Skip to content
ಪದ್ಮಶಾಲಿ ಮಹಾಸಭಾ

ಪದ್ಮಶಾಲಿ ಮಹಾಸಭಾ

Website-HeaderBanner

Connect with Us

  • Facebook
  • Twitter
  • Instagram
  • Youtube
  • Linkedin
  • Whatsapp
Primary Menu
  • ಮುಖಪುಟ
  • ಮಹಾಸಭಾ
  • ವಿದ್ಯಾವರ್ಧಕ
  • ದೇವಸ್ಥಾನಗಳು
    • ಬಾರಕೂರು
    • ಮಂಗಳೂರು
    • ಸಾಲಿಕೇರಿ
    • ಕಲ್ಯಾಣಪುರ
    • ಹಳೆಯಂಗಡಿ
    • ಸುರತ್ಕಲ್ಲು
    • ಸಿದ್ಧಕಟ್ಟೆ
    • ಮುಲ್ಕಿ-ಮಾನಂಪಾಡಿ
    • ಎರ್ಮಾಳ್
    • ಕಿನ್ನಿಮುಲ್ಕಿ
    • ಕಾರ್ಕಳ
    • ಕಾಪು
    • ಪಡುಬಿದ್ರಿ
    • ಉಳ್ಳಾಲ
    • ಕಾಙಂಗಾಡ್
    • ಬಂಗ್ರಮಂಜೇಶ್ವರ
  • ಪದ್ಮಲೇಖ
  • ವೇದಿಕೆಗಳು
    • ಧಾರ್ಮಿಕ ವೇದಿಕೆ
    • ಕ್ರೀಡಾ ವೇದಿಕೆ
    • ನೇಕಾರ ವೇದಿಕೆ
    • ಪರಿಣಯ ವೇದಿಕೆ
    • ಮಹಿಳಾ ವೇದಿಕೆ
    • ಯುವ ವೇದಿಕೆ
    • ತಂತ್ರಜ್ಞಾನ ಸಮಿತಿ
  • ಸಹ ಸಂಘಟನೆಗಳು
    • ಮುಂಬಯಿ
    • ಬೆಂಗಳೂರು
    • ಯುಎಇ
  • ಸದಸ್ಯತ್ವ
  • ಉದ್ಯೋಗ ಮಾಹಿತಿ
  • ವಾರ್ತೆಗಳು
  • Home
  • ವೇದಿಕೆಗಳು
  • ಮಹಿಳಾ ವೇದಿಕೆ
  • ಅಶ್ವತ್ಥ ವೃಕ್ಷದ ಮದುವೆ
  • News
  • ಮಹಿಳಾ ವೇದಿಕೆ
  • ಲೇಖನಗಳು

ಅಶ್ವತ್ಥ ವೃಕ್ಷದ ಮದುವೆ

padmashali February 24, 2025 1 minute read
Article-Image
Share with your family and friends

Loading

ಚಿಕ್ಕವರಿದ್ದಾಗ ಪ್ರಾತಃ ವಿಧಿಗಳು ಮುಗಿದ ಬಳಿಕ ಹತ್ತಿರದಲ್ಲಿದ್ದ ದೇಗುಲಕ್ಕೆ ಹೋಗುವುದು ರೂಢಿಯಾಗಿತ್ತು. ನಿತ್ಯ ದೇಗುಲದ ಮುಂದಿರುವ ಅಶ್ವತ್ಥ ವೃಕ್ಷದ ದರ್ಶನ . ಏಳು ಸುತ್ತು ಹಾಕಿ ಕೈ ಮಗಿಯುವುದು ಅಭ್ಯಾಸವಾಗಿತ್ತು. ನಿತ್ಯ ಅನುಸರಿಸುತ್ತಿದ್ದೆವು. ನಮ್ಮಲ್ಲಿ ಏಕಾಗ್ರತೆಯನ್ನು
ಮೂಡಿಸಿ ಆಧ್ಯಾತ್ಮಿಕತೆಯನ್ನು ಹೆಚ್ಚಿಸಲು ಅದು ಸಹಕಾರಿಯಾಗಿತ್ತು. ಅಶ್ವತ್ಥ ವೃಕ್ಷದ ಪೂಜೆ ಬೆಳಗ್ಗಿನ ಸಮಯದಲ್ಲೇ ಮಾಡ ಬೇಕೆನ್ನುವುದು ಹಿಂದಿನಿಂದಲೂ ತಿಳಿದು ಬಂದಿರುವ ವಿಚಾರ.

ಅಶ್ವತ್ಥ ವೃಕ್ಷದ ಕಟ್ಟೆಯೊಳಗೆ ನಾಗದೇವರ ಕಲ್ಲಿನ ಮೂರ್ತಿ ಕಾಣುತ್ತೇವೆ. ವೃಕ್ಷದ ಬೇರಿನಲ್ಲಿ ಬ್ರಹ್ಮ , ಕಾಂಡದಲ್ಲಿ ವಿಷ್ಣು , ಎಲೆಗಳಲ್ಲಿ ಈಶ್ವರ ನೆಲೆಸಿರುವನೆಂಬುವುದು ನಮ್ಮ ನಂಬಿಕೆ. ಸತ್ಯವಾನ – ಸಾವಿತ್ರಿಯರ ಪೌರಾಣಿಕ ಕಥಾ ಭಾಗವನ್ನು ಓದುವಾಗ ನಮಗೆ ತಿಳಿದು ಬರುವ ವಿಚಾರ ಮರದ ಸನಿಹವೇ ಮಡಿದ ತನ್ನ ಪತಿ ಸತ್ಯವಾನನನ್ನು ಸಾವಿತ್ರೀ ಮತ್ತೆ ಜೀವಂತವಾಗಿ ಪಡೆದದ್ದು ಈ ವೃಕ್ಷದ ಮಡಿಲಿನಲ್ಲೇ. ವಿಶೇಷವಾದ ಶ್ರದ್ಧೆ – ಭಕ್ತಿಯ ಮೂಲಕವೇ ಅದು ಸಾಧ್ಯವಾದದ್ದು. ಶ್ರೀ ಕೃಷ್ಣ ಪರಮಾತ್ಮ ತನ್ನ ಅಂತ್ಯವನ್ನು ಪಡೆದಿರುವ ವೃಕ್ಷವದೆಂದು ಹೇಳುವರು.

ಅಶ್ವತ್ಥ ವೃಕ್ಷ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಗೌರವವನ್ನು ಪಡೆಯುವ ವೃಕ್ಷ. ಅರಳೀ ವೃಕ್ಷ ( peepal tree)ಎಂದೂ ಕರೆಯಲ್ಪಡುವ ಈ ತರುವಲ್ಲಿ ಆಮ್ಲಜನಕ ಅತ್ಯಂತ ಹೆಚ್ಚು ಉತ್ಪತ್ತಿಯಾಗುವುದು. ಅದೆಷ್ಟೋ ಕಾಯಿಲೆಗಳನ್ನು ಹಿಮ್ಮೆಟ್ಟಿಸುವ ಗುಣ ಈ ವೃಕ್ಷಕ್ಕೆ ಇದೆ. ಪವಿತ್ರ ದಾರಗಳನ್ನು ಸುತ್ತಿ ಅಶ್ವತ್ಥ ಮರವನ್ನು ಬೇಡಿಕೊಳ್ಳುವವರು , ವಿಶೇಷ ವ್ರತಗಳನ್ನು ಅಶ್ವತ್ಥ ನಾರಾಯಣನನ್ನು ಒಲಿಸಿಕೊಳ್ಳುವುದಕ್ಕಾಗಿ ನಡೆಸುವವರೂ ಇದ್ದಾರೆ.

