀ ಭವ ಸಾಮಾಮನುವ್ರತಾ ಭವ | ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯ:’.! ಗೆಳೆತನಕ್ಕಾಗಿ ಏಳನೆಯ ಹೆಜ್ಜೆಯಿಡು.
ಪರಿಪೂರ್ಣವಾದ ಗೃಹಸ್ಥ ಜೀವನಕ್ಕೆ ಅವಶ್ಯವಾದ ಎಲ್ಲ ಅಂಶಗಳನ್ನು ಸಪ್ತಪದಿಯ ಅನುಸಂಧಾನದಲ್ಲಿರುವುದರಿAದ ವಿವಾಹ ಸಂಸ್ಕಾರದಲ್ಲಿ ಈ ವಿಧಿ ಪ್ರಾಮುಖ್ಯವಾಗಿದೆ.
ಸಪ್ತಪದಿಯ ಅನಂತರದಲ್ಲಿ ವಧುವರರಿಗೆ ಪತಿಪತ್ನಿಯರಾಗಿ ಶಾಸ್ತಿçÃಯ ಮಾನ್ಯತೆ ದೊರೆಯುತ್ತದೆ. ಹಿಂದೂವಿವಾಹ ಕಾಯ್ದೆಯೂ
ಸಪ್ತಪದಿಯಿಂದ ವಿವಾಹ ಅಧಿಕೃತವಾಗುವುದೆನ್ನುವುದನ್ನು ಅಂಗೀಕರಿಸುತ್ತದೆ. ಯಾಜ್ಜವಲ್ಕö್ಯಸ್ಮೃತಿಯೂ ಧಾರೆಯೆರೆಯುವುದರಿಂದಾಗಲಿ
ವಾಗ್ದಾನದಿAದಾಗಲೀ ವರನು ಪತಿಯೆನಿಸುವುದಿಲ್ಲವೆಂದೂ ಪಾಣಿಗ್ರಹಣದೊಂದಿಗಿನ ಸಪ್ತಪದಿಯಿಂದ ಮಾತ್ರ ಪತಿತ್ವ ಸಿದ್ಧಿಸುವುದೆಂದೂ
ಹೇಳುತ್ತದೆ.
ಶಿರೋಧಾರೆ:
ವರನ ತಲೆಯ ಮೇಲೆ ಕನ್ನಡಿಯನ್ನು ಹಿಡಿದು ವಧುವಿನ ತಲೆಯ ಮೇಲೆ ಕಲಶ ಜಲವು ಬೀಳುವಂತೆ ಧಾರೆಯಾಗಿ ಎರೆಯುವುದೇ
ಶಿರೋಧಾರೆ. ನವದಂಪತಿಗಳಿಗೆ ಗುರುಹಿರಿಯರು ಹಾಗೂ ಮಿತ್ರಜನರು ನೀಡುವ ಅಧಿಕೃತವಾದ ಆಶೀರ್ವಾದವನ್ನು ಶಿರೋಧಾರೆ
ಸಂಕೇತಿಸುತ್ತದೆ. ದಾಂಪತ್ಯದ ಹೊಸಬಾಳಿನಲ್ಲಿ ಶಾಂತಿ (ಶಾಂತಿರಸ್ತು) ನೆಲಸಲೆಂದೂ ಪುಷ್ಟಿ (ಪುಷ್ಟಿರಸ್ತು) ಯಾಗಲೆಂದೂ ಸಂತೋಷ
(ತುಷ್ಟಿರಸ್ತು) ಲಭಿಸಲೆಂದೂ, ಎಲ್ಲ ರಂಗಗಳಲ್ಲೂ ಅಭಿವೃದ್ಧಿ (ವೃದ್ಧಿರಸ್ತು) ತೋರಲೆಂದೂ, ಕೈಗೊಂಡ ಕಾರ್ಯಗಳು ನಿರ್ವಿಘ್ನ (ಅವಿಘ್ನಮಸ್ತು)
