ಹಲವು ಶತಮಾನಗಳ ಇತಿಹಾಸ ಹೊಂದಿರುವ ಪಣಂಬೂರು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯೀ ದೇವಸ್ಥಾನ ಈಗಿನ ನವಮಂಗಳೂರು ಅಂದರೆ ಮಂಗಳೂರಿನ ಪಣಂಬೂರಿನಲ್ಲಿ ನೆಲೆಗೊಂಡಿತ್ತು. ಶ್ರೀ ಕ್ಷೇತ್ರದಲ್ಲಿ 1964, 1993 ಹಾಗೂ ಇತ್ತೀಚೆಗೆ 2019ರಲ್ಲಿ ಜರುಗಿದ ಅಷ್ಟಮಂಗಲ ಪ್ರಶ್ನೆಗಳಲ್ಲಿ ಈ ದೇವಾಲಯಕ್ಕೆ ಸುಮಾರು ಹತ್ತು ಶತಮಾನಗಳ ಇತಿಹಾಸವಿರುವುದು ದೃಢಪಟ್ಟಿದೆ. ಪಣಂಬೂರಿನಲ್ಲಿದ್ದಾಗ ಈ ದೇವಸ್ಥಾನದ ಸಮೀಪದ ‘ಕಾವೇರಿಸ್ಥಾನ’ ಎಂಬಲ್ಲಿ ‘ಸರಳ ದೂಮಾವತಿ’ ಮತ್ತು ‘ಬಂಟ’ ದೈವಗಳು ಇಲ್ಲಿಗೆ ಸೇರಿಕೊಂಡವು ಎಂದು ತಿಳಿದು ಬಂದಿರುತ್ತದೆ ಅಲ್ಲದೇ ಕ್ಷೇತ್ರದ ಆಕರ್ಷಣೆಗೊಳಗಾಗಿ ಕೇರಳದ ನೀಲೇಶ್ವರದಿಂದ ‘ವಾರಾಹಿ’ ದೈವವೂ, ಕಾಲಾನುಕ್ರಮದಲ್ಲಿ ‘ಮೈಸಂದಾಯ’, ‘ಬಬ್ಬರ್ಯ’ ಹಾಗೂ ಬೈಕಾಡ್ತಿ’ ದೈವಗಳು ಸೇರ್ಪಡೆಗೊಂಡು ಪೂಜಾರ್ಹವಾದವು. ಇಲ್ಲಿ ಕ್ಷೇತ್ರಪಾಲಕನಾಗಿ ‘ಗುಳಿಗ’ ದೈವವನ್ನು ಆರಾಧಿಸಲಾಗುತ್ತಿದೆ.
1946ನೆಯ ಇಸವಿಯಲ್ಲಿ ಪಣಂಬೂರಿನಲ್ಲಿ ‘ಶ್ರೀ ಮಹಾಗಣಪತಿ’ ದೇವರನ್ನು ದೇವಸ್ಥಾನದ ಪ್ರಾಂಗಣದೊಳಗೆ ಶ್ರೀ ವೀರಭದ್ರ ಸ್ವಾಮಿಯ ನೈರುತ್ಯ ದಿಕ್ಕಿನಲ್ಲಿ ಪ್ರತಿμÁ್ಠಪಿಸಲಾಯಿತು. 1965ನೇ ಇಸವಿಯಲ್ಲಿ ಭಾರತ ಸರಕಾರ ಪಣಂಬೂರಿನಲ್ಲಿ ‘ನವಮಂಗಳೂರು ಬಂದರು’ ಸ್ಥಾಪನೆಗೆ ಮುಂದಾದಾಗ ಪಶ್ಚಿಮ ಕಡಲ ಕಿನಾರೆಯ ತೆಂಗಿನ ತೋಪಿನ ಮಧ್ಯೆ ಕಂಗೊಳಿಸುತ್ತಿದ್ದ ಅಲ್ಲಿನಎಲ್ಲ ವರ್ಗದ ಆಸ್ತಿಕ ಬಂಧುಗಳ ಆರಾಧ್ಯಕ್ಷೇತ್ರ ಹಾಗೂ ನಂಬಿದವರ ಇμÁ್ಟರ್ಥಗಳನ್ನು ಈಡೇರಿಸುತ್ತಿದ್ದ ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯೀ ಹಾಗೂ ಪರಿವಾರ ದೈವದೇವರುಗಳ ದೇವಸ್ಥಾನವನ್ನು ಅನಿವಾರ್ಯವಾಗಿ ದಿನಾಂಕ 18.10.1965ನೇ ಸೋಮವಾರದಂದು ದೈವದೇವರುಗಳ ಪ್ರೇರೇಪಣೆಯಂತೆ ಬಂಟ್ವಾಳ ತಾಲೂಕು ಸಿದ್ಧಕಟ್ಟೆಯ ಸಂಗಬೆಟ್ಟು (ಎಲಿಯ) ಎಂಬಲ್ಲಿಗೆ ಸ್ಥಳಾಂತರಿಸಲಾಯಿತು. ನೂತನ ದೇವಾಲಯಕ್ಕೆ ಸುಮಾರು 12 ಎಕರೆ ವಿಸ್ತೀರ್ಣದ ಎತ್ತರವಾದ ಸ್ಥಳವನ್ನು ಖರೀದಿಸಿ ಆಸ್ತಿಕ ಬಂಧುಗಳ ಶ್ರಮದಾನದಲ್ಲಿ ಗುಡ್ಡವನ್ನು ಸಮತಟ್ಟುಗೊಳಿಸಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ನೂತನ ದೇವಾಲಯ ನಿರ್ಮಾಣ ಮಾಡಲಾಯಿತು. ದಿನಾಂಕ 26-02-1970ರಂದು ಅಷ್ಟಬಂಧ ಬ್ರಹ್ಮಕಲಶಾಭಿμÉೀಕೋತ್ಸವವು ನಡೆದು ದೈವದೇವರುಗಳನ್ನು ನೂತನ ದೇವಾಲಯದಲ್ಲಿ ಪ್ರತಿμÁ್ಠಪಿಸಲಾಯಿತು. ನೂತನ ದೇವಾಲಯದ ಪ್ರಾಂಗಣದಲ್ಲಿ ‘ಶ್ರೀ ಮಹಾಗಣಪತಿ’ ದೇವರನ್ನು ಪ್ರತ್ಯೇಕ ಗುಡಿಯಲ್ಲಿ ಪ್ರತಿμÁ್ಠಪಿಸಲಾಗಿದೆ. ‘ಶ್ರೀ ವೀರಭದ್ರ ಸ್ವಾಮಿ’ಯ ಪಾಣಿಪೀಠದಲ್ಲಿ ಸ್ವಾಮಿಯ ಬಲಬದಿಗೆ ‘ಶ್ರೀ ದುರ್ಗಾಪರಮೇಶ್ವರೀ’ ಅಮ್ಮನವರ ಉತ್ಸವಮೂರ್ತಿ ಇದ್ದು ವμರ್Áವಧಿ ಉತ್ಸವದ ವೇಳೆ ಅಮ್ಮನವರ ಬಲಿ ಉತ್ಸವವು ಬಹಳ ವಿಜೃಂಭಣೆಯಿಂದ ಜರಗುತ್ತಿದೆ. ದೇವಾಲಯ ಪ್ರಾಂಗಣದ ಈಶಾನ್ಯ ದಿಕ್ಕಿನಲ್ಲಿ ನಾಗದೇವರನ್ನು ಪ್ರತಿμÁ್ಠಪಿಸಿ ಪೂಜಿಸಲಾಗುತ್ತಿದೆ. ದಿನಾಂಕ 17.02.1995 ಶುಕ್ರವಾರದಂದು ಮಗದೊಮ್ಮೆ ‘ಅಷ್ಟಬಂಧ ಬ್ರಹ್ಮಕಲಶೋತ್ಸವ’ ಹಾಗೂ ದಿನಾಂಕ 18.02.1995 ಶನಿವಾರದಂದು ಶ್ರೀ ಕ್ಷೇತ್ರದಲ್ಲಿ ‘ಅಷ್ಟಪವಿತ್ರ ನಾಗಮಂಡಲೋತ್ಸವ’ ಜರುಗಿರುತ್ತದೆ. 2015ನೇ ಇಸವಿಯಲ್ಲಿ ಜೀರ್ಣಾವಸ್ಥೆಯಲ್ಲಿದ್ದ ಶ್ರೀ ಮಹಮ್ಮಾಯೀ ಅಮ್ಮನವರ ದೇವಾಲಯವನ್ನು ಭಗವದ್ಭಕ್ತರ ಸಹಕಾರದಿಂದ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಿ ದಿನಾಂಕ 23- 02-2015 ಸೋಮವಾರದಂದು ಬ್ರಹ್ಮಕಲಶೋತ್ಸವ ನಡೆಸಲಾಯಿತು.