ಧನುರ್ಮಾಸದಲ್ಲಿ ಮುಂಜಾನೆಯೇ ಹಣತೆ ದೀಪ ಅಥವಾ ಅರಳೀ ಎಲೆಯಿಂದ ತಯಾರಿಸಿದ ದೀಪಗಳನ್ನು ಇಡುವ ಸಂಪ್ರದಾಯವಿದೆ. ಆರೋಗ್ಯ ಭಾಗ್ಯ , ಕಲ್ಯಾಣ ಭಾಗ್ಯ ,ಸಂತಾನ ಭಾಗ್ಯ , ಸಂಪತ್ತಿನ ಭಾಗ್ಯ ಹೀಗೆ ವೈವಿಧ್ಯಮಯ ಕೋರಿಕೆಗಳನ್ನಿಟ್ಟು ಅಶ್ವತ್ಥ ವೃಕ್ಷವನ್ನು ಬೇಡಿಕೊಳ್ಳುವರು.

ಅಶ್ವತ್ಥ ಮರವನ್ನು ಶನಿವಾರ ದಿವಸವೇ ಪೂಜಿಸಿದರೆ ಹೆಚ್ಚು ಶ್ರೇಷ್ಠ. ಕೋರಿಕೆಗಳು ಈಡೇರುತ್ತವೆ ಎನ್ನುವರು.
ಅಶ್ವತ್ಥ ಮರವನ್ನು ಯಾವುದೇ ಕಾರಣಕ್ಕೂ ಕಡಿಯುವಂತಿಲ್ಲ. ಗೌತಮ ಬುದ್ಧನಿಗೆ ಇದೇ ವೃಕ್ಷದಡಿ ಜ್ಞಾನೋದಯವಾಯಿತೆನ್ನುವರು. ಹಿಂದಿನ ಅದೆಷ್ಟೋ ಋಷಿವರ್ಯರು ಇದೇ ದೇವತಾ ವೃಕ್ಷದಡಿ ಕುಳಿತು ಪಾಂಡಿತ್ಯ ಪಡೆದದ್ದು. ಆ ವೃಕ್ಷದ ನೆರಳಲ್ಲಿ ಒಂದಷ್ಟು ಹೊತ್ತು ಕಳೆದಾಗ ಸಿಗುವ ಆಹ್ಲಾದಕರ ಅನುಭವ ವರ್ಣನಾತೀತ. ಅಶ್ವತ್ಥ ವೃಕ್ಷ ಎಲ್ಲೆಂದರಲ್ಲಿ ಬೆಳೆಯುವುದಿಲ್ಲ. ಕೆಲವೊಮ್ಮೆ ಬಾವಿಯ ಒಳ ಆವರಣವನ್ನು ತಬ್ಬಿ ಬೆಳೆಯುವುದಿದೆ. ಅಂತಹ ಸಂದರ್ಭದಲ್ಲಿ ಒಟ್ಟಾರೆ ಕೀಳುವುದೋ ,ಎಸೆಯುವುದೋಬ ಮಾಡುವಂತಿಲ್ಲ. ಧಾರ್ಮಿಕ ಆಚರಣೆಯ ಮೂಲಕ ಬೇರೆಡೆಗೆ ನೆಡುವ ಕ್ರಮ ಅನುಸರಿಸುವರು.

ನಾನು ಈ ಲೇಖನ ಬರೆಯಲು ಕಾರಣ ಇತ್ತೀಚೆಗೆ ಅಶ್ವತ್ಥ ವೃಕ್ಷಕ್ಕೆ ನಡೆದ ಮದುವೆ.

“ಅಕ್ಕ ,ಬರೆದು ಕೊಡಿ ಅಶ್ವತ್ಥ ನಾರಾಯಣ ನ ಭಕ್ತಿ ಗೀತೆಯೊಂದನ್ನು ಎಂದು ವತ್ಸಲಾ ಕೇಳಿದಾಗ ಆಯಿತ್ತೆಂದಿದ್ದೆ. ಅರೆ ! ಅಶ್ವತ್ಥ ವೃಕ್ಷದ ಬಗ್ಗೆ ಹೌದು. ನಾರಾಯಣ ಎಂಬುದು ಸೇರಿಸಿದ್ದಾರೆ. ಶಿವನೂ ಇರುವ ,ಬ್ರಹ್ಮನೂ ಇರುವ. ಆದರೆ ನಾರಾಯಣನ ಬಗ್ಗೆ ? . ಸ್ವಲ್ಪ ಗೊಂದಲವಾದರೂ ನನಗೆ ಗೊತ್ತಿರುವಂತೆ ಬರೆದು ಕೊಟ್ಟಿದ್ದೆ.

