ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಕಲ್ಲಾಪು (ಹೊಸಂಗಡಿ), ಹಳೆಯಂಗಡಿ, ಮಂಗಳೂರು ತಾಲೂಕು

Share with your family and friends

Loading

ಶ್ರೀ ಕ್ಷೇತ್ರದ ಕಿರು ಪರಿಚಯ

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಪದ್ಮಶಾಲಿ ಜನಾಂಗದವರು ಆರಾಧಿಸಿಕೊಂಡು ಬಂದಿರುವ 16 ದೇವಸ್ಥಾನಗಳಲ್ಲಿ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಕಲ್ಲಾಪು ಹಳೆಯಂಗಡಿ ಒಂದಾಗಿರುತ್ತದೆ. ಮಂಗಳೂರಿನಿಂದ ಉತ್ತರಕ್ಕೆ ಸುಮಾರು 26 ಕಿ.ಮೀ. ದೂರದ ಪಡುಪಣಂಬೂರು ಎಂಬ ಬಸ್ಸು ನಿಲ್ದಾಣದಿಂದ ಪೂರ್ವಕ್ಕೆ 1ಕಿ.ಮೀ. ಸಾಗಿದರೆ ಕಂಗೊಳಿಸುವ ದೇವಾಲಯವೇ ಶ್ರೀ ಕ್ಷೇತ್ರ ಕಲ್ಲಾಪು.

ಶ್ರೀ ಕ್ಷೇತ್ರದಲ್ಲಿ ನೆಲೆ ನಿಂತ ಆರಾಧನಾ ಶಕ್ತಿಗಳು ಪದ್ಮಶಾಲಿ ಜನಾಂಗದವರ ಕುಲದೇವರಾದ ಶ್ರೀ ವೀರಭದ್ರ ಸ್ವಾಮಿ ನಮ್ಮ ಕ್ಷೇತ್ರದಲ್ಲಿ ನೆಲೆಯಾದ ಬಗ್ಗೆ ಒಂದು ಇತಿಹಾಸವೇ ಇದೆ. ಸರಿಸುಮಾರು 15ನೇ ಶತಮಾನದಲ್ಲಿ ಆಂಧ್ರಪ್ರದೇಶದ ಕರಾವಳಿಯಲ್ಲಿ ನೆಲೆಸಿರುವ ಸಂತ ನಾರಾಯಣ ಪದ್ಮಶಾಲಿಯವರು ತಾನು
ಆರಾಧಿಸಿಕೊಂಡು ಬಂದಿರುವ ಶ್ರೀ ವೀರಭದ್ರ ದೇವರ ಮೂರ್ತಿಯನ್ನು ತನ್ನಿಂದ ಪೂಜಿಸಲು ಅಸಾಧ್ಯವೆಂಬುದರಿಂದಲೂ ಅದೇ ಸಂದರ್ಭದಲ್ಲಿ ಅನ್ಯಧರ್ಮೀಯರಿಂದ ದೇವಾಲಯಗಳು ಭಗ್ನವಾಗಬಹುದೆಂಬ ಶಂಕೆ ಮೂಡಿರುವುದರಿಂದಲೂ ಸಮುದ್ರಕ್ಕೆ ಎಸೆದು ತಾನು ದೇಶ ಪರ್ಯಟನೆಗೆ ಮುಂದಾದರು. ಸುಮಾರು 12 ವರ್ಷಗಳ ಪರ್ಯಟನೆ ನಂತರ ನಮ್ಮೀ ಕ್ಷೇತ್ರದ ಸಮೀಪದ ಸಮುದ್ರ ಕಿನಾರೆಗೆ ಬಂದು ಸಮುದ್ರ ಸ್ನಾನ ಮಾಡುವಾಗ ಒಂದು ಶಿಲಾ ಮೂರ್ತಿಯು ಹಸ್ತಗತವಾಯಿತು. ಆ ಮೂರ್ತಿಯನ್ನು ಸರಿಯಾಗಿ ಪರಾಮರ್ಶಿಸಿದಾಗ 12 ವರ್ಷಗಳ ಹಿಂದೆ ತಾನು ಸಮುದ್ರದಲ್ಲಿ ಬಿಟ್ಟ ಮೂರ್ತಿ ಎಂದು ತಿಳಿದಾಗ ಸಂತರು ಪರಮಾಶ್ಚರ್ಯವನ್ನು ಹೊಂದಿ ತನ್ನ ಅನನ್ಯ ಭಕ್ತಿಗೆ ಸ್ವಾಮಿಯು ಒಲಿದಿರುವನೆಂದು ತೀರ್ಮಾನಿಸಿ ಸದ್ರಿ ಮೂರ್ತಿಯನ್ನು ತಂದು ಕಲ್ಲಾಪು ಕ್ಷೇತ್ರದಲ್ಲಿ ಪ್ರತಿμÁ್ಠಪಿಸಿದರು ಎಂದು ಎರಡು–ಮೂರು ಬಾರಿ ಅಷ್ಟಮಂಗಳ ಪ್ರಶ್ನೆಯಾದಾಗಲೂ ತಿಳಿದು ಬಂದಿರುತ್ತದೆ. ಹಾಗಾಗಿ ಶ್ರೀ ವೀರಭದ್ರ ದೇವರ ಪ್ರತಿμÁ್ಠಪನೆ ಮಾಡಿದ ಗುರುಗಳಾದ ಸಂತ ಶ್ರೀ ಗುರು ನಾರಾಯಣ ಪದ್ಮಶಾಲಿಯವರಿಗೆ ಗುರುಪೀಠವನ್ನು ನಿರ್ಮಾಣ ಮಾಡಿ ಪೂಜೆ ಪುರಸ್ಕಾರಗಳು ನಡೆಯುತ್ತಿದೆ.

