ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ನಗರದಕೇಂದ್ರ ಸ್ಥಳದಿಂದ ಒಂದು ಒಂದೂವರೆ ಕಿ.ಮೀ. ಪಶ್ಚಿಮಕ್ಕೆ ಬೋಳೂರು ಗ್ರಾಮವಿದೆ. ಇಲ್ಲಿ ಮಠದಕಣಿ ರಸ್ತೆ ಎಂದು ಪ್ರಖ್ಯಾತಿ ಪಡೆದಿರುವ ಪರಿಸರದಲ್ಲಿ ಪದ್ಮಶಾಲಿ ಸಮಾಜದ ಆಡಳಿತಕ್ಕೆ ಒಳಪಟ್ಟಿರುವ ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನವಿದೆ. ಇಲ್ಲಿಯ ಪ್ರಮುಖ ಆರಾಧ್ಯ ದೇವರು ಶ್ರೀ ವೀರಭದ್ರ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವರು, ವಿಶೇಷವೆಂದರೆ ಒಂದೇ ಪಾಣಿಪೀಠದಲ್ಲಿ ಈ ಎರಡು ದೇವರನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ಈ ಕ್ಷೇತ್ರದ ಪೌಳಿಯಲ್ಲಿ ಶ್ರೀ ಗಣಪತಿ ದೇವರಿಗೆ ಪ್ರತ್ಯೇಕ ಗರ್ಭಗುಡಿ ಇದೆ. ಮತ್ತೊಂದು ಬದಿಯಲ್ಲಿ ಕ್ಷೇತ್ರದ ಧರ್ಮದೈವ ವಾರಾಹಿ ಮತ್ತು ಪರಿವಾರ ದೈವಗಳ ಸ್ಥಾನವಿದೆ. ಪ್ರಧಾನ ಗರ್ಭಗುಡಿಯ ಹಿಂಬದಿಯ ಪೌಳಿಯಲ್ಲಿ ನವಗ್ರಹಗಳ ಪ್ರತಿμÁ್ಠಪನೆ ಮಾಡಲಾಗಿದೆ. ಇಲ್ಲಿ ಬ್ರಾಹ್ಮಣ ಪುರೋಹಿತರಿಂದ ನಿತ್ಯ ತ್ರಿಕಾಲಪೂಜೆಯು ನಡೆಯುತ್ತಿದೆ. ಶ್ರೀ ಕ್ಷೇತ್ರದ ಪೌಳಿಯ ಹೊರಗೆ ಶ್ರೀ ನಾಗಬ್ರಹ್ಮಗುಂಡ, ನಾಗದೇವರ ಕಟ್ಟೆ ಹಾಗೂ
ರಕ್ತೇಶ್ವರಿ ಸಾನಿಧ್ಯಗಳಿವೆ.
ದೇವಸ್ಥಾನದಿಂದ ದಕ್ಷಿಣದಲ್ಲಿ 100 ಗಜ ದೂರದಲ್ಲಿ ಶ್ರೀ ಮಹಾಮಾಯಿ ದೇವಸ್ಥಾನವಿದ್ದು ಇಲ್ಲಿ ಪ್ರತಿ ದಿನ ಮಧ್ಯಾಹ್ನ ಪೂಜೆ ನಡೆಯುತ್ತಿದೆ. ಪ್ರತಿ ಶುಕ್ರವಾರ ಸಾಯಂಕಾಲ ವಿಶೇಷವಾಗಿ ಹೂವಿನ ಪೂಜಾಸೇವೆಗಳು ಜರುಗುವುವು. ಇಲ್ಲಿಯ ಕ್ಷೇತ್ರಪಾಲ ಶ್ರೀ ಬಬ್ಬರ್ಯ ಕಾರಣಿಕದ ದೈವವಾಗಿದ್ದು ಕ್ಷೇತ್ರದ ಭಕ್ತರ ಅಭೀಷ್ಟಗಳಿಗೆ ಇಂಬು ಕೊಡುವ ದೈವ ಎಂಬುದಾಗಿ ಭಕ್ತರು ನಂಬಿಕೊಂಡು ಬರುತ್ತಿದ್ದಾರೆ. ಇಲ್ಲಿ ಸಮಾಜದವರೇ ಅರ್ಚಕರಾಗಿರುತ್ತಾರೆ.
ಶ್ರೀ ಕ್ಷೇತ್ರಕ್ಕೆ ಒಳಪಟ್ಟಿರುವ ಇನ್ನೊಂದು ಶಕ್ತಿಕೇಂದ್ರವೆಂದರೆ ಭಂಡಾರ ಮನೆ. ಇಲ್ಲಿ ಶ್ರೀ ಭದ್ರಕಾಳೀ, ಶ್ರೀ ಮಹಾಕಾಳಿ, ಶ್ರೀ ವಾರಾಹಿ, ಶ್ರೀ ಅಣ್ಣಪ್ಪ ಪಂಜುರ್ಲಿ, ಶ್ರೀ ಜುಮಾದಿ ಬಂಟ ಹಾಗೂ ಮೈಸಂದಾಯ ಮತ್ತು ಕ್ಷೇತ್ರಪಾಲ ಶ್ರೀ ಗುಳಿಗ ದೈವಗಳಿಗೆ ಪ್ರತಿ ಸಂಕ್ರಮಣದಂದು ಸಂಕ್ರಮಣ ಸೇವೆ ನಡೆಯುತ್ತಿದೆ. ಶ್ರೀ ಕ್ಷೇತ್ರದಲ್ಲಿ ವಷರ್ಂಪ್ರತಿ ಜರಗುವ ಜಾತ್ರಾ ಮಹೋತ್ಸವ, ಹತ್ತನಾಜೆ, ನವರಾತ್ರಿ ಮತ್ತು ದೀಪಾವಳಿ ಉತ್ಸವಗಳ ಸಂದರ್ಭಗಳಲ್ಲಿ ಭಂಡಾರ ಮನೆಯಿಂದ ದೈವದೇವರ ಭಂಡಾರ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡುವುದಾಗಿದೆ. ತಾ.31.10.2021ರಂದು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಪಾತ್ರಿ ನೇಮಕ ಮಾಡಲಾಗಿದೆ. ಈ ಸಮಾರಂಭಕ್ಕೆ 16 ದೇವಸ್ಥಾನಗಳಿಂದ ಹಾಗೂ ಮೊಗವೀರ ಪಟ್ಟಣದಿಂದ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದು ವಿಜೃಂಭಣೆಯಿಂದ ನೆರವೇರುತ್ತದೆ.
ಶ್ರೀ ಕ್ಷೇತ್ರದಲ್ಲಿ ಸೌರಮಾನ ಯುಗಾದಿಯಂದು ಹೊಸ ಪಂಚಾಂಗಶ್ರವಣದಿಂದ ಆರಂಭವಾಗಿ ಸಾಮಾನ್ಯವಾಗಿ ಎಲ್ಲ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ, ಹೋಮ ಹವನಗಳು ನಡೆಯುತ್ತದೆ. ಅಲ್ಲದೆ ಭಕ್ತರ ಅಪೇಕ್ಷೆಯಂತೆ ಹೋಮ ಇತ್ಯಾದಿಗಳೂ ಜರಗುವುದು. ಪ್ರತಿ ವರ್ಷ ಪಾಲ್ಗುಣ ಶುದ್ಧ ಅಷ್ಟಮಿಯಂದು ಜಾತ್ರಾ ಮಹೋತ್ಸವ ಹಾಗೂ ನವರಾತ್ರಿಯಲ್ಲಿ ಚಂಡಿಕಾಯಾಗ, ವಿಶೇಷ ಪೂಜೆಗಳೊಂದಿಗೆ ಅನ್ನ ಸಂತರ್ಪಣೆ ನಡೆಯುತ್ತದೆ.
ಮಂಗಳೂರು ಕ್ಷೇತ್ರವು ಮುಲ್ಕಿಯಿಂದ ದಕ್ಷಿಣದ ಹೊಸದುರ್ಗ (ಕಾಂಞಗಾಡು) ವರೆಗಿನ ಎಂಟು ಶ್ರೀ ವೀರಭದ್ರ ದೇವಸ್ಥಾನಗಳ ಗುರುಸ್ಥಳವೆಂಬ ಗೌರವವನ್ನು ಹೊಂದಿದೆ. ಶ್ರೀ ಕ್ಷೇತ್ರವು ನಾಲ್ಕು ಗ್ರಾಮಗಳ ಸದಸ್ಯರನ್ನೊಳಗೊಂಡಿದ್ದು ಬೋಳೂರು, ಕೊಡಿಯಾಲ್‍ಬೈಲ್, ದೇರೆಬೈಲ್ ಮತ್ತುಆಡ್ಯಾರು ಗ್ರಾಮಗಳಿಗೆ ಪಾರಂಪರಿಕ ನಾಲ್ಕು ಮಂದಿ ಮೊಕ್ತೇಸರರಿರುತ್ತಾರೆ. ಆಡಳಿತ ಸಮಿತಿಯು ದೇವಳದ ಆಡಳಿತಾತ್ಮಕ ಕಾರ್ಯಗಳನ್ನು ನಡೆಸುತ್ತ ಬರುತ್ತಿದೆ.
2014ರಲ್ಲಿ ಶ್ರೀ ವೀರಭದ್ರ ದೇವಸ್ಥಾನವನ್ನು ಸಂಪೂರ್ಣ ಶಿಲಾಮಯವಾಗಿ ಬಹು ಸುಂದರವಾಗಿ ನಿರ್ಮಿಸಲಾಗಿದೆ. 1971ರಲ್ಲಿ ಶ್ರೀ ಮಹಾಮಾಯಿ ದೇವಸ್ಥಾನದ ನವೀಕರಣವಾಗಿದ್ದು ಬ್ರಹ್ಮಕಲಶೋತ್ಸವ ನಡೆದಿರುತ್ತದೆ.
ಶ್ರೀ ಕ್ಷೇತ್ರ ಬೋಳೂರು ಪ್ರಾಚೀನದ್ದಾಗಿದ್ದು ಸುಮಾರು ನಾಲೈದು ದಶಕಗಳಿಂದ ಅನೇಕಾನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತ ಬಂದಿರುತ್ತದೆ. ಮುಖ್ಯವಾಗಿ ಶ್ರೀ ಮಹಾಮಾಯಿ ದೇವಳದ ಪಕ್ಕದಲ್ಲಿ ಶ್ರೀ ವೀರಭದ್ರ ಮಹಾಮಾಯಿ ಕಲಾಮಂದಿರವನ್ನು ನಿರ್ಮಿಸಿಕೊಂಡಿದೆ. ಅಂತೆಯೇ ಶ್ರೀ ಮಹಾಮಾಯಿ ಅಂಗಣದಲ್ಲಿ “ಶ್ರೀ ವೀರಭದ್ರ ಮಹಾಮಾಯಿ ಕಲಾಕ್ಷೇತ್ರ” ಎಂಬ ರಂಗಮಂದಿರವನ್ನು ನಿರ್ಮಿಸಲಾಗಿದೆ. ಶ್ರೀ ಕ್ಷೇತ್ರದ ಅಂಗಸಂಸ್ಥೆಯಾದ ಪದ್ಮಶಾಲಿ ಯುವವೇದಿಕೆ ಮತ್ತು ಪದ್ಮಶಾಲಿ ಮಹಿಳಾವೇದಿಕೆಗಳು ಧಾರ್ಮಿಕ ಹಾಗೂ ಸಾಂಸ್ಕøತಿಕ, ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಆಡಳಿತದೊಂದಿಗೆ ಸಹಕರಿಸುತ್ತಿದೆ. ವಠಾರದ ಭಕ್ತಸಮೂಹದವರಿಂದ ರಚಿಸಲ್ಪಟ್ಟಿರುವ ಮಹಾಮಾಯಿ ಫ್ರೆಂಡ್ಸ್ ಅಸೋಸಿಯೇಶನ್ ಮತ್ತು ರೈಸಿಂಗ್ ಫ್ರೆಂಡ್ಸ್ ಸಂಸ್ಥೆಗಳೂ ಕ್ಷೇತ್ರದೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಸಹಕರಿಸುತ್ತಿವೆ.
ಮುಂದಿನ ಕಾರ್ಯಯೋಜನೆಯಂತೆ ಶ್ರೀ ಮಹಾಮಾಯಿ ದೇವಸ್ಥಾನದ ಸಂಪೂರ್ಣ ಜೀರ್ಣೋದ್ದಾರ ಮತ್ತು ಶ್ರೀ ವೀರಭದ್ರ ದೇವಸ್ಥಾನದಲ್ಲಿ ಪಾಕಶಾಲೆ ನಿರ್ಮಾಣ ಮುಂತಾದ ಕಾರ್ಯಗಳನ್ನು ಕೈಗೊಳ್ಳಲು ಆಡಳಿತ ಸಮಿತಿಯು ಮುಂದಾಗುತ್ತಿದೆ.