ಅಶ್ವತ್ಥ ನಾರಾಯಣ

ಶಿರ ಬಾಗಿ ನಮಿಸುವೆವು ವರ ನೀಡಿ ಭಕ್ತರನು
ಸಂತೈಸು ಅಶ್ವತ್ಥ ನಾರಾಯಣ |
ಪರಿಹರಿಸಿ ಸಂಕಟವ ಹರುಷದೋಕುಳಿ ಹರಿಸು
ಪೂಜಿಪೆವು ಅಶ್ವತ್ಥ ನಾರಾಯಣ ||

ಏಳು ಸುತ್ತನು ಬಂದು ಸಾಲು ದೀಪವ ಹಚ್ಚಿ
ನಿಂದಿರಲು ಮನದಲ್ಲಿ ಸಂತೃಪ್ತಿಯು |
ಪತಿಯ ಪ್ರಾಣವನುಳಿಸಿ ಸಾವಿತ್ರಿಯಾ ಗೆಲುವು
ಹಿಂದಿರುವ ಗಾಥೆಯೋ ಅವ್ಯಕ್ತವು ||

ಜ್ಞಾನದಲಿ ಹೆಚ್ಚಳವು ಸಂತಾನ ಭಾಗ್ಯವು
ಆರೋಗ್ಯ ಲಗ್ನವೂ ದೇವನೊಲಿಯೆ |
ಆಮ್ಲಜನಕವ ಹೊತ್ತ ವೃಕ್ಷಗಳ ರಾಜನಿಗೆ
ಮನಸೋತ ಭಗವಂತ ಅವನಲ್ಲವೇ ||

ಹರಿ ಹರರು ಮಾತ್ರವೇ ಬ್ರಹ್ಮನೂ ನೆಲೆಸಿರುವ
ಅಶ್ವತ್ಥ ವೃಕ್ಷವೇ ಶರಣು ಶರಣು |
ದೇಗುಲದ ಬಳಿಯಲ್ಲಿ ನೆಲೆಯ ಬಯಸುವ ವೃಕ್ಷ
ವಂದಿಸುವೆ ಅಶ್ವತ್ಥ ನಾರಾಯಣ ||

ಆಶ್ರಯವ ಪಡೆದಂಥ ಹಕ್ಕಿಗಳ ಚಿಲಿಪಿಲಿಯು
ಹಾಡಿ ಹೊಗಳುತಲಿಹುದು ನಾರಾಯಣ |
ನಿನ್ನ ಕೃಪೆಯಲಿ ನಾವು ನಗುನಗುತ ಬಾಳುವೆವು
ಶರಣೆಂದೆ ಅಶ್ವತ್ಥ ನಾರಾಯಣ ||ಶೋಹ

ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಸುಶ್ರಾವ್ಯವಾಗಿ ಹಾಡಿದ್ದರು ವತ್ಸಲಾದ್ವಯರು. ಖುಷಿಯಾಯಿತು. ‌ಕಳಿಸಿದ್ದ ಚಿತ್ರದಲ್ಲಿ ಸಿಂಗರಿಸಲ್ಪಟ್ಟ ವರವಧೂ. ಅಪರೂಪಕ್ಕೊಮ್ಮೆ ನಡೆಯುವ ಮದುವೆ.

ಇಲ್ಲಿ ವರ ಅಶ್ವತ್ಥ – ವಧೂ ಕಹಿ ಬೇವು. ಎರಡೂ ವೃಕ್ಷಗಳು ಆರೋಗ್ಯದ ವಿಷಯದಲ್ಲಿ ಬಹಳ ಪ್ರಮುಖವಾಗಿದೆ. ಔಷಧೀಯ ಗುಣಗಳು ಒಂದೇ ಎರಡೇ.ಅದ್ಭುತ.