ಶ್ರೀ ಕ್ಷೇತ್ರವು ಪದ್ಮಶಾಲಿಗರಿಂದ ಪೂರ್ವದಿಂದಲೇ ಆರಾಧಿಸಿಕೊಂಡು ಬಂದಿರುವ ಮಹಾಮಾತೆ ಶ್ರೀ ಮಹಮ್ಮಾಯಿ ಅಮ್ಮನವರು ನೆಲೆ ನಿಂತಿರುವ ಪುಣ್ಯಕ್ಷೇತ್ರವಾಗಿದೆ. ಭಕ್ತರ ಸಕಲ ಇμÁ್ಟರ್ಥಗಳನ್ನು ಈಡೇರಿಸುವ ಮಹಮ್ಮಾಯಿ ಅಮ್ಮನವರು ಕಲ್ಲಾಪು ಕ್ಷೇತ್ರಕ್ಕೆ ಸಂಬಂಧಿಸಿದ 9 ಮಾಗಣೆಯವರಿಂದಲೂ ಪೂಜಿಸಲ್ಪಡುತ್ತಿದ್ದಾರೆ.

ಶ್ರೀ ವೀರಭದ್ರ ದೇವರ ಬಲಭಾಗದಲ್ಲಿ ನೆಲೆನಿಂತಿರುವ ಸಾರಾಳ ಧೂಮಾವತಿ ಬಂಟ ದೈವಗಳು ನಂಬಿದವರಿಗೆ ಇಂಬನ್ನು ಇತ್ತು ಕಾಪಾಡಿಕೊಂಡು ಬರುತ್ತಿದ್ದಾರೆ. ಶ್ರೀ ಧೂಮಾವತಿ ಬಂಟ ದೈವಗಳ ಜತೆಯಲ್ಲಿ ಪರಿವಾರ ದೈವಗಳಾಗಿ ಉಲ್ಲಯ, ಮಲರಾಯ, ಪಂಜುರ್ಲಿ, ಮೈಸಂದಾಯ, ಬಬ್ಬರ್ಯ ಮತ್ತು ದೇವದೆ ದೈವಗಳು ನೆಲೆ ನಿಂತು ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ. ಶ್ರೀ ಕ್ಷೇತ್ರದಲ್ಲಿ ನಾಗದೇವರ ಸಾನಿಧ್ಯವಿದ್ದು, ವಿಶೇಷವಾಗಿ ಭಕ್ತರಿಗೆ ಅನುಗ್ರಹಕಾರಕವಾಗಿದೆ.

ಶ್ರೀ ಕ್ಷೇತ್ರದಲ್ಲಿ ನಡೆಯುವ ಪಂಚ ಪರ್ವಗಳು:
ಹತ್ತನಾಜೆ ಉತ್ಸವ, ಆμÁಢ ಮಾರಿಪೂಜೆ, ನವರಾತ್ರಿ ಉತ್ಸವ, ದೀಪಾವಳಿ ಬಲಿ ಉತ್ಸವ, ಶ್ರೀ ವೀರಭದ್ರ ದೇವರಿಗೆ ಧ್ವಜಾರೋಹಣ ಸಹಿತ ಉತ್ಸವ ಹಾಗೂ ವಾರ್ಷಿಕ ಮಾರಿಪೂಜೆ ಮತ್ತು ದೈವಗಳಿಗೆ ನೇಮೋತ್ಸವಗಳು. ಅಲ್ಲದೆ ಶ್ರೀ ಗಣಪತಿ ದೇವರ ಪ್ರತಿμÁ್ಠ ದಿನ, ಶ್ರೀ ವೀರಭದ್ರ ದೇವರ ಪ್ರತಿμÁ್ಠ ದಿನವಾದ ಅಕ್ಷಯತದಿಗೆಗಳನ್ನು ಆಚರಿಸಲಾಗುತ್ತದೆ. ಅಲ್ಲದೆ ಎಲ್ಲ ಉತ್ಸವ ದಿನಗಳಲ್ಲಿ ನಾಗದೇವರಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಇದರೊಂದಿಗೆ ವರ್ಷಕ್ಕೊಮ್ಮೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಇತ್ತಿಚೇಗೆ ಆಚರಣೆಗೆ ಬಂದ ವರಮಹಾಲಕ್ಷ್ಮೀ ವೃತ ಪೂಜೆ ಮತ್ತು ಪ್ರತಿ ಸಂಕ್ರಮಣ ಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯುತ್ತಿದೆ.