ವಾಗಲೆಂದೂ ದೀರ್ಘಆಯುಷ್ಯ (ಆಯುಷ್ಯಮಸ್ತು) ಪ್ರಾಪ್ತಿಯಾಗಲೆಂದೂ, ದೈಹಿಕ ಮತ್ತು ಮಾನಸಿಕವಾದ (ಆರೋಗ್ಯಮಸ್ತು) ಸಿದ್ಧಿಸಲೆಂದೂ,
ಉದ್ಯುಕ್ತವಾದ ಕಾರ್ಯಗಳಿಗೆಲ್ಲ ಮಂಗಲ (ಶಿವಂ ಕರ್ಮಾಸ್ತು) ವಾಗಲೆಂದೂ, ಕರ್ಮಸಂಮೃದ್ಧಿ (ಕರ್ಮಸಂಮೃದ್ಧಿರಸ್ತು) ಯಾಗಲೆಂದೂ,
ಧರ್ಮಕಾರ್ಯ (ಧರ್ಮಸಂಮೃದ್ಧಿರಸ್ತು) ವಿರಲೆಂದೂ, ಶಾಸ್ತç (ಶಾಸ್ತç ಸಮೃದ್ಧಿರಸ್ತು) ಆಚರಣೆ ಇರಲೆಂದೂ, ಸತ್ಸಂತಾನ (ಪುತ್ರ ಸಂಮೃದ್ಧಿರಸ್ತು) ಭಾಗ್ಯವಿರಲೆAದೂ, ಮನೆಯಲ್ಲಿ ಆಹಾರ ವಸ್ತುಗಳು (ಧನಧಾನ್ಯ ಸಮೃದ್ಧಿರಸ್ತು) ಯಥೇಚ್ಚವಾಗಿರಲೆಂದೂ, ಇಚ್ಛೆಗಳೆಲ್ಲಾ (ಇಷ್ಟಸಂಪದಸ್ತು) ಈಡೇರಲೆAದೂ ವಧೂವರರಿಗೆ ಆಶೀರ್ವಾದ ಮಾಡಲಾಗುತ್ತದೆ. ಗುರುಹಿರಿಯರ ಆಶೀರ್ವಾದಗಳ ಧಾರೆಯಿಂದ ತಲೆ ತೊಯ್ದಾಗಲೇ, ಬಾಳಿನ ಪಥ ಸುಗಮವಾಗುವುದೆಂಬುದು ಶಾಸ್ತಾçಭಿಮತ.
ಮಾಂಗಲ್ಯಧಾರಣೆ:
ಪುರೋಹಿತರು ಆಶೀರ್ಮಂತ್ರಗಳಿAದ ಅಭಿಮಂತ್ರಿಸಿ ನೀಡಿದ ಮಾಂಗಲ್ಯವನ್ನು ಸುಮಂಗಲೆಯರ ಕಂಠಕ್ಕೆ ಸ್ಪರ್ಶಿಸಬೇಕು. ಇದರಿಂದ
ಮಾAಗಲ್ಯದ ಶಕ್ತಿ ವೃದ್ಧಿಸುತ್ತದೆ. ತದನಂತರ ವರನು ವಧುವಿನ ಕಂಠದಲ್ಲಿ ಮಾಂಗಲ್ಯ ತಂತುವನ್ನು ಬಂಧಿಸಬೇಕು. ವರನು ತನ್ನ ಜೀವಿತದ
ಸಂಕೇತವಾದ ಮಂಗಳಸೂತ್ರವನ್ನು ವಧುವಿನ ಕೊರಳಿಗೆ ಕಟ್ಟುತ್ತ ನರ‍್ಕಾಲ ತನ್ನೊಡನೆ ಸುಖವಾಗಿ ಬಾಳಲೆಂದು ಹಾರೈಸುವ ಅರ್ಥವನ್ನು
ಧ್ವನಿಸುವ ಮಂತ್ರಗಳನ್ನು ಪುರೋಹಿತರು ಈ ಸಂದರ್ಭದಲ್ಲಿ ಪಠಿಸುತ್ತಾರೆ.
