Skip to content
ಪದ್ಮಶಾಲಿ ಮಹಾಸಭಾ

ಪದ್ಮಶಾಲಿ ಮಹಾಸಭಾ

Website-HeaderBanner

Connect with Us

  • Facebook
  • Twitter
  • Instagram
  • Youtube
  • Linkedin
  • Whatsapp
Primary Menu
  • ಮುಖಪುಟ
  • ಮಹಾಸಭಾ
  • ವಿದ್ಯಾವರ್ಧಕ
  • ದೇವಸ್ಥಾನಗಳು
    • ಬಾರಕೂರು
    • ಮಂಗಳೂರು
    • ಸಾಲಿಕೇರಿ
    • ಕಲ್ಯಾಣಪುರ
    • ಹಳೆಯಂಗಡಿ
    • ಸುರತ್ಕಲ್ಲು
    • ಸಿದ್ಧಕಟ್ಟೆ
    • ಮುಲ್ಕಿ-ಮಾನಂಪಾಡಿ
    • ಎರ್ಮಾಳ್
    • ಕಿನ್ನಿಮುಲ್ಕಿ
    • ಕಾರ್ಕಳ
    • ಕಾಪು
    • ಪಡುಬಿದ್ರಿ
    • ಉಳ್ಳಾಲ
    • ಕಾಙಂಗಾಡ್
    • ಬಂಗ್ರಮಂಜೇಶ್ವರ
  • ಪದ್ಮಲೇಖ
  • ವೇದಿಕೆಗಳು
    • ಧಾರ್ಮಿಕ ವೇದಿಕೆ
    • ಕ್ರೀಡಾ ವೇದಿಕೆ
    • ನೇಕಾರ ವೇದಿಕೆ
    • ಪರಿಣಯ ವೇದಿಕೆ
    • ಮಹಿಳಾ ವೇದಿಕೆ
    • ಯುವ ವೇದಿಕೆ
    • ತಂತ್ರಜ್ಞಾನ ಸಮಿತಿ
  • ಸಹ ಸಂಘಟನೆಗಳು
    • ಮುಂಬಯಿ
    • ಬೆಂಗಳೂರು
    • ಯುಎಇ
  • ಸದಸ್ಯತ್ವ
  • ಉದ್ಯೋಗ ಮಾಹಿತಿ
  • ವಾರ್ತೆಗಳು
  • Home
  • ಸೃಜನಶೀಲತೆ
  • ಲೇಖನಗಳು
  • ಯೋಚಿಸದೇ ಹೆಜ್ಜೆ ಇಟ್ಟಾಗ
  • ಲೇಖನಗಳು
  • ಸೃಜನಶೀಲತೆ

ಯೋಚಿಸದೇ ಹೆಜ್ಜೆ ಇಟ್ಟಾಗ

padmashali January 7, 2025 1 minute read
bunglow with loan
Share with your family and friends