ಒಂದು ಸಂಸ್ಕಾರವುಳ್ಳ ಕುಟುಂಬದಲ್ಲಿ ಯಾವುದೇ ಕ್ರಮಕ್ಕೆ ಭಂಗ ಬರದಂತೆ ನಡೆಯುವಂತಹ ಮದುವೆ. ವಧೂವಿನ ಕಡೆಯವರು , ವರನ ಕಡೆಯುವರು. ಅರಿಶಿನ ಶಾಸ್ತ್ರ. ಬಳೆಯ ಶಾಸ್ತ್ರ , ನಾಂದಿ ಶಾಸ್ತ್ರ , ಹೋಮ ವಾದ್ಯಗೋಷ್ಠಿ ,ಇತ್ಯಾದಿ ಇತ್ಯಾದಿ. ಜರತಾರಿ ಸೀರೆ , ಶಾಸ್ತ್ರ ಸಂಪ್ರದಾಯ ಯಾವುದೂ ತಪ್ಪಿಸಿಲ್ಲ. ಒಂದು ಬ್ರಾಹ್ಮಣ ಕುಟುಂಬದಲ್ಲಿ ನಡೆಯುವ ಪ್ರತಿಯೊಂದು ಆಚರಣೆ ಇದೆ. ನಮ್ಮ ಆಚರಣೆಯೂ ಬ್ರಾಹ್ಮಣರ ಆಚರಣೆಯೂ ಒಂದೇ ತಾನೇ. ಒಂದು ಸಾವಿರ ಎಲೆ ಅಶ್ವತ್ಥ ವೃಕ್ಷದಲ್ಲಿ ಹುಟ್ಟಿಕೊಂಡಾಗಲೇ ಮದುವೆ ಮಾಡ ಬೇಕೆಂಬ ನಂಬಿಕೆಯಿದ್ದರೂ ಅವರವರ ಅನುಕೂಲಕ್ಕೆ ತಕ್ಕಂತೆ ಈ ಆಚರಣೆಯನ್ನು ನಡೆಸುವರು.


ಮೇಲಿನ ಚಿತ್ರದಲ್ಲಿ ಇರುವುದು ಹೆಮ್ಮರ. ಈ ಮದುವೆಯಿಂದ ಸರ್ವರಿಗೂ ಶ್ರೇಯಸ್ಸು ನಿಶ್ಚಿತ.

ಕರಾವಳಿಯಲ್ಲಿ ಹೆಚ್ಚಾಗಿ ಈ ಸಂಪ್ರದಾಯ ಕಂಡು ಬರುವುದು. ಅಶ್ವತ್ಥ ನಾರಾಯಣನ ಮದುವೆ ಹೇಗೆ ಎಂದರೆ ಇಲ್ಲಿ ನಡೆಯುವುದು
ವಿಷ್ಣು ಮತ್ತು ಲಕ್ಷ್ಮಿಯ ಮದುವೆ. ಅಶ್ವತ್ಥ ನಾರಾಯಣ. ಕಹಿ ಬೇವಿನ ವೃಕ್ಷ ಲಕ್ಷ್ಮೀ. ವಧೂ ವರರ ಶೃಂಗಾರ ಅದ್ಭುತ.

ಮದುವೆಯ ಊಟ ಅದ್ದೂರಿ.

ಅಂದ ಹಾಗೆ ಅಶ್ವತ್ಥ ವೃಕ್ಷಕ್ಕೆ ಉಪನಯನವನ್ನೂ ಮಾಡುವರು. ಒಟ್ಟಾರೆ ಸುರರು ನರರಿಗಿಂತ ಭಿನ್ನವಲ್ಲ ಮದುವೆಯ ಕ್ರಮ.