“ಮಾಗಲ್ಯಂ ತಂತುನಾನೇನ ಮಮಜೀವನ ಹೇತುನಾ |
ಕಂಠೇ ಬಧ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಂ ||”
ಬ್ರಹ್ಮ, ವಿಷ್ಣು, ಮಹೇಶ್ವರ ಸ್ವರೂಪವಾದ ತಾಳಿ ಅಥವಾ ಮಾಂಗಲ್ಯಾಭರಣವನ್ನು ಚಿನ್ನದಿಂದ ಮಾಡುತ್ತಾರೆ. ಅನುಕೂಲವಿಲ್ಲದಿದ್ದರೆ ಅರಶಿನ
ಕೊಂಬನ್ನು ಮಾಂಗಲ್ಯವಾಗಿ ಬಳಸಬಹುದು. ಮಾಂಗಲ್ಯಧಾರಣೆಯಾದೊಡನೆ ಬಂಧುಗಳು ವಧೂವರರ ಮೇಲೆ ಅಕ್ಷತೆಯನ್ನು ಸುರಿಸಿ
ಆಶೀರ್ವದಿಸಬೇಕು.
ಕಾಲುಂಗುರಧಾರಣೆ: ಮಾಂಗಲ್ಯಧಾರಣೆಯ ಬಳಿಕ ಕಾಲುಂಗುರ ತೊಡಿಸಬೇಕು. ವರನು ನೀಡಿದ ಕಾಲುಂಗುರ ಧರಿಸುವುದು ವಿಧಿ. ತಾಯಿ
ಮನೆಯಿಂದ ಕಾಲುಂಗುರ ತೊಡಿಸಿ ಬಂದಿದ್ದರೂ ವರನು ನೀಡಿದ ಕಾಲುಂಗುರವನ್ನು ಹೆಬ್ಬೆರಳಿನ ಹತ್ತಿರದ ಬೆರಳಿಗೆ ಹೆಚ್ಚುವರಿಯಾಗಿ ವರನ
ಸಹೋದರಿಯು ತೊಡಿಸಬೇಕು.
ಹೋಮದ ಪೂರ್ಣಾಹುತಿ:
ಗೃಹಸ್ಥಾಶ್ರಮದ ಶುಭಫಲ ಪ್ರಾಪ್ತಿಯಾಗಲು ಮಾಡುವ ಹೋಮದ ಪೂರ್ಣಾಹುತಿ ಮುಂದೆ ನಡೆಯುತ್ತದೆ. ವಿವಾಹಹೋಮದಲ್ಲಿ ನೀಡುವ ಶ್ರದ್ಧಾಪೂರ್ಣವಾದ ಆಹುತಿಯಿಂದ ಭಗವಂತನು ಪ್ರಸನ್ನನಾಗಲಿ, ಜನ್ಮಾಂತರದಲ್ಲಿ ಮಾಡಿರಬಹುದಾದ ಎಲ್ಲ ಪಾಪಗಳು ನಶಿಸಿಹೋಗಲಿ, ಪಾಪಾತ್ಮನೂ ಪಾಪಸಂಭವನೂ ಆದ ತನ್ನನ್ನು ಭಗವಂತನು ರಕ್ಷಿಸಲೆಂದು ಅರ್ಥವುಳ್ಳ ಮಂತ್ರಘೋಷದೊAದಿಗೆ ಪುರೋಹಿತರು ಪೂರ್ಣಾಹುತಿ ಮಾಡಿಸುತ್ತಾರೆ.
ಅರುಂಧತೀ ಮತ್ತು ಧ್ರುವನಕ್ಷತ್ರ ದರ್ಶನ:
ಶಿರೋಧಾರೆಯ ಬಳಿಕ ಅರುಂಧತೀ ಮತ್ತು ಧ್ರುವನಕ್ಷತ್ರ ದರ್ಶನ ಮಾಡಿಸುವ ವಿಧಿಯನ್ನು ಪುರೋಹಿತರು ಮಾಡಿಸುತ್ತಾರೆ. ಧ್ರುವನಕ್ಷತ್ರವು ತನ್ನ ಸ್ಥಾನದಲ್ಲಿ ಧ್ರುವವಾಗಿರುವಂತೆ ಪತಿವ್ರತಾಧರ್ಮದಲ್ಲಿ ಅಚಲಳಾಗಿರಬೇಕೆಂದೂ, ಅರುಂಧತಿಯAತೆ ಆದರ್ಶಳಾಗಿರಬೇಕೆAದೂ ವರನ ಹಾರೈಕೆಯು ಉತ್ತಮ ಚಾರಿತ್ರಾö್ಯಕಾಂಕ್ಷೆಯ ಸಂಕೇತ. ತದನಂತರ ಹೋಮದ ಪೂರ್ಣಾಹುತಿ ನಡೆಯುತ್ತದೆ.