Loading

ಸ್ಥಳೀಯ ಪತ್ರಿಕೆಯೊಂದನ್ನು ಓದುತ್ತಿದ್ದ ರಾಯರು ಥಟ್ಟನೇ ಎದ್ದು ನಿಂತವರು ಮತ್ತೆ ಕುಸಿದು ಕುಳಿತು ಹಣೆ ಉಜ್ಜ ತೊಡಗಿದರು. ಎದುರಿಗಿದ್ದ ನೀರುಳ್ಳಿ ಬಜೆ ಎರಡು ಮೂರು ಖಾಲಿಯಾದದ್ದು ಬಿಟ್ಟರೆ ತಟ್ಟೆಯಲ್ಲಿ ಹಾಗೆ ಉಳಿದಿತ್ತು. ಬಿಸಿ ಬಿಸಿ ಕಾಫಿಯೊಂದಿಗೆ ಹೊರ ಬಂದ ಸೀತಕ್ಕ “ಇವರಿಗೇನಾಯ್ತಪ್ಪ ?” ಎಂದು ಅವಸರವಸರದಿಂದ ಮೇಜಿನ ಮೇಲಿರಿಸಿ ” ಏನಾಯಿತು ? ಏನಾಯಿತು ? ” ಎಂದು ಪತಿಯ ತೋಳನ್ನು ಹಿಡಿದು ಕೇಳ ತೊಡಗಿದರು. ” ಏನಿಲ್ಲ “ಎಂದು ಅಬ್ಬರಿಸಿದ ಅವರು ತನ್ನ ಮೊಬೈಲ್ ಪೋನ್ ತರಲು ಹೇಳಿದರು. ನೇತು ಹಾಕಿದ್ದ ಅಂಗಿಯಲ್ಲಿದ್ದ ಮೊಬೈಲ್ ನ್ನು ತಂದು ಅವರ ಕೈಯಲ್ಲಿ ಇರಿಸಿದ ಸೀತಕ್ಕ ಏನೊಂದೂ ತಿಳಿಯದೇ ನೋಡುತ್ತ ನಿಂತರು. ಯಾವುದೋ ಒಂದು ನಂಬರಿಗೆ ಕರೆ ಮಾಡಿ ” ಈಗಲೇ ಬಾ ಮನೆಗೆ” ಎಂದರು ಶಾಂತ ದನಿಯಲ್ಲಿ. ಸೀತಕ್ಕನ ಮುಖ ಬಾಡಿತ್ತು. ಏನೆಂದು ಕೇಳಿದೊಡನೆ ನಮ್ಮ ಮೇಲೆ ಹಾರಾಟ. ಮೂರನೆಯವರ ಬಳಿ ಅದೇನು ಮೃದು ಮಾತು. ” ಗಂಡಸರೇ ಹೀಗೇನೋ ” ಮನದಲ್ಲೇ ಅಂದುಕೊಂಡು ಬರುವವರು ಯಾರಿರ ಬಹುದು ? ನೋಡೋಣ ಎಂದು ಕಾದು ಕೂತವರಿಗೆ ಅಂಗಳದಲ್ಲಿ ರಿಕ್ಷಾ ಬಂದು ನಿಂತದ್ದು ಕಂಡಿತು. ರಾಯರು ಅವಸರವಸರದಿಂದ ಹೊರಟು ರಿಕ್ಷಾ ಏರಿದಾಗ ಸೀತಕ್ಕ ಬಿಡುವರೇ ? “ಏನೋ ಬೇಸರದಲ್ಲಿ ಇದ್ದ ಹಾಗೆ ಇದೆ. ನಾನೂ ಬರುವೆ ” ಎಂದು ಹಿಂದಿನಿಂದ ಓಡಿದರು. ರಿಕ್ಷಾದವರ ಎದುರು ಗಂಡ ಬೈಯುವುದಿಲ್ಲ ಎಂದು ಸೀತಕ್ಕನಿಗೆ ಖಾತ್ರಿ ಇತ್ತು. ದುರುಗುಟ್ಟಿ ನೋಡಿದ ರಾಯರು ಸುಮ್ಮನಾದರು.


ರಿಕ್ಷಾ ಹೋಗಿ ನಿಂತದ್ದು ರಾಯರ ಚಿಕ್ಕ ತಮ್ಮನ ಮನೆಯೆದುರು. “ಅರೇ ,ಇವನು ಅಣ್ಣ – ಅತ್ತಿಗೆಯೊಂದಿಗೆ ಸಂಪರ್ಕ ಇಟ್ಟು ಕೊಳ್ಳದವ. ಮನೆ ಕಟ್ಟುವ ಸಂದರ್ಭದಲ್ಲಿ ಅಣ್ಣ ಕೊಟ್ಟ ಸಲಹೆ ಗಾಳಿಗೆ ತೂರಿದ್ದ. ಅವನ ಹೆಂಡತಿಯಂತೂ ” ಅವರಿಗೆಲ್ಲ ಹೊಟ್ಟೆಗಿಚ್ಚು . ನಮ್ಮಿಷ್ಟ ಇವರಿಗೇನಂತೆ ? ” ಎಂದು ಮೂತಿ ತಿರುವಿದ್ದಳು. ಸೀತಕ್ಕನ ಮಾವ ಸೋಮಪ್ಪನವರು ಊರಲ್ಲಿದ್ದ ಹಳೆ ಮನೆಯನ್ನು ಮಾರಿ ತನ್ನಿಬ್ಬರು ಗಂಡು ಮಕ್ಕಳಿಗೆ ಹಣವನ್ನು ಸಮಾನವಾಗಿ ಹಂಚಿ ದೊಡ್ಡ ಮಗ ಸೊಸೆಯೊಂದಿಗೆ ಬಂದು ನೆಲೆಸಿದ್ದರು.