ಶಿರ ಬಾಗಿ ನಮಿಸುವೆ ನಾರಾಯಣ – ಅಶ್ವತ್ಥ ನಾರಾಯಣ

ಶೋಭಾ ಹರಿಪ್ರಸಾದ ಶೆಟ್ಟಿಗಾರ ಉಡುಪಿ
ಚಿತ್ರ ಕೃಪೆ : ವತ್ಸಲಾ

Bhavani Caterers
Bhavani Caterers
Ads
Ads
Ads
Ads

About the Author

padmashali

Administrator

View All Posts

Post navigation

Previous: ಸಾಲಿಕೇರಿ: ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ
Next: ಚೈತನ್ಯ – ಮಹಿಳಾ ವೇದಿಕೆಯಿಂದ ಮಹಿಳಾ ದಿನಾಚರಣೆ

Related Stories

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025 1
Indian Railway
  • Jobs
  • News

Jobs – Assistant Loco Pilot (ALP) – 9900 posts in Railways

padmashali April 9, 2025

ಪದ್ಮಲೇಖ

ಪದ್ಮಲೇಖ

ಕರಾವಳಿ ಕರ್ನಾಟಕದ ಪದ್ಮಶಾಲಿ (ಶೆಟ್ಟಿಗಾರ) ರ ತ್ರೈಮಾಸಿಕ ಪತ್ರಿಕೆ

Trending News

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ WhatsApp-Image-2025-06-30-at-9.49.05-AM.jpeg?fit=651%2C475&ssl=1 1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

June 30, 2025
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image 2
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway 3
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas 4
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs 5
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Posts Slider

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025 1
Indian Railway
  • Jobs
  • News

Jobs – Assistant Loco Pilot (ALP) – 9900 posts in Railways

padmashali April 9, 2025
srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

padmashali April 9, 2025
IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

padmashali April 5, 2025

Express Posts List

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
Share with your family and friends ಸಾಲಿಕೇರಿಯ ದಿ. ಪದ್ಮನಾಭ ಶೆಟ್ಟಿಗಾರ್ ಮತ್ತು ಶ್ರೀಮತಿ ರೇವತಿ ಶೆಟ್ಟಿಗಾರ್ ಇವರ ದ್ವಿತೀಯ ಸುಪುತ್ರ...
Read More Read more about ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Recent Posts

  • ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
  • ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 
  • Jobs – Assistant Loco Pilot (ALP) – 9900 posts in Railways
  • ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ
  • Jobs – IDBI Bank – Specialist Cadre Officers – 119 Posts
  • ಉಡುಪಿಯಲ್ಲಿ ದೇವರ ದಾಸಿಮಯ್ಯ ಜಯಂತಿ 
  • Jobs – Staff Selection Commission

Tags

Blood Donation Mahasabha Padmashali ಮಹಾಸಭಾ ಮುಲ್ಕಿ ರಕ್ತದಾನ ಶಿಬಿರ

Categories

Advertisements Jobs News ಕಲ್ಯಾಣಪುರ ಕಿನ್ನಿಮುಲ್ಕಿ ಕ್ರೀಡಾ ವೇದಿಕೆ ತಂತ್ರಜ್ಞಾನ ಸಮಿತಿ ತೊಂಬತ್ತು ವಸಂತ ದುಬೈ ದೇವಸ್ಥಾನಗಳು ಧಾರ್ಮಿಕ ವೇದಿಕೆ ನೇಕಾರ ವೇದಿಕೆ ಬಂಗ್ರಮಂಜೇಶ್ವರ ಬಾರಕೂರು ಬೆಂಗಳೂರು ಮಹಿಳಾ ವೇದಿಕೆ ಮುಂಬಯಿ ಮುಲ್ಕಿ-ಮಾನಂಪಾಡಿ ಯುವ ವೇದಿಕೆ ಲೇಖನಗಳು ವೇದಿಕೆಗಳು ಸಹ ಸಂಘಟನೆಗಳು ಸಾಧಕರು ಸಾಲಿಕೇರಿ ಸೃಜನಶೀಲತೆ

Meta

  • Log in
  • Entries feed
  • Comments feed
  • WordPress.org
  • Facebook
  • Twitter
  • Instagram
  • Youtube
  • Linkedin
  • Whatsapp
Copyright © All rights reserved. | MoreNews by AF themes.