ಹಸೆಮಣೆ ಮದುವೆ ಅಥವಾ ಚಾಪೆ ಮದುವೆ:
ಹಸೆ ಎಂದರೆ ಚಾಪೆ. ಹಾಗಾಗಿ ಚಾಪೆ ಮದುವೆ ಎಂಬ ಹೆಸರು. ವಧೂವರರು ನಿಂತಿರುವAತೆ ಮುತ್ತೆöÊದೆಯರು ಹೊಸ ಚಾಪೆಯನ್ನು
ಹರಡುತ್ತಾರೆ. ಆಗ ವರನು ತನ್ನ ಉಂಗುರವನ್ನು ಅಕ್ಷತೆಯೊಂದಿಗೆ ಚೆಲ್ಲಬೇಕು. ಸುಮಂಗಲೆಯರು ಉಂಗುರವನ್ನು ಹುಡುಕಿ ಸೆಳೆದುಕೊಂಡವರು
ವಿಜೇತರಾಗುತ್ತಾರೆ. ಈ ರೀತಿ ಮೂರು ಬಾರಿ ಸ್ಪರ್ಧೆ ನಡೆಯುತ್ತದೆ. ಕೊನೆಯಲ್ಲಿ ವರನು ಆ ಉಂಗುರವನ್ನು ವಧುವಿಗೆ ತೊಡಿಸುತ್ತಾನೆ. ಬಳಿಕ
ವಧೂರರರು ಚಾಪೆಯಲ್ಲಿ ಕುಳಿತುಕೊಳ್ಳುತ್ತಾರೆ. ಗೃಹಸ್ಥಾಶ್ರಮ ಪ್ರವೇಶಿಸಿದ ದಂಪತಿಗಳು ಜೀವನ ಪರ್ಯತ ಸಾಯಂಸAಧ್ಯೆ ಮತ್ತು ಪಾತ್ರಃ
ಸಂಧ್ಯೆಗಳಲ್ಲಿ ಅಗ್ನಿಹೋತ್ರ ಅಥವಾ ಅಗ್ನಿಯ ಉಪಾಸನೆ ಮಾಡಬೇಕೆಂಬುದು ಅನುಸಂಧಾನ. ಬಳಿಕ ವಧುವಿನಿಂದ ವರನ ಪಾದಪ್ರಕ್ಷಾಲನೆ
ಮಾಡಿಸಿ ಅರಶಿನ ಕುಂಕುಮ ಧಾರಣೆ ಮಾಡಿ ಗಂಧಾದಿಗಳನ್ನು ಲೇಪಿಸಿ ಅಕ್ಷತೆ ಹಾಕಿ ನಮಸ್ಕಾರ ಮಾಡಿಸಬೇಕು. ಬಳಿಕ ವರನ ಸಹೋದರಿ
ವಧುವಿಗೆ ಕಾಲು ತೊಳೆಯಬೇಕು. ಹಾಗೆಯೇ ವರನಿಂದ ವಧುವಿಗೆ ಅಲಂಕಾರ ಮಾಡಿಸಬೇಕು. ಕೊನೆಗೆ ಎರಡೂ ಪಕ್ಷಗಳ ನಾಲ್ಕು ಅಥವಾ ಐದು ಜನ ಮುತ್ತೆöÊದೆಯರು ವಧೂವರರಿಗೆ ಆರತಿ ಬೆಳಗಿ ಶೋಭಾನೆ ಹಾಡಬೇಕು. ಈ ಸಂದರ್ಭದಲ್ಲಿ ವಧುವನ್ನು ವರನ ತೊಡೆಯ ಮೇಲೆ
ಕುಳ್ಳಿರಿಸುವ ಸಂಪ್ರದಾಯ ಕೆಲವು ಭಾಗಗಳಲ್ಲಿದೆ.
ಓಕುಳಿ:
ಅಗಲವಾದ ಪಾತ್ರೆಯೊಂದರಲ್ಲಿ ಉಂಗುರವನ್ನಿರಿಸಿ ಅರಸಿನ ನೀರಿನಿಂದ ತುಂಬಿಸಿ ವಧೂವರರೊಳಗೆ ಉಂಗುರವನ್ನು ತೆಗೆಯುವ ಸ್ಪರ್ಧೆ
ನಡೆಸಲಾಗುತ್ತದೆ. ಆ ಉಂಗುರವನ್ನು ವಧುವಿಗೆ ಕೊನೆಯಲ್ಲಿ ತೊಡಿಸಲಾಗುತ್ತದೆ. ವಿಭಿನ್ನ ಗುಣಧರ್ಮ ಮತ್ತು ಪರಿಸರದ ಹಿನ್ನೆಲೆಯುಳ್ಳ
ವಧುವರರು ಮಾನಸಿಕವಾಗಿಯೂ, ದೈಹಿಕವಾಗಿಯೂ ಸಮೀಪವರ್ತಿಗಳಾಗಬೇಕು. ಈ ಸತ್ಸಾಂಗತ್ಯಕ್ಕೆ ಹಿರಿಯರ ಅಂಗೀಕಾರದ ಅವಕಾಶ
ಕಲ್ಪಿಸುವುದರೊಂದಿಗೆ ಸುಮಧುರ ಸಮರಸದ ಬಾಳಿಗೆ ನಾಂದಿಯಾಗುತ್ತದೆ. ಓಕುಳಿಯ ಅಂತ್ಯದಲ್ಲಿ ಉತ್ತರೀಯ ಕಂಕಣ, ಮತ್ತು
ಬಾಸಿಂಗಗಳನ್ನು, ವೇಣುದಂಡವನ್ನು ಹಾಗೂ ವಧು ಮತ್ತು ವರಗೃಹದಿಂದ ತಂದAತಹ ನಾಂದಿಗಳನ್ನು ವಿಸರ್ಜಿಸಬೇಕು.
ವಧುವರರನ್ನು ಒಪ್ಪಿಸುವುದು:
ಹುಟ್ಟಿನಿಂದ ಬೆಳೆಸಿ ವಿದ್ಯಾಬುದ್ದಿಗಳನ್ನು ನೀಡಿ ಪೋಷಿಸಿದ ತನ್ನ ಕರುಳಕುಡಿಯನ್ನು ಮದುವೆ ಮಾಡಿ ವರನಿಗೆ ಒಪ್ಪಿಸುವುದು
ಮಾತಾಪಿತೃಗಳ ಪಾಲಿಗೆ ಹೃದಯವಿದ್ರಾವಕ ವಿಧಿ. ಮುಗ್ಧಳಾದ ತನ್ನ ಮುದ್ದಿನ ಕುವರಿ ಅರಿಯದೆ ತಪ್ಪು ಮಾಡಿದರೂ ತಿದ್ದಿ ನಡೆಸಬೇಕೆಂದು
ಕನ್ಯಾಪಿತೃಗಳು ವರಪಿತೃಗಳಲ್ಲಿ ಯಾಚಿಸುತ್ತಾರೆ.