ಹಲವಾರು ವರ್ಷಗಳಿಂದ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಸೀತಕ್ಕನ ಗಂಡ ಆ ಹಣದಿಂದ ಮನೆಯೊಂದನ್ನು ಯಾವುದೇ ಸಾಲ ಮಾಡದೇ ಕಟ್ಟಿಕೊಳ್ಳಲು ಸಾಧ್ಯವಾಗಿತ್ತು.‌ ಇವರೊಂದಿಗೇ ಇದ್ದರು ತಮ್ಮ ಮತ್ತು ತಮ್ಮನ ಹೆಂಡತಿ. ಅಣ್ಣನ ಮನೆ ನೋಡಿ ತಮ್ಮನಿಗೂ ಹೊಸತನ್ನು ಕಟ್ಟುವಾಸೆ. ಬ್ಯಾಂಕ್ ಕೆಲಸದಲ್ಲಿದ್ದ ತಮ್ಮ. ಅವನ ಹಣ ಅವನು ಕಟ್ಟುವುದು ತಾನೇ ? . ಎಲ್ಲರಿಗೂ ಖುಷಿಯಾಗಿತ್ತು.

ಆದರೆ ಪುಟ್ಟ ಮನೆ ಹೋಗಿ ದೊಡ್ಡ ಬಂಗಲೆಯ ಆಸೆ ಮೊಳೆತಾಗ ಅವರಿಬ್ಬರಲ್ಲಿ , ರಾಯರು ತಮ್ಮನಿಗೆ ಸಾಲ ಅತಿಯಾಗಿ ಮಾಡ ಬೇಡ “ಎಂಬ ಸಲಹೆ ನೀಡಿದ್ದರು. ತಮ್ಮನಿಗೇನೋ ಅಣ್ಣನ ಮಾತು ಸತ್ಯವೆನಿಸಿದ್ದರೂ ಅವನ ಹೆಂಡತಿ ಒಪ್ಪ ಬೇಕಲ್ಲಾ.‌ ಸಿಡೆದೆದ್ದ ಆಕೆ ” ಅವರಿಗೆಲ್ಲ ಹೊಟ್ಟೆಗಿಚ್ಚು. ಅವರ ಮನೆಗಿಂತ ದೊಡ್ಡದ್ದನ್ನು ಕಟ್ಟುವೆವು ಎಂದು” ಎಂದು ಪತಿಯ ಬಳಿ ಇಲ್ಲ ಸಲ್ಲದ್ದನ್ನು ಹೇಳಿ ಅವನನ್ನು ಬದಲಾಯಿಸಿದ್ದಳು.ಅವಳಿಗೆ ಎತ್ತಿಕೊಡಲು ಅವಳ ತಾಯಿ ಬೇರೆ. ಅಂದಿನಿಂದ ಅವರಿಬ್ಬರು ಆಕೆಯ ತವರು ಮನೆಯಲ್ಲೇ ಇದ್ದರು.

*** **** ***”

ಎರಡು ವರ್ಷದ ಹಿಂದೆ ಗೃಹ ಪ್ರವೇಶಕ್ಕೆ ಹೋದ ಸಂದರ್ಭದಲ್ಲಿ ಅಪರಿಚಿತರಂತೆ ನಡೆಸಿಕೊಂಡಿದ್ದರು ಮಾತ್ರವಲ್ಲದೆ ಅವಮಾನವನ್ನೂ ಮಾಡಿದ್ದರು.. ಹಾಗಾಗಿ ಅವರ ನಡುವಿನ ಸಂಪರ್ಕ ಸಂಪೂರ್ಣ ನಿಂತು ಹೋಗಿತ್ತು. ಇವತ್ತು ಎಲ್ಲವನ್ನೂ ಮರೆತಂತೆ ರಾಯರು ತಮ್ಮನ ಮನೆಗೆ !