ಶ್ರೀ ಕ್ಷೇತ್ರದ ಅಭಿವೃದ್ಧಿಯ ನೋಟ:
1980ರಲ್ಲಿ ಶ್ರೀ ವೀರಭದ್ರ ದೇವರಿಗೆ ಬ್ರಹ್ಮಕಲಶೋತ್ಸವ ಮತ್ತು ಶ್ರೀ ಮಹಾಗಣಪತಿ ದೇವರ ಪ್ರತಿμÁ್ಠಪನೆ
1980ರಲ್ಲಿ ನೂತನ ಭಂಡಾರಮನೆಯ ನಿರ್ಮಾಣ
1988ರಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ನೂತನ ಗರ್ಭಗೃಹದ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ
1997ರಲ್ಲಿ ಶ್ರೀ ವೀರಭದ್ರ ದೇವರ ಸುತ್ತುಪೌಳಿಯ ನವನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ
2012ರಲ್ಲಿ ಶ್ರೀ ವೀರಭದ್ರ ದೇವರಿಗೆ ನೂತನ ಧ್ವಜ ಸ್ತಂಭದ ಪ್ರತಿμÉ್ಠ ಮತ್ತು ಜಾತ್ರಾ ಮಹೋತ್ಸವ ಪ್ರಾರಂಭ ಹಾಗೂ ಬ್ರಹ್ಮಕಲಶೋತ್ಸವ
2012ರಲ್ಲಿ ನೂತನ ಶ್ರೀ ವೀರಭದ್ರ ಸಭಾಭವನದ ನಿರ್ಮಾಣ
2014ರಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರಿಗೆ ಮುಖಮಂಟಪ ಸಮರ್ಪಣೆ
2018ರಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ರುದ್ರಪುಷ್ಕರಣಿಯಲ್ಲಿ ಶ್ರೀ ವೀರಭದ್ರ ದೇವರ ಅವಭೃತ ಸ್ನಾನ ಆರಂಭಗೊಂಡಿರುತ್ತದೆ.
2020ರಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಗರ್ಭಗುಡಿಯ ದಕ್ಷಿಣ, ಪಶ್ಚಿಮ ಮತ್ತು ಉತ್ತರದ ಪ್ರಾಂಗಣಕ್ಕೆ ಚಾವಣಿ ಮತ್ತು ಇನ್ನಿತರ ಕಾಮಗಾರಿಗಳು ಮತ್ತು ಬ್ರಹ್ಮಕಲಶೋತ್ಸವ
2022ರಲ್ಲಿ ಶ್ರೀ ವೀರಭದ್ರ ದೇವರ ಮುಖಮಂಟಪದ ಸಹಿತ ರಾಜಗೋಪುರದ ನಿರ್ಮಾಣ.

ಆಡಳಿತ ವ್ಯವಸ್ಥೆ:
ಪ್ರಕೃತ ಕ್ಷೇತ್ರದ 4 ಮನೆತನದ ನಾಲ್ಕು ಮಂದಿ ಗಡಿ ಪ್ರಧಾನರಾದ ಗುರಿಕಾರರು ಮತ್ತು ಹತ್ತು ಸಮಸ್ತರಿಂದ ಆಯ್ಕೆಯಾದ ಅಧ್ಯಕ್ಷರನ್ನೊಳಗೊಂಡ ಆಡಳಿತ ಮಂಡಳಿಯು ದೇವಸ್ಥಾನದ ಸಕಲ ಆಗುಹೋಗುಗಳ ಬಗ್ಗೆ ಜವಾಬ್ದಾರಿಯುಳ್ಳದ್ದಾಗಿರುತ್ತದೆ.

ದೇವಸ್ಥಾನದ ಅಂಗ ಸಂಸ್ಥೆ:
1962ರಲ್ಲಿ ಯುವಕರಿಂದ ಶ್ರೀ ವೀರಭದ್ರ ಮಹಮ್ಮಾಯಿ ವಾಚನಾಲಯ ಮತ್ತು ಯುವಕ ಮಂಡಲ ಹಾಗೂ ಮಹಿಳಾವೇದಿಕೆ ಸ್ಥಾಪನೆಯಾಗಿ ಸಮಾಜಮುಖಿಯಾದ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿ ಆರಂಭದಲ್ಲಿ ವಾಚನಾಲಯವನ್ನು ತೆರೆದು ಮಕ್ಕಳ ಜ್ಞಾನಾರ್ಜನೆಗಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ ಸಾರ್ವಜನಿಕವಾಗಿ ಉಪಯುಕ್ತವಾದ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಿದ್ದಾರೆ. ಸಾಂಸ್ಕøತಿಕ ಕಾರ್ಯಕ್ರಮವಾಗಿ ಭಜನೆ, ಯಕ್ಷಗಾನ ಇತ್ಯಾದಿ ನಡೆಸುವುದಲ್ಲದೆ ದೇವಸ್ಥಾನದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನೆರವನ್ನು ನೀಡುತ್ತಿರುತ್ತಾರೆ.