ವಿವಾಹಾನಂತರದಲ್ಲಿ ವರನು ವಧು ಕುಟುಂಬದ ಆಪ್ತ ಬಂಧುವರ್ಗದಲ್ಲಿ ಸೇರುತ್ತಾನೆ. ವಧು ಕುಟುಂಬಕ್ಕೆ ಸಮೀಪವರ್ತಿಯಾಗುವ ವರನು
ಸಭ್ಯತೆಯಿಂದಲೂ ಗೌರವಪೂರ್ಣವಾಗಿಯೂ ವ್ಯವಹರಿಸುವುದು ಮುಖ್ಯ. ತದ್ವಿರುದ್ಧವಾಗಿ ವರ್ತಿಸಿದರೂ ಬುದ್ಧಿಹೇಳಿ ಸನ್ಮಾರ್ಗವನ್ನು
ಉಪದೇಶಿಸಬೇಕೆಂದು ಕೇಳಿಕೊಳ್ಳುತ್ತಾ ವರಪಿತೃಗಳು ವರನ ಮಾವ, ಗುರುಹಿರಿಯರು ಹಾಗೂ ಗುರಿಕಾರರ ಜೊತೆಗೂಡಿ ವರನನ್ನು
ಕನ್ಯಾಪಿತೃಗಳಿಗೆ ಒಪ್ಪಿಸುವ ಲೌಕಿಕ ವಿಧಿಯನ್ನು ನಡೆಸಬೇಕು. ಮುಂದೆ ವರ ಮತ್ತು ವಧು ಪಕ್ಷದವರು ಒಟ್ಟಾಗಿ ಆಚಾರ್ಯರಿಗೆ (ಪುರೋಹಿತರಿಗೆ) ಹಾಗೂ ಮದುವೆಯ ವಿಧಿಗಳ ಮುಂದಾಳುತನ ವಹಿಸಿದ ದೇವಸ್ಥಾನದ ಪ್ರತಿನಿಧಿ ಅಥವಾ ಗುರಿಕಾರರಿಗೆ ಗೌರವಧನ ನೀಡಿ ಆಶೀರ್ವಾದ ಬೇಡಬೇಕು. ಪಶ್ಚಾತ್ ದೇವರ ದರ್ಶನ ಮಾಡಿ ಬಂಧುಮಿತ್ರರ ಆಶೀರ್ವಾದ/ಹಾರೈಕೆ ಪಡೆಯಲು ಸಿದ್ಧರಾಗಿ ನಿಲ್ಲಬೇಕು. ಈ ಸಂದರ್ಭದಲ್ಲಿ ವಧೂವರರು ಪಾದರಕ್ಷೆ ಧರಿಸಬಾರದು.
ಬಂಧುಮಿತ್ರರ ಆಶೀರ್ವಾದ:
ದೇವಸ್ಥಾನದ ಮುಖ್ಯಸ್ಥರು/ಗುರಿಕಾರರು ನೂತನ ವಧೂವರರನ್ನು ಪ್ರಪ್ರಥಮವಾಗಿ ಹರಸಿ ನೆರೆದ ಬಂಧುಮಿತ್ರರು ನವದಂಪತಿಗಳನ್ನು
ಆಶೀರ್ವದಿಸುವAತೆ ವಧೂವರರ ಮಾತಾಪಿತೃಗಳನ್ನು ಮುಂದಿಟ್ಟುಕೊAಡು ವಿನಂತಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಪಾದರಕ್ಷೆ ಧರಿಸಬಾರದು.
ವಧೂಪ್ರವೇಶ (ಮನೆತುಂಬಿಸಿಕೊಳ್ಳುವುದು):
ವಿವಾಹದ ವಿಧಿಗಳನ್ನು ಮುಗಿಸಿ ವರನು ವಧುವನ್ನು ತನ್ನ ಮನೆಗೆ ಕರೆದೊಯ್ಯುವುದು ಕ್ರಮ. ಮನೆಗೆ ಪ್ರವೇಶಿಸುತ್ತಿದ್ದಂತೆ ಓಕುಳಿ ನೀರು
ಪ್ರೋಕ್ಷಿಸಿ ಒಳಗೆ ಸ್ವಾಗತಿಸಬೇಕು. ಶುಭ ಮುಹೂರ್ತದಲ್ಲಿ ವಧು ಮನೆಯ ಒಳಗೆ ಪ್ರವೇಶಿಸುವಾಗ ಹೊಸ್ತಿಲಿನಲ್ಲಿಟ್ಟ ಧಾನ್ಯ ಕಲಶ (ಸೇರಿನಲ್ಲಿ ಅಕ್ಕಿ ಮತ್ತು ಬೆಲ್ಲ) ವನ್ನು ಬಲಕಾಲಿನಿಂದ ದೂಡಿ ಪ್ರವೇಶಿಸಬೇಕು.
ಪತಿಗೃಹಕ್ಕೆ ವಧುವಿನ ಪ್ರವೇಶವು ಸೌಭಾಗ್ಯಲಕ್ಷಿö್ಮಯು ಆಗಮಿಸಿದಂತೆ. ಅವಳ ಪ್ರವೇಶದಿಂದ ಹಾಲು ತುಪ್ಪದ ಹೊಳೆ ಹರಿಯುವುದೆಂದೂ,
ಧನ ಧಾನ್ಯಾದಿಗಳು ಸಮೃದ್ಧಿಯಾಗಿ ಮನೆಯಲ್ಲೆಲ್ಲ ತುಂಬಿ ತುಳುಕುವುದೆಂದೂ ಈ ಆಚಾರದ ಅರ್ಥರಹಸ್ಯ. ಮನೆಗೆ ಬರುವ ಅತಿಥಿಗಳಿಗೆ
ಯಥೋಚಿತವಾದ ಸತ್ಕಾರ ನಡೆಯಬೇಕು. ಅದೇ ಗೃಹಸ್ಥಾಶ್ರಮದ ವೈಶ್ವದೇವ ಯಜ್ಞಾಂಗ. ಜೊತೆಗೆ ಪಿತೃದೇವತಾ ಪೂಜೆಗಳೂ ನಿರಂತರವಾಗಿ ಸಾಗುತ್ತಿರಬೇಕು. ಗೃಹಸ್ಥಾಶ್ರಮವನ್ನು ಆಶ್ರಯಿಸಿ ಉಳಿದೆಲ್ಲ ಆಶ್ರಮಗಳು ಇರುವುದರಿಂದ ಗೃಹಸ್ಥಾಶ್ರಮ ಶ್ರೇಷ್ಠವಾದ ಆಶ್ರಮವೆನ್ನುವುದು ಮನುಸ್ಮೃತಿಯ ವಾಕ್ಯ. ಈ ವಾಕ್ಯ ಅರ್ಥಪೂರ್ಣವಾಗಬೇಕಾದರೆ ವಧುವು ತನ್ನ ಹೊಣೆಗಾರಿಕೆಯನ್ನರಿತು ಪತಿಗೃಹದಲ್ಲಿ ಪ್ರವರ್ತಿಸಬೇಕು. ಅಂತಹ ಸೌಭಾಗ್ಯ ಲಕ್ಷಿö್ಮಯನ್ನು ಮುತ್ತೆöÊದೆಯರು ಆರತಿ ಬೆಳಗಿ ಸ್ವಾಗತಿಸಬೇಕು.
ಶಾಸ್ತçಯುತವಾದ ಆಚರಣೆ ಮಾತ್ರವೇ ವಿವಾಹ ಸಂಸ್ಕಾರದ ಮೌಲ್ಯಮಾಪನವಲ್ಲದೆ ಆಡಂಬರದ ಪ್ರದರ್ಶನಗಳಲ್ಲ. ಎಲ್ಲ
ವಿಧಿವಿಧಾನಗಳಿಗೂ ಅರ್ಥವೈಶಿಷ್ಟö್ಯಗಳಿದ್ದು ಅವುಗಳನ್ನು ಅರಿತು ಆಚರಿಸುವುದರಿಂದ ಕಾರ್ಯಕ್ರಮ ಅರ್ಥಪೂರ್ಣ ಜೊತೆಗೆ ಫಲಪ್ರದ.
ಭಾರತೀಯ ಸಂಸ್ಕೃತಿಯ ವಿಧಿವಿಧಾನಗಳನ್ನು ಯುಕ್ತವಾಗಿ ಆಳವಡಿಸಿಕೊಂಡಲ್ಲಿ ಸಾಂಸ್ಕೃತಿಕ ಸಮುನ್ನತಿ ಸಾಧಿಸುವಲ್ಲಿ ಸಂದೇಹವಿಲ್ಲ. ಹಾಗಾದಲ್ಲಿ ಮಾತ್ರ ಮಹಾಸಭಾದ ಈ ಉಪಕ್ರಮ ಸಾರ್ಥಕವಾದೀತು.
ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ ||
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖಭಾಗ್ ಭವೇತ್ ||
ಓಂ ಶಾಂತಿಃ ಶಾಂತಿಃ ಶಾಂತಿಃ