ಹೊರಗಡೆ ಕುಳಿತಿದ್ದ ತಮ್ಮ ಎದ್ದು ನಿಂತು ” ಏನು ? ” ಎಂದು ದನಿಯೇರಿಸಿ ಕೇಳಿದ್ದ. “ಒಳಗೆ ಹೋಗಿ ಮಾತಾಡುವ ” ಎಂದಾಗ ರಾಯರು “ಯಾಕೆ ? ” ಎಂದು ಅವನ ಹೆಂಡತಿ ಬೇರೆ. “ಸರಿ” ಎಂದ ರಾಯರು ” ಇದೇನು ? ” ಎಂದು ಪತ್ರಿಕೆಯಲಿದ್ದುದ್ದನ್ನು ತೋರಿದಾಗ ಇಬ್ಬರೂ ಮೆತ್ತಗಾದರೂ ಮತ್ತೆ ತಗ್ಗದ ಅಹಂಕಾರ. ” ಎಲ್ಲಾ ಮಾಡುವುದನ್ನೇ ಮಾಡಿದ್ದೇವೆ. ” ಎಂದಳು ತಮ್ಮನ ಹೆಂಡತಿ. ತಮ್ಮ ಹೌದೆಂದು ತಲೆಯಲಾಡಿಸಿದ. “ಮೊದಲೇ ಹೇಳಿರಲಿಲ್ವಾ? ” ಎಂದಾಗ ರಾಯರು ತಮ್ಮನ ಕಣ್ಣಿನಲ್ಲಿ ನೀರು ಬಂತು. ” ಕುತ್ತಿಗೆ ತನಕ ಬಂದಿದೆ. ಬೇರೆ ಮಾರ್ಗ ಇರಲಿಲ್ಲ ” ಎಂದ ಬಿಕ್ಕುತ್ತ.


ವಿಷಯ ಏನೆಂದು ತಿಳಿಯದೆ ಸೀತಕ್ಕ ಮೌನದಲ್ಲಿ ಒಳಗೆ ಕರೆದಾಗ ಹೋಗಿ ಕುಳಿತರು. ಆಗಷ್ಟೇ ತಿಳಿಯಿತು. ಸಾಲ ಏರಿ ಮನೆ ಮಾರಾಟದ ಜಾಹೀರಾತು ಪತ್ರಿಕೆಗೆ ಹಾಕಿದ್ದು. ಎಷ್ಟೆಂದರೂ ರಕ್ತ ಸಂಬಂಧ. ಕೈ ಬಿಡುವರೇ ಅಣ್ಣ ? . ತನ್ನಿಂದಾದಷ್ಟು ನೆರವು ನೀಡಿ ಮನೆ ಉಳಿಸಿ ಕೊಟ್ಟರು.
“ಸಹಾಯ ಮಾಡಿದ್ದೇನೋ ನಿಜ. ನಾಳೆ ನನ್ನ ಮಕ್ಕಳ ಗತಿ ?.” ಪ್ರಶ್ನೆ ಮಾಡಿದರೆ ಬುಸುಗುಟ್ಟುವ ಗಂಡ. “ಯಾರದೋ ಎಡವಟ್ಟು ,ಯಾರದೋ ನೆರವು. ಬುದ್ಧಿ ಇಲ್ಲದವರು. ನನ್ನ ಗಂಡ ಇದ್ದದ್ದೆಲ್ಲ ಕೊಟ್ಟು ನಾಳೆ ನಮ್ಮನ್ನು ಬೀದಿಗೆ ತಂದು ನಿಲ್ಲಿಸಿದರೇ ? ” ಕಣ್ಣಲ್ಲಿ ನೀರು ಬಂದಿತ್ತು .ನಿಟ್ಟುಸಿರು ಬಿಟ್ಟರು ಸೀತಕ್ಕ.

ಶೋಭಾ ಹರಿಪ್ರಸಾದ ಶೆಟ್ಟಿಗಾರ್ ಉಡುಪಿ

About the Author

padmashali

Administrator

View All Posts

Post navigation

Previous: ಅಭಿನಂದನೆಗಳು – ಜೀತೇಶ್ ದುಶ್ಯಂತ್ ಪದ್ಮಶಾಲಿ, ಕಿನ್ನಿಮುಲ್ಕಿ
Next: ಅಭಿನಂದನೆಗಳು – ಯಶ್ವಿನ್ ಕೆ. ಶೆಟ್ಟಿಗಾರ್