ಪೂಜಾ ವಿಧಿವಿಧಾನ: ಶ್ರೀ ಮಹಾಗಣಪತಿ, ಶ್ರೀ ವೀರಭದ್ರ ಸ್ವಾಮಿ, ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ, ನಾಗದೇವರಿಗೆ ಬ್ರಾಹ್ಮಣ ಅರ್ಚಕರಿಂದ ಬೆಳಿಗ್ಗೆ ಅಭಿμÉೀಕ ಪೂಜೆ, ಮಧ್ಯಾಹ್ನ ನೈವೇದ್ಯ ಪೂಜೆ ಹಾಗೂ ರಾತ್ರಿ ಪೂಜೆಗಳು ಮತ್ತು ಅನುವಂಶೀಯ ಹಕ್ಕನ್ನು ಹೊದಿರುವ ಸ್ವಜಾತಿ ಬಾಂಧವರ ಎರಡು ಕುಟುಂಬಗಳಿಂದ ಆಯ್ಕೆಯಾದ ಸದಸ್ಯರಿಂದ ಶ್ರೀ ಮಹಮ್ಮಾಯೀ ಅಮ್ಮನವರಿಗೆ ನಿತ್ಯ ಪೂಜೆ ಮತ್ತು ಪರಿವಾರ ದೈವದೇವರುಗಳಿಗೆ ಪ್ರತಿ ಸಂಕ್ರಮಣ ಹಾಗೂ ವಿಶೇಷ ಪರ್ವದ ದಿನಗಳಲ್ಲಿ, ಪೂಜೆಗಳು ನೆರವೇರುತ್ತಿದೆ. ಪ್ರತೀ ಸಂಕ್ರಮಣ ಹಾಗೂ ಪರ್ವಕಾಲದ ಎಲ್ಲ ವಿಶೇಷ ಸಂದರ್ಭಗಳಲ್ಲಿ ಶ್ರೀ ಕ್ಷೇತ್ರದಲ್ಲಿ ‘ಅನ್ನದಾನ ಸೇವೆ’ ಜರಗುತ್ತಿದೆ.
ಪರ್ವಕಾಲ ಹಾಗೂ ವಿಶೇಷ ಪೂಜಾದಿನಗಳು: ಶ್ರೀ ಕ್ಷೇತ್ರದಲ್ಲಿ ‘ಕರ್ಕಾಟಕ ಮಾಸ ಪೂಜೆ’, ‘ನವರಾತಿ ್ರ ಉತ್ಸವ’ದ ಸಂದರ್ಭ 9 ದಿನಗಳಲ್ಲಿ ವಿಶೇಷ ಪೂಜೆಗಳು, ‘ದೀಪಾವಳಿ ಹಬ್ಬ’ ಮತ್ತು ಕುಂಭ ಮಾಸದ 2ನೇ ಮಂಗಳವಾರ ಮತ್ತು ಬುಧವಾರ ಈ ಎರಡು ದಿನಗಳಲ್ಲಿ ‘ವμರ್Áವಧಿ ಉತ್ಸವ’ ಹೀಗೇ ಒಟ್ಟು 4 ಪರ್ವಗಳು ಜರಗುತ್ತವೆ. ಕರ್ಕಾಟಕ ಮಾಸ ಪೂಜೆಯ ಸಂದರ್ಭ ಹೊರತು ಪಡಿಸಿ ಉಳಿದ ಪರ್ವಕಾಲದಲ್ಲಿ ಶ್ರೀ ಮಹಮ್ಮಾಯೀ ದೂಮಾವತಿ-ಬಂಟ ಹಾಗೂ ವಾರಾಹಿ ದೈವಗಳಿಗೆ ಸ್ವಸಮಾಜದ ದರ್ಶನ ಪಾತ್ರಿಗಳಿಂದ ದರ್ಶನ ಸೇವೆ ನಡೆಯುತ್ತದೆ. ವμರ್Áವಧಿ ಉತ್ಸವದ ದಿನ (ಮಂಗಳವಾರ) ದೇವಸ್ಥಾನದಿಂದ ಸುಮಾರು 1.5 ಮೈಲು ದೂರದ ಸಿದ್ಧಕಟ್ಟೆಯಲ್ಲಿ ಬೆಳಗ್ಗಿನ ಜಾವ ಶ್ರೀ ಮಹಮ್ಮಾಯೀ ಅಮ್ಮನವರ ಬಿಂಬಪ್ರತಿμÉ್ಠ ನಡೆದು, ದಿನವಿಡಿ ಭಕ್ತರಿಂದ ಪೂಜಿಸಲ್ಪಟ್ಟು ಅದೇ ದಿನ ರಾತ್ರಿ ಬಿಂಬದ ಶೋಭಾಯತ್ರೆ ಸಕಲ ಬಿರುದಾವಳಿಗಳೊಂದಿಗೆ ಎಲ್ಲ ಸಮುದಾಯದ ಭಕ್ತರಭಾಗವಹಿಸುವಿಕೆಯೊಂದಿಗೆ ಬಹಳ ವಿಜೃಂಭಣೆಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತದೆ. ಉತ್ಸವದ ದಿನಗಳಲ್ಲಿ ದೂಮಾವತಿ-ಬಂಟ, ವಾರಾಹಿ, ಮೈಸಂದಾಯ ಮತ್ತು ಬಬ್ಬರ್ಯ ದೈವಗಳ ನೇಮೋತ್ಸವವು ಜರಗುತ್ತದೆ.
ದೇವಸ್ಥಾನದ ಸದಸ್ಯರು: ಈ ದೇವಸ್ಥಾನವು ಸುಮಾರು 500ಕ್ಕೂ ಮಿಕ್ಕಿ ಕೂಡುಕಟ್ಟಿನ ಮನೆಗಳು ಹಾಗೂ ಸುಮಾರು ಸಾವಿರಕ್ಕೂ ಮಿಕ್ಕಿ ವಾರ್ಷಿಕ ವಂತಿಗೆ ನೀಡುವ ಸದಸ್ಯರನ್ನು ಹೊಂದಿದೆ. ದೇವಸ್ಥಾನದ ಸದಸ್ಯರು ಕಾಟಿಪಳ್ಳ-ಕುಳಾಯಿ, ಬೆಳ್ಮ-ಕೋಣಾಜೆ, ಅಡ್ಯಾರು-ಕೊಡ್ಮಾನ್, ಉಜಿರೆ-ಪುಂಜಾಲಕಟ್ಟೆ, ಗುರುಪುರ-ಕೈಕಂಬ ಮತ್ತು ಸಿದ್ಧಕಟ್ಟೆ-ಸಂಗಬೆಟ್ಟು ಮುಂತಾದ ಮಾಗಣೆಗಳಲ್ಲಿ ನೆಲೆಸಿದ್ದಾರೆ.
ಆಡಳಿತ ಮಂಡಳಿ-ಪ್ರಗತಿ ಸಮಿತಿ-ಜೀರ್ಣೋದ್ಧಾರ ಸಮಿತಿ: ದೇವಸ್ಥಾನದಲ್ಲಿ ದೈನಂದಿನ ಹಾಗೂ ವಿಶೇಷ ಸಂದರ್ಭಗಳಲ್ಲಿ ಜರಗುವ ಕಾರ್ಯಕ್ರಮಗಳು ಸುಗಮವಾಗಿ ನಡೆಯುಲು ಅನುವಂಶೀಯ ಹಕ್ಕನ್ನು ಹೊಂದಿರುವ 4 ಮಂದಿ ಗುರಿಕಾರರು, 4 ಮಂದಿ ಮೊಕ್ತೇಸರರು ಹಾಗೂ ಅನುವಂಶೀಯಕವಲ್ಲದ ಒಬ್ಬರು ಆಡಳಿತ ಕಾರ್ಯದರ್ಶಿ ಮತ್ತು ಒಬ್ಬರು ಜೊತೆ ಕಾರ್ಯದರ್ಶಿ ಇರುತ್ತಾರೆ. ದೇವಸ್ಥಾನದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ‘ಪ್ರಗತಿ ಸಮಿತಿ’ ಇರುತ್ತದೆ. ಪ್ರಸ್ತುತ ಶ್ರೀ ವೀರಭದ್ರ, ಶ್ರೀ ದುರ್ಗಾಪರಮೇಶ್ವರೀ, ಶ್ರೀ ಮಹಾಗಣಪತಿ ಹಾಗೂ ಪರಿವಾರದೈವ ದೇವರುಗಳ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ, ಕೆರೆಯ ಪುನರ್‍ನಿರ್ಮಾಣ, ಒಂದು ಬಹುಪಯೋಗಿ ಕಟ್ಟಡದ ನಿರ್ಮಾಣ ಮುಂತಾದ ಕೆಲಸಗಳು ಸುಮಾರು 4ರಿಂದ 5ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಡೆಯುತ್ತಿದ್ದು, ಈಗ ರಚಿಸಿರುವ ಜೀರ್ಣೋದ್ಧಾರ ಸಮಿತಿ ಈ ಜವಾಬ್ದಾರಿಯನ್ನು ಹೊತ್ತು ಕಾರ್ಯೋನ್ಮುಖವಾಗಿದ್ದು ಮತ್ತು 2023ನೇ ಇಸವಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಶ್ರೀ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸುವ ಸಂಕಲ್ಪ ಮಾಡಲಾಗಿದೆ.
ದೇವಸ್ಥಾನದ ಇತರ ಸಮಿತಿಗಳು ಹಾಗೂ ಅವುಗಳ ಕಾರ್ಯಚಟುವಟಿಕೆಗಳು: ಶ್ರೀ ಕ್ಷೇತ್ರದಲ್ಲಿ ‘ಭಜನಾ ಸಮಿತಿ’ ಇದ್ದು ಪ್ರತಿ ಸೋಮವಾರ ಹಾಗೂ ಸಂಕ್ರಮಣದಂದು ಭಕ್ತಾಧಿಗಳು ಭಜನೆಯ ಸೇವೆ ನಡೆಸುತ್ತಿದ್ದಾರೆ. ಅಲ್ಲದೆ ದೇವಸ್ಥಾನದಲ್ಲಿ ಮಹಿಳೆಯರಿಗಾಗಿ ‘ಪದ್ಮಶಾಲಿ ಮಹಿಳಾ ವೇದಿಕೆ’ ಮತ್ತು ಯುವಕರಿಗಾಗಿ ‘ಮಹಮ್ಮಾಯೀ ಫ್ರೆಂಡ್ಸ್’ ಎಂಬ ಸಂಘಟನೆಗಳು ಇದ್ದು ಅನೇಕ ವರ್ಷಗಳಿಂದ ‘ಶ್ರೀ ವರಮಹಾಲಕ್ಷೀ ವೃತ’ ಮತ್ತು ಸ್ವಸಮಾಜದ ಯುವಕ ಯುವತಿಯರಿಗಾಗಿ ವಿವಿಧ ಕ್ರೀಡಾ/ಸಾಂಸ್ಕøತಿಕ ಕೂಟಗಳನ್ನು ನಡೆಸಿಕೊಂಡು ಬಂದಿರುತ್ತದೆ. 2021 ರಲ್ಲಿ ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಇಪ್ಪತ್ತೆಂಟನೆಯ ಕ್ರೀಡಾಕೂಟವನ್ನು ಅದ್ದೂರಿಯಾಗಿ ನಡೆಸಿಕೊಟ್ಟ ಕೀರ್ತಿ ಈ ಸಂಘಟನೆಗಳಿಗೆ ಸೇರುತ್ತದೆ.
ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಮಂಗಳೂರು ಇದರ ನೇತೃತ್ವÀದಲ್ಲಿ ಆರಂಭವಾದ ‘ಪದ್ಮಶಾಲಿ ಕ್ರೀಡಾಕೂಟ’ವನ್ನು 1991ನೆಯ ಇಸವಿಯಲ್ಲಿ ಪ್ರಪ್ರಥಮವಾಗಿ ಈ ದೇವಸ್ಥಾನ ತನ್ನ ಪ್ರಾಯೋಜಕತ್ವದಲ್ಲಿ ದೇವಸ್ಥಾನದ ಹಿರಿಯ ಸದಸ್ಯ ಶ್ರೀ ನೋಣಯ ಶೆಟ್ಟಿಗಾರ್ ಕೊಯಿಲ ಇವರ ಮುಂದಾಳತ್ವದಲ್ಲಿ ಆಯೋಜಿಸಿರುವುದನ್ನು ಸ್ಮರಿಸಿಕೊಳ್ಳಬಹುದು ಅಲ್ಲದೆ ತದನಂತರದ ವರ್ಷಗಳಲ್ಲಿ ಅನೇಕ ಬಾರಿ ಮಹಾಸಭಾದ ಈ ಕ್ರೀಡೋತ್ಸವವನ್ನು ಬಹಳ ಅಚ್ಚುಕಟ್ಟಾಗಿ, ಅದ್ದೂರಿಯಾಗಿ ನಡೆಸಿಕೊಟ್ಟಿರುತ್ತದೆ.
ಶ್ರೀ ಕ್ಷೇತ್ರದಲ್ಲಿ ‘ಶ್ರೀ ಮಹಾಗಣಪತಿ ಕಲ್ಯಾಣ ಮಂಟಪ’ ವನ್ನು 1997ನೆಯ ಇಸವಿಯಲ್ಲಿ ನಿರ್ಮಾಣ ಮಾಡಿ ಮುಂದೆ ಸುಸಜ್ಜಿತ ಪಾಕಶಾಲೆ ಮತ್ತು ಭೋಜನಶಾಲೆಯನ್ನು ನಿರ್ಮಿಸಿ ರಿಯಾಯಿತಿ ದರದಲ್ಲಿ ಸಮಾಜದ ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಒದಗಿಸಲಾಗಿದೆ. ಇದರಿಂದ ಬರುವ ಆದಾಯದ ಶೇ.20ನ್ನು ಸಮಾಜದ ವಿದ್ಯಾರ್ಥಿಗಳಿಗೆ ಅವರ ಮುಂದಿನ ವ್ಯಾಸಂಗದ ವಿನಿಯೋಗಕ್ಕಾಗಿ ಕ್ಷೇತ್ರದ ‘ಶ್ರೀ ಶಾರದಾ ವಿದ್ಯಾವರ್ಧಕ ಸಂಘ’ದ ಮುಖೇನ ವಿದ್ಯಾರ್ಥಿವೇತನವಾಗಿ ಪ್ರತಿ ವರ್ಷ ನೀಡಲಾಗುತ್ತಿದೆ. ಅಲ್ಲದೆ ಮುಂದಿನ ಸಾಲಿನಿಂದ ಸ್ವಸಮಾಜದ ಸದಸ್ಯರು ಭಾರತೀಯ ಆಡಳಿತ ಸೇವೆಯ ಪ್ರಾಥಮಿಕ ಪರೀಕ್ಷೆ (IಂS Pಡಿeಟimiಟಿಚಿಡಿಥಿ ಇxಚಿm)ಯಲ್ಲಿ ತೇರ್ಗಡೆಯಾಗಿ ಮುಂದಿನ ಮುಖ್ಯ ಪರೀಕ್ಷೆಗೆ ತಯಾರಿ ಮಾಡುವುದಾದರೆ ರೂಪಾಯಿ 1 ಲಕ್ಷ ನೀಡುವ ಬಗ್ಗೆ ಯೋಚಿಸಲಾಗುತ್ತಿದೆ.
ಶ್ರೀ ಕ್ಷೇತ್ರ ತನ್ನ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಸಮಾಜದ ಸವಾರ್ಂಗೀಣ ಪ್ರಗತಿ ಬಗ್ಗೆ ಕೆಲಸ ಮಾಡುತ್ತಿದೆ. ಇಲ್ಲಿನ ಶ್ರೀ ವೀರಭದ್ರ ಮಹಮ್ಮಾಯೀ ಪರಿವಾರ ದೈವದೇವರು ನಂಬಿದವರ ಇμÁ್ಟರ್ಥಗಳನ್ನು ಈಡೇರಿಸುತ್ತಿದ್ದು ಎಲ್ಲ ವರ್ಗದ ಆಸ್ತಿಕ ಬಂಧುಗಳ ಆರಾಧ್ಯ ಕ್ಷೇತ್ರವೆನಿಸಿಕೊಂಡಿದೆ.