Related Stories

Article-Image
  • News
  • ಮಹಿಳಾ ವೇದಿಕೆ
  • ಲೇಖನಗಳು

ಅಶ್ವತ್ಥ ವೃಕ್ಷದ ಮದುವೆ

padmashali February 24, 2025
ಶೋಭಾ ರಾಮಾಯಣ ಓದಿನಾನಂದ
  • News
  • ಲೇಖನಗಳು

ಶೋಭಾ ರಾಮಾಯಣ ಓದಿನಾನಂದ

padmashali January 23, 2025
ಕೈ ಮಗ್ಗ ಮತ್ತು ನೇಕಾರ ಭಾಗ 1
  • News
  • ನೇಕಾರ ವೇದಿಕೆ
  • ಮಹಿಳಾ ವೇದಿಕೆ
  • ಲೇಖನಗಳು
  • ಸೃಜನಶೀಲತೆ

ಕೈ ಮಗ್ಗ ಮತ್ತು ನೇಕಾರ – ಭಾಗ 1

padmashali January 18, 2025

ಪದ್ಮಲೇಖ

ಪದ್ಮಲೇಖ

ಕರಾವಳಿ ಕರ್ನಾಟಕದ ಪದ್ಮಶಾಲಿ (ಶೆಟ್ಟಿಗಾರ) ರ ತ್ರೈಮಾಸಿಕ ಪತ್ರಿಕೆ

Trending News

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ WhatsApp-Image-2025-06-30-at-9.49.05-AM.jpeg?fit=651%2C475&ssl=1 1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

June 30, 2025
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image 2
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway 3
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas 4
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs 5
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Posts Slider

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025 1
Indian Railway
  • Jobs
  • News

Jobs – Assistant Loco Pilot (ALP) – 9900 posts in Railways

padmashali April 9, 2025
srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

padmashali April 9, 2025
IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

padmashali April 5, 2025

Express Posts List

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
Share with your family and friends ಸಾಲಿಕೇರಿಯ ದಿ. ಪದ್ಮನಾಭ ಶೆಟ್ಟಿಗಾರ್ ಮತ್ತು ಶ್ರೀಮತಿ ರೇವತಿ ಶೆಟ್ಟಿಗಾರ್ ಇವರ ದ್ವಿತೀಯ ಸುಪುತ್ರ...
Read More Read more about ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Recent Posts

  • ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
  • ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 
  • Jobs – Assistant Loco Pilot (ALP) – 9900 posts in Railways
  • ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ
  • Jobs – IDBI Bank – Specialist Cadre Officers – 119 Posts
  • ಉಡುಪಿಯಲ್ಲಿ ದೇವರ ದಾಸಿಮಯ್ಯ ಜಯಂತಿ 
  • Jobs – Staff Selection Commission

Tags

Blood Donation Mahasabha Padmashali ಮಹಾಸಭಾ ಮುಲ್ಕಿ ರಕ್ತದಾನ ಶಿಬಿರ

Categories

Advertisements Jobs News ಕಲ್ಯಾಣಪುರ ಕಿನ್ನಿಮುಲ್ಕಿ ಕ್ರೀಡಾ ವೇದಿಕೆ ತಂತ್ರಜ್ಞಾನ ಸಮಿತಿ ತೊಂಬತ್ತು ವಸಂತ ದುಬೈ ದೇವಸ್ಥಾನಗಳು ಧಾರ್ಮಿಕ ವೇದಿಕೆ ನೇಕಾರ ವೇದಿಕೆ ಬಂಗ್ರಮಂಜೇಶ್ವರ ಬಾರಕೂರು ಬೆಂಗಳೂರು ಮಹಿಳಾ ವೇದಿಕೆ ಮುಂಬಯಿ ಮುಲ್ಕಿ-ಮಾನಂಪಾಡಿ ಯುವ ವೇದಿಕೆ ಲೇಖನಗಳು ವೇದಿಕೆಗಳು ಸಹ ಸಂಘಟನೆಗಳು ಸಾಧಕರು ಸಾಲಿಕೇರಿ ಸೃಜನಶೀಲತೆ

Meta

  • Log in
  • Entries feed
  • Comments feed
  • WordPress.org
  • Facebook
  • Twitter
  • Instagram
  • Youtube
  • Linkedin
  • Whatsapp
Copyright © All rights reserved. | MoreNews by